ರೋವ್‌ಮನ್ ಪಾವೆಲ್‌ಗೆ ಈಗ 30 ವರ್ಷ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ 7 ವರ್ಷಗಳು ಕಳೆದಿವೆ. ಆದರೆ, ಇಲ್ಲಿಯವರೆಗಿನ ಅವರು ಕ್ರಿಕೆಟ್‌ನಿಂದ ಗಳಿಸಿದ್ದು ಬರೀ 16 ಕೋಟಿ ರೂಪಾಯಿ. ಆದರೆ, ಈಗ ಐಪಿಎಲ್ ಹರಾಜಿನಲ್ಲಿ ಜಾಕ್‌ಪಾಟ್ ಹೊಡೆದಿರುವ ಅವರು 7.40 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಪಾಲಾಗಿದ್ದಾರೆ.
ದುಬೈ (ಡಿ.19): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಆಟಗಾರರ ಹರಾಜು ಇಂದು ದುಬೈನಲ್ಲಿ ನಡೆಯುತ್ತಿದೆ. ಕೋಕಾ-ಕೋಲಾ ಅರೆನಾದಲ್ಲಿ ಆಯೋಜಿಸಲಾದ ಈ ಮಿನಿ ಹರಾಜಿನಲ್ಲಿ, 332 ಆಟಗಾರರಿಗೆ ಬಿಡ್ಡಿಂಗ್ ಮಾಡಲಾಗುತ್ತಿದೆ. ಈ ಬಾರಿಯ ಮೊದಲ ಬಿಡ್ ಅನ್ನು 30 ವರ್ಷದ ವೆಸ್ಟ್ ಇಂಡೀಸ್ ಆಟಗಾರ ರೋವ್‌ಮನ್ ಪೊವೆಲ್ ಅವರ ಮೇಲೆ ಮಾಡಲಾಗಿತ್ತು., ಮೂಲ ಬೆಲೆ 1 ಕೋಟಿ ರೂಪಾಯಿಯನ್ನು ಹೊಂದಿದ್ದ ಅವರನ್ನು ಖರೀದಿಸಲು ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಸಿತು. ಕೊನೆಗೆ ರಾಜಸ್ತಾನ್ ರಾಯಲ್ಸ್ ಪೊವೆಲ್ ಅವರನ್ನು 7.40 ರೂಪಾಯಿಗೆ ಖರೀದಿಸಿತು. 1993 ಜುಲೈ 23 ರಂದು ಜನಿಸಿದ ರೋವ್‌ಮನ್ ಪೊವೆಲ್, ವೆಸ್ಟ್ ಇಂಡೀಸ್‌ನ ವೃತ್ತಿಪರ ಕ್ರಿಕೆಟಿಗ. ಬಲಗೈ ಬ್ಯಾಟ್ಸ್‌ಮನ್ ರೋವ್‌ಮನ್ ಪೊವೆಲ್ ವೆಸ್ಟ್ ಇಂಡೀಸ್ ತಂಡಕ್ಕಾಗಿ ಟಿ20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಆಡುತ್ತಾರೆ. ಸ್ಲಾಗ್ ಓವರ್‌ಗಳಲ್ಲಿ ಅಬ್ಬರದಿಂದ ಆಡುವ ಕ್ರಿಕಟಿಗ. 2015 ರಲ್ಲಿ ಲಿಸ್ಟ್-ಎಗೆ ಪ್ರವೇಶಿಸಿದ ನಂತರ ಪೊವೆಲ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಮಿಂಚಿದ್ದರು. ಈಗ ಅವರನ್ನು ಐಪಿಎಲ್ ಹರಾಜಿನಲ್ಲಿಯೂ ಭಾರಿ ಬೆಲೆಗೆ ಖರೀದಿಸಲಾಗಿದೆ. ಅವರ ನಿವ್ವಳ ಮೌಲ್ಯದ ಬಗ್ಗೆ ಮಾತನಾಡುವುದಾದರೆ, ಪಾವೆಲ್ ಅವರ ಆಸ್ತಿ ಅಂದಾಜು 2 ಮಿಲಿಯನ್ ಡಾಲರ್ ಅಂದರೆ ಸುಮಾರು 16 ಕೋಟಿ ರೂಪಾಯಿ.
ಕ್ರಿಕೆಟ್‌ನಿಂದ ಪಾವೆಲ್ ಗಳಿಸೋದಿಷ್ಟು: ವೆಸ್ಟ್ ಇಂಡೀಸ್ ಪರ ಅಂತರಾಷ್ಟ್ರೀಯ ಕ್ರಿಕೆಟ್ ಆಡುವುದಕ್ಕಾಗಿ ಅವರು ವಾರ್ಷಿಕವಾಗಿ $250,000 ಅಥವಾ 2 ಕೋಟಿ ರೂ.ಗಿಂತ ಹೆಚ್ಚು ಹಣ ಪಡೆಯುತ್ತಾರೆ. ಇದರ ಹೊರತಾಗಿ, ಪೊವೆಲ್ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳು ಮತ್ತು ಸಿಪಿಎಲ್ ಮತ್ತು ಐಪಿಎಲ್ ಒಪ್ಪಂದಗಳ ಮೂಲಕ ಹಣ ಗಳಿಸುತ್ತಾರೆ. ಇದಕ್ಕೂ ಮುನ್ನ 2022ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ರೋವ್‌ಮನ್ ಪೊವೆಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 2.8 ಕೋಟಿ ರೂ.ಗೆ ಖರೀದಿಸಿತ್ತು.
ಐಷಾರಾಮಿ ಕಾರುಗಳ ಮಾಲೀಕ: ವರದಿಗಳ ಪ್ರಕಾರ, ರೋವ್‌ಮನ್ ಪೊವೆಲ್ ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ಕೋಟ್ಯಂತರ ಮೌಲ್ಯದ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಆದರೆ, ಇದರ ಬೆಲೆ ಎಷ್ಟು ಎಂಬ ಮಾಹಿತಿಯನ್ನು ಎಲ್ಲಿಯೂ ಹಂಚಿಕೊಂಡಿಲ್ಲ. ಇದಲ್ಲದೇ, ಪೊವೆಲ್ ಐಷಾರಾಮಿ ಕಾರುಗಳನ್ನು ಇಷ್ಟಪಡುತ್ತಾರೆ ಮತ್ತು ಮರ್ಸಿಡಿಸ್ ಹೊರತುಪಡಿಸಿ, ಅವರ ಕಾರು ಸಂಗ್ರಹಣೆಯಲ್ಲಿ ಅನೇಕ ಎಸ್‌ಯುವಿ ಹೊಂದಿದ್ದಾರೆ. . ಅವರ ಕಾರು ಸಂಗ್ರಹಣೆಯಲ್ಲಿ ಅವರ ತಾಯಿ ಉಡುಗೊರೆಯಾಗಿ ನೀಡಿದ ಹ್ಯುಂಡೈ ಟಕ್ಸನ್ ಕಾರನ್ನು ಸಹ ಒಳಗೊಂಡಿದೆ.
Breaking: ಸನ್‌ರೈಸರ್ಸ್‌ಗೆ ವಿಶ್ವಕಪ್ ಫೈನಲ್ ಹೀರೋ, 20 ಕೋಟಿಗೆ ಮಾರಾಟವಾದ ಕಮ್ಮಿನ್ಸ್
undefined
ಪೊವೆಲ್ ವೆಸ್ಟ್ ಇಂಡೀಸ್ ಪರ 66 ಟಿ20 ಪಂದ್ಯ ಆಡಿರುವ ಪಾವೆಲ್, 1 ಶತಕ ಮತ್ತು 5 ಅರ್ಧಶತಕಗಳ ನೆರವಿನಿಂದ 1202 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 51 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 979 ರನ್ ಗಳಿಸಿದ್ದಾರೆ, 1 ಶತಕ ಮತ್ತು 2 ಅರ್ಧ ಶತಕ ಬಾರಿಸಿದ್ದಾರೆ. ಬ್ಯಾಟಿಂಗ್ ಮಾತ್ರವಲ್ಲದೆ, ಬೌಲಿಂಗ್‌ನಲ್ಲೂ ಕಾಣಿಕೆ ನೀಡುತ್ತಾರೆ. ಪೊವೆಲ್ ಏಕದಿನದಲ್ಲಿ 3 ವಿಕೆಟ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 5 ವಿಕೆಟ್ ಸಂಪಾದನೆ ಮಾಡಿದ್ದಾರೆ.
IPL Auction 2024: ವಿಶ್ವಕಪ್ ಹೀರೋ ಟ್ರಾವಿಸ್ ಹೆಡ್ ಆರೆಂಜ್ ಆರ್ಮಿ ಪಾಲು