IPL Auction 2023: ಕೊಚ್ಚಿಯಲ್ಲಿ ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ..! ಇಲ್ಲಿದೆ ಸಂಪೂರ್ಣ ಮಾಹಿತಿ

By Naveen KodaseFirst Published Dec 22, 2022, 12:42 PM IST
Highlights

ಐಪಿಎಲ್ ಆಟಗಾರರ ಮಿನಿ ಹರಾಜು ಡಿಸೆಂಬರ್ 23ರಿಂದ ಆರಂಭ
ಕೊಚ್ಚಿಯಲ್ಲಿ ಮಧ್ಯಾಹ್ನ 2.30ರಿಂದ ಐಪಿಎಲ್ ಮಿನಿ ಹರಾಜು ಆರಂಭ
405 ಆಟಗಾರರು ಈ ಬಾರಿಯ ಮೆಗಾ ಹರಾಜಿನಲ್ಲಿ ಭಾಗಿ

ಕೊಚ್ಚಿ(ಡಿ.22): 2023ರ ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಹರಾಜು ಆರಂಭವಾಗಲಿದ್ದು, ಬಹುತೇಕ ಫ್ರಾಂಚೈಸಿಗಳು ಕೊಚ್ಚಿ ತಲುಪಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ 405 ಆಟಗಾರರು ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಖಾಲಿ ಇರುವ 87 ಸ್ಥಾನಗಳಿಗೆ ಹರಾಜು ನಡೆಯಲಿದ್ದು, ಬೆನ್‌ ಸ್ಟೋಕ್ಸ್‌, ಮಯಾಂಕ್‌ ಅಗರ್‌ವಾಲ್‌, ಸ್ಯಾಮ್‌ ಕರ್ರನ್‌, ಹ್ಯಾರಿ ಬ್ರೂಕ್‌, ಕ್ಯಾಮರೂನ್‌ ಗ್ರೀನ್‌ ಸೇರಿದಂತೆ ಪ್ರಮುಖ ಆಟಗಾರರು ಬಂಪರ್‌ ನಿರೀಕ್ಷೆಯಲ್ಲಿದ್ದಾರೆ.

ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜಿನಲ್ಲಿ ಭಾಗವಹಿಸಲು 991 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಈ ಪೈಕಿ ಫ್ರಾಂಚೈಸಿಗಳ ಸಲಹೆಯ ಮೇರೆಗೆ 405 ಆಟಗಾರರ ಹೆಸರನ್ನು ಶಾರ್ಟ್‌ಲಿಸ್ಟ್‌ ಮಾಡಲಾಗಿದೆ. 

ಹರಾಜಿನ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ನೋಡಿ

ಐಪಿಎಲ್‌ ಮಿನಿ ಹರಾಜು ಎಲ್ಲಿ? ಯಾವಾಗ?

ಐಪಿಎಲ್‌ ಆಟಗಾರರ ಮಿನಿ ಹರಾಜು ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಆರಂಭವಾಗಲಿದ್ದು, ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಯು ಮಧ್ಯಾಹ್ನ 2.30ರಿಂದ ಆರಂಭವಾಗಲಿದೆ. 

ಮಿನಿ ಹರಾಜು ಎಲ್ಲಿ ವೀಕ್ಷಿಸಬಹುದು.?

ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ಮಿನಿ ಹರಾಜಿನ ನೇರ ಪ್ರಸಾರವನ್ನು ಕ್ರಿಕೆಟ್ ಅಭಿಮಾನಿಗಳು ವೀಕ್ಷಿಸಬಹುದಾಗಿದೆ. ಇನ್ನು ಕಳೆದ ಜೂನ್‌ನಲ್ಲಿ ವೈಕಾಂ18 ಹಾಗೂ ರಿಲಯನ್ಸ್‌ ಡಿಜಿಟಲ್ ಹಕ್ಕು ಪಡೆದಿರುವುದರಿಂದಾಗಿ ಜಿಯೋ ಸಿನಿಮಾ ಆಪ್ ಮೂಲಕವೂ ವೀಕ್ಷಿಸಬಹುದಾಗಿದೆ.

IPL Auction ಆಟಗಾರರ ರಿಲೀಸ್ ಬಳಿಕ ಮಿನಿ ಐಪಿಎಲ್ ಹರಾಜಿಗೆ 10 ಫ್ರಾಂಚೈಸಿ ಬಳಿ ಉಳಿದಿರುವ ಹಣವೆಷ್ಟು..?

ಎಷ್ಟು ಜನ ಹರಾಜಾಗಬಹುದು..?

ಆರಂಭದಲ್ಲಿ 991 ಆಟಗಾರರು ಹೆಸರು ನೋಂದಾಯಿಸಿದ್ದರೂ ಸಹಾ ಅಂತಿಮವಾಗಿ 405 ಆಟಗಾರರ ಹೆಸರು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಈ ಪೈಕಿ 273 ಭಾರತೀಯ ಆಟಗಾರರು 132 ವಿದೇಶಿ ಆಟಗಾರರು ಇದ್ದಾರೆ. ಈ ಪೈಕಿ 10 ಫ್ರಾಂಚೈಸಿಗಳು ಗರಿಷ್ಠ 87 ಆಟಗಾರರನ್ನು ಖರೀದಿಸಲು ಅವಕಾಶವಿದೆ. 

ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ 90,000 ಕೋಟಿ ರುಪಾಯಿಗೇರಿಕೆ..!

ನವದೆಹಲಿ: ವಿಶ್ವದ ಶ್ರೀಮಂತ ಟಿ20 ಲೀಗ್ ಐಪಿಎಲ್‌ನ ಒಟ್ಟು ಮೌಲ್ಯ ಕೇವಲ ಒಂದು ವರ್ಷದಲ್ಲಿ ಬರೋಬ್ಬರಿ 40,000 ಕೋಟಿ ರುಪಾಯಿಗೆ ಏರಿಕೆಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. 2021ರಲ್ಲಿ ಐಪಿಎಲ್‌ನ ಮೌಲ್ಯ 51,000 ಕೋಟಿ ರುಪಾಯಿ ಇತ್ತು. ಆದರೆ ಹೊಸ ಎರಡು ತಂಡಗಳ ಸೇರ್ಪಡೆ ಹಾಗೂ ದಾಖಲೆಯ ಮೊತ್ತಕ್ಕೆ ಮಾಧ್ಯಮ ಹಕ್ಕು ಮಾರಾಟದ ಹಿನ್ನೆಲೆಯಲ್ಲಿ 2022ರ ಟೂರ್ನಿಯಲ್ಲಿ ಐಪಿಎಲ್‌ನ ಬ್ರ್ಯಾಂಡ್‌ ಮೌಲ್ಯ 91,000 ಕೋಟಿ ರುಪಾಯಿಗೆ ಏರಿಕೆಯಾಗಿದೆ.

click me!