ಮತ್ತೆ ಮೈದಾನಕ್ಕಿಳಿಯುತ್ತಿದ್ದಾರೆ ಯುವರಾಜ್, ಡಿವಿಲಿಯರ್ಸ್, ಗೇಲ್, ನಾಳೆಯಿಂದ ಟೂರ್ನಿ

Published : Oct 02, 2026, 05:17 PM IST
Cricket Legends Return to Action

ಸಾರಾಂಶ

ಯುವರಾಜ್ ಸಿಂಗ್, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಡೇವಿಡ್ ವಾರ್ನರ್ ಸೇರಿದಂತೆ ದಿಗ್ಗಜರು ಮತ್ತೆ ಮೈದಾನಕ್ಕಿಳಿಯುತ್ತಿದ್ದಾರೆ. ನಾಳೆಯಿಂದ ಟೂರ್ನಿ ಆರಂಭಗೊಳ್ಳುತ್ತಿದೆ. ಎಲ್ಲಿ ಲೈವ್?

ದುಬೈ (ಅ.02) ಕ್ರಿಕೆಟ್ ಲೋಗದ ಅತೀ ದೊಡ್ಡ ಸ್ಟಾರ್ ಪ್ಲೇಯರ್ಸ್, ದಿಗ್ಗಜರು ಮತ್ತೆ ಮೈದಾನಕ್ಕಿಳಿಯುತ್ತಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿ ಹಲವು ವರ್ಷಗಳ ಬಳಿಕ ಈ ದಿಗ್ಗರು ಒಂದೇ ಮೈದಾನದಲ್ಲಿ ಮತ್ತೆ ಅಬ್ಬರಿಸಲು ರೆಡಿಯಾಗಿದ್ದಾರೆ. ಅಕ್ಟೋಬರ್ 3 ರಿಂದ ನಡೆಯಲಿರುವ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ (WCL) ಮೂರನೇ ಆವೃತ್ತಿಗೆ ಸ್ಟಾರ್ ಕ್ರಿಕೆಟಿಗರು ಈಗಾಗಲೇ ದುಬೈ ತಲುಪಿದ್ದಾರೆ. ಟಿ20 ಟೂರ್ನಿ ಇದೀಗ ತೀವ್ರ ಕುತೂಹಲ ಕೆರಳಿಸಿದೆ.

ಅಕ್ಟೋಬರ್ 3 ರಿಂದ 18ರ ವರೆಗೆ ಟೂರ್ನಿ

WCL ಟೂರ್ನಿ ಅಕ್ಟೋಬರ್ 3 ರಿಂದ 18ರ ವರೆಗೆ ನಡೆಯಲಿದೆ. ದುಬೈ ಹಾಗೂ ಶಾರ್ಜಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದೆ. ಕಳೆದೆರಡು ಆವೃತ್ತಿಗಳು ಯುಕೆಯಲ್ಲಿ ಆಯೋಜನೆಗೊಂಡಿತ್ತು. ಇದೀಗ ಮೊದಲ ಬಾರಿಗೆ ದುಬೈನಲ್ಲಿ ದಿಗ್ಗಜರು ಟೂರ್ನಿ ನಡೆಯುತ್ತಿದೆ.

ಯಾವ ಸ್ಟಾರ್ ಪ್ಲೇಯರ್ಸ್ ಕಣಕ್ಕೆ

WCL ಟೂರ್ನಿಯಲ್ಲಿ ಹಲವು ದಿಗ್ಗಜ ಕ್ರಿಕೆಟಿಗರು ಕಣಕ್ಕಿಳಿಯುತ್ತಿದ್ದಾರೆ. ಯುವರಾಜ್ ಸಿಂಗ್, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಡೇವಿಡ್ ವಾರ್ನರ್, ಮೊಯಿನ್ ಆಲಿ, ಶಾಹೀದ್ ಅಫ್ರಿದಿ, ಮೊಹಮ್ಮದುಲ್ಲಾ ರಿಯಾದ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಪಂದ್ಯ ಆಡಲಿದ್ದಾರೆ. ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ ಚಾಂಪಿಯನ್ಸ್ ಈ ಟೂರ್ನಿಯ ವಿಶೇಷತೆ. ಈ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ತಂಡಗಳು ಟೂರ್ನಿಯಲ್ಲಿದೆ.

ಲೈವ್ ಸ್ಟ್ರೀಮಿಂಗ್ ಮಾಹಿತಿ

ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ (WCL) ಕ್ರಿಕೆಟ್ ಟೂರ್ನಿಯ ಪಂದ್ಯಗಳ ನೇರ ಪ್ರಸಾರ ನಡೆಯಲಿದೆ. ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ ನೆಟ್‌ವರ್ಕ್ ವಾಹನಿಗಳಲ್ಲಿ ನೇರ ಪ್ರಸಾರ ಇರಲಿದೆ. ಇನ್ನು ಡಿಜಿಟಲ್ ಸ್ಟ್ರೀಮಿಂಗ್ FanCode ಮೂಲಕ ನೆಡೆಯಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ myco ಹಾಗೂ ವಿಲೋ ಟಿವಿ ನೇರ ಪಸಾರ ರೈಟ್ಸ್ ಪಡೆದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೈಯಕ್ತಿಕ ಜೀವನದ ಭಾರೀ ಹಿನ್ನಡೆ ನಡುವೆಯೇ ಮಹತ್ತರ ನಿರ್ಧಾರ ಮಾಡಿದ ಯಜುವೇಂದ್ರ ಚಾಹಲ್‌, ಕನಸಾಗಿಯೇ ಉಳಿದ ಡ್ರೀಮ್‌
ಭಾರತ-ವೆಸ್ಟ್‌ಇಂಡೀಸ್‌ ಟಿ20 ಸರಣಿಗೂ ಮುನ್ನ ಮಹತ್ವದ ಬದಲಾವಣೆ; ಸ್ಟಾರ್ ಆಲ್ರೌಂಡರ್ ಔಟ್‌, ಮುಂಬೈ ಇಂಡಿಯನ್ಸ್ ಆಟಗಾರ ಇನ್‌!