IND vs SA ಸೌತ್ ಆಫ್ರಿಕಾಗೆ 180 ರನ್ ಟಾರ್ಗೆಟ್, ಗೆಲ್ಲಲೇಬೇಕಾದ ಒತ್ತಡದಲ್ಲಿ ಟೀಂ ಇಂಡಿಯಾ!

By Suvarna NewsFirst Published Jun 14, 2022, 8:38 PM IST
Highlights
  • ಹಾಫ್ ಸೆಂಚುರಿ ಸಿಡಿಸಿದ ರುತುರಾಜ್, ಕಿಶನ್
  • ನಿರಾಸೆ ಅನುಭವಿಸಿದ ನಾಯಕ ಪಂತ್, 6 ರನ್‌ಗೆ ಔಟ್
  • ಸೌತ್ ಆಫ್ರಿಕಾ ತಂಡಕ್ಕೆ 180 ರನ್ ಟಾರ್ಗೆಟ್

ವಿಶಾಖಪಟ್ಟಣಂ(ಜೂ.14): ಇದು ಗೆಲ್ಲಲೇಬೇಕಾದ ಪಂದ್ಯ. ಸೌತ್ ಆಫ್ರಿಕಾ ವಿರುದ್ಧ 3ನೇ ಹಾಗೂ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. ರುತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಹಾಫ್ ಸೆಂಚುರಿ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 179 ರನ್ ಸಿಡಿಸಿದೆ. 

ಮೂರನೇ ಟಿ20 ಪಂದ್ಯದಲ್ಲೂ ಭಾರತ ಟಾಸ್ ಸೋತು ನಿರಾಸೆ ಅನುಭವಿಸಿತು. ಬ್ಯಾಟಿಂಗ್ ಇಳಿದ ಟೀಂ ಇಂಡಿಯಾಗೆ ರುತುರಾಜ್ ಹಾಗೂ  ಇಶಾನ್ ಕಿಶನ್ ಉತ್ತಮ ಆರಂಭ ನೀಡಿದರು. ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟದ ಮೂಲಕ ಇನ್ನಿಂಗ್ಸ್ ಆರಂಭಿಸಿತು.

Latest Videos

ದಾಖಲೆಯ 48,390 ಕೋಟಿ ರೂಪಾಯಿಗೆ ಐದು ವರ್ಷಗಳ IPL Media Rights ಮಾರಾಟ!

ರುತುರಾಜ್ ಗಾಯಕ್ವಾಡ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಗಾಯಕ್ವಾಡ್  ಹಾಗೂ ಇಶಾನ್ ಕಿಶನ್ ಜೋಡಿ ಮೊದಲ ವಿಕೆಟ್‌ಗೆ 97 ರನ್ ಜೊತೆಯಾಟ ನೀಡಿತು. ಗಾಯಕ್ವಾಡ್ 35 ಎಸೆತದಲ್ಲಿ 57 ರನ್ ಸಿಡಿಸಿ ಮಿಂಚಿದರು. ಶ್ರೇಯಸ್ ಅಯ್ಯರ್ ಕೇವಲ 14 ರನ್ ಸಿಡಿಸಿ ಔಟಾದರು.

ಇತ್ತ ಹಾಫ್ ಸೆಂಚುರಿ ಸಿಡಿಸಿದ ಇಶಾನ್ ಕಿಶನ್ ವಿಕೆಟ್ ಕೂಡ ಪತನಗೊಂಡಿದೆ. ಕಿಶನ್ 35 ಎಸೆತದಲ್ಲಿ 54 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ನಾಯಕ ರಿಷಬ್ ಪಂತ್ 6 ರನ್ ಸಿಡಿಸಿ ಔಟಾದರು. ದಿನೇಶ್ ಕಾರ್ತಿಕ್ ಕೇವಲ 6 ರನ್ ಸಿಡಿಸಿ ಔಟಾದರು. ಇದು ತೀವ್ರ ಹಿನ್ನಡೆ ತಂದಿತ್ತು.

ಹಾರ್ದಿಕ್ ಪಾಂಡ್ಯ  ಅಜೇಯ 31 ರನ್ ಸಿಡಿಸಿದರು. ಅಕ್ಸರ್ ಪಟೇಲ್ ಅಜೇಯ  5 ರನ್ ಸಿಡಿಸಿದು. ಈ ಮೂಲಕ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 179 ರನ್ ಸಿಡಿಸಿತು. 

ಸೆಕೆಂಡ್ ಬೌಲಿಂಗ್ ವೇಳೆ ಇಬ್ಬನಿ ಹೆಚ್ಚಾಗಲಿದೆ. ಹೀಗಾಗಿ ಬೌಲಿಂಗ್ ಕಷ್ಟವಾಗಲಿದೆ. ಇದರ ಲಾಭ ಸೌತ್ ಆಫ್ರಿಕಾ ತಂಡಕ್ಕೆ ಸಿಗಲಿದೆ. ಹೀಗಾಗಿ ಇಂದಿನ ಪಂದ್ಯ ಕುತೂಹಲ ಹೆಚ್ಚಿಸಿದೆ.

ರೋಹಿತ್ ಇಲ್ಲದೆ ಈ ವರ್ಷ ಒಂದೂ ಪಂದ್ಯ ಗೆದ್ದಿಲ್ಲ ಭಾರತ..!

ಭಾರತಕ್ಕೆ ಡೂ ಆರ್ ಡೈ ಪಂದ್ಯ
ಜೂನ್ 9 ರಂದು ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಪಂದ್ಯ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ  7 ವಿಕೆಟ್ ಸೋಲು ಅನುಭವಿಸಿತ್ತು. ದೆಹಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಆದರೆ ಬೌಲಿಂಗ್‌ನಲ್ಲಿ ದುಬಾರಿಯಾಗಿತ್ತು. ಈ ಮೂಲಕ ಪಂದ್ಯ ಕೈಚೆಲ್ಲಿತು. ಆದರೆ ಎರಡನೇ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ಎಡವಿತ್ತು. ಹೀಗಾಗಿ ಸಾಧಾರಣ ಮೊತ್ತ ಟಾರ್ಗೆಟ್ ನೀಡಿತ್ತು. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ 4 ವಿಕೆಟ್ ಗೆಲುವು ಕಂಡಿತ್ತು. ಹೀಗಾಗಿ ಇಂದಿನ ಪಂದ್ಯ ಗೆದ್ದು ಸರಣಿ ಉಳಿಸಿಕೊಳ್ಳಲು ಟೀಂ ಇಂಡಿಯಾ ಕಠಿಣ ಹೋರಾಟ ನಡೆಸುತ್ತಿದೆ. ಆರಂಭದಲ್ಲೇ ಟಾಸ್ ಸೋತ ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಲೂ ವಿಫಲವಾಗಿದೆ.

ಸರಣಿ ಗೆಲುವಿನ ವಿಶ್ವಾಸದಲ್ಲಿ ಸೌತ್ ಆಫ್ರಿಕಾ
ಭಾರತ ವಿರುದ್ಧದ 5 ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ಈಗಾಗಲೇ 2 ಪಂದ್ಯ ಗೆದ್ದು ಬೀಗಿದೆ. ಇಂದು ಮೂರನೇ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. ಈ ಮೂಲಕ ಸರಣಿ ಗೆಲುವಿಗೆ ಹೊಂಚು ಹಾಕಿದೆ. 

click me!