ಡಿಸಿ ಪಂದ್ಯದ ಬಳಿಕ ಧೋನಿ ನಿವೃತ್ತಿ ಸುಳಿವು, 18 ವರ್ಷದಲ್ಲಿ ಮೊದಲ ಬಾರಿಗೆ ಪೋಷಕರು ಹಾಜರ್

ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಬಳಿಕ ಧೋನಿ ನಿವೃತ್ತಿಯಾಗುತ್ತಿದ್ದಾರ? ಇದೇ ಮೊದಲ ಬಾರಿಗೆ ಧೋನಿ ಪೋಷಕರು ಕ್ರೀಡಾಂಗಣದಲ್ಲಿ ಕಾಣಸಿಕೊಂಡಿದ್ದಾರೆ. ಪತ್ನಿ ಹಾಗೂ ಪುತ್ರಿಯೂ ಜೊತೆಗಿದ್ದಾರೆ. ಇದು ಸಣ್ಣ ಸುಳಿವೊಂದನ್ನು ನೀಡಿದೆ.


ಚೆನ್ನೈ(ಏ.05) ಎಂಎಸ್ ಧೋನಿ ಐಪಿಎಲ್ ನಿವೃತ್ತಿ ಹಲವು ಭಾರಿ ಚರ್ಚೆಯಾಗಿದೆ. ಕಳೆದ 2 ಐಪಿಎಲ್ ಆವೃತ್ತಿಯ ಧೋನಿಯ ಕೊನೆಯ ಆವೃತ್ತಿ ಎಂದೇ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣದತ್ತ ಆಗಮಿಸಿದ್ದರು. ಇದೀಗ ಸಿಕ್ಕಿರುವ ಸುಳಿವು ಹಾಗೂ ಸೂಚನೆ ಪ್ರಕಾರ  ಸದ್ಯ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ಎಂಎಸ್ ಧೋನಿ ನಿವೃತ್ತಿಯಾಗುತ್ತಿದ್ದಾರೆ ಅನ್ನೋ ಮಾತು ಜೋರಾಗಿ ಕೇಳಿಬರುತ್ತಿದೆ. ಕಾರಣ ಕಳೆದ 18 ವರ್ಷದ ಐಪಿಎಲ್ ಇತಿಹಾಸದಲ್ಲಿ ಯಾವತ್ತೂ ಧೋನಿ ಪೋಷಕರು ಕ್ರೀಡಾಂಗಣಕ್ಕೆ ಆಗಮಿಸಿಲ್ಲ. ಆದರೆ ಇದೇ ಮೊದಲ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಪೋಷಕರು ಸೇರಿದಂತೆ ದೋನಿ ಕುಟುಂಬಸ್ಥರು ಹಾಜರಾಗಿದ್ದಾರೆ.

ಮೊದಲ ಬಾರಿಗೆ ಐಪಿಎಲ್ ಪಂದ್ಯಕ್ಕೆ ಧೋನಿ ಪೋಷಕರು
2008ರಲ್ಲಿ ಐಪಿಎಲ್ ಆರಂಭಗೊಂಡ ಬಳಿಕ ಇದೀಗ 18ನೇ ಆವೃತ್ತಿ ಐಪಿಎಲ್ ಟೂರ್ನಿ ನಡೆಯುತ್ತಿದೆ. ಕಳೆದ 18 ವರ್ಷಗಳಿಂದ ಧೋನಿ ಐಪಿಎಲ್ ಟೂರ್ನಿಯಲ್ಲಿ ಸಕ್ರೀಯರಾಗಿದ್ದಾರೆ. ಆದರೆ ಯಾವತ್ತೂ ಧೋನಿ ಪೋಷಕರು ಐಪಿಎಲ್ ಪಂದ್ಯ ವೀಕ್ಷಿಸಲು ಆಗಮಿಸಿಲ್ಲ. ಇದೀಗ ಸಿಎಸ್‍ಕೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಸಿಎಸ್‌ಕೆ ತವರು ಚೆನ್ನೈನಲ್ಲಿ ನಡೆಯುತ್ತಿದೆ. ಈ ಪಂದ್ಯಕ್ಕೆ ಧೋನಿ ಪೋಷಕರು ಆಗಮಿಸಿದ್ದಾರೆ. ಜೊತೆಗೆ ಧೋನಿ ಪತ್ನಿ ಸಾಕ್ಷಿ ಧೋನಿ ಹಾಗೂ ಪುತ್ರಿ ಝಿವಾ ಧೋನಿ ಕೂಡ ಪಂದ್ಯಕ್ಕೆ ಹಾಜರಾಗಿದ್ದಾರೆ.

Latest Videos

ವೈರಲ್‌ ರಿಯಾಕ್ಷನ್‌ನಿಂದ ಫೇಮಸ್‌ ಆದ ಚೆನ್ನೈ ಟೀಮ್‌ ಫ್ಯಾನ್‌ಗರ್ಲ್‌ ಹೆಸರೇನು ಗೊತ್ತಾ?

ಧೋನಿ ನಿವೃತ್ತಿ ಶೈಲಿ ಭಿನ್ನ
ಧೋನಿ ವಯಸ್ಸು ,ಫಿಟ್ನೆಸ್ ಹಾಗೂ ಫಾರ್ಮ್ ಕಾರಣದಿಂದ ಐಪಿಎಲ್‌ನಿಂದಲೂ ನಿವೃತ್ತಿಯಾಗುತ್ತಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಆದರೆ ಧೋನಿ ತನ್ನ ಕ್ರಿಕೆಟ್ ಕರಿಯರ್‌ನಲ್ಲಿ ಯಾವ ಮಾದರಿಗೂ ಮೊದಲೇ ಸೂಚನೆ ಕೊಟ್ಟು ನಿವೃತ್ತಿಯಾಗಿಲ್ಲ. ತಂಡದ ಯಾರಿಗೂ ಯಾವುದೇಸುಳಿವು ಕೂಡ ನೀಡಿಲ್ಲ. ಪಂದ್ಯ ಮುಗಿಸಿದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ, ಅಥವಾ ಟೂರ್ನಿ ಇಲ್ಲದೆ ವಿಶ್ರಾಂತಿಯಲ್ಲರುವಾಗ ನಿವೃತ್ತಿಯಾದ ಘಟನೆಗಳೇ ಹೆಚ್ಚು. ಹೀಗಾಗಿ ಈಗಲೂ ಇದೇ ಮಾದರಿಯಲ್ಲಿ ಧೋನಿ ನಿವೃತ್ತಿಯಾಗುುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

43 ವರ್ಷದ ಧೋನಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಇದು ಭಾರಿ ಟೀಕೆಗೆ ಕಾರಣವಾಗಿತ್ತು. ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬರುವುದಾದರೆ ತಂಡದಲ್ಲಿ ಏಕಿರಬೇಕು ಅನ್ನೋ ಪ್ರಶ್ನೆಗಳು ಎದ್ದಿತ್ತು. ಈ ಪಂದ್ಯದ ಬಳಿಕ ಧೋನಿ ನಿವೃತ್ತಿ ಕುರಿತು ಗಂಭೀರವಾಗಿ ಆಲೋಚಿಸಿದ್ದಾರೆ ಎನ್ನಲಾಗುತ್ತಿದೆ. ಕಳೆದೆರಡು ಆವೃತ್ತಿಗಳಿಂದ ಅಭಿಮಾನಿಗಳ ಪ್ರೀತಿಗಾಗಿ ಧೋನಿ ಐಪಿಎಲ್ ಪಂದ್ಯ ಆಡುತ್ತಿದ್ದಾರೆ.  ಆಧರೆ ಇದೀಗ ಸಿಕ್ಕ ಸೂಚನೆಗಳು ಐಪಿಎಲ್ 2025ರ ಟೂರ್ನಿ ಅರ್ಧದಿಂದಲೇ ಧೋನಿ ನಿವೃತ್ತಿಯಾಗುವ ಸಾಧ್ಯತೆಗಳು ಕಾಣುತ್ತಿದೆ.

 

MS DHONI's PARENTS AT CHEPAUK 💛 pic.twitter.com/VyVEqZYS8b

— Johns. (@CricCrazyJohns)

 

ಧೋನಿ ಇಂಜುರಿ
ಎಂಎಸ್ ಧೋನಿ ಸದ್ಯ ಐಪಿಎಲ್ ಪಂದ್ಯದಲ್ಲಿ ಗಂಭೀರ ಇಂಜುರಿಗೆ ಗುರಿಯಾಗಿಲ್ಲ. ಆದರೆ ಧೋನಿ ಈಗಾಗಲೇ ಮೊಣಕಾಲಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮೊಣಕಾಲು ನೋವಿನಿಂದ ಕಳೆದ ಹಲವು ತಿಂಗಳು ವಿಶ್ರಾಂತಿ ಕೂಡ ಪಡೆದಿದ್ದರು. ಈ ಎಲ್ಲಾ ಕಾರಣಗಳಿಂದ ಧೋನಿ ದಿಢೀರ್ ನಿವೃತ್ತಿ ನೀಡಿದರೂ ಅಚ್ಚರಿ ಇಲ್ಲ. 

ಇತ್ತ ಚಿಪಾಕ್ ಕ್ರೀಡಾಂಗಣದ ಸುತ್ತು ಧೋನಿ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಎಲ್ಲೆಡೆ ಧೋನಿ ಧೋನಿ ಕೂಗು ಕೇಳಿಬರುತ್ತಿದೆ. ಕ್ರೀಡಾಂಗಣ ತುಂಬಾ ಧೋನಿ ಅಭಿಮಾನಿಗಳೇ ತುಂಬಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯಕ್ಕೆ ಧೋನಿ ನಾಯಕನಾಗುವ ಸಾಧ್ಯತೆಗಳು ಕಂಡುಬಂದಿತ್ತು. ರುತುರಾಜ್ ಗಾಯಕ್ವಾಡ್ ಇಂಜುರಿ ಕಾರಣದಿಂದ ಅಲಭ್ಯರಾದರೇ ಧೋನಿ ನಾಯಕನ ಜವಾಬ್ದಾರಿ ವಹಿಸಿಕೊಳ್ಳವು ಸಾಧ್ಯತೆ ಇತ್ತು. ಆದರೆ ರುತುರಾಜ್ ಗಾಯಕ್ವಾಡ್ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಗಾಯಕ್ವಾಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಧೋನಿಗೆ 10 ಓವರ್‌ ಬ್ಯಾಟ್ ಮಾಡಲು ಆಗಲ್ಲ: ಹೊಸ ಬಾಂಬ್ ಸಿಡಿಸಿದ ಸ್ಟಿಫನ್ ಪ್ಲೆಮಿಂಗ್!


 

This is the first time Dhoni's parents have been at Chepauk since his association with the franchise began in 2008. pic.twitter.com/AGVGW2Chn1

— Rudhra Nandu (@rudhranandu)
click me!