IPL 2021 ಧೋನಿ ಒಮ್ಮೆ ತುಂಬಾ ಸಿಟ್ಟಾಗಿದ್ದರು, ಅಶ್ವಿನ್‌ ಬಾಯಿ ಮುಚ್ಚಿಸಿದ್ದರು: ವಿರೇಂದ್ರ ಸೆಹ್ವಾಗ್‌..!

By Suvarna NewsFirst Published Oct 1, 2021, 6:14 PM IST
Highlights

* ಅಶ್ವಿನ್‌ ಮೇಲೆ ಧೋನಿ ಸಿಟ್ಟಾದ ಕ್ಷಣವನ್ನು ನೆನಪಿಸಿಕೊಂಡ ವಿರೇಂದ್ರ ಸೆಹ್ವಾಗ್‌

* 2014ರ ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್‌ ಬಲಿಪಡೆದಾಗ ಅಶ್ವಿನ್ ಸಂಭ್ರಮಿಸಿದ್ದರು

* ಕ್ರೀಡಾಸ್ಪೂರ್ತಿ ವಿಚಾರವಾಗಿ ಹಳೆಯ ಘಟನೆ ಮೆಲುಕು ಹಾಕಿದ ವೀರೂ 

ನವದೆಹಲಿ(ಅ.01): ಕ್ಯಾಪ್ಟನ್‌ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ (MS Dhoni) ಮೈದಾನದಲ್ಲಿ ಎಂತಹದ್ದೇ ಪರಿಸ್ಥಿತಿಯಿದ್ದರೂ ಶಾಂತ ರೀತಿಯಿಂದ ವರ್ತಿಸುವ ಮೂಲಕ ಗಮನ ಸೆಳೆದಿದ್ದಾರೆ. ಹೀಗಿದ್ದೂ ಒಮ್ಮೊಮ್ಮೆ ಧೋನಿ ಕೊಂಚ ಆಟಗಾರರ ಮೇಲೆ ಸಿಟ್ಟಾಗಿದ್ದೂ ಇದೆ. ಅಂತಹದ್ದೊಂದು ಘಟನೆಯನ್ನು ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (Virender Sehwag) ಮೆಲುಕು ಹಾಕಿದ್ದಾರೆ. 

2014ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್‌(ಈಗ ಪಂಜಾಬ್ ಕಿಂಗ್ಸ್) ನಡುವಿನ ಪಂದ್ಯದ ವೇಳೆ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ (Ravichandran Ashwin) ಪಂಜಾಬ್‌ ತಂಡದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್ (Glenn Maxwell) ವಿಕೆಟ್ ಕಬಳಿಸಿ ವಿನೂತನವಾಗಿ ಕ್ರೀಸ್‌ನಿಂದ ಬೀಳ್ಕೊಟ್ಟಿದರು. ಆಗ ಅಶ್ವಿನ್ ಮೇಲೆ ಧೋನಿ ಗದರಿದ್ದರು ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ನಾನು ಪಂಜಾಬ್ ತಂಡದಲ್ಲಿ ಆಡುತ್ತಿದ್ದಾಗ, ಅಶ್ವಿನ್‌ ಮ್ಯಾಕ್ಸ್‌ವೆಲ್ ಅವರ ವಿಕೆಟ್ ಕಬಳಿಸಿ ವಿಚಿತ್ರವಾಗಿ ಸಂಭ್ರಮಿಸಿದರು. ಆಶ್ವಿನ್ ಅವರ ಸಂಭ್ರಮಾಚರಣೆ ನನಗೆ ಇಷ್ಟವಾಗಲಿಲ್ಲ. ಹಾಗಂತ ನಾನಿದನ್ನು ಸಾರ್ವಜನಿಕವಾಗಿ ಹೇಳಲಿಲ್ಲ, ಅದೇ ರೀತಿ ಇದು ಕ್ರೀಡಾ ಸ್ಪೂರ್ತಿಗೆ ವಿರುದ್ದದವಾದದ್ದೂ ಎಂದೂ ಹೇಳಲಿಲ್ಲ. ಆದರೆ ಅಶ್ವಿನ್‌ ವರ್ತನೆ ಧೋನಿ ಸಿಟ್ಟಾಗಿದ್ದರೂ, ಇದಷ್ಟೇ ಅಲ್ಲದೇ ಅಲ್ಲದೇ ಅಶ್ವಿನ್‌ಗೆ ಧೋನಿ ಗದರಿದ್ದರು ಎಂದು ಆ ದಿನಗಳನ್ನು ವೀರೂ ಮೆಲುಕು ಹಾಕಿದ್ದಾರೆ.

IPL 2021 ಕ್ರಿಕೆಟ್‌ ಆಟವನ್ನು ಅವಮಾನಿಸಿಲ್ಲ: ಅಶ್ವಿನ್‌ ತಿರುಗೇಟು..!

ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವರ್ಸಸ್‌ ಕೋಲ್ಕತ ನೈಟ್‌ ರೈಡರ್ಸ್‌ ನಡುವಿನ ಪಂದ್ಯದ ವೇಳೆ ಅಶ್ವಿನ್‌ ಹಾಗೂ ಕೆಕೆಆರ್ ನಾಯಕ ಇಯಾನ್ ಮಾರ್ಗನ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಷ್ಟೇ ಅಲ್ಲದೇ ಮಾರ್ಗನ್ ವಿಕೆಟ್‌ ಕಬಳಿಸಿ ಅಶ್ವಿನ್‌ ಅತಿಯಾದ ಸಂಭ್ರಮಾಚರಣೆ ಮಾಡಿದ್ದರು. ಇದರ ಬೆನ್ನಲ್ಲೇ ಕ್ರೀಡಾ ಸ್ಪೂರ್ತಿಯ ಕುರಿತಂತೆ ಕ್ರೀಡಾವಲಯದಲ್ಲಿ ಜೋರಾದ ಚರ್ಚೆ ನಡೆಯುತ್ತಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ‘ರನ್‌ ಗಳಿಸುವ ವೇಳೆ ರಿಷಭ್ ಪಂತ್‌ಗೆ ಬಾಲ್‌ ಬಡಿದಿದ್ದನ್ನು ನೋಡಿಲ್ಲ. ಒಂದು ವೇಳೆ ನೋಡಿದ್ದರೂ ನಾನು ರನ್‌ಗಾಗಿ ಓಡುತ್ತಿದ್ದೆ. ಮಾರ್ಗನ್‌ ಹೇಳಿದಂತೆ ನಾನು ಕ್ರಿಕೆಟ್‌ಗೆ ಯಾವುದೇ ಅವಮಾನ ಮಾಡಿಲ್ಲ’ ಎಂದಿದ್ದಾರೆ. ‘ಕ್ರೀಡಾ ಸ್ಫೂರ್ತಿ ಎಲ್ಲರಿಗೂ ಒಂದೇ. ಅದು ಬೇರೆ ಬೇರೆ ರೀತಿ ಇರುವುದಿಲ್ಲ. ನಾನು ಜಗಳ ಮಾಡಿಲ್ಲ. ನನಗೆ ನನ್ನ ಶಿಕ್ಷಕರು ಹಾಗೂ ಪೋಷಕರು ಕಲಿಸಿದಂತೆಯೇ ನಾನು ನನ್ನ ಪರವಾಗಿ ನಿಂತಿದ್ದೇನೆ. ನಿಮ್ಮ ಮಕ್ಕಳಿಗೂ ಅದನ್ನು ಕಲಿಸಿಕೊಡಿ. ಮೊರ್ಗನ್‌ ಹಾಗೂ ಟಿಮ್‌ ಸೌಥಿಯ ಕ್ರಿಕೆಟ್‌ನಲ್ಲಿ ಅವರು ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ಇತರರಿಗೆ ಕಲಿಸಿಕೊಡಬಹುದು. ಆದರೆ ನೈತಿಕತೆಯ ಪಾಠ ಹೇಳಿಕೊಡುವ ಹಕ್ಕು ಅವರಿಗೆ ಇಲ್ಲ’ ಎಂದು ಕಿಡಿಕಾರಿದ್ದರು. 

ಆಟಗಾರರಾದರು ಕ್ರೀಡಾಸ್ಪೂರ್ತಿಯ ಕುರಿತಂತೆ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ. ಏನಾಗುತ್ತದೆಯೇ ಅದನ್ನು ಅಲ್ಲಿಯೇ ಬಿಡಬೇಕು, ಮುಂದುವರೆಸಿಕೊಂಡು ಹೋಗಬಾರದು. ದಿನೇಶ್‌ ಕಾರ್ತಿಕ್ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡದಿದ್ದರೆ, ಈ ಕುರಿತಂತೆ ಇಷ್ಟೊಂದು ಚರ್ಚೆಯೇ ಆಗುತ್ತಿರಲಿಲ್ಲ ಎಂದು ಕ್ರಿಕ್‌ಬಜ್‌ನ ವಿಡಿಯೋ ಸಂವಾದದಲ್ಲಿ ವೀರೂ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ 

click me!