ಕಣಿವೆ ನಾಡಲ್ಲಿ ಮತ್ತೆ ಕ್ರಿಕೆಟ್ ಕಹಳೆ: 40 ವರ್ಷಗಳ ಬಳಿಕ ಮತ್ತೆ ಮಹತ್ವದ ಕ್ರಿಕೆಟ್‌ ಪಂದ್ಯ!

Kannadaprabha News   | Kannada Prabha
Published : Aug 13, 2026, 09:30 AM IST
Jammu and Kashmir

ಸಾರಾಂಶ

ಬರೋಬ್ಬರಿ 40 ವರ್ಷಗಳ ಬಳಿಕ, ಶ್ರೀನಗರದ ಶೇರ್‌ ಎ ಕಾಶ್ಮೀರ ಕ್ರೀಡಾಂಗಣವು ಇರಾನಿ ಕಪ್ ಫೈನಲ್‌ಗೆ ಆತಿಥ್ಯ ವಹಿಸುವ ಮೂಲಕ ಪ್ರಮುಖ ಕ್ರಿಕೆಟ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯವು ಹಾಲಿ ರಣಜಿ ಚಾಂಪಿಯನ್‌ ಜಮ್ಮು-ಕಾಶ್ಮೀರ ಮತ್ತು ರೆಸ್ಟ್‌ ಆಫ್‌ ಇಂಡಿಯಾ ತಂಡಗಳ ನಡುವೆ ನಡೆಯಲಿದೆ.

ಶ್ರೀನಗರ: ಬರೋಬ್ಬರಿ 40 ವರ್ಷಗಳ ಬಳಿಕ ಮತ್ತೊಮ್ಮೆ ಕಾಶ್ಮೀರ ಪ್ರಮುಖ ಕ್ರಿಕೆಟ್‌ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಬಾರಿ ಇರಾನಿ ಕಪ್‌ ದೇಸಿ ಕ್ರಿಕೆಟ್‌ ಟೂರ್ನಿಯಲ್ಲಿ ಹಾಲಿ ರಣಜಿ ಚಾಂಪಿಯನ್‌ ಜಮ್ಮು-ಕಾಶ್ಮೀರ ಹಾಗೂ ರೆಸ್ಟ್‌ ಆಫ್‌ ಇಂಡಿಯಾ(ಶೇಷ ಭಾರತ) ತಂಡಗಳ ನಡುವಿನ ಫೈನಲ್‌ ಪಂದ್ಯ ಅ.1ರಿಂದ 5ರ ವರೆಗೆ ಶ್ರೀನಗರದ ಶೇರ್‌ ಎ ಕಾಶ್ಮೀರ ಕ್ರೀಡಾಂಗಣದಲ್ಲಿ ನಡೆಯಲಿದೆ.

1986ರಲ್ಲಿ ಸೆಪ್ಟೆಂಬರ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಈ ಕ್ರೀಡಾಂಗಣದಲ್ಲಿ ಕೊನೆ ಬಾರಿ ಏಕದಿನ ಪಂದ್ಯ ನಡೆದಿತ್ತು. ಆ ಬಳಿಕ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಕಾಶ್ಮೀರ ಆತಿಥ್ಯ ವಹಿಸಿಲ್ಲ. ದೇಸಿ ಕ್ರಿಕೆಟ್‌ ಟೂರ್ನಿಯ ಪ್ರಮುಖ ಪಂದ್ಯಗಳೂ ಕಾಶ್ಮೀರದಲ್ಲಿ ನಡೆದಿರಲಿಲ್ಲ. ಆದರೆ ಈ ಬಾರಿ ರಣಜಿ ಟ್ರೋಫಿಯಲ್ಲಿ ಜಮ್ಮು-ಕಾಶ್ಮೀರ ಚಾಂಪಿಯನ್‌ ಆಗಿರುವುದರಿಂದ, ಅದರದೇ ತವರಿನಲ್ಲಿ ಇರಾನಿ ಕಪ್‌ ಫೈನಲ್‌ ಆಯೋಜನೆಗೊಳ್ಳಲಿದೆ. 2025-26ರ ರಣಜಿ ಫೈನಲ್‌ನಲ್ಲಿ ಜಮ್ಮು-ಕಾಶ್ಮೀರ ತಂಡ ಕರ್ನಾಟಕ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಇದರ ಬೆನ್ನಲ್ಲೇ ಇದೀಗ ಕಣಿವೆ ನಾಡಿನಲ್ಲಿ ಮಹತ್ವದ ಕ್ರಿಕೆಟ್ ಟೂರ್ನಿ ಆಯೋಜನೆಗೊಳ್ಳುತ್ತಿರುವುದು ಕ್ರೀಡಾಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಂತೆ ಆಗಿದೆ.

ಸೆ.13, 15, 17ರಂದು ದೆಹಲಿಯಲ್ಲಿ ಭಾರತ vs ಅಫ್ಘಾನಿಸ್ತಾನ ಟಿ20

ನವದೆಹಲಿ: ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ 3 ಪಂದ್ಯಗಳ ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟಗೊಂಡಿದೆ. ಬುಧವಾರ ಬಿಸಿಸಿಐ ಹಾಗೂ ಅಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ ಜಂಟಿಯಾಗಿ ಈ ವೇಳಾಪಟ್ಟಿ ಪ್ರಕಟಿಸಿದವು. ಆಫ್ಘಾನಿಸ್ತಾನ ಆತಿಥ್ಯ ವಹಿಸಲಿರುವ ಈ ಸರಣಿಯ ಪಂದ್ಯಗಳು ಸೆ.13, 15 ಹಾಗೂ 17ರಂದು ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರೊಂದಿಗೆ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸರಣಿ ನಡೆಯುವ ಸಾಧ್ಯತೆ ಕಡಿಮೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಭಾರತ-ಬಾಂಗ್ಲಾ ಸರಣಿ ಸಾಧ್ಯತೆ ಇತ್ತಾದರೂ, ಈ ಸಮಯದಲ್ಲೇ ಆಫ್ಘನ್‌ ವಿರುದ್ಧ ಭಾರತ ಆಡಲಿರುವುದರಿಂದಾಗಿ ಬಾಂಗ್ಲಾ ಸರಣಿ ರದ್ದಾಗುವ ಸಾಧ್ಯತೆ ಹೆಚ್ಚು.

ಭಾರತ vs ಶ್ರೀಲಂಕಾ ಟೆಸ್ಟ್‌ ಸರಣಿಗೆ ರಹಾನೆ ಕಾಮೆಂಟ್ರಿ

ಮುಂಬೈ: ಇತ್ತೀಚೆಗಷ್ಟೇ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ಅಜಿಂಕ್ಯ ರಹಾನೆ ಅವರು ಶನಿವಾರದಿಂದ ಆರಂಭವಾಗಲಿರುವ ಭಾರತ-ಶ್ರೀಲಂಕಾ ನಡುವಿನ 2 ಟೆಸ್ಟ್‌ ಸರಣಿಗೆ ಕಾಮೆಂಟ್ರಿ ಮಾಡಲಿದ್ದಾರೆ. ಸೋನಿ ಸ್ಪೋರ್ಟ್ಸ್‌ ನೆಟ್ವರ್ಕ್‌ನ ಕಾಮೆಂಟ್ರಿ ತಂಡ ಕೂಡಿಕೊಳ್ಳಲಿರುವ ಅವರು ಇದೇ ಮೊದಲ ಬಾರಿ ಪಂದ್ಯವೊಂದರ ವೀಕ್ಷಕ ವಿವರಣೆಗಾರ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಈ ಬಗ್ಗೆ ರಹಾನೆ ಸಂತಸ ವ್ಯಕ್ತಪಡಿಸಿದ್ದು, ‘ಭಾರತದ ಶ್ರೀಲಂಕಾ ಪ್ರವಾಸಕ್ಕೆ ವೀಕ್ಷಕ ವಿವರಣೆಗಾರನಾಗಿ ಪಾದಾರ್ಪಣೆ ಮಾಡಲು ನಾನು ಉತ್ಸುಕನಾಗಿದ್ದೇನೆ. ಕ್ರಿಕೆಟ್‌ ಅನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಅವಕಾಶ ಸಿಕ್ಕಿರುವುದು ಸೌಭಾಗ್ಯ’ ಎಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಾಲೆ ಟೆಸ್ಟ್: ಭಾರತ ತಂಡದಲ್ಲಿ ಆ ಒಂದು ಸ್ಥಾನಕ್ಕೆ ಪೈಪೋಟಿ! ಆಯ್ಕೆ ಗೊಂದಲದಲ್ಲಿ ಟೀಂ ಇಂಡಿಯಾ
ಲಂಕಾ ಟೆಸ್ಟ್ ಸರಣಿ ಭಾರತಕ್ಕೆ ಏಕೆ ಮುಖ್ಯ? ಟೀಂ ಇಂಡಿಯಾದ ಮಾಜಿ ಸ್ಟಾರ್‍‌ ಕಾರ್ತಿಕ್ ಕೊಟ್ಟ ಕಾರಣ ಹೀಗಿದೆ..!