ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 25 ರನ್‌ಗಳಿಂದ ಸೋಲಿಸಿದೆ. ಕೆ.ಎಲ್. ರಾಹುಲ್ ಅವರ 77 ರನ್ ಗಳ ನೆರವಿನಿಂದ ಡೆಲ್ಲಿ ತಂಡವು 183 ರನ್ ಗಳಿಸಿತು. ಚೆನ್ನೈ ತಂಡವು ವಿಜಯ್ ಶಂಕರ್ ಅವರ ಹೋರಾಟದ ಹೊರತಾಗಿಯೂ ಸೋಲೊಪ್ಪಿಕೊಂಡಿತು.
ಚೆನ್ನೈ: 5 ಬಾರಿ ಚಾಂಪಿಯನ್ ಚೆನ್ನೈ ಈ ಬಾರಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೆ ತುತ್ತಾಗಿದೆ. ಕೆ.ಎಲ್. ರಾಹುಲ್ ಅಬ್ಬರದಿಂದಾಗಿ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡ 25 ರನ್ ಗೆಲುವು ಸಾಧಿಸಿತು. ಇದು ಡೆಲ್ಲಿಯ ಹ್ಯಾಟ್ರಿಕ್ ಗೆಲುವು. ತಂಡ 6 ಅಂಕದೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ನಿಧಾನಗತಿ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 6 ವಿಕೆಟ್‌ಗೆ 183 ರನ್ ಗಳಿಸಿತು. ಚೆಪಾಕ್‌ನಲ್ಲಿ ಇದು ದೊಡ್ಡ ಗುರಿ, ನಿರೀಕ್ಷೆಯಂತೆಯೇ ಚೆನ್ನೈ ಗುರಿ ಬೆನ್ನತ್ತಲಾಗದೆ ಪರಾಭವಗೊಂಡಿತು. ವಿಜಯ್ ಶಂಕರ್ ಹೊರತುಪಡಿಸಿ ಬೇರೆ ಯಾರೂ ಹೋರಾಟ ಪ್ರದರ್ಶಿಸಲಿಲ್ಲ. ಅವರು 54 ಎಸೆತಗಳಲ್ಲಿ 69 ರನ್ ಸಿಡಿಸಿ ಔಟಾಗದೆ ಉಳಿದರು. 11ನೇ ಓವರಲ್ಲಿ ಕ್ರೀಸ್‌ಗೆ ಆಗಮಿಸಿದ ಧೋನಿ ನಿಧಾನವಾಗಿ ಆಡಿ, ತಂಡದ ಮೇಲಿನ ಒತ್ತಡ ಹೆಚ್ಚಿಸಿದರು. 30 ರನ್ ಗಳಿಸಲು 26 ಎಸೆತ ತೆಗೆದುಕೊಂಡ ಧೋನಿ, 1 ಬೌಂಡರಿ, 1 ಸಿಕ್ಸರ್ ಸಿಡಿಸಿದರು.
ರಿಟೈರ್ಡ್ ಹರ್ಟ್‌ಗೂ ಮತ್ತು ರಿಟೈರ್ಡ್ ಔಟ್‌ಗೂ ಇರೋ ವ್ಯತ್ಯಾಸವೇನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!
ರಾಹುಲ್ ಫಿಫ್ಟಿ: ಸ್ಪಿನ್ ಸ್ನೇಹಿ ಪಿಚ್‌ನಲ್ಲಿ 150 ರನ್ ಕೂಡಾ ಸ್ಪರ್ಧಾತ್ಮಕವಾಗಿತ್ತು. ಆದರೆ ಡೆಲ್ಲಿ ಬ್ಯಾಟರ್‌ಗಳು ವೇಗವಾಗಿ ಆಡಿ ತಂಡ ವನ್ನು ಸುಭದ್ರ ಸ್ಥಿತಿಗೆ ತಂದು ನಿಲ್ಲಿಸಿದರು. ಆರಂಭಿಕ ಆಟಗಾರ ರಾಹುಲ್ 19.2ನೇ ಓವರ್‌ವರೆಗೂ ಕ್ರೀಸ್‌ನಲ್ಲಿ ನೆಲೆಯೂರಿ ತಂಡಕ್ಕೆ ಆಸರೆಯಾದರು. ಅವರು 51 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 77 ರನ್ ಚಚ್ಚಿದರು. ಅಭಿಷೇಕ್ ಪೊರೆಲ್ 33, ಟ್ರಿಸ್ಟನ್ ಸ್ಟಬ್ಸ್ 12 ಎಸೆತಕ್ಕೆ 24, ಸಮೀರ್ ರಿಜ್ಜಿ 20 ರನ್ ಬಾರಿಸಿ ದೊಡ್ಡ ಮೊತ್ತ ಕಲೆಹಾಕಲು ನೆರವಾದರು.
ಸ್ಕೋರ್:
ಡೆಲ್ಲಿ 20 ಓವರಲ್ಲಿ 183/6 (ರಾಹುಲ್ 77, ಪೊರೆಲ್ 33, ಖಲೀಲ್ 2-25)
ಚೆನ್ನೈ 20 ಓವರಲ್ಲಿ 158/5 (ಶಂಕರ್ ಔಟಾಗದೆ 69, ಧೋನಿ ಔಟಾಗದೆ 30, ವಿಪ್ರಾಜ್ 2-27)
ಪಂದ್ಯಶ್ರೇಷ್ಠ: ಕೆ.ಎಲ್.ರಾಹುಲ್
15: ಡೆಲ್ಲಿ ತಂಡ 15 ವರ್ಷ ಬಳಿಕ ಚೆನ್ನೈನ ಚೆಪಾಕ್ ಕ್ರೀಡಾಂಗಣ ವರ್ಷ ದಲ್ಲಿ ಜಯಗಳಿಸಿತು.
ಮೊದಲ ಬೌಂಡ್ರಿಗೆ 19 ಎಸೆತ ಆಡಿದ ಧೋನಿ!
57 ಎಸೆತಕ್ಕೆ 110 ರನ್ ಬೇಕಿದ್ದಾಗ ಕ್ರೀಸ್‌ಗೆ ಆಗಮಿಸಿದ ಧೋನಿ, ದೊಡ್ಡ ಹೊಡೆತಕ್ಕೆ ಕೈ ಹಾಕಲಿಲ್ಲ. ಅವರು ಮೊದಲ ಬೌಂಡರಿ ಬಾರಿಸಲು 19 ಎಸೆತ ತೆಗೆದುಕೊಂಡರು. ಇದು ಈ ಬಾರಿ ಐಪಿಎಲ್‌ನಲ್ಲಿ ಯಾವುದೇ ಆಟಗಾರ ತನ್ನ ಮೊದಲ ಬೌಂಡರಿ ಬಾರಿಸಲು ತೆಗೆದುಕೊಂಡ ಗರಿಷ್ಠ ಎಸೆತ.