ಈ ಬಾರಿ ಐಪಿಎಲ್ ಹರಾಜು ಹಲವು ಅಚ್ಚರಿಗೆ ಕಾರಣವಾಗಿದೆ. ಹರಾಜು ಮಿನಿಯಾಗಿದ್ದರೂ ಆಟಗಾರರು ದಾಖಲೆ ಮೊತ್ತ ಜೇಬಿಗಿಳಿಸಿದ್ದಾರೆ. ಮಿಚೆಲ್ ಸ್ಟಾರ್ಕ್ 24.74 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ದಾಖಲೆಯಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.
ದುಬೈ(ಡಿ.19) ಐಪಿಎಲ್ 2024ರ ಟೂರ್ನಿಗೆ ಇದೀಗ ಫ್ರಾಂಚೈಸಿಗಳ ತಯಾರಿ ಶುರುವಾಗಿದೆ. ಇಂದು ದುಬೈನಲ್ಲಿ ನಡೆದ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸಿ ತಂಡದ ಬಲ ಹೆಚ್ಚಿಸಿದೆ. ಈ ಪೈಕಿ ಈ ಬಾರಿಯ ಹರಾಜು ಹೊಸ ದಾಖಲೆಗೆ ಸಾಕ್ಷಿಯಾಗಿದೆ. ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಗರಿಷ್ಠ ಮೊತ್ತದ ದಾಖಲೆ ಬರೆದಿದ್ದಾರೆ. ಸ್ಟಾರ್ಕ್ ಬಿಡ್ಡಿಂಗ್‌ಗೆ ಮೊದಲು ಪ್ಯಾಟ್ ಕಮಿನ್ಸ್ 20.50 ಕೋಟಿ ರೂಪಾಯಿಗೆ ಮಾರಾಟವಾಗಿ ದಾಖಲೆ ಬರೆದಿದ್ದರು. ಈ ಬಾರಿಯ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ ಭಾರತೀಯ ಕ್ರಿಕೆಟಿಗರ ಪೈಕಿ ಹರ್ಷಲ್ ಪಟೇಲ್ ಮೊದಲ ಸ್ಥಾನದಲ್ಲಿದ್ದಾರೆ. ಹರ್ಷಲ್ 11.75 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಇಂದಿನ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.
ಐಪಿಎಲ್ ಹರಾಜು 2024ರ ಗರಿಷ್ಠ ಮೊತ್ತಕ್ಕೆ ಸೇಲಾದ ಕ್ರಿಕೆಟಿಗರ ಲಿಸ್ಟ್
ಮಿಚೆಲ್ ಸ್ಟಾರ್ಕ್: 24.75 ಕೋಟಿ ರೂಪಾಯಿ(ಕೆಕೆಆರ್)
ಪ್ಯಾಟ್ ಕಮಿನ್ಸ್ : 20.50 ಕೋಟಿ ರೂಪಾಯಿ(ಎಸ್‌ಆರ್‌ಹೆಚ್)
ಡರಿಲ್ ಮಿಚೆಲ್ : 14 ಕೋಟಿ ರೂಪಾಯಿ( ಸಿಎಸ್‌ಕೆ)
ಹರ್ಷಲ್ ಪಟೇಲ್ : 11.75 ಕೋಟಿ ರೂಪಾಯಿ(ಪಂಜಾಬ್ ಕಿಂಗ್ಸ್)
ಅಲ್ಜಾರಿ ಜೋಸೆಫ್: 11.50 ಕೋಟಿ ರೂಪಾಯಿ(ಆರ್‌ಸಿಬಿ)
ಸ್ಪೆನ್ಸರ್ ಜಾನ್ಸನ್ : 10 ಕೋಟಿ ರೂಪಾಯಿ( ಗುಜರಾತ್ ಟೈಟಾನ್ಸ್)
ಸಮೀರ್ ರಿಜ್ವಿ : 8.40 ಕೋಟಿ ರೂಪಾಯಿ(ಸಿಎಸ್‌ಕೆ)
ಶಾರುಖ್ ಕಾನ್: 7.40 ಕೋಟಿ ರೂಪಾಯಿ(ಗುಜರಾತ್ ಟೈಟಾನ್ಸ್)
ರೊವ್ಮನ್ ಪೊವೆಲ್ : 7.40 ಕೋಟಿ ರೂಪಾಯಿ( ರಾಜಸ್ಥಾನ ರಾಯಲ್ಸ್)
ಕುಮಾರ್ ಕುಶಾಗರ್ : 7.20 ಕೋಟಿ ರೂಪಾಯಿ(ಡೆಲ್ಲಿ ಕ್ಯಾಪಿಟಲ್ಸ್)
undefined
IPL Auction ದಾಖಲೆ ಖರೀದಿ ಮಾತ್ರವಲ್ಲ, ನಗುವಿನಲ್ಲೂ ಕ್ಲೀನ್ ಬೋಲ್ಡ್ ಮಾಡಿದ SRH ಒಡತಿ ಕಾವ್ಯ!
ಐಪಿಎಲ್ ಇತಿಹಾಸದಲ್ಲೇ ಮಿಚೆಲ್ ಸ್ಟಾರ್ಕ್ ಅತೀ ದುಬಾರಿ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ
ಐಪಿಎಲ್ ಇತಿಹಾಸದ 10 ದುಬಾರಿ ಆಟಗಾರರು:
1.ಮಿಚೆಲ್ ಸ್ಟಾರ್ಕ್: 25 ಕೋಟಿ ರೂಪಾಯಿ
2. ಪ್ಯಾಟ್ ಕಮಿನ್ಸ್: 20.5 ಕೋಟಿ - SRH 2024
3. ಸ್ಯಾಮ್ ಕರ್ರನ್: 18.50 ಕೋಟಿ - PBKS- 2023
4. ಕ್ಯಾಮರೋನ್ ಗ್ರೀನ್: 17.50 ಕೋಟಿ MI-2023
5. ಬೆನ್ ಸ್ಟೋಕ್ಸ್: 16.25 ಕೋಟಿ - CSK -2023
6. ಕ್ರಿಸ್ ಮೋರಿಸ್: 16.25 ಕೋಟಿ - RR -2021
7. ನಿಕೋಲಸ್ ಪೂರನ್: 16 ಕೋಟಿ - LSG - 2023
8. ಯುವರಾಜ್ ಸಿಂಗ್: 16 ಕೋಟಿ -DD- 2015
9. ಪ್ಯಾಟ್ ಕಮಿನ್ಸ್: 15.50 ಕೋಟಿ - KKR-2020
10. ಇಶಾನ್ ಕಿಶನ್: 15.25 ಕೋಟಿ - MI- 2022
8 ವರ್ಷದ ಬಳಿಕ ಐಪಿಎಲ್‌ಗೆ ಸ್ಟಾರ್ಕ್‌ನ ಕರೆತಂದು ಬಡವಾಯಿತು ಕೆಕೆಆರ್, ಹರಿದಾಡುತ್ತಿದೆ ಮೀಮ್ಸ್!