IPL Final ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್, ಗುಜರಾತ್ ತಂಡದಲ್ಲಿ 1 ಬದಲಾವಣೆ!

By Suvarna NewsFirst Published May 29, 2022, 7:32 PM IST
Highlights
  • ಪ್ರಶಸ್ತಿಗಾಗಿ ಗುಜರಾತ್ ರಾಜಸ್ಥಾನ ಹೋರಾಟ
  • ಅಹಮ್ಮದಾಬಾದ್‌ನಲ್ಲಿ ನಡೆಯುತ್ತಿರುವ ಪಂದ್ಯ
  • ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ

ಅಹಮ್ಮದಾಬಾದ್(ಮೇ.29): IPL 2022 ಟೂರ್ನಿಯ ಚಾಂಪಿಯನ್ ಯಾರು? ಈ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಐಪಿಎಲ್ 2022 ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಗುಜರಾತ್ ಟೈಟಾನ್ಸ್ ಒಂದು ಬದಲಾವಣೆ ಮಾಡಿದೆ. ಅಲ್ಜಾರಿ ಜೋಸೆಫ್ ಬದಲು ಲ್ಯೂಕಿ ಫರ್ಗ್ಯೂಸನ್ ತಂಡ ಸೇರಿಕೊಂಡಿದ್ದಾರೆ. 

Latest Videos

IPL 2022 ಆರ್‌ಸಿಬಿಗೆ 7 ಕೋಟಿ ರೂ, ಚಾಂಪಿಯನ್ ತಂಡಕ್ಕೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು?

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11
ವೃದ್ಧಿಮಾನ್ ಸಾಹ, ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ಟಿವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಲ್ಯೂಕಿ ಫರ್ಘ್ಯೂಸನ್, ಯಶ್ ದಯಾಳ್, ಮೊಹಮ್ಮದ್ ಶಮಿ

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸಾಮ್ಸನ್(ನಾಯಕ), ದೇವದತ್ ಪಡಿಕ್ಕಲ್, ಶಿಮ್ರೊನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೋಲ್ಟ್, ಪ್ರಸಿದ್ಧ್ ಕೃಷ್ಣ, ಒಬೆಡ್ ಮೆಕೊಯ್, ಯಜುವೇಂದ್ರ ಚಹಾಲ್

ರಾಜಸ್ಥಾನ ರಾಯಲ್ಸ್ ಟಾಸ್ ಗೆದ್ದ ಬಹುತೇಕ ಪಂದ್ಯಗಳನ್ನು ಗೆದ್ದುಕೊಂಡಿದೆ. ಸತತ ಟಾಸ್ ಸೋತು ಕಂಗಾಲಾಗಿದ್ದ ಸಂಜು ಸ್ಯಾಮ್ಸನ್ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಟಾಸ್ ಗೆದ್ದಿದ್ದರು. ಬಳಿಕ ಜೋಸ್ ಬಟ್ಲರ್ ಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿತ್ತು. ಈ ಮೂಲಕ ಫೈನಲ್ ಪ್ರವೇಶಿಸಿತ್ತು. ಇದೀಗ ಮಹತ್ವದ ಫೈನಲ್ ಪಂದ್ಯದಲ್ಲೂ ರಾಜಸ್ಥಾನ ಟಾಸ್ ಗೆದ್ದಿದ್ದು, ಸೋಲು ಗೆಲುವಿನ ಲೆಕ್ಕಾಚಾರಗಳು ಆರಂಭಗೊಂಡಿದೆ. ರಾಜಸ್ಥಾನ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲೂ ಬಲಿಷ್ಠವಾಗಿದೆ. ಜೋಸ್ ಬಟ್ಲರ್ ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈಗಾಗಲೇ ನಾಲ್ಕು ಶತಕ ಸಿಡಿಸಿ ಮಿಂಚಿದ್ದಾರೆ. 

ಗುಜರಾತ್ ಹಾಗೂ ರಾಜಸ್ಥಾನ ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಸಂಪಾದಿಸಿತ್ತು. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಗುಜರಾತ್ ಹಾಗೂ ರಾಜಸ್ಥಾನ ಇದೀಗ ಮತ್ತೆ ಫೈನಲ್ ಪಂದ್ಯದಲ್ಲಿ ಹೋರಾಟಕ್ಕೆ ಸಜ್ಜಾಗಿದೆ.

2008ರಲ್ಲಿ ಆರಂಭಗೊಂಡ ಐಪಿಎಲ್ ಟೂರ್ನಿಯ ಮೊದಲ ಆವೃತ್ತಿಯಲ್ಲೇ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಶೇನ್ ವಾರ್ನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ಅದ್ಭುತ ಪ್ರದರ್ಶನದ ಮೂಲಕ ಪ್ರಶಸ್ತಿ ಗೆದ್ದುಕೊಂಡಿತು. ಇದೀಗ ಎರಡನೇ ಟ್ರೋಫಿ ಗೆಲ್ಲುವ ಅವಕಾಶ ಪಡೆದಿದೆ. 

IPL Final ಕನ್ನಡದಲ್ಲಿ ವೇಗಿ ಪ್ರಸಿದ್ಧ್ ಕೃಷ್ಣ ಮಾತು, ಫೈನಲ್ ಫೈಟ್ ಗೇಮ್ ಪ್ಲಾನ್ ಬಹಿರಂಗ!

ಇತ್ತ ಗುಜರಾತ್ ಚೊಚ್ಚಲ ಆವೃತ್ತಿಯಲ್ಲೇ ಫೈನಲ್ ಪ್ರವೇಶಿಸಿದೆ. ಇದೀಗ ಗುಜರಾತ್ ತನ್ನ ಮೊದಲ ಪ್ರಯತ್ನದಲ್ಲೇ ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿದೆ. ಹಾರ್ದಿಕ್ ಪಟೇಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ಹಾಗೂ ಸಂಜು ಸಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ಹೋರಾಟಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. 

click me!