ದಾಖಲೆಯ 20.50 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಳ್ಳುವುದರೊಂದಿಗೆ ಪ್ಯಾಟ್ ಕಮ್ಮಿನ್ಸ್ ಐಪಿಎಲ್ ಇತಿಹಾಸದ 2ನೇ ಅತ್ಯಂತ ದುಬಾರಿ ಆಟಗಾರ ಎನಿಸಿದ್ದಾರೆ. 24.75 ಕೋಟಿ ರೂಪಾಯಿಗೆ ಕೆಕೆಆರ್‌ಗೆ ಸೇರಿದ ಮಿಚೆಲ್ ಸ್ಟಾರ್ಕ್ ಐಪಿಎಲ್‌ನ ದುಬಾರಿ ಆಟಗಾರನಾಗಿದ್ದಾರೆ. ಐಎಪಿಲ್‌ನಲ್ಲಿ 10 ದುಬಾರಿ ಆಟಗಾರರ ಲಿಸ್ಟ್ ಇಲ್ಲಿದೆ.
ದುಬೈ (ಡಿ.19): ವಿಶ್ವಕಪ್ ವಿಜೇತ ಆಸೀಸ್ ತಂಡದ ಆಟಗಾರ ಮಿಚೆಲ್ ಸ್ಟಾರ್ಕ್ ಐಪಿಎಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಮಿನಿ ಹರಾಜಿನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರ ದಾಖಲೆಯನ್ನು ಕೆಲವೇ ಹೊತ್ತಿನಲ್ಲಿ ಬ್ರೇಕ್ ಮಾಡಿದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿಗೆ ಕೆಕೆಆರ್ ತಂಡವನ್ನು ಸೇರಿಕೊಳ್ಳುವ ಮೂಲಕ ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಎನಿಸಿದ್ದಾರೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಸೇವೆ ಪಡೆಯುವ ನಿಟ್ಟಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ತನ್ನ ಖಜಾನೆಯನ್ನು ಸಂಪೂರ್ಣವಾಗಿ ಮುಕ್ತವಾಗಿರಿಸಿತ್ತು. ಇದರಿಂದಾಗಿ ಇಂಗ್ಲೆಂಡ್‌ನ ಯುವ ಆಲ್ರೌಂಡರ್ ಸ್ಯಾಮ್ ಕರ್ರನ್ ಹೆಸರಲ್ಲಿದ್ದ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎನ್ನುವ ಶ್ರೇಯವನ್ನು ಪ್ಯಾಟ್ ಕಮ್ಮಿನ್ಸ್ ತಮ್ಮದಾಗಿಸಿಕೊಂಡಿದ್ದರು.
2023ರ ಐಪಿಎಲ್ ಮಿನಿ ಹರಾಜಿನಲ್ಲಿ ಸ್ಯಾಮ್ ಕರ್ರನ್ ಆತ್ರವಲ್ಲದೆ, ಮತ್ತೆ ಮೂವರು ವಿದೇಶಿ ಆಟಗಾರರು 15 ಕೋಟಿ ಮಾರ್ಕ್ಅನ್ನು ದಾಟಿದ್ದರು. ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಸೇವೆಗಾಗಿ ಮುಂಬೈ ಇಂಡಿಯನ್ಸ್ 17. 50 ಕೋಟಿ ರೂಪಾಯಿ ನೀಡಿದ್ದರೆ, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್‌ರನ್ನು 16.25 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿ ಮಾಡಿತ್ತು. ವೆಸ್ಟ್ ಇಂಡೀಸ್‌ನ ಪವರ್ ಹಿಟ್ಟರ್ ನಿಕೋಲಸ್ ಪೂರನ್ ಅವರ ಸೇವೆಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ 16 ಕೋಟಿಯ ಒಪ್ಪಂದ ಮಾಡಿಕೊಂಡಿತ್ತು. ಕ್ಯಾಮರೂನ್ ಗ್ರೀನ್ ಈ ಬಾರಿ ಇದೇ ಮೊತ್ತಕ್ಕೆ ಆರ್‌ಸಿಬಿ ತಂಡದ ಪಾಲಾಗಿದ್ದರೆ, ಸಿಎಸ್‌ಕೆ ತಂಡ ಬೆನ್ ಸ್ಟೋಕ್ಸ್ ಜೊತೆಗಿನ ಒಪ್ಪಂದವನ್ನು ಬ್ರೇಕ್ ಮಾಡಿದೆ. 2024ರ ಐಪಿಎಲ್‌ನಲ್ಲಿ ಬೆನ್ ಸ್ಟೋಕ್ಸ್ ಭಾಗವಹಿಸುತ್ತಿಲ್ಲ.
Updated List: ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರು
1.ಮಿಚೆಲ್ ಸ್ಟಾರ್ಕ್- 24.75 ಕೋಟಿ-KKR-2024
2. ಪ್ಯಾಟ್ ಕಮಿನ್ಸ್: 20.5 ಕೋಟಿ - SRH 2024
3. ಸ್ಯಾಮ್ ಕರ್ರನ್: 18.50 ಕೋಟಿ - PBKS- 2023
4. ಕ್ಯಾಮರೋನ್ ಗ್ರೀನ್: 17.50 ಕೋಟಿ MI-2023
5. ಬೆನ್ ಸ್ಟೋಕ್ಸ್: 16.25 ಕೋಟಿ - CSK -2023
6. ಕ್ರಿಸ್ ಮೋರಿಸ್: 16.25 ಕೋಟಿ - RR -2021
7. ನಿಕೋಲಸ್ ಪೂರನ್: 16 ಕೋಟಿ - LSG - 2023
8. ಯುವರಾಜ್ ಸಿಂಗ್: 16 ಕೋಟಿ -DD- 2015
9. ಪ್ಯಾಟ್ ಕಮಿನ್ಸ್: 15.50 ಕೋಟಿ - KKR-2020
10. ಇಶಾನ್ ಕಿಶನ್: 15.25 ಕೋಟಿ - MI- 2022
ಇದನ್ನೂ ಓದಿ: ಬರೀ 16 ಕೋಟಿಯ ಆಸ್ತಿ ಹೊಂದಿರುವ ವಿಂಡೀಸ್ ಆಟಗಾರನಿಗೆ ಒಂದೇ ಬಾರಿ 8 ಕೋಟಿಯ ಜಾಕ್‌ಪಾಟ್!
ಇದನ್ನೂ ಓದಿ: Breaking: ಸನ್‌ರೈಸರ್ಸ್‌ಗೆ ವಿಶ್ವಕಪ್ ಫೈನಲ್ ಹೀರೋ, 20 ಕೋಟಿಗೆ ಮಾರಾಟವಾದ ಕಮ್ಮಿನ್ಸ್