IPL 2021: ಹರಾಜಿನ ಬಳಿಕ ರಾಜಸ್ಥಾನ ರಾಯಲ್ಸ್ ಹೀಗಿದೆ ನೋಡಿ

By Suvarna NewsFirst Published Feb 19, 2021, 8:03 PM IST
Highlights

ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ 14ನೇ ಆವೃತ್ತಿಯ ಐಪಿಎಲ್‌ ಹರಾಜಿನಲ್ಲಿ ಆಟಗಾರರನ್ನು ಖರೀದಿಸಿದ ಬಳಿಕ ಸಂಪೂರ್ಣ ಆಟಗಾರರ ವಿವರ ಇಲ್ಲಿದೆ ನೋಡಿ.

ಬೆಂಗಳೂರು(ಫೆ.19): 14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಅತಿಹೆಚ್ಚು ಗಮನ ಸೆಳೆದ ತಂಡವೆಂದರೆ ಅದು ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ. ಯಾಕೆಂದರೆ ದಕ್ಷಿಣ ಆಫ್ರಿಕಾದ ಆಲ್ರೌಂಡರ್‌ ಕ್ರಿಸ್ ಮೋರಿಸ್‌ರನ್ನು ಬರೋಬ್ಬರಿ 16.25 ಕೋಟಿ ರುಪಾಯಿ ನೀಡಿ ಖರೀದಿಸುವ ಮೂಲಕ ಹರಾಜಿನಲ್ಲಿ ಆಟಗಾರನೊಬ್ಬನಿಗೆ ಅತಿ ಹೆಚ್ಚು ಹಣ ನೀಡಿ ಖರೀದಿಸಿದ ಫ್ರಾಂಚೈಸಿ ಎನ್ನುವ ಕೀರ್ತಿಗೆ ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ ಭಾಜನವಾಗಿದೆ.

ಕ್ರಿಸ್‌ ಮೋರಿಸ್‌ ಮಾತ್ರವಲ್ಲದೇ ಶಿವಂ ದುಬೆ(4.4 ಕೋಟಿ), ಚೇತನ್‌ ಸಕಾರಿಯಾ(1.2 ಕೋಟಿ). ಮುಷ್ತಾಫಿಜುರ್‌ ರೆಹಮಾನ್‌(1 ಕೋಟಿ), ಲಿಯಮ್‌ ಲಿವಿಂಗ್‌ಸ್ಟೋನ್‌(75 ಲಕ್ಷ), ಅಕಾಶ್‌ ಸಿಂಗ್(20 ಲಕ್ಷ), ಕೆ.ಸಿ. ಕರಿಯಪ್ಪ(20 ಲಕ್ಷ) ಹಾಗೂ ಕುಲ್ದಿಪ್‌ ಯಾದವ್‌ಗೆ 20 ಲಕ್ಷ ರುಪಾಯಿ ನೀಡಿ ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ರಾಜಸ್ಥಾನ ಫ್ರಾಂಚೈಸಿ ಸಫಲವಾಗಿದೆ.

𝗡𝗲𝘄 𝗥𝗼𝘆𝗮𝗹𝘀 💗 | | pic.twitter.com/y73QoQ8GWv

— Rajasthan Royals (@rajasthanroyals)

IPL 2021: ಹರಾಜಿನ ಬಳಿಕ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹೀಗಿದೆ ನೋಡಿ

ಹರಾಜಿನ ಬಳಿಕ ರಾಜಸ್ಥಾನ ರಾಯಲ್ಸ್‌ ಸಂಪೂರ್ಣ ತಂಡ ಹೀಗಿದೆ ನೋಡಿ:

ಸಂಜು ಸ್ಯಾಮ್ಸನ್‌, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್‌, ಜೋಸ್‌ ಬಟ್ಲರ್‌, ರಿಯಾನ್ ಪರಾಗ್‌, ಶ್ರೇಯಸ್‌ ಗೋಪಾಲ್‌, ರಾಹುಲ್ ತೆವಾಟಿಯಾ, ಮಹಿಪಾಲ್‌ ಲೋಮ್ರರ್, ಕಾರ್ತಿಕ್ ತ್ಯಾಗಿ, ಆಂಡ್ರ್ಯೂ ಟೈ, ಜಯದೇವ್ ಉನಾದ್ಕಟ್, ಮಯಾಂಕ್‌ ಮಾರ್ಕಂಡೆ, ಯಶಸ್ವಿ ಜೈಸ್ವಾಲ್‌, ಅನುಜ್‌ ರಾವತ್‌, ಡೇವಿಡ್‌ ಮಿಲ್ಲರ್, ಮನನ್‌ ವೋಹ್ರಾ, ಕ್ರಿಸ್ ಮೋರಿಸ್‌, ಶಿವಂ ದುಬೆ, ಚೇತನ್‌ ಸಕಾರಿಯಾ, ಮುಷ್ತಾಫಿಜುರ್ ರೆಹಮಾನ್‌, ಲಿಯಮ್ ಲಿವಿಂಗ್‌ಸ್ಟೋನ್‌, ಆಕಾಶ್ ಸಿಂಗ್, ಕೆ ಸಿ ಕರಿಯಪ್ಪ, ಕುಲ್ದಿಪ್ ಯಾದವ್‌.

click me!