ಕ್ರಿಕೆಟ್​ ಕಾಶಿಯಲ್ಲಿ ರಜೋತೋತ್ಸವ, ಆರ್‌ಸಿಬಿಗೆ ಕಪ್‌ ಗೆಲ್ಲಿಸಿಕೊಡ್ತಾರಾ ಪಾಟೀದಾರ್..?

Published : May 27, 2022, 05:40 PM IST
ಕ್ರಿಕೆಟ್​ ಕಾಶಿಯಲ್ಲಿ ರಜೋತೋತ್ಸವ, ಆರ್‌ಸಿಬಿಗೆ ಕಪ್‌ ಗೆಲ್ಲಿಸಿಕೊಡ್ತಾರಾ ಪಾಟೀದಾರ್..?

ಸಾರಾಂಶ

* ಎಲಿಮಿನೇಟರ್‌ ಪಂದ್ಯದಲ್ಲಿ ಸ್ಪೋಟಕ ಶತಕ ಚಚ್ಚಿದ್ದ ರಜತ್ ಪಾಟೀದಾರ್ * ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿಗೆ ರಾಜಸ್ಥಾನ ರಾಯಲ್ಸ್ ಸವಾಲು * ಆರ್‌ಸಿಬಿಗೆ ಮತ್ತೊಮ್ಮೆ ಆಪತ್ಬಾಂದವನಾಗ್ತಾರಾ ರಜತ್ ಪಾಟೀದಾರ್

ಬೆಂಗಳೂರು(ಮೇ.27): ರಜತ್ ಪಾಟೀದಾರ್,​​​ ಯೂ ಆರ್​ ಬ್ಯೂಟಿ. ನಿನ್ನೊಳಗಿನ ವೀರಾವೇಶ, ಎದುರಾಳಿಯನ್ನ ನೀನು ದಂಡಿಸುವ ಪರಿ ನಿಜಕ್ಕೂ ಸೂಪರ್​​​. ಕೊಹ್ಲಿ, ಮ್ಯಾಕ್ಸಿ ಹಾಗೂ ಡುಪ್ಲೆಸಿಸ್​​​​ರಂತ ಸ್ಟಾರ್​ ದಾಂಡಿಗರೇ ನಿರ್ಣಾಯಕ ಪಂದ್ಯದಲ್ಲಿ ಕೈಕೊಟ್ರು. ಆದರೆ ಅವರು ತಂಡವನ್ನ ನಡುನೀರಲ್ಲಿ ಬಿಟ್ರು, ನೀನು ಮಾತ್ರ ದಮ್ದಾರ್​ ಆಟವಾಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಮಾನಕಾಪಾಡಿದೆ. ನಿನ್ನ ಈ ಒಂದು ಸ್ಪಾರ್ಕ್​ ಇನ್ನಿಂಗ್ಸ್​ RCB ಚೊಚ್ಚಲ ಕಪ್ ಗೆಲ್ಲುವ ಮಹಾದಾಸೆಯನ್ನ ಜೀವಂತವಾಗಿರಿಸಿದೆ. ನಿಜಕ್ಕೂ ರಜತ್​​ ನೀನು RCBಗೆ ಸಿಕ್ಕ ನಯಾ ತೂಫಾನ್​​​.

ಡು ಆರ್ ಡೈ ವಾರ್​​ನಲ್ಲಿ ಕೆಚ್ಚದೆಯ ಪ್ರದರ್ಶನ ನೀಡಿದ ರಜತ್ ಪಾಟೀದಾರ್​​​ ಬೆಂಕಿ-ಬಿರುಗಾಳಿಯನ್ನೇ ಎಬ್ಬಿಸಿದ್ರು. ಕ್ರಿಕೆಟ್​​​​​​ ಕಾಶಿ ಈಡನ್​ ಗಾರ್ಡನ್​ ಅಂಗಳದ ಮೂಲೆ ಮೂಲೆಗೂ ಚೆಂಡು ಬಾರಿಸಿದ ರಜತ್​​​ ಸಿಡಿಲಬ್ಬರದ ಸೆಂಚುರಿ ಬಾರಿಸಿ ಸಂಭ್ರಮಿಸಿದ್ರು. 54 ಎಸೆತಗಳಲ್ಲಿ ಸ್ಪೋಟಕ 112 ರನ್​​​. 7 ಸಿಕ್ಸರ್​​​, 12 ಬೌಂಡ್ರಿ ಲಖನೌ ತಂಡದ ಕ್ವಾಲಿಫೈಯರ್​​-2 ಕನಸನ್ನ ನುಚ್ಚುನೂರಾಗಿಸಿತು. ಸದ್ಯ ರಜತ್ ಆರ್​ಸಿಬಿಗೆ ಆಕ್ಸಿಜನ್​ ನೀಡಿದ್ದಲ್ಲದೇ, ಹೊಸ ಮಾನ್​ಸ್ಟರ್ ಅನ್ನಿಸಿಕೊಂಡಿದ್ದಾರೆ.

ಕ್ರಿಕೆಟ್​​ ಕಾಶಿಯಲ್ಲಿ ಸೊಗಸಾದ ಶತಕ ಸಿಡಿಸೋ ಹಲವು ದಾಖಲೆಗಳಿಗೆ ರಜತ್​​​ ಭಾಜನರಾದ್ರು. ಐಪಿಎಲ್​​ ಹಿಸ್ಟರಿಯಲ್ಲಿ ಶತಕ ಸಿಡಿಸಿದ 4ನೇ ಅನ್​ಕ್ಯಾಪ್ಡ್​ ಪ್ಲೇಯರ್ ಮತ್ತು ಪ್ಲೇ ಆಫ್​​​ನಲ್ಲಿ ಶತಕ ಬಾರಿಸಿದ ಮೊದಲ ಅನ್​ಕ್ಯಾಪ್ಡ್​​​ ಆಟಗಾರ ಅನ್ನಿಸಿಕೊಂಡ್ರು.

ಆಕ್ಷನ್​​​​ನಲ್ಲಿ ಅನ್​ಸೋಲ್ಡ್​​​​ ಆದವ ಪಂದ್ಯ ಗೆಲ್ಲಿಸಿದ್ದೆ ರೋಚಕ:

ಚೊಚ್ಚಲ ಸೆಂಚುರಿಯಿಂದ ರಜತ್​​​​ ರಾತ್ರೋ-ರಾತ್ರಿ ಆಗಿದ್ದಾರೆ. ಆದ್ರೆ ನಿಮಗೊಂದು ಸಂಗತಿ ಗೊತ್ತಿರ್ಲಿಲ್ಲ. ಯಾವ ಪಾಟೀದಾರ್​​​​ ಕ್ರೂಷಿಯಲ್​​ ಪಂದ್ಯದಲ್ಲಿ ಶತಕ ಸಿಡಿಸಿ RCB ಮಾನಕಾಪಾಡಿದ್ದಾರೋ ಇದೇ ಪ್ಲೇಯರ್​ ಈ ಬಾರಿ ಆಕ್ಷನ್​​ನಲ್ಲಿ ಅನ್​​ಸೋಲ್ಡ್ ಆಗಿದ್ರು. ಯಾವ ಫ್ರಾಂಚೈಸಿಯು ಯಂಗ್​​ ಗನ್​​​ ಖರೀದಿಸೋ ಮನಸ್ಸು ಮಾಡದೇ ಅವಮಾನಿಸಿತ್ತು. ಇಂತಹ ಸಂಕಷ್ಟದಲ್ಲಿ RCB ಕೈಹಿಡಿತು. ಗಾಯಾಳು ಲುವ್​ನೀತ್​​​ ಸಿಸೋಡಿಯಾ ಬದಲಿಗೆ 20 ಲಕ್ಷ ರೂಪಾಯಿಗೆ ಪಾಟೀದಾರ್​ರನ್ನ RCB ಕೊಂಡುಕೊಳ್ತು. ಇನ್ನು 2021ರಲ್ಲಿ ಮಧ್ಯಪ್ರದೇಶದ ಆಟಗಾರ RCB ತಂಡದಲ್ಲಿದ್ರು. ಪ್ಲೇಯರ್ಸ್​ ರಿಟೆನ್ಷನ್​​​​ ವೇಳೆ ಕೈಬಿಟ್ಟಿತ್ತು. ಹೀಗೆ ಅದೃಷ್ಟದಲ್ಲಿ ರೆಡ್ ಆರ್ಮಿ ಸೇರಿಕೊಂಡ ಪಾಟೀದಾರ್​​​​​ ಇಂದು, RCBಯನ್ನ ಕ್ವಾಲಿಫೈಯರ್​​-2ಗೆ ತಲುಪಿಸಿದ್ದಾರೆ. ಇನ್ನು ಪಾಟೀದಾರ್ ಬೆಂಕಿ ಇನ್ನಿಂಗ್ಸ್​ಗೆ ಕ್ರಿಕೆಟ್ ದಿಗ್ಗಜರು ಸಲಾಂ ಹೊಡೆದಿದ್ದಾರೆ. 

Disney+Hotstar ವೀಕ್ಷಣೆಯಲ್ಲಿ ಆರ್​ಸಿಬಿ-ಲಖನೌ ಪಂದ್ಯ ದಾಖಲೆ..!

ಒಟ್ಟಿನಲ್ಲಿ ಆ್ಯಕ್ಷನ್​​​ನಲ್ಲಿ ತಿರಿಸ್ಕರಿಸಲ್ಪಟ ರಜತ್​ ಪಾಟೀದಾರ್​​ ಇಂದು ಇಡೀ ಕ್ರಿಕೆಟ್​ ಲೋಕವೇ ಬೆರಗಾಗುವಂತ ಆಟವಾಡಿದ್ದಾರೆ. ಮುಂದಿನ ಪಂದ್ಯದಲ್ಲಿ ಈ ಯಂಗ್​​ ಆ್ಯಂಡ್​ ಆಂಗ್ರಿಮ್ಯಾನ್​ ಇಂತಹದೇ ದಮ್ದಾರ್​ ಇನ್ನಿಂಗ್ಸ್ ಕಟ್ಟಿ RCBಗೆ ಚೊಚ್ಚಲ ಕಪ್ ಗೆಲ್ಲಿಸಿಕೊಡುವಂತಾಗಲಿ.

ಆರ್‌ಸಿಬಿಗೆ ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಡ್ತಾರಾ ರಜತ್‌: ಕಳೆದ 14 ಆವೃತ್ತಿಗಳಿಂದಲೂ ಐಪಿಎಲ್ ಟ್ರೋಫಿ ಎನ್ನುವುದು ಆರ್‌ಸಿಬಿ ಪಾಲಿಗೆ ಕನ್ನಡಿಯೊಳಗಿನ ಗಂಟು ಎನಿಸಿದೆ. ಆದರೆ ಈ ಬಾರಿ ಆರ್‌ಸಿಬಿ ಯಾವೊಬ್ಬ ಆಟಗಾರನ ಮೇಲೆ ಅವಲಂಬಿತವಾಗಿಲ್ಲ. ಅದರಲ್ಲೂ ಆರ್‌ಸಿಬಿ ತಾರಾ ಆಟಗಾರರಾದ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಕೈಕೊಟ್ಟರೂ ಸಹಾ, ಯುವ ಕ್ರಿಕೆಟಿಗ ರಜತ್ ಪಾಟೀದಾರ್ ಕಳೆದ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್‌ ಮೂಲಕ ಮಿಂಚಿದ್ದಾರೆ. ಹೀಗಾಗಿ ಇನ್ನುಳಿದ ಎರಡು ಪಂದ್ಯಗಳಲ್ಲೂ ರಜತ್ ಪಾಟೀದಾರ್ ಉತ್ತಮವಾಗಿ ಬ್ಯಾಟಿಂಗ್ ನಡೆಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?