IPL Auction 2023 ಖಾತೆ ತೆರೆದ ಆರ್‌ಸಿಬಿ, 1.9 ಕೋಟಿಗೆ ರೀಸ್ ಟಾಪ್ಲೆ ಖರೀದಿ!

Published : Dec 23, 2022, 05:22 PM ISTUpdated : Dec 23, 2022, 05:29 PM IST
IPL Auction 2023 ಖಾತೆ ತೆರೆದ ಆರ್‌ಸಿಬಿ, 1.9 ಕೋಟಿಗೆ ರೀಸ್ ಟಾಪ್ಲೆ ಖರೀದಿ!

ಸಾರಾಂಶ

ಐಪಿಎಲ್ ಮಿನಿ ಹರಾಜು 2023ರಲ್ಲಿ ಅಲ್ಪ ಮೊತ್ತದೊಂದಿಗೆ ಹಾಜರಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಖರೀಗಿ ಖಾತೆ ಆರಂಭಿಸಿದೆ. 1.9 ಕೋಟಿ ರೂಪಾಯಿ ನೀಡಿ ರೀಸ್ ಟಾಪ್ಲೆ ಖರೀದಿ ಮಾಡಿದೆ.  

ಕೊಚ್ಚಿ(ಡಿ.23): ಐಪಿಎಲ್ ಮಿನಿ ಹರಾಜು 2023ರಲ್ಲಿ ರಾಯಲ್ ಚಾಲೆಂಜರ್ಸ್ 8.75 ಕೋಟಿ ರೂಪಾಯಿಯೊಂದಿಗೆ ಹಾಜರಾಗಿದೆ. ಆದರೆ ಪ್ರಮುಖ ಆಟಾಗರರ ಬಿಡ್ಡಿಂಗ್ 10 ಕೋಟಿಗಿಂತ ಮೇಲೆ ನಡೆಯುತ್ತಿದೆ. 18.50 ಕೋಟಿ ರೂಪಾಯಿ ಸ್ಯಾಮ್ ಕುರ್ರನ್, 17.50 ಕೋಟಿ ರೂಪಾಯಿಗ ಕ್ಯಾಮರೂನ್ ಗ್ರೀನ್ ಬಿಕರಿಯಾಗಿದ್ದಾರೆ. ಹೀಗಾಗಿ ಆರ್‌ಸಿಬಿ ಅನ್‌ಕ್ಯಾಪ್ ಪ್ಲೇಯರ್ ಮೇಲೆ ಕಣ್ಣು ಹಾಕಿದೆ. ಇದರ ನಡುವೆ ಇಂಗ್ಲೆಂಡ್ ಎಡಗೈ ವೇಗಿ. ರೀಸ್ ಟಾಪ್ಲೆಗೆ 1.9 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಇದರೊಂದಿಗೆ ಐಪಿಎಲ್ ಮಿನಿ ಹರಾಜು 2023ರಲ್ಲಿ ಆರ್‌ಸಿಬಿ ಖಾತೆ ತೆರೆದಿದೆ.

75 ಲಕ್ಷ ಮೂಲ ಬೆಲೆಯ ರೀಸ್ ಟಾಪ್ಲೆ ಖರೀದಿಗೂ ಪೈಪೋಟಿ ಎದುರಾಗಿತ್ತು. ಆದರೆ ಪಟ್ಟು ಬಿಡದ ಆರ್‌ಸಿಬಿ 1.90 ಕೋಟಿ ರೂಪಾಯಿಗೆ ರೀಸ್ ಟಾಪ್ಲೆ ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು. ಬಳಿಕ ದೇಶಿ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿರುವ ಹಿಮಾಂಶು ಶರ್ಮಾಗೆ ಮೂಲ ಬೆಲೆ 20 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ಖರೀದಿ ಮಾಡಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಳಿ 6.85 ಕೋಟಿ ರೂಪಾಯಿ ಬಾಕಿ ಉಳಿದಿದೆ.

2023ರ ಮಿನಿ ಹರಾಜಿನಲ್ಲಿ ಈವರೆಗೆ ಆರ್‌ಸಿಬಿ ಖರೀದಿಸಿದ ಆಟಗಾರರ ವಿವರ
ರೀಸ್ ಟಾಪ್ಲೆ, 1.90 ಕೋಟಿ ರೂಪಾಯಿ

ಹಿಮಾಂಶು ಶರ್ಮಾ, 20 ಲಕ್ಷ ರೂಪಾಯಿ

IPL 2023 Mini Auction Live Updates: ನ್ಯಾಷನಲ್ ಕ್ರಶ್ ಕಾವ್ಯ ಮಾರನ್ ನಗುವಿಗೆ ಕ್ಲೀನ್ ಬೋಲ್ಡ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತ್ತೀಚೆಗ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ
ಆಕಾಶ್ ದೀಪ್, ಅನೂಜ್ ರಾವತ್, ಡೇವಿಡ್ ವೀಲೆ, ದಿನೇಶ್ ಕಾರ್ತಿಕ್, ಫಾಫ್ ಡುಪ್ಲೆಸಿಸ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಕರಣ್ ಶರ್ಮಾ, ಮಹಿಪಾಲ್ ಲೊಮ್ರೊರ್, ಮೊಹಮ್ಮದ್ ಸಿರಾಜ್, ರಜತ್ ಪಾಟಿದಾರ್, ಶಹಬಾಜ್ ಅಹಮ್ಮದ್, ಸಿದ್ದಾರ್ಥ್ ಕೌಲ್, ಸೂಯಶ್ ಪ್ರಭುದೇಸಾಯಿ, ವಿರಾಟ್ ಕೊಹ್ಲಿ, ವಾನಿಂಡು ಹಸರಂಗ

ಆರ್‌ಸಿಬಿ ತಂಡದಿಂದ ಕೈಬಿಟ್ಟಿರುವ ಆಟಗಾರರ ಪಟ್ಟಿ
ಅನೀಶ್ವರ್ ಗೌತಮ್, ಚಾಮಾ ಮಿಲಿಂಗ್, ಲುವನಿತ್ ಸಿಸೋಡಿಯಾ, ಶೆರ್ಫಾನೆ ರುದರ್ಫೋರ್ಡ್

ನ್ಯಾಷನಲ್ ಕ್ರಶ್ ಕಾವ್ಯ ಮಾರನ್ ನಗುವಿಗೆ ಕ್ಲೀನ್ ಬೋಲ್ಡ್, ಹರಾಜಿನಲ್ಲಿ ವೈರಲ್ ವಿಡಿಯೋ!

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಪಾಲ್ಗೊಂಡಿರುವ ಭಾರತೀಯ ಆಟಗಾರರ ಪೈಕಿ ಜಮ್ಮು-ಕಾಶ್ಮೀರ ಕ್ರಿಕೆಟ್‌ ಸಂಸ್ಥೆಯ 21 ಆಟಗಾರರು ಇದ್ದಾರೆ. ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ 16 ಆಟಗಾರರು ಅದೃಷ್ಟಪರೀಕ್ಷೆ ನಡೆಸಲಿದ್ದಾರೆ. ತಮಿಳುನಾಡು, ಉತ್ತರಪ್ರದೇಶ, ದೆಹಲಿ ಕ್ರಿಕೆಟ್‌ ಸಂಸ್ಥೆಗಳೂ ತಲಾ 16 ಆಟಗಾರರ ಹೆಸರು ನೋಂದಾಯಿಸಿವೆ.ಹರಾಜು ಪ್ರಕ್ರಿಯೆಯಲ್ಲಿ 405 ಆಟಗಾರರು ಅದೃಷ್ಟಪರೀಕ್ಷೆಗೆ ಒಳಗಾಗಿದ್ದಾರೆ. ಖಾಲಿ ಇರುವ 87 ಸ್ಥಾನಗಳಿಗೆ ಹರಾಜು ನಡೆಯುತ್ತಿದೆ.  ಭಾರತ 273 ಆಟಗಾರರ ಜೊತೆ 132 ವಿದೇಶಿ ಆಟಗಾರರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.   119 ಅಂತಾರಾಷ್ಟಿ್ರಯ ಆಟಗಾರರು, 282 ಅನ್‌ಕ್ಯಾಪ್‌್ಡ ಆಟಗಾರರು ಪಟ್ಟಿಯಲ್ಲಿದ್ದಾರೆ.  ಎಲ್ಲಾ 10 ತಂಡಗಳು ಕೆಲ ಪ್ರಮುಖ ಆಟಗಾರರ ಹುಡುಕಾಟದಲ್ಲಿವೆ. ಕರ್ನಾಟಕದ 16 ಆಟಗಾರರು ಹರಾಜಿನಲ್ಲಿ ಪಾಲ್ಗೊಂಡಿದ್ದಾರೆ.40 ವರ್ಷದ ಭಾರತದ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ ಹರಾಜಿನಲ್ಲಿರುವ ಅತಿ ಹಿರಿಯ ಆಟಗಾರ. ಅದೇ ರೀತಿ ಅಷ್ಘಾನಿಸ್ತಾನದ 15 ವರ್ಷದ ಅಲ್ಲಾಹ್‌ ಮುಹಮ್ಮದ್‌ ಗಝನ್ಫರ್‌ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!