
ಬರೋಡ(ಮೇ.23): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಸಮಾಜಿಕ ಅಂತರ ಪಾಲಿಸಲು ಕಟ್ಟು ನಿಟ್ಟಿನ ಆದೇಶ ನೀಡಲಾಗಿದೆ. ಲಾಕ್‌ಡೌನ್ ಸಡಿಲಿಕೆಯಾದರೂ ಧಾರ್ಮಿಕ ಕೇಂದ್ರಗಳು ಬಾಗಿಲು ತೆರಯಲು ಅವಕಾಶ ನೀಡಿಲ್ಲ. ಇದೀಗ ರಂಜಾನ್ ಹಬ್ಬದ ಪವಿತ್ರ ಆಚರಣೆಯಾದ ಈದ್ ಉಲ್ ಫಿತರ್‌ಗೆ ಸಜ್ಜಾಗಿದ್ದಾರೆ. ಆದರೆ ಮಸೀದಿಗಳು ಮುಚ್ಚಲಾಗಿದೆ. ಹೀಗಾಗಿ ಈದ್ ನಮಾಜ್ ಮಾಡವುದು ಹೇಗೆ ಎಂದು ಚಿಂತಿಸುವ ಅಗತ್ಯವಿಲ್ಲ. ಇದಕ್ಕಾಗಿ ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ ಸುಲಭ ಸೂಚನೆ ನೀಡಿದ್ದಾರೆ.
ಬಹುನಿರೀಕ್ಷಿತ 2020ರ ಟಿ20 ವಿಶ್ವಕಪ್ ಮುಂದಕ್ಕೆ?
ಇನ್‌ಸ್ಟಾಗ್ರಾಂ ಮೂಲಕ ಮಹತ್ವದ ಸಂದೇಶವನ್ನು ಇರ್ಫಾನ್ ಹಂಚಿಕೊಂಡಿದ್ದಾರೆ. ಕೊರೋನಾ ವೈರಸ್ ಕಾರಣ ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರಿ. ಈ ಬಾರಿಯ ಈದ್ ಕೊಂಚ ಭಿನ್ನವಾಗಿದೆ. ಕಾರಣ ಕೊರೋನಾ ವೈರಸ್. ಧಾರ್ಮಿಕ ಕೇಂದ್ರಕ್ಕೆ ತೆರಳಿ ಈದ್ ನಮಾಝ್ ಮಾಡಲು ಸಾಧ್ಯವಿಲ್ಲ. ಹಾಗಂತ ಈದ್ ನಮಾಝ್ ಮಾಡದೇ ಇರಬೇಕಾಗಿಲ್ಲ. ಮನೆಯಲ್ಲಿ ಈದ್ ನಮಾಜ್ ಮಾಡಲು ಸರಳ ಟಿಪ್ಸ್ ನೀಡುತ್ತಿದ್ದೇನೆ ಎಂದು ಇರ್ಫಾನ್ ಹೇಳಿದ್ದಾರೆ.
ಬಳಿಕ ಈದ್ ನಮಾಜ್ ಮಾಡುವಾಗ ಅನುಸರಿಸಬೇಕಾದ ಕ್ರಮಗಳು, ಎಲ್ಲವನ್ನೂ ಸರಳವಾಗಿ ವಿವರಿಸಿದ್ದಾರೆ. ಇಷ್ಟೇ ಅಲ್ಲ ಪ್ರತಿ ಹಂತದಲ್ಲಿ ಮಾಡಬೇಕಾದ ವಿಧಾನಗಳನ್ನು ವಿವರಿಸಿದ್ದಾರೆ. ಎರಡೂವರೆ ನಿಮಿಷದ ವಿಡಿಯೋದಲ್ಲಿ ಇರ್ಫಾನ್ ಪಠಾಣ್ ಮುಸ್ಲಿಂ ಬಾಂದವರಿಗೆ ವಿಧಾನ ಜೊತೆಗೆ ಮಹತ್ವದ ಸಂದೇಶವನ್ನು ಸಾರಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.