* ವಿರಾಟ್ ಕೊಹ್ಲಿ ನಾಯಕತ್ವದ ಕುರಿತಂತೆ ಯಾವುದೇ ದೂರುಗಳು ಬಂದಿಲ್ಲ
* ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳು ಸತ್ಯಕ್ಕೆ ದೂರವಾದ್ದವು
* ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಸ್ಪಷ್ಟನೆ
ದುಬೈ(ಅ.01): ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿಯ (Virat Kohli) ನಾಯಕತ್ವದ ಕುರಿತಂತೆ ಹಲವು ಹಿರಿಯ ಕ್ರಿಕೆಟಿಗರು ಬಿಸಿಸಿಐಗೆ ದೂರು ಸಲ್ಲಿಸಿದ್ದಾರೆ ಎನ್ನುವ ಸುದ್ದಿಯು ಭಾರತೀಯ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ಬಿಸಿಸಿಐ ತೆರೆ ಎಳೆದಿದೆ.
ನಾಯಕತ್ವ ವಿಚಾರದಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಯಾವುದೇ ಆಟಗಾರರಿಂದ ದೂರು ಬಂದಿಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ (Arun Dhumal) ಸ್ಪಷ್ಟಪಡಿಸಿದ್ದಾರೆ. ‘ಕೊಹ್ಲಿ ವಿರುದ್ಧ ಯಾವುದೇ ಹಿರಿಯ, ಕಿರಿಯ ಆಟಗಾರ ದೂರು ನೀಡಿಲ್ಲ. ಯಾರ ಕಡೆಯಿಂದಲೂ ಈ ಬಗ್ಗೆ ಲಿಖಿತ, ಮೌಖಿಕ ದೂರುಗಳು ಸಲ್ಲಿಕೆಯಾಗಿಲ್ಲ. ಮಾಧ್ಯಮಗಳು ಈ ರೀತಿ ಬರೆಯುವುದನ್ನು ನಿಲ್ಲಿಸಬೇಕು. ಆಗಾಗ ಈ ರೀತಿಯ ಸುಳ್ಳು ವರದಿಗಳಿಗೆ ಪ್ರತಿಕ್ರಿಯೆ ನೀಡಲು ಬಿಸಿಸಿಐಗೆ ಸಾಧ್ಯವಿಲ್ಲ’ ಎಂದಿದ್ದಾರೆ.
undefined
Big Breaking News: ವಿರಾಟ್ ಕೊಹ್ಲಿ ಎದುರು ತಿರುಗಿಬಿದ್ದ ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್..!
ಕೊಹ್ಲಿ ನಾಯಕತ್ವದ ವಿರುದ್ಧ ರವಿಚಂದ್ರನ್ ಅಶ್ವಿನ್ (Ravichandran Ashwin), ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ ಅವರಿಗೆ ದೂರು ನೀಡಿದ್ದರು ಎಂದು ವದಂತಿ ಹಬ್ಬಿತ್ತು. ಈ ಕುರಿತಂತೆ ಧುಮಾಲ್ ಸ್ಪಷ್ಟನೆ ನೀಡಿದ್ದಾರೆ. ಇನ್ನು ಇದೇ ವೇಳೆ ಟಿ20 ನಾಯಕತ್ವದ ವಿರಾಟ್ ಕೊಹ್ಲಿ ಕೆಳಗಿಳಿಯುತ್ತಿರುವುದರ ಹಿಂದೆಯೂ ಬಿಸಿಸಿಐನ ಯಾವುದೇ ಪಾತ್ರವಿಲ್ಲ. ಅದು ವಿರಾಟ್ ಕೊಹ್ಲಿಯವರ ಸ್ವಂತ ನಿರ್ಧಾರ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಸೆಪ್ಟೆಂಬರ್ 16ರಂದು ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್ (T20 World Cup) ಬಳಿಕ ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ ದಿನ ಕೆಲವು ಮಾಧ್ಯಮಗಳು ಆಧಾರರಹಿತ ಸುದ್ದಿಗಳನ್ನು ವರದಿ ಮಾಡಿದ್ದವು. ಆಯ್ಕೆ ಸಮಿತಿ ಬಳಿ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಉಪನಾಯಕತ್ವದಿಂದ ರೋಹಿತ್ ಶರ್ಮಾ (Rohit Sharma) ಅವರನ್ನು ಕೆಳಗಿಳಿಸಿ ಎಂದು ಒತ್ತಡ ಹೇರಿದ್ದರು ಎಂದೆಲ್ಲಾ ವರದಿಯಾಗಿತ್ತು. ಇವೆಲ್ಲ ಸತ್ಯಕ್ಕೆ ದೂರವಾದ ವಿಚಾರಗಳು ಎಂದು ಧುಮಾಲ್ ಸ್ಪಷ್ಟನೆ ನೀಡಿದ್ದಾರೆ
ಟೀಂ ಇಂಡಿಯಾ ನಾಯಕತ್ವ ಬದಲಾವಣೆ: ಕೊಹ್ಲಿ ಬಗ್ಗೆ ಕೊನೆಗೂ ತುಟಿಬಿಚ್ಚಿದ ಬಿಸಿಸಿಐ..!
ಈ ಮೊದಲು ಮಾಧ್ಯಮಗಳು ವಿರಾಟ್ ಕೊಹ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿದ್ದಾಗಲೂ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಇದನ್ನು ಅಲ್ಲಗಳೆದಿದ್ದರು. ಈ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯು ಸತ್ಯಕ್ಕೆ ದೂರವಾದವು ಎಂದು ಹೇಳಿದ್ದರು. ಅರುಣ್ ಧುಮಾರ್ ಈ ಹೇಳಿಕೆ ನೀಡಿದ ಕೆಲವೇ ಗಂಟೆಗಳ ಬಳಿಕ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು.