Disney+Hotstar ವೀಕ್ಷಣೆಯಲ್ಲಿ ಆರ್​ಸಿಬಿ-ಲಖನೌ ಪಂದ್ಯ ದಾಖಲೆ..!

Published : May 27, 2022, 04:16 PM IST
Disney+Hotstar ವೀಕ್ಷಣೆಯಲ್ಲಿ ಆರ್​ಸಿಬಿ-ಲಖನೌ ಪಂದ್ಯ ದಾಖಲೆ..!

ಸಾರಾಂಶ

* ಎಲಿಮಿನೇಟರ್‌ ಪಂದ್ಯದಲ್ಲಿ ಲಖನೌ ಎದುರು ಆರ್‌ಸಿಬಿ ಜಯಭೇರಿ * ರ್​ಸಿಬಿ ಹಾಗೂ ಲಖನೌ ನಡುವಿನ ಎಲಿಮಿನೇಟರ್​​ ಪಂದ್ಯ ವೀಕ್ಷಣೆಯಲ್ಲಿ ಹೊಸ ದಾಖಲೆ  * ಡಿಸ್ನಿ ಹಾಟ್​ಸ್ಟಾರ್​​ನಲ್ಲಿ ಬರೋಬ್ಬರಿ 8.7 ಮಿಲಿಯನ್​ ಮಂದಿ ವೀಕ್ಷಣೆ

ಬೆಂಗಳೂರು(ಏ.27): ಮಾರ್ಚ್‌ 26ಕ್ಕೆ ಆರಂಭಗೊಂಡು ಸುದೀರ್ಘ ಎರಡು ತಿಂಗಳ ಕಾಲ ಭರ್ಜರಿ ಮನರಂಜನೆ ಉಣಬಡಿಸಿದ್ದ 15ನೇ ಐಪಿಎಲ್ (IPL 2022)​​ ಕೊನೆ ಘಟ್ಟ ತಲುಪಿದೆ. ಕಲರ್​​ಫುಲ್​​ ಟೂರ್ನಿಯಲ್ಲಿ ಇನ್ನೆರಡು ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಸಂಡೇ ಐಪಿಎಲ್​​ ಹಂಗಾಮಕ್ಕೆ ತೆರೆ ಬೀಳಲಿದೆ. ಆರಂಭದಿಂದಲೇ ಭಾರಿ ಸುದ್ದಿಯಾಗಿದ್ದ ಈ ಬಾರಿಯ ಐಪಿಎಲ್​​ ನಿರೀಕ್ಷಿತ ಮಟ್ಟದಲ್ಲಿ ಸಕ್ಸಸ್​ ಕಾಣಲಿಲ್ಲ. ಟೂರ್ನಿಯ ಇತಿಹಾಸದಲ್ಲೇ ವೀಕ್ಷಕರ ಸಂಖ್ಯೆ ಪಾತಾಳಕ್ಕೆ ಕುಸಿದಿತ್ತು.

ಶೇಖಡ 28 ರಿಂದ 30 ರಷ್ಟು ವೀವರ್ಸ್​ ಕಮ್ಮಿಯಾಗಿದ್ರು. ನೇರಪ್ರಸಾರದ ಹಕ್ಕು ಪಡೆದಿರೋ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಹಾಗೂ ಬಿಸಿಸಿಐ ಇದರಿಂದ ಅಕ್ಷರಶಃ ಕಂಗೆಟ್ಟಿತ್ತು. ಇಂತಹ ಸಂಕಷ್ಟದ ಟೈಮ್​​​ಅಲ್ಲಿ ಆರ್​ಸಿಬಿ ಹಾಗೂ ಲಖನೌ ನಡುವಿನ ಎಲಿಮಿನೇಟರ್​​ ಪಂದ್ಯ ವೀಕ್ಷಣೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ಡಿಸ್ನಿ ಹಾಟ್​ಸ್ಟಾರ್​​ನಲ್ಲಿ 8.7 ಮಿಲಿಯನ್​ ಮಂದಿ ವೀಕ್ಷಣೆ: 

ಆರ್​ಸಿಬಿ ಹಾಗೂ ಲಖನೌ ನಡುವಿನ ಎಲಿಮಿನೇಟರ್​​​​​ ಪಂದ್ಯ ಸಾಕಷ್ಟು ಥ್ರಿಲ್ಲಿಂಗ್​​​ನಿಂದ ಕೂಡಿತ್ತು. ಕೊನೆಗೆ ಈ ರೋಚಕ ಗೇಮ್​​ನಲ್ಲಿ ಆರ್​ಸಿಬಿ ಗೆದ್ದಿತ್ತು. ಈ ತೀವ್ರ ಜಿದ್ದಿನ ಪಂದ್ಯವನ್ನ ಡಿಸ್ನಿ ಹಾಟ್​ಸ್ಟಾರ್​​ನಲ್ಲಿ ಬರೋಬ್ಬರಿ 8.7 ಮಿಲಿಯನ್​ ಮಂದಿ ವೀಕ್ಷಿಸಿದ್ದಾರೆ. ಇದು ಪ್ರಸಕ್ತ ಐಪಿಎಲ್​​​ನಲ್ಲಿ ಹೆಚ್ಚು ವೀಕ್ಷಣೆ ಪಡೆದ ಖ್ಯಾತಿಗೆ ಭಾಜನವಾಗಿದೆ.

ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು 15ನೇ ಆವೃತ್ತಿ ಐಪಿಎಲ್‌ನಲ್ಲಿ ಕ್ವಾಲಿಫೈಯರ್‌-2ಕ್ಕೆ ಲಗ್ಗೆ ಇಟ್ಟಿದೆ. ಬುಧವಾರ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧದ ಎಲಿಮಿನೇಟರ್‌ ಪಂದ್ಯದಲ್ಲಿ ತಂಡ 14 ರನ್‌ಗಳಿಂದ ಗೆಲುವು ಸಾಧಿಸಿತು. ಕಳೆದೆರಡು ಆವೃತ್ತಿಗಳಲ್ಲಿ ಕ್ರಮವಾಗಿ ಹೈದರಬಾದ್‌ ಹಾಗೂ ಕೋಲ್ಕತಾ ವಿರುದ್ಧ ಎಲಿಮಿನೇಟರ್‌ ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದ ತಂಡ ಈ ಬಾರಿ ಗೆಲುವು ಸಾಧಿಸಲು ಯಶಸ್ವಿಯಾಯಿತು. ಚೊಚ್ಚಲ ಆವೃತ್ತಿಯಲ್ಲೇ ಪ್ಲೇ-ಆಫ್‌ ಪ್ರವೇಶಿಸಿ ಗಮನ ಸೆಳೆದಿದ್ದ ಲಖನೌ ಎಲಿಮಿನೇಟರ್‌ನಲ್ಲಿ ಅಭಿಯಾನ ಕೊನೆಗೊಳಿಸಿತು.

ಚೆನ್ನೈ - ಮುಂಬೈ ಪಂದ್ಯದ ದಾಖಲೆ ಖತಂ:

ಇನ್ನು ಆರ್​​ಸಿಬಿ-ಲಖನೌ ಪಂದ್ಯವನ್ನ 8.7 ಮಿಲಿಯನ್​​ ಮಂದಿ ನೋಡುವ ಮೂಲಕ ಚೆನ್ನೈ-ಮುಂಬೈ ಪಂದ್ಯದ ದಾಖಲೆ ಉಡೀಸ್ ಆಗಿದೆ. ಈ ಪಂದ್ಯವನ್ನ 8.3 ಮಿಲಿಮಂದಿ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಿದ್ರು. ಈ ಪಂದ್ಯದಲ್ಲಿ ಧೋನಿ ಕೊನೆ ಓವರ್​​ನಲ್ಲಿ ಅಬ್ಬರಿಸಿ ಚೆನ್ನೈಗೆ ಗೆಲುವು ತಂದುಕೊಟ್ರು. ಹಾಗಾಗಿ ವೀಕ್ಷಣೆಯಲ್ಲಿ ಭಾರೀ ಏರಿಕೆ ಕಂಡಿತ್ತು.

IPL Qualifier 2: ಹೀಗಿದೆ ಆರ್‌ಸಿಬಿ ಎದುರಿನ ಪಂದ್ಯಕ್ಕೆ ರಾಜಸ್ಥಾನ ರಾಯಲ್ಸ್‌ ಸಂಭಾವ್ಯ ತಂಡ..!

ಇನ್ನು ಇಂದು ಕೂಡ ಆರ್​ಸಿಬಿ-ರಾಜಸ್ಥಾನ ನಡುವೆ ಕ್ವಾಲಿಫೈಯರ್​​​-2 ಫೈಟ್​ ಏರ್ಪಡಲಿದೆ. ಎರಡು ತಂಡಕ್ಕೂ ಡು ಆರ್ ಡೈ. ಗೆದ್ದ ತಂಡ ಫೈನಲ್​​ ಪ್ರವೇಶಿಸಲಿದೆ. ಅದ್ರಲ್ಲೂ ಆರ್​ಸಿಬಿ ರಾಯಲ್ಸ್​ಗೆ ಸವಾಲೆಸೆಯೋದ್ರಿಂದ ಇಂದಿನ ಪಂದ್ಯ ಕೂಡ ದಾಖಲೆಯ ವೀಕ್ಷಣೆಯ ಪಡೆಯುವ ನಿರೀಕ್ಷೆ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ