ಆಗಸ್ಟ್ 2 ರಂದು IPL ಗರ್ವನಿಂಗ್ ಕೌನ್ಸಿಲ್ ಸಭೆ; ವೇಳಾಪಟ್ಟಿಗೆ ಅಂತಿಮ ರೂಪ!

Published : Jul 28, 2020, 09:11 PM IST
ಆಗಸ್ಟ್ 2 ರಂದು IPL ಗರ್ವನಿಂಗ್ ಕೌನ್ಸಿಲ್ ಸಭೆ; ವೇಳಾಪಟ್ಟಿಗೆ ಅಂತಿಮ ರೂಪ!

ಸಾರಾಂಶ

IPL 2020 ಆಯೋಜನೆ ಕಾರ್ಯ ಚುರುಕುಗೊಂಡಿದೆ. ದುಬೈನಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೀಗ ಆಗಸ್ಟ್ 2 ರಂದು ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಸಭೆ ಸೇರುತ್ತಿದೆ. ಐಪಿಎಲ್ ಟೂರ್ನಿ ವೇಳಾಪಟ್ಟಿ ಸೇರಿದಂತೆ ಹಲವು ಪ್ರಮುಖ ಅಂಶಗಳು ಅಂತಿಮಗೊಳ್ಳಲಿದೆ.

ಮುಂಬೈ(ಜು.28): ಕೊರೋನಾ ವೈರಸ್ ಕಾರಣ ಮಾರ್ಚ್ 29ಕ್ಕೆ ನಡೆಯಬೇಕಿದ್ದ ಐಪಿಎಲ್ ಟೂರ್ನಿಗೆ ಇದೀಗ ವೇದಿಕೆ ರೆಡಿಯಾಗುತ್ತಿದೆ. ಸೆಪ್ಬೆಂಬರ್ 19 ರಿಂದ ಐಪಿಎಲ್ 2020 ಆರಂಭಗೊಳ್ಳುತ್ತಿದೆ. ದುಬೈನಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಇದೀಗ ಆಗಸ್ಟ್ 2 ರಂದು ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಸಭೆ ಸೇರುತ್ತಿದೆ. ಐಪಿಎಲ್ ವೇಳಾಪಟ್ಟಿ ಸೇರಿದಂತೆ ಹಲವು ಪ್ರಮುಖ ವಿಚಾರಗಳಿಗೆ ಅಂತಿಮ ರೂಪ ಸಿಗಲಿದೆ.

ಯುಎಇಯಲ್ಲಿ ಐಪಿಎಲ್‌ ಆಯೋಜನೆಗೆ ಬಿಸಿಸಿಐ ಪತ್ರ

ಐಪಿಎಲ್ ವೇಳಾಪಟ್ಟಿ ಕುರಿತು ಈಗಾಗಲೇ 8 ಫ್ರಾಂಚೈಸಿ ಜೊತೆಗೆ ಬಿಸಿಸಿಐ ಮೊದಲ ಸುತ್ತಿನ ಮಾತುಕತೆ ನಡೆಸಿದೆ. ಇದೀಗ ಆಗಸ್ಟ್ 2ರ ಸಭೆಯಲ್ಲಿ ವೇಳಾಪಟ್ಟಿ ಅಂತಿಮಗೊಳ್ಳಲಿದೆ. ಉದ್ಘಾಟನಾ ಪಂದ್ಯ, ಕ್ರೀಡಾಂಗಣ, ಪಂದ್ಯದ ಸಮಯ ಸೇರಿದಂತೆ ಎಲ್ಲವೂ ಅಂತಿಮವಾಗಲಿದೆ. ಆಟಗಾರರ ಕ್ವಾರಂಟೈನ್ ಅವದಿ, ದುಬೈನಲ್ಲಿ ಜಾರಿ ಮಾಡಿರುವ ಕೊರೋನಾ ವೈರಸ್ ನಿಯಂತ್ರಮ ಮಾರ್ಗಸೂಚಿಗಳ ಕುರಿತು ಚರ್ಚೆ ನೆಡೆಸಲಾಗುತ್ತದೆ.

IPL 2020 ಆರಂಭದ ದಿನಾಂಕ ಖಚಿತ ಪಡಿಸಿದ ಬ್ರಿಜೇಶ್ ಪಟೇಲ್...

ಆಟಗಾರರರ ಕ್ವಾರಂಟೈನ್ ಅವಧಿ ಕಡಿಮೆ ಮಾಡಲು ಬಿಸಿಸಿಐ ಮನವಿ ಮಾಡಲಿದೆ. ಆಟಗಾರರ ಸುರಕ್ಷತೆ, ಆಯೋಜನೆ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಚರ್ಚೆಯಾಗಲಿದೆ ಎಮಿರೈಟ್ಸ್ ಕ್ರಿಕೆಟ್ ಬೋರ್ಡ್(ದುಬೈ)ಗೆ ಬಿಸಿಸಿಐ ಅಧಿಕೃತ ಪತ್ರ ಬರೆದಿದೆ. ಐಪಿಎಲ್ ಆಯೋಜನೆಗೆ ಕುರಿತು ಪತ್ರದಲ್ಲಿ ಹೇಳಲಾಗಿದೆ. ಈ ಕುರಿತು ಎಮಿರೈಟ್ಸ್ ಕ್ರಿಕೆಟ್ ಬೋರ್ಡ್ ಈಗಾಗಲೇ ಸ್ಪಷ್ಟಪಡಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?