ಅಲೆಕ್ಸ್ ಹ್ಯಾಲ್ಸ್ ಬದಲು ಕೆಕೆಆರ್ ತಂಡಕ್ಕೆ Aaron Finch

Suvarna News   | Asianet News
Published : Mar 11, 2022, 09:59 PM ISTUpdated : Mar 11, 2022, 10:10 PM IST
ಅಲೆಕ್ಸ್ ಹ್ಯಾಲ್ಸ್ ಬದಲು ಕೆಕೆಆರ್ ತಂಡಕ್ಕೆ Aaron Finch

ಸಾರಾಂಶ

ಕೆಕೆಆರ್ ತಂಡದಲ್ಲಿ ಪ್ರಮುಖ ಬದಲಾವಣೆ ಇಂಗ್ಲೆಂಡ್ ನ ಆರಂಭಿಕ ಅಲೆಕ್ಸ್ ಹ್ಯಾಲ್ಸ್ ಬದಲಿಗೆ ಆರನ್ ಫಿಂಚ್ ಸೇರ್ಪಡೆ 2022ರ ಐಪಿಎಲ್ ಆವೃತ್ತಿಗೆ ಕೆಕೆಆರ್ ತಂಡದ ಭರ್ಜರಿ ತಯಾರಿ

ಕೋಲ್ಕತ (ಮಾ. 11): ಆಸ್ಟ್ರೇಲಿಯಾ (Australia) ಕ್ರಿಕೆಟ್ ತಂಡದ ಏಕದಿನ (ODI) ಹಾಗೂ ಟಿ20 (T20) ಮಾದರಿಯ ನಾಯಕ ಆರನ್ ಫಿಂಚ್ (Aron Finch) ಅವರನ್ನು ಇಂಗ್ಲೆಂಡ್ (England) ತಂಡದ ಆರಂಭಿಕ ಆಟಗಾರ ಅಲೆಕ್ಸ್ ಹ್ಯಾಲ್ಸ್ (Alex Hales) ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಕೋಲ್ಕತ ನೈಟ್ ರೈಡರ್ಸ್ (kolkata knight riders) ತಿಳಿಸಿದೆ. ಬಬಲ್ ಆಯಾಸದ ಕಾರಣದಿಂದಾಗಿ ಇಂಗ್ಲೆಂಡ್ ನ ಆಟಗಾರ 2022 ರ ಐಪಿಎಲ್ ನಿಂದ (IPL) ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಿದ ಬೆನ್ನಲ್ಲಿಯೇ ಕೆಕೆಆರ್ ತನ್ನ ಬದಲಿ ಆಟಗಾರನನ್ನು ಘೋಷಣೆ ಮಾಡಿದೆ. 

ಅಲೆಕ್ಸ್ ಹ್ಯಾಲ್ಸ್,  2021-22 ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್‌ಗಾಗಿ ಆಡಿದ್ದರು. ಕೋವಿಡ್-19 ಕಾರಣದಿಂದಾಗಿ ಸಾಕಷ್ಟು ಪರಿಣಾಮವನ್ನು ಎದುರಿಸಿದ ತಂಡ ಇದಾಗಿತ್ತು. ಬಿಬಿಎಲ್ ನಲ್ಲಿ 13 ಪಂದ್ಯಗಳನ್ನು ಆಡಿದ್ದ ಹ್ಯಾಲ್ಸ್, ಆ ಬಳಿಕ ಪಾಕಿಸ್ತಾನ ಸೂಪರ್ ಲೀಗ್ ಟಿ20 ಟೂರ್ನಿಯಲ್ಲಿ ಆಡಿದ್ದರು. ಬಬಲ್ ಆಯಾಸದ ಕಾರಣದಿಂದಾಗಿ ಇಸ್ಲಾಮಾಬಾದ್ ಯುನೈಟೆಡ್ ಪರವಾಗಿ ಏಳು ಪಂದ್ಯವಾಡಿ ಹೊರಗುಳಿದಿದ್ದ ಅವವರು, ಪ್ಲೇ ಅಫ್ ಗೆ ಮುಂಚಿತವಾಗಿ ತಂಡವನ್ನು ಸೇರಿಕೊಂಡಿದ್ದರು.

"ಕಳೆದ ನಾಲ್ಕು ತಿಂಗಳುಗಳಿಂದ ಮನೆಯಿಂದ ಹೊರಗಿದ್ದೇನೆ ಹಾಗೂ ವಿಶ್ವದಾದ್ಯಂತ ಹಲವಾರು ದೇಶಗಳ ಬಯೋಬಬಲ್ ನಲ್ಲಿ ಉಳಿದುಕೊಂಡಿದ್ದೇನೆ. ಅದರೊಂದಿಗೆ ಆಸ್ಟ್ರೇಲಿಯಾದಲ್ಲಿದ್ದ ವೇಳೆ ನನಗೆ ಕೋವಿಡ್ ಕೂಡ  ತಗುಲಿತ್ತು. ಇಂಥ ಕಟ್ಟುನಿಟ್ಟಾದ ಬಯೋಬಬಲ್ ವ್ಯವಸ್ಥೆಯಲ್ಲಿ ಇನ್ನೂ ಹೆಚ್ಚಿನ ದಿನ ಕಾಲ ಬದ್ಧನಾಗಿರಲು ನನ್ನಿಂದ ಸಾಧ್ಯವಿಲ್ಲ ಎಂದು ಅನಿಸುತ್ತಿದೆ' ಎಂದು ಟ್ವಿಟರ್ ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಸದ್ಯ ನಡೆಯುತ್ತಿರುವ ಬಬಲ್ ಆಯಾಸದ ಪರಿಣಾಮವಾಗಿ ನಾನು ನಿರೀಕ್ಷಿಸಿದ ಮಟ್ಟಕ್ಕೆ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ ನಾನು ತಂಡದಲ್ಲಿ ಅಥವಾ ನನ್ನಲ್ಲಿ ನ್ಯಾಯಯುತವಾಗಿರುವುದಿಲ್ಲ." ಎಂದು ಹ್ಯಾಲ್ಸ್ ಹೇಳಿದ್ದಾರೆ.


"ಕಳೆದ ಎರಡು ವರ್ಷಗಳ ಬಬಲ್ ಜೀವನವು ನನ್ನ ಮಾನಸಿಕ ಯೋಗಕ್ಷೇಮವನ್ನು ಬಲಿ ತೆಗೆದುಕೊಂಡಿರುವ ಕಾರಣ,  ನನ್ನ ವೃತ್ತಿಜೀವನದ ಅತ್ಯುತ್ತಮ ಅವಕಾಶಗಳಲ್ಲಿ ಒಂದನ್ನು ತಿರಸ್ಕರಿಸಲು ನಾನು ನಿಜವಾಗಿಯೂ ಧೈರ್ಯಶಾಲಿ ಎಂದುಕೊಳ್ಳುತ್ತೇನೆ. ಮುಂದಿನ ಬೇಸಿಗೆಯಲ್ಲಿ ಮತ್ತೆ ಕ್ರಿಕೆಟ್ ಗೆ ಮರಳುವ ನಿಟ್ಟಿನಲ್ಲಿ ನಾನೀಗ ವಿಶ್ರಾಂತಿ ಮತ್ತು ರೀಚಾರ್ಜ್ ಮಾಡಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತೇನೆ. ಐಪಿಎಲ್ ಹರಾಜಿನ ಸಮಯದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಇತ್ತೀಚಿನ ವಾರಗಳಲ್ಲಿ ನಿರಂತರವಾಗಿ ತೋರಿದ ಬೆಂಬಲಕ್ಕಾಗಿ ನಾನು ಕೆಕೆಆರ್ ತಂಡಕ್ಕೆ ಆಭಾರಿಯಾಗಿದ್ದೇನೆ. ನಾನು ಬಾಜ್ (ಬ್ರೆಂಡನ್ ಮೆಕ್ಕಲಂ), ಶ್ರೇಯಸ್ (ಅಯ್ಯರ್) ಅವರಿಗೆ ಮುಂಬರಲಿರುವ ಟೂರ್ನಿಗೆ  ಶುಭ ಹಾರೈಸುತ್ತೇನೆ. ಭವಿಷ್ಯದ ದಿನಗಳಲ್ಲಿ ನಾನು ಕೆಕೆಆರ್ ತಂಡದ ಅಭಿಮಾನಿಗಳನ್ನು ನೋಡಲು ಆಶಿಸುತ್ತೇನೆ' ಎಂದು ಹ್ಯಾಲ್ಸ್ ಬರೆದುಕೊಂಡಿದ್ದಾರೆ.

Pink Ball Test: ಬೆಂಗಳೂರು ಟೆಸ್ಟ್‌ನಿಂದ ಹೊರಬಿದ್ದ ದುಸ್ಮಂತ ಚಮೀರಾ..!
ಫೆಬ್ರವರಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಯಾವುದೇ ತಂಡದಿಂದ ಬಿಡ್ ಪಡೆಯದ ಫಿಂಚ್, ಅವರ ಮೂಲ ಬೆಲೆ 1.5 ಕೋಟಿ ರೂಪಾಯಿಗೆ ಕೆಕೆಆರ್ ತಂಡವನ್ನು ಸೇರಿಕೊಳ್ಳಲಿದ್ದಾರೆ. 2020ರಲ್ಲಿ ಕೊನೆಯ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಐಪಿಎಲ್ ಆಡಿದ್ದ ಫಿಂಚ್, 12 ಪಂದ್ಯಗಳಿಂದ 22.33ರ ಸರಾಸರಿಯಲ್ಲಿ 111.20ರ ಸ್ಟ್ರೈಕ್ ರೇಟ್ ನಲ್ಲಿ 268 ರನ್ ಬಾರಿಸುವ ಮೂಲಕ ನೀರಸ ನಿರ್ವಹಣೆ ತೋರಿದ್ದರು.

Shane Warne ನಾನು ವಾರ್ನ್‌ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆಂದ ಡೇವಿಡ್ ವಾರ್ನರ್..!
ಅದಾದ ಬಳಿಕ ಕಳೆದ ವರ್ಷ ಆಸ್ಟ್ರೇಲಿಯಾವನ್ನು ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೆ ಇವರು ಮುನ್ನಡೆಸಿದ್ದರಾದರೂ, ಬ್ಯಾಟಿಂಗ್ ನಲ್ಲಿ ಉತ್ತಮ ನಿರ್ವಹಣೆ ತೋರಿರಲಿಲ್ಲ. ಏಳು ಪಂದ್ಯಗಳಲ್ಲಿ 19.28 ರ ಸರಾಸರಿಯಲ್ಲಿ ಮತ್ತು 116.37 ರ ಸ್ಟ್ರೈಕ್ ರೇಟ್‌ನಲ್ಲಿ 135 ರನ್ ಗಳಿಸಿದರು. ಆದರೆ, ಕಳೆದ ಬಿಬಿಎಲ್ ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್‌ಗೆ ಅಗ್ರ ಸ್ಕೋರರ್ ಆಗಿದ್ದರು, 10 ಇನ್ನಿಂಗ್ಸ್‌ಗಳಲ್ಲಿ 38.60 ರ ಸರಾಸರಿಯಲ್ಲಿ ಮತ್ತು 130.40 ರ ಸ್ಟ್ರೈಕ್ ರೇಟ್‌ನಲ್ಲಿ ನಾಲ್ಕು ಅರ್ಧ ಶತಕಗಳೊಂದಿಗೆ 386 ರನ್‌ ಬಾರಿಸಿದ್ದರು.
2021ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶರಣಾಗಿ ರನ್ನರ್ ಅಪ್ ಆಗಿದ್ದ ಕೆಕೆಆರ್ ತಂಡ, 2022ರ ಆವೃತ್ತಿಯ ಐಪಿಎಲ್ ಮೊದಲ ಪಂದ್ಯದಲ್ಲಿ ಮಾರ್ಚ್ 26 ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುಂಬೈನಲ್ಲಿ ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ