20 ವರ್ಷದ ಆಟಗಾರ ಸಮೀರ್ ರಿಜ್ವಿ ನಿರೀಕ್ಷೆಯಂತೆಯೇ ಐಪಿಎಲ್ ಹರಾಜಿನಲ್ಲಿ ದೊಡ್ಡ ಮಟ್ಟದ ಆಕರ್ಷಣೆ ಪಡೆದುಕೊಂಡರು. ಕೊನೆಗೆ ಚೆನ್ನೈ ಸೂಪರ್ ಕಿಂಗ್ಸ್ 8.40 ಕೋಟಿ ರೂಪಾಯಿಗೆ ಇವರನ್ನು ಖರೀದಿ ಮಾಡಿದೆ.
ಬೆಂಗಳೂರು (ಡಿ.19): ಇತ್ತೀಚೆಗೆ ನಡೆದ ಯುಪಿ ಟಿ20 ಲೀಗ್‌ನಲ್ಲಿ ಕಾನ್ಪುರ ಸೂಪರ್‌ಸ್ಟಾರ್ಸ್ ಪರ 20 ವರ್ಷದ ಹುಡುಗ ಟೂರ್ನಿಯಲ್ಲೇ ಗರಿಷ್ಠ ಸಿಕ್ಸರ್ ಬಾರಿಸಿದ್ದ. ಸ್ಫೋಟಕ ಶತಕವನ್ನೂ ಸಿಡಿಸಿದ್ದ ಆತ ಆಡಿದ 9 ಇನ್ನಿಂಗ್ಸ್‌ಗಳಿಂದ 455 ರನ್ ಸಿಡಿಸಿದ್ದ. ಈ ಆಟಗಾರನ ಹೆಸರು ಸಮೀರ್ ರಿಜ್ವಿ. ಉತ್ತರ ಪ್ರದೇಶ ಮೂಲದ ಆಟಗಾರ. ಸಮೀರ್ ರಿಜ್ವಿ ತೋರಿದ ನಿರ್ವಹಣೆ ಎಷ್ಟು ಗಮನಸೆಳೆದಿತ್ತೆಂದರೆ, ಅವರ ಮೂರು ಫ್ರಾಂಚೈಸಿಗಳು ಅವರನ್ನು ಟ್ರಯಲ್ಸ್‌ಗೆ ಆಹ್ವಾನಿಸಿದ್ದವು. ಇದರಲ್ಲಿ ಉತ್ತರ ಪ್ರದೇಶ ಕೋಚ್ ಸುನಿಲ್ ಜೋಶಿ ಭಾಗವಾಗಿದ್ದ ಪಂಜಾಬ್ ಕಿಂಗ್ಸ್ ಕೂಡ ಸೇರಿತ್ತು. ಆದರೆ, ಉತ್ತರ ಪ್ರದೇಶ 23 ವಯೋಮಿತಿ ತಂಡದ ಪಂದ್ಯಗಳು ಇದ್ದ ಕಾರಣಕ್ಕಾಗಿ ಈ ಎಲ್ಲಾ ಟ್ರಯಲ್ಸ್‌ಗಳನ್ನು ಅವರು ಮಿಸ್ ಮಾಡಿಕೊಂಡಿದ್ದರು. ಆದರೆ, 23 ವಯೋಮಿತಿ ವಿಭಾಗದ ಮೊದಲ ಪಂದ್ಯದಲ್ಲಿಯೇ ಮಿಂಚಿನ ಆಟವಾಡಿದ್ದ ಸಮೀರ್ ರಿಜ್ವಿ ರಾಜಸ್ಥಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಕೇವಲ 65 ಎಸೆತಗಳಲ್ಲಿ 91 ರನ್ ಸಿಡಿಸಿದ್ದರು. ಇದು ಉತ್ತರ ಪ್ರದೇಶ ತಂಡ ಈ ಟೂರ್ನಿ ಗೆಲ್ಲುವ ನಿಟ್ಟಿನಲ್ಲಿ ಮಾಡಿದ ಉತ್ತರ ಆರಂಭವಾಗಿತ್ತು. ಫೈನಲ್ ಪಂದ್ಯದಲ್ಲಿ 50 ಎಸೆತಗಳಲ್ಲಿ 84 ರನ್ ಸಿಡಿಸಿ ರಿಜ್ವಿ ಮಿಂಚಿದರು. ಅದರೊಂದಿಗೆ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರನಾಗಿ ಮುಗಿಸಿದ್ದರು.
ಐಪಿಎಲ್ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಪ್ಲೇಯರ್ ವಿಭಾಗದಲ್ಲಿದ್ದ ಸಮೀರ್ ರಿಜ್ವಿ ಕೇವಲ 20 ಲಕ್ಷ ಮೂಲಬೆಲೆ ಹೊಂದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಬರೋಬ್ಬರಿ 8.40 ಕೋಟಿ ರೂಪಾಯಿ ಮೊತ್ತಕ್ಕೆ ಇವರನ್ನು ತಂಡಕ್ಕೆ ಖರೀದಿ ಮಾಡಿದೆ.
ಜಿಯೋ ಸಿನಿಮಾದಲ್ಲಿ ಐಪಿಎಲ್ ಮಾಕ್ ಆಕ್ಷನ್‌ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಅಭಿನವ್ ಮುಕುಂದ್, ಸ್ವತಃ ಐಪಿಎಲ್ ತಂಡವೊಂದರ ಪ್ರತಿಭಾನ್ವೇಷಕರೊಬ್ಬರು ಸಮೀರ್ ರಿಜ್ವಿಯನ್ನು ಬಲಗೈ ಸುರೇಶ್ ರೈನಾ ಎಂದು ಬಣ್ಣಿಸಿದ್ದರು ಎಂದು ತಿಳಿಸಿದ್ದರು.
ಐಪಿಎಲ್ ತಂಡವೊಂದರ ಪ್ರತಿಭಾನ್ವೇಷಕರೊಬ್ಬರು ಮಾತನಾಡುವ ವೇಳೆ ಆತ (ಸಮೀರ್ ರಿಜ್ವಿ) ಬಲಗೈ ಸುರೇಶ್ ರೈನಾ. ಅವರು ಸ್ಪಿನ್ ವಿರುದ್ಧ ಆಡುವ ಪ್ಲೇಸ್‌ಗಳು ಒಂದೇ ರೀತಿಯದ್ದಾಗಿರುತ್ತದೆ. ಅನೇಕ ತಂಡಗಳು ಐಪಿಎಲ್ ಹರಾಜಿನಲ್ಲಿ ಅವರ ಹಿಂದೆ ಬೀಳಬಹುದು ಎಂದು ಅಭಿನವ್ ಮುಕುಂದ್ ತಿಳಿಸಿದ್ದರು.
ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ಗೆ ಸೆಟ್ ಫಿನಿಶರ್ ಇಲ್ಲದ ಕಾರಣ ರಿಜ್ವಿ ಅವರು ತಂಡಕ್ಕೆ ಪರಿಪೂರ್ಣ ಫಿಟ್ ಆಗಿರಬಹುದು ಎಂದು ಮಾಜಿ ವೇಗಿ ಆರ್‌ಪಿ ಸಿಂಗ್ ಅಭಿಪ್ರಾಯಪಟ್ಟಿದ್ದರು. ಎಲ್‌ಎಸ್‌ಜಿ ಉನ್ನತ ಕ್ರಮದಲ್ಲಿ ಸಾಕಷ್ಟು ಶಕ್ತಿಯನ್ನು ಹೊಂದಿದೆ, ಆದರೆ ಕೆಳ ಕ್ರಮಾಂಕದಲ್ಲಿ ಹೆಚ್ಚಿನ ಬೆಂಬಲ ಬೇಕಾಗಬಹುದು. ಆಕಾಶ್ ಚೋಪ್ರಾ ಸಿಂಗ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದರು ಮತ್ತು ರಿಜ್ವಿಗೆ ಇಷ್ಟಬಂದಂತೆ ಸಿಕ್ಸರ್ ಬಾರಿಸುವ ಸಾಮರ್ಥ್ಯವಿದೆ ಎಂದು ಹೇಳಿದ್ದರು.
IPL Auction 2024: ಧೋನಿಯಿಂದಲೂ ಮಾಡಲಾಗದ ಸಾಧನೆಯನ್ನು ರಚಿಸಿದ ರಿಷಬ್ ಪಂತ್!
"ಲಕ್ನೋ ಸೂಪರ್ ಜೈಂಟ್ಸ್‌ಗೆ ಫಿನಿಶರ್ ಆಗಿ ಒಬ್ಬರು ಬೇಕಾಗಿದೆ. ಅವರು ಬಹಳಷ್ಟು ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನು ಹೊಂದಿದ್ದಾರೆ ಮತ್ತು ಫಿನಿಶರ್‌ಗಳು ಭಾರತೀಯರಾಗಿರಬೇಕು. ತಂಡ ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೋಲಸ್ ಪೂರನ್ ಮೂಲಕ ನಂಬರ್ 4 ಮತ್ತು ನಂ. 5 ಕ್ರಮಾಂಕದಲ್ಲಿ ಉತ್ತಮ ಆಟಗಾರರನ್ನು ಹೊಂದಿದ್ದಾರೆ. ನಾನು ಯುಪಿ ಟಿ20 ಲೀಗ್ ನೋಡುತ್ತಿದ್ದೆ. ನನ್ನ ಪ್ರಕಾರ ಸಮೀರ್ ರಿಜ್ವಿ ಕೆಳ ಕ್ರಮಾಂಕದಲ್ಲಿ ಉತ್ತಮ ನಿರ್ವಹಣೆ ತೋರಬಲ್ಲ ಬ್ಯಾಟ್ಸ್‌ಮನ್ ಎಂದು ಹೇಳಿದ್ದರು.
ಐಪಿಎಲ್ ಇತಿಹಾಸದ 10 ದುಬಾರಿ ಆಟಗಾರರು ಇವರು, ಮಿಚೆಲ್ ಸ್ಟಾರ್ಕ್ ನಂ.1
ಯುಪಿ ಟಿ20 ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಸಮೀರ್ ರಿಜ್ವಿ ವೇಗದ ಶತಕ ದಾಖಲಿಸಿದರು. ಯುವ ಬ್ಯಾಟರ್ ದೇಶೀಯ ಟಿ20ಗಳಲ್ಲಿ 134.70 ಸ್ಟ್ರೈಕ್ ರೇಟ್‌ನಲ್ಲಿ 49.16 ಸರಾಸರಿ ಹೊಂದಿದ್ದಾರೆ.