ಬಿಸಿಸಿಐ ಖಜಾನೆಗೆ 48,390 ಕೋಟಿ, ಫ್ರಾಂಚೈಸಿ, ಪ್ಲೇಯರ್ಸ್ ಹಾಗೂ ರಾಜ್ಯ ಸಂಸ್ಥೆಗಳಿಗೆ ಸಿಗೋ ಹಣವೆಷ್ಟು?

Published : Jun 15, 2022, 05:11 PM IST
 ಬಿಸಿಸಿಐ ಖಜಾನೆಗೆ 48,390 ಕೋಟಿ, ಫ್ರಾಂಚೈಸಿ, ಪ್ಲೇಯರ್ಸ್ ಹಾಗೂ ರಾಜ್ಯ ಸಂಸ್ಥೆಗಳಿಗೆ ಸಿಗೋ ಹಣವೆಷ್ಟು?

ಸಾರಾಂಶ

ಐಪಿಎಲ್ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಬಿಸಿಸಿಐ ಖಜಾನೆಗೆ 48,390 ಕೋಟಿ ರೂಪಾಯಿ ಹರಿದು ಬರಲಿದೆ. ಬರುವ ಇಷ್ಟು ಹಣವನ್ನು ಬಿಸಿಸಿಐ ಹೇಗೆ ಖರ್ಚು ಮಾಡಲಿದೆ. ಐಪಿಎಲ್ ನಿಂದ ಬರುವ ಆದಾಯವನ್ನು ಬರೀ ಐಪಿಎಲ್ ಗೆ ಮಾತ್ರವೇ ಉಪಯೋಗಿಸಲಿದೆಯೇ? ಫ್ರಾಂಚೈಸಿ, ಪ್ಲೇಯರ್ಸ್ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸಿಗುವ ಹಣವೆಷ್ಟು ಎನ್ನುವ ಕುತೂಹಲ ಎಲ್ಲರಲ್ಲಿದೆ.

ಬೆಂಗಳೂರು (ಜೂನ್ 15): ಬಿಸಿಸಿಐ ( BCCI ) ಪಾಲಿನ ಚಿನ್ನದ ಮೊಟ್ಡೆ ಇಡುವ ಕೋಳಿ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಅನ್ನು ಇನ್ನಷ್ಟು ಮುತುವರ್ಜಿಯಿಂದ ಕ್ರಿಕೆಟ್ ಮಂಡಳಿ ಕಾಣಲಿದೆ. ಅದಕ್ಕೆ, ಕಾರಣ ಮುಂದಿನ ಐದು ವರ್ಷದ ಐಪಿಎಲ್ ಮಾಧ್ಯಮ ಹಕ್ಕುಗಳ (IPL Media Rights) ನೇರಪ್ರಸಾರ ದಾಖಲೆಯ 48,390 ಕೋಟಿ ರೂಪಾಯಿಗೆ ಮಾರಾಟ ಮಾಡಿರುವುದು. 

2008ರಲ್ಲಿ ಎಂಟು ತಂಡಗಳ ನಡುವೆ ಆರಂಭವಾಗಿದ್ದ ಐಪಿಎಲ್ (IPL) 15ನೇ ವರ್ಷದ ವೇಳೆಗೆ ಕೇವಲ ಅದರ ಮಾಧ್ಯಮಹಕ್ಕುಗಳು ಹತ್ತಿರ ಹತ್ತಿರ 50 ಸಾವಿರ ಕೋಟಿ ರೂಪಾಯಿ ಮೊತ್ತಕ್ಕೆ ಬಿಕರಿಯಾಗುತ್ತದೆ ಎಂದು ಯಾರೂ ಕೂಡ ಅಂದಾಜು ಮಾಡಿರಲಿಲ್ಲ. ಪ್ರತಿ ಪಂದ್ಯದ ನೇರಪ್ರಸಾರ ಲೆಕ್ಕಾಚಾರದಲ್ಲಿ ನೋಡುವುದಾದರೆ, ಅಮೆರಿಕದ ನ್ಯಾಷಲ್ ಫುಟ್ ಬಾಲ್ ಲೀಗ್ (ಎನ್ ಎಫ್ಎಲ್) ಬಿಟ್ಟರೆ, ಐಪಿಎಲ್ ಪಂದ್ಯಗಳಿಗೆ ಮೌಲ್ಯ ಜಾಸ್ತಿ. 2023-2027ರವರೆಗ ನಡೆಯಲಿರುವ ಐಪಿಎಲ್ ಪಂದ್ಯಗಳ ಪ್ರತಿ ಪಂದ್ಯಕ್ಕೆ ನೇರಪ್ರಸಾರ ಕಂಪನಿಗಳು ನೀಡುವ ಮೊತ್ತ 118.02 ಕೋಟಿ ರೂಪಾಯಿ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (BCCI Secretary Jay Shah) ಅವರು ಮಂಗಳವಾರ 'ಭಾರತ ಕ್ರಿಕೆಟ್‌ಗೆ ಕೆಂಪು ಅಕ್ಷರದ ದಿನ' ಎಂದು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದರು. ಬಿಸಿಸಿಐ ಈ ಹಣವನ್ನು ಯಾವ ರೀತಿ ಖರ್ಚು ಮಾಡಲಿದೆ ಎನ್ನುವ ಬಗ್ಗೆ ಸಣ್ಣ ಕಲ್ಪನೆಯನ್ನೂ ಈ ವೇಳೆ ಅವರು ನೀಡಿದರು. ಗ್ರಾಮೀಣ ಮಟ್ಟದಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲು, ತಳಮಟ್ಟದಿಂದಲೇ ದೇಶೀಯ ಕ್ರಿಕೆಟ್ ರಚನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಖರ್ಚು ಮಾಡುವುದಾಗಿ ಹೇಳಿದ್ದರು. ಭಾರತದಾದ್ಯಂತ ಕ್ರಿಕೆಟ್ ಸೌಲಭ್ಯಗಳನ್ನು ಹೆಚ್ಚಿಸಿ ಪಟ್ಟಾರೆ ಕ್ರಿಕೆಟ್ ವೀಕ್ಷಣೆಯ ಅನುಭವವನ್ನು ಉತ್ಕಷ್ಟಗೊಳಿಸುವುದು ಬಿಸಿಸಿಐನ ಗುರಿ ಎಂದು ಹೇಳಿದ್ದರು.

ಐಪಿಎಲ್ ಮಾಧ್ಯಮ ಹಕ್ಕುಗಳಿಂದ ಬಂದ ಆದಾಯವನ್ನು  ಐಪಿಎಲ್ ಫ್ರಾಂಚೈಸಿಗಳು, ಆಟಗಾರರು, ರಾಜ್ಯ ಸಂಸ್ಥೆಗಳು ಮತ್ತು ಅದರ ಸಿಬ್ಬಂದಿ ಸೇರಿದಂತೆ ತನ್ನ ಮಧ್ಯಸ್ಥಗಾರರಲ್ಲಿ ಈ ಆದಾಯವನ್ನು ಬಿಸಿಸಿಐ ಹೇಗೆ ಹಂಚಿಕೊಳ್ಳುತ್ತದೆ ಎನ್ನುವ ಕುತೂಹಲ ಈಗ ಎಲ್ಲರಲ್ಲಿದೆ.

IND VS SA ಚಾಹಲ್, ಹರ್ಷಲ್ ದಾಳಿಗೆ ದಕ್ಷಿಣ ಆಫ್ರಿಕಾ ಬ್ರೇಕ್ ಫೇಲ್, ಭಾರತಕ್ಕೆ ಜಯದ ಥ್ರಿಲ್!

ಐಪಿಎಲ್ ಫ್ರಾಂಚೈಸಿಗಳಿಗೆ ಸೇರುವ ಹಣ: ಎಂಟು ಮೂಲ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮಾಧ್ಯಮಹಕ್ಕಿನ ಅರ್ಧಹಣವನ್ನು ಹಂಚಿಕೆ ಮಾಡಲಾಗುತ್ತದೆ. ಐಪಿಎಲ್ ಗೆ ಹೊಸ ಪ್ರವೇಶ ಪಡೆದುಕೊಂಡಿರುವ ತಂಡಗಳಾದ ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಕೂಡ ಪಾಲು ಪಡೆಯಲಿದ್ದರೂ, ಅದು ತೀರಾ ಪುಟ್ಟ ಪ್ರಮಾಣದಲ್ಲಿರುತ್ತದೆ. ಇನ್ನು ಮೂಲ ಎಂಟು ತಂಡಗಳು ತಲಾ 3 ಸಾವಿರ ಕೋಟಿ ರೂಪಾಯಿಗಳನ್ನು ಸೆಂಟ್ರಲ್ ಪೂಲ್ ಎನ್ನುವ ಹೆಸರಿನಲ್ಲಿ ಪಡೆಯಲಿದೆ.

IND vs SA ಸೌತ್ ಆಫ್ರಿಕಾಗೆ 180 ರನ್ ಟಾರ್ಗೆಟ್, ಗೆಲ್ಲಲೇಬೇಕಾದ ಒತ್ತಡದಲ್ಲಿ ಟೀಂ ಇಂಡಿಯಾ!

ಉಳಿದ 24,195 ಕೋಟಿ ವೆಚ್ಚ ಹೇಗೆ?: ಉಳಿದ ಅರ್ಧವನ್ನು ಆಟಗಾರರು ಮತ್ತು ರಾಜ್ಯ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ.  ವರದಿಯ ಪ್ರಕಾರ, ದ್ವಿತೀಯಾರ್ಧದ 26 ಪ್ರತಿಶತದಷ್ಟು ಷೇರುಗಳನ್ನು ವಿಭಜಿಸುವ ಹಳೆಯ ಸೂತ್ರವನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ಆಟಗಾರರಿಗೆ ವಿತರಿಸಲಾಗುತ್ತದೆ. ಉಳಿದ 74 ಪ್ರತಿಶತದಲ್ಲಿ, ನಾಲ್ಕು ಪ್ರತಿಶತವನ್ನು ಸಿಬ್ಬಂದಿ ವೇತನಕ್ಕಾಗಿ ಮೀಸಲಿಡಲಾಗಿದೆ ಮತ್ತು ಉಳಿದವು ವಿವಿಧ ರಾಜ್ಯಸಂಸ್ಥೆಗಳಿಗೆ ಹೋಗುತ್ತದೆ. ಸಂಖ್ಯಾತ್ಮಕವಾಗಿ ಹೇಳುವುದಾದರೆ, ಆಟಗಾರರೊಂದಿಗೆ 6290 ಕೋಟಿ (ಅಂದಾಜು.) ಮತ್ತು 16,936 ಕೋಟಿ (ಅಂದಾಜು.)ಸಂಯೋಜಿತ ರಾಜ್ಯ ಮಂಡಳಿಗಳೊಂದಿಗೆ ಬಿಸಿಸಿಐ ಹಂಚಿಕೊಳ್ಳುತ್ತದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!
14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!