ಮಂಗಳವಾರ ಹರಾಜಿನಲ್ಲಿ 20 ವರ್ಷದ ಸಮೀರ್‌ಗೆ ಚೆನ್ನೈ ತಂಡ ಬರೋಬ್ಬರಿ ₹8.4 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದ್ದು, ಐಪಿಎಲ್‌ನಲ್ಲಿ ಮಿಂಚಲು ವೇದಿಕೆ ಒದಗಿಸಿಕೊಟ್ಟಿದೆ. ಯುಪಿ ಟಿ20 ಲೀಗ್‌ನಲ್ಲಿ ಕಾನ್ಪುರ ಪರ ಆಡಿರುವ ಸಮೀರ್ 9 ಪಂದ್ಯಗಳಲ್ಲಿ 455 ರನ್ ಗಳಿಸಿದ್ದಾರೆ.
ನವದೆಹಲಿ(ಡಿ.21): ಪ್ರತಿ ಬಾರಿಯಂತೆ ಈ ಬಾರಿಯೂ ಐಪಿಎಲ್ ಯುವಪ್ರತಿಭೆಗಳನ್ನು ಕ್ರೀಡಾ ಜಗತ್ತಿಗೆ ಪರಿಚಯಿಸಲು ಸಜ್ಜಾಗಿದೆ.ದೇಸಿ ಟೂರ್ನಿಗಳಲ್ಲಿ ಅಬ್ಬರಿಸಿ, ಫ್ರಾಂಚೈಸಿಗಳ ಗಮನ ಸೆಳೆದು ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾಗಿರುವ ಹಲವು ಪ್ರತಿಭೆಗಳಿದ್ದು, ಇವರಲ್ಲಿ ಉತ್ತರ ಪ್ರದೇಶದ ಸ್ಫೋಟಕ ಬ್ಯಾಟರ್‌ಸಮೀರ್ ರಿಜ್ವಿ ಕೂಡಾ ಒಬ್ಬರು.
ಮಂಗಳವಾರ ಹರಾಜಿನಲ್ಲಿ 20 ವರ್ಷದ ಸಮೀರ್‌ಗೆ ಚೆನ್ನೈ ತಂಡ ಬರೋಬ್ಬರಿ ₹8.4 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದ್ದು, ಐಪಿಎಲ್‌ನಲ್ಲಿ ಮಿಂಚಲು ವೇದಿಕೆ ಒದಗಿಸಿಕೊಟ್ಟಿದೆ. ಯುಪಿ ಟಿ20 ಲೀಗ್‌ನಲ್ಲಿ ಕಾನ್ಪುರ ಪರ ಆಡಿರುವ ಸಮೀರ್ 9 ಪಂದ್ಯಗಳಲ್ಲಿ 455 ರನ್ ಗಳಿಸಿದ್ದಾರೆ. ಒಂದು ಪಂದ್ಯದಲ್ಲಿ 122 ರನ್ ಸಿಡಿಸಿದ್ದ ಸಮೀರ್, ಮತ್ತೊಂದು ಪಂದ್ಯದಲ್ಲಿ 47 ಎಸೆತಗಳಲ್ಲೇ ಶತಕ ಪೂರ್ತಿಗೊಳಿಸಿದ್ದರು. ಟೂರ್ನಿಯಲ್ಲಿ ಅವರ ಸ್ಟ್ರೈಕ್‌ರೇಟ್ 188.೮೦. ಇನ್ನು, ಯುಪಿ ಅಂಡರ್-23 ಟೂರ್ನಿಯಲ್ಲಿ 37 ಸಿಕ್ಸರ್‌ಗಳೊಂದಿಗೆ 454 ರನ್ ಕೆಲ ಹಾಕಿದ್ದಾರೆ.
undefined
ಅಂದ ಹಾಗೆ ಸಮೀರ್‌ರನ್ನು ಮೊದಲ ಬಾರಿ ಗುರುತಿಸಿದ್ದು ಭಾರತದ ಮಾಜಿ ಕ್ರಿಕೆಟಿಗ, ಕರ್ನಾಟಕದ ಸುನಿಲ್ ಜೋಶಿ. ಉತ್ತರ ಪ್ರದೇಶ ಕೋಚ್ ಆಗಿದ್ದ ಜೋಶಿ 2019-20ರಲ್ಲಿ ಸಮೀರ್‌ರನ್ನು ರಾಜ್ಯ ತಂಡಕ್ಕೆ ಸೇರ್ಪಡೆಗೊಳಿಸಿದ್ದರು. ಐಪಿಎಲ್‌ನ ಪಂಜಾಬ್ ಕಿಂಗ್ಸ್ ಬೌಲಿಂಗ್ ಕೋಚ್ ಆಗಿರುವ ಜೋಶಿ, ಹರಾಜಿಗೂ ಮುನ್ನ ಸಮೀರ್‌ರನ್ನು ಪಂಜಾಬ್ ತಂಡದ ಟ್ರಯಲ್ಸ್ ನಲ್ಲೂ ಪಾಲ್ಗೊಳ್ಳುವಂತೆ ಮಾಡಿದ್ದರು.
Ind vs SA 3rd ODI: ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಫೈನಲ್..!
ಸಮೀರ್ ಸಿಕ್ಸರ್ ಸಿಡಿಸುವುದರಲ್ಲಿ ಎತ್ತಿದ ಕೈ:
ಯುಪಿ ಟಿ20 ಹಾಗೂ ಅಂ-23 ಟೂರ್ನಿಗಳ 16 ಪಂದ್ಯದಲ್ಲಿ 72 ಸಿಕ್ಸರ್ ಸಿಡಿಸಿದ್ದಾರೆ. ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಈ ವರೆಗೂ 18 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅವರು ಟೂರ್ನಿಯಲ್ಲಿ ಪ್ರತಿ 11 ಎಸೆತಕ್ಕೆ 1 ಸಿಕ್ಸರ್ ಬಾರಿಸಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ.
IPL Auction ತಪ್ಪಾಗಿ ಈ ಆಟಗಾರನಿಗೆ ಬಿಡ್ ಮಾಡಿದ ಪ್ರೀತಿ ಝಿಂಟಾ..! ಆಮೇಲೇನಾಯ್ತು ನೀವೇ ನೋಡಿ, ವಿಡಿಯೋ ವೈರಲ್
ಜೂನಿಯರ್ ಧೋನಿ ಖ್ಯಾತಿಯ ಕುಶಾಗ್ರಗೆ ಡಿಮ್ಯಾಂಡ್!
ಜಾರ್ಖಂಡ್‌ನ ಯುವ ತಾರೆ ಕುಮಾರ್ ಕುಶಾಗ್ರ ಹರಾಜಿನಲ್ಲಿ ಗಮನ ಸೆಳೆದ ಮತ್ತೋರ್ವ ಬ್ಯಾಟರ್. ಅವರನ್ನು ಡೆಲ್ಲಿ ತಂಡ ₹7.2 ಕೋಟಿ ನೀಡಿ ತನ್ನದಾಗಿಸಿಕೊಂಡಿದೆ. ಈಗಾಗಲೇ ಭಾರತ ‘ಎ’ ತಂಡದ ಪರ ಮಿಂಚಿರುವ ಕುಶಾಗ್ರ ಅವರನ್ನು ಜೂನಿಯರ್ ಧೋನಿ ಖ್ಯಾತಿಗೆ ಒಳಗಾದ ಬ್ಯಾಟರ್. ಭಾರತದ ಮಾಜಿ ನಾಯಕ ಸೌರವ್ ಗಂಗೂಲಿಯೇ ಕುಶಾಗ್ರರನ್ನು ಧೋನಿಗೆ ಹೋಲಿಸಿದ್ದು ವಿಶೇಷ. ಅವರು 2022ರಲ್ಲಿ ಜಾರ್ಖಂಡ್ ಪರ ಮೊದಲ ಪ್ರಥಮ ದರ್ಜೆ ಪಂದ್ಯವಾಡಿದ್ದು, ಭಾರತದ ಅಂಡರ್-19 ತಂಡದಲ್ಲೂ ಮಿಂಚಿದ್ದಾರೆ. ಈ ವರೆಗೆ 23 ಲಿಸ್ಟ್ ಎ ಪಂದ್ಯಗಳಲ್ಲಿ 700 ರನ್ ಗಳಿಸಿದ್ದಾರೆ. ಇದರಲ್ಲಿ 7 ಅರ್ಧಶತಕಗಳೂ ಒಳಗೊಂಡಿವೆ. ಜೊತೆಗೆ 13 ಪ್ರಥಮ ದರ್ಜೆ ಪಂದ್ಯಗಳಲ್ಲಿ 868 ರನ್ ಗಳಿಸಿದ್ದು, ಐಪಿಎಲ್‌ನಲ್ಲೂ ಅಬ್ಬರಿಸಲು ಕಾಯುತ್ತಿದ್ದಾರೆ.