ಐಪಿಎಲ್‌ಗೂ ಬಡಿದ ಕೊರೋನಾ ಭೀತಿ| ಟೂರ್ನಿ ಅನಿರ್ದಿಷ್ಟವಧಿಗೆ ಮುಂದೂಡಿಕೆ| ಐಪಿಎಲ್ ಪಂದ್ಯಾವಳಿಯನ್ನು ರದ್ದುಗೊಳಿಸಿರುವ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ ಉಪಾಧ್ಯಕ್ಷ
ಮುಂಬೈ(ಮೇ.04): ದೇಶಾದ್ಯಂತ ಕೊರೋನಾ ಅಬ್ಬರ ದಿನೇ ದಿನೇ ಹೆಚ್ಚುತ್ತಿದೆ. ಈ ಆತಂಕದ ನಡುವೆಯೂ ಈ ಬಾರಿ ಐಪಿಎಲ್ ಕ್ರಿಕೆಟ್ ಪಂದ್ಯಾಟ ಆರಂಭಗೊಂಡಿದ್ದವು. ಆದರೀಗ ಕ್ರಿಕೆಟಿಗರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಮುಂದಿನ ಎಲ್ಲಾ ಪಂದ್ಯಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಬಿಸಿಸಿಐ ಉಪಾಧ್ಯಕ್ಷ ರಾಹುಲ್ ಶುಕ್ಲಾ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ
IPL suspended for this season: Vice-President BCCI Rajeev Shukla to ANI pic.twitter.com/K6VBK0W0WA
— ANI (@ANI)ಆದರೆ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಅತ್ಯಂತ ಸುರಕ್ಷಿತ ಬಯೋ ಬಬಲ್‌ನೊಳಗೆ ನಡೆಯುತ್ತಿದ್ದ ಐಪಿಎಲ್ 14ನೇ ಆವೃತ್ತಿಗೂ ಕೊರೋನಾ ಕರಿ ನೆರಳು ಬಿದ್ದಿತ್ತು. ಕೆಕೆಆರ್ ಹಾಗೂ ಸಿಎಸ್‌ಕೆ ತಂಡದ ಆಟಗಾರರಿಗೆ ಸೋಂಕು ಕಾಣಿಸಿಕೊಂಡಿದ್ದು, ಐಪಿಎಲ್ ಆಟಗಾರರು ಆತಂಕಕ್ಕೆ ಸಿಲುಕಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಬಿಸಿಸಿಐ ಸದ್ಯ ಐಪಿಎಲ್ ಟಿ20 ಟೂರ್ನಿಯನ್ನು ಮುಂದೂಡಲಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಈ ಬಾರಿ ಪಂದ್ಯಗಳು ನಡೆಯೋದು ಅನುಮಾನ ಎನ್ನಲಾಗಿದೆ.
IPL 2021: ಒಂದು ಶತಕ: ಅಪರೂಪದ ದಾಖಲೆಗಳು ಕನ್ನಡಿಗ ಪಡಿಕ್ಕಲ್ ಪಾಲು..!
ಕೆಲವು ದಿನಗಳ ಹಿಂದಷ್ಟೇ ಐಪಿಎಲ್ ಗೆ ಹೆದರಿ ಆರ್‌ಸಿಬಿ ಕ್ರಿಕೆಟಿಗರಾದ ಆಡಂ ಜಂಪಾ,ಕೇನ್ ರಿಚರ್ಡ್ ಸನ್, ರಾಜಸ್ಥಾನ್ ರಾಯಲ್ಸ್ ವೇಗಿ ಆಂಡ್ರ್ಯೂ ಟೈ ಹಾಗೂ ರವಿಚಂದ್ರನ್ ಅಶ್ವಿನ್ ಟೂರ್ನಿಯಿಂದ ಅರ್ಧಕ್ಕೆ ವಾಪಾಸ್ಸಾಗಿದ್ದರು ಎಂಬುವುದು ಉಲ್ಲೇಖನೀಯ.
ಕಳೆದ ವರ್ಷ ಪಾಕಿಸ್ತಾನ ಸೂಪರ್ ಲೀಗ್ ಕೂಡಾ ಕೋವಿಡ್ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು
ಯಾರಿಗೆಲ್ಲಾ ಸೋಂಕು?
ಕೆಕೆಆರ್‌ನ ಸ್ಪಿನ್ನರ್ ವರುಣ್ ಚಕ್ರವರ್ತಿ, ವೇಗಿ ಸಂದೀಪ್ ವಾರಿಯರ್, ಚೆನ್ನೈನ ಬೌಲಿಂಗ್ ಕೋಚ್ ಲಕ್ಷ್ಮಿಪತಿ ಬಾಲಾಜಿ ಹಾಗೂ ತಂಡದ ಬಸ್ ಕ್ಲೀನರ್‌ನ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ವರುಣ್ ಹಾಗೂ ಸಂದೀಪ್‌ರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ತಂಡದ ಇನ್ನಿತರ ಸದಸ್ಯರ ವರದಿ ನೆಗೆಟಿವ್ ಬಂದಿದ್ದರೂ, ಎಲ್ಲರನ್ನೂ ಐಸೋಲೇಷನ್‌ಗೆ ಒಳಪಡಿಸಲಾಗಿದೆ. ಬಾಲಾಜಿ ತಂಡದೊಂದಿಗೇ ಡ್ರೆಸ್ಸಿಂಗ್ ರೂಂ ಹಾಗೂ ಡಗೌಟ್‌ಗಳಲ್ಲಿ ಇರುತ್ತಿದ್ದ ಕಾರಣ, ಚೆನ್ನೈ ತಂಡ ಸಹ ಐಸೋಲೇಷನ್‌ಗೆ ಒಳಗಾಗುವ ಸಾಧ್ಯತೆ ಇದೆ.
IPL 2021 ಸಿಕ್ಸರ್ ಚಚ್ಚುವಲ್ಲಿ ಹೊಸ ದಾಖಲೆ ಬರೆದ ಕ್ರಿಸ್ ಗೇಲ್..!
ಕೆಕೆಆರ್‌ನ ಸ್ಪಿನ್ನರ್ ವರುಣ್ ಚಕ್ರವರ್ತಿ, ವೇಗಿ ಸಂದೀಪ್ ವಾರಿಯರ್, ಚೆನ್ನೈನ ಬೌಲಿಂಗ್ ಕೋಚ್ ಲಕ್ಷ್ಮಿಪತಿ ಬಾಲಾಜಿ ಹಾಗೂ ತಂಡದ ಬಸ್ ಕ್ಲೀನರ್‌ನ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ವರುಣ್ ಹಾಗೂ ಸಂದೀಪ್‌ರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ತಂಡದ ಇನ್ನಿತರ ಸದಸ್ಯರ ವರದಿ ನೆಗೆಟಿವ್ ಬಂದಿದ್ದರೂ, ಎಲ್ಲರನ್ನೂ ಐಸೋಲೇಷನ್‌ಗೆ ಒಳಪಡಿಸಲಾಗಿದೆ. ಬಾಲಾಜಿ ತಂಡದೊಂದಿಗೇ ಡ್ರೆಸ್ಸಿಂಗ್ ರೂಂ ಹಾಗೂ ಡಗೌಟ್‌ಗಳಲ್ಲಿ ಇರುತ್ತಿದ್ದ ಕಾರಣ, ಚೆನ್ನೈ ತಂಡ ಸಹ ಐಸೋಲೇಷನ್‌ಗೆ ಒಳಗಾಗುವ ಸಾಧ್ಯತೆ ಇದೆ.
ಸೋಂಕು ತಗಲಿದ್ದು ಹೇಗೆ?:
ಭುಜದ ನೋವಿನಿಂದ ಬಳಲುತ್ತಿದ್ದ ಕಾರಣ, ವರುಣ್ ಬಯೋ ಬಬಲ್‌ನಿಂದ ಹೊರಗೆ ಸ್ಕಾ್ಯನಿಂಗ್ ಮಾಡಿಸಲು ತೆರಳಿದ್ದರು. ಆ ವೇಳೆ ಅವರಿಗೆ ಸೋಂಕು ತಗುಲಿರಬಹುದು ಎನ್ನಲಾಗಿದೆ. ‘ಅವರು ಲ್ಯಾಬ್‌ಗೆ ಹೋಗುವಾಗ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಾಗಿತ್ತು. ಆದರೂ ಸೋಂಕು ತಗುಲಿರುವುದು ಆಘಾತಕ್ಕೆ ಕಾರಣವಾಗಿದೆ’ ಎಂದು ಕೆಕೆಆರ್ ತಂಡದ ಮೂಲಗಳು ತಿಳಿಸಿವೆ.
ಸೌತ್ ನಟಿಯೊಂದಿಗೆ ಖಾಸಗಿ ಜೆಟ್‌ನಲ್ಲಿ ವಿರಾಟ್ ಕೊಹ್ಲಿ? ಫೋಟೋ ವೈರಲ್!
ಬಯೋ ಬಬಲ್ ಎಂದರೇನು?
ಸೋಂಕು ತಡೆಯಲು ಬಳಸುವ ವ್ಯವಸ್ಥೆಯೇ ಬಯೋ ಬಬಲ್. ನಿರ್ದಿಷ್ಟಪ್ರದೇಶಗಳನ್ನು ಹೊರತುಪಡಿಸಿ ಆಟಗಾರರು, ಸಿಬ್ಬಂದಿ ಎಲ್ಲೂ ಹೊರಹೋಗುವಂತಿಲ್ಲ. ಹೊರಗಿನವರಿಗೆ ಆಟಗಾರರು ಉಳಿದುಕೊಳ್ಳುವ ಹೋಟೆಲ್, ಕ್ರೀಡಾಂಗಣದಲ್ಲಿ ಬಳಸುವ ಡ್ರೆಸ್ಸಿಂಗ್ ಕೊಠಡಿ, ಓಡಾಡುವ ಬಸ್, ವಿಮಾನಗಳಿಗೆ ಪ್ರವೇಶ ಇರುವುದಿಲ್ಲ. ಆಟಗಾರರು ಹೋಟೆಲ್‌ನಿಂದ ನೇರವಾಗಿ ಮೈದಾನಕ್ಕೆ, ಮೈದಾನದಿಂದ ನೇರವಾಗಿ ಹೋಟೆಲ್‌ಗೆ ಬರಬೇಕು. ಬಯೋ ಬಬಲ್ ಪ್ರವೇಶಿಸುವ ಮುನ್ನ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ. ಆ ವೇಳೆ 3 ಬಾರಿ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿ, ಮೂರರಲ್ಲೂ ನೆಗೆಟಿವ್ ಬಂದರೆ ಪ್ರವೇಶ ನೀಡಲಾಗುತ್ತದೆ. ಬಯೋ ಬಬಲ್‌ನೊಳಗೂ ಪ್ರತಿ 5 ದಿನಗಳಿಗೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona