IPL Auction 2023 ಹೊಸ ದಾಖಲೆ ಬರೆದ ಕ್ಯಾಮರೂನ್ ಗ್ರೀನ್, 17.50 ಕೋಟಿಗೆ ಮಾರಾಟ!

By Suvarna NewsFirst Published Dec 23, 2022, 3:59 PM IST
Highlights

ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಹರಾಜಾದ ಆಸ್ಟ್ರೇಲಿಯಾ ಕ್ರಿಕೆಟಿಗ ಎನ್ನುವ ದಾಖಲೆ ಕ್ಯಾಮರೋನ್ ಗ್ರೀನ್ ಪಾತ್ರರಾಗಿದ್ದಾರೆ.

ಕೊಚ್ಚಿ(ಡಿ.23): ಈ ಬಾರಿ ಮಿನಿ ಹರಾಜಾಗಿದ್ದರೂ, ಈ ಹಿಂದಿನ ಎಲ್ಲಾ ಹರಾಜುಗಳು ದಾಖಲೆಯನ್ನು ಮುರಿದಿದೆ. ಐಪಿಎಲ್ ಹರಾಜು ಇತಿಹಾಸದಲ್ಲಿ ಸ್ಯಾಮ್ ಕುರ್ರನ್ ಗರಿಷ್ಠ ಮೊತ್ತಕ್ಕೆ ಮಾರಾಟವಾದ ದಾಖಲೆ ಬರೆದಿದ್ದಾರೆ. ಸ್ಯಾಮ್ 18.50 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟಿಗ ಕ್ಯಾಮರೂನ್ ಗ್ರೀನ್ ಮತ್ತೊಂದು ದಾಖಲೆ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಹರಾಜಾದ ಆಸ್ಟ್ರೇಲಿಯಾ ಕ್ರಿಕೆಟಿಗ ಎನ್ನುವ ದಾಖಲೆಯನ್ನು ಗ್ರೀನ್ ಬರೆದಿದ್ದಾರೆ. ತೀವ್ರ ಪೈಪೋಟಿ ನಡುವೆ ಮುಂಬೈ ಇಂಡಿಯನ್ಸ್ 17.50 ಕೋಟಿ ರೂಪಾಯಿಗೆ ಕ್ಯಾಮರೂನ್ ಗ್ರೀನ್ ಖರೀದಿಸಿದೆ.

ಕ್ಯಾಮರೂನ್ ಗ್ರೀನ್ ಖರೀದಿಗೂ ಫ್ರಾಂಚೈಸಿಗಳು ಪೈಪೋಟಿಗೆ ಬಿದಿತ್ತು. ಕೊನೆಗೆ ಮುಂಬೈ ಇಂಡಿಯನ್ಸ್ ಗರಿಷ್ಠ ಮೊತ್ತ ನೀಡಿ ಖರೀದಿ ಮಾಡಿತು. ಕ್ಯಾಮರೂನ್ ಗ್ರೀನ್ ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಲ್ರೌಂಡರ್. ಮತ್ತೊಂದು ವಿಶೇಷತೆ ಎಂದರೇ ನ್ಯೂ ಬಾಲ್‌ನಲ್ಲೂ ಕಮಾಲ್ ಮಾಡುವ ಗ್ರೀನ್, ಡೆತ್ ಓವರ್ ಸ್ಪೆಷಲಿಸ್ಟ್ ಆಗಿದ್ದಾರೆ.

IPL 2023 Mini Auction Live Updates: ₹16.25 ಕೋಟಿಗೆ ಸಿಎಸ್‌ಕೆ ಪಾಲಾದ ಬೆನ್ ಸ್ಟೋಕ್ಸ್‌

23 ವರ್ಷದ ಕ್ಯಾಮರೂನ್ ಗ್ರೀನ್, ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಮಿಂಚಿದ್ದಾರೆ. ಆದರೆ ಬಿಗ್‌ಬ್ಯಾಶ್ ಹೊರತು ಪಡಿಸಿದರೆ ವಿದೇಶಿ ಲೀಗ್ ಟೂರ್ನಿಗಳಲ್ಲಿ ಕ್ಯಾಮರೂನ್ ಗ್ರೀನ್ ಪಾಲ್ಗೊಂಡಿಲ್ಲ. ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಗೆ ಕಾಲಿಡುತ್ತಿರುವ ಗ್ರೀನ್ ಆರಂಭದಲ್ಲೇ ದಾಖಲೆ ಮೊತ್ತಕ್ಕೆ ಹರಾಜಾಗುವ ಮೂಲಕ ಇತಿಹಾಸ ರಚಿಸಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟಿಗರ ಪೈಕಿ ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಕೀರ್ತಿಗೆ ಪ್ಯಾಟ್ ಕಮಿನ್ಸ್ ಪಾತ್ರರಾಗಿದ್ದರು. ಕೋಲ್ಕತಾ ನೈಟ್ ರೈಡರ್ಸ್ 15.50 ಕೋಟಿ ರೂಪಾಯಿ ಕಮಿನ್ಸ್ ಖರೀದಿ ಮಾಡಿತ್ತು. ಇದೀಗ ಈ ಎಲ್ಲಾ ದಾಖಲೆಯನ್ನು ಕ್ಯಾಮರೂನ್ ಗ್ರೀನ್ ಮುರಿದಿದ್ದಾರ. ಬರೋಬ್ಬರಿ 17.50 ಕೋಟಿ ರೂಪಾಯಿಗೆ ಸೇಲ್ ಆಗುವ ಮೂಲಕ ಆಸೀಸ್ ಕ್ರಿಕೆಟಿಗರ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.

IPL AUCTION 2023 ಐಪಿಎಲ್ ಹರಾಜು ಇತಿಹಾಸದಲ್ಲಿ ದಾಖಲೆ, 18.50 ಕೋಟಿ ರೂ 'ಸ್ಯಾಮ್' ಸೇಲ್!

ಐಪಿಎಲ್ ಹರಾಜು ಇತಿಹಾಸದಲ್ಲಿ ಗರಿಷ್ಠ ಮೊತ್ತ ದಾಖಲೆ
ಸ್ಯಾಮ್ ಕುರ್ರನ್; 18.50 ಕೋಟಿ ರೂಪಾಯಿ, ಪಂಜಾಬ್ ಕಿಂಗ್ಸ್ (2022)
ಕ್ಯಾಮರೂನ್ ಗ್ರೀನ್, 17.50 ಕೋಟಿ ರೂಪಾಯಿ(ಮುಂಬೈ ಇಂಡಿಯನ್ಸ್(2023)
ಕ್ರಿಸ್ ಮೊರಿಸ್; 16.26 ಕೋಟಿ ರೂಪಾಯಿ, ರಾಜಸ್ಥಾನ ರಾಯಲ್ಸ್(2021)
ಯುವರಾಜ್ ಸಿಂಗ್; 16 ಕೋಟಿ ರೂಪಾಯಿ, ಡೆಲ್ಲಿ ಡೇರ್‌ಡೆವಿಲ್ಸ್(2015)
ಪ್ಯಾಟ್ ಕಮಿನ್ಸ್: 15.50 ಕೋಟಿ ರೂಪಾಯಿ, ಕೋಲ್ಕತಾ ನೈಟ್ ರೈಡರ್ಸ್(2020)
ಇಶಾನ್ ಕಿಶನ್; 15.25 ಕೋಟಿ ರೂಪಾಯಿ, ಮುಂಬೈ ಇಂಡಿಯನ್ಸ್(2022)
ಕೈಲ್ ಜ್ಯಾಮಿನ್ಸನ್; 15 ಕೋಟಿ ರೂಪಾಯಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು(2021)
ಬೆನ್ ಸ್ಕೋಕ್ಸ್, 14.50 ಕೋಟಿ ರೂಪಾಯಿ, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್(2017)
ಗ್ಲೆನ್ ಮ್ಯಾಕ್ಸ್‌ವೆಲ್, 14.25 ಕೋಟಿ ರೂಪಾಯಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು(2021) 
ಜೇ ರಿಚರ್ಡ್ಸನ್; 14 ಕೋಟಿ ರೂಪಾಯಿ, ಪಂಜಾಬ್ ಕಿಂಗ್ಸ್(2021)
ಯುವರಾಜ್ ಸಿಂಗ್; 14 ಕೋಟಿ ರೂಪಾಯಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು(2014)
ದೀಪಕ್ ಚಹಾರ್, 14 ಕೋಟಿ ರೂಪಾಯಿ, ಚೆನ್ನೈ ಸೂಪರ್ ಕಿಂಗ್ಸ್(2022)
 

click me!