ಬೆಂಗಳೂರು(ಫೆ.12): ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಪ್ರಮುಖ ಸ್ಪಿನ್ನರ್, ಮಾಜಿ ನಾಯಕ ವಿರಾಟ್ ಕೊಹ್ಲಿಯ ಬಲಗೈ ಬಂಟನಾಗಿ ಗುರುತಿಸಿಕೊಂಡಿದ್ದ ಯಜುವೇಂದ್ರ ಚಹಾಲ್(Yuzvendra Chahal) ಖರೀದಿಸಲು ಆರ್‌ಸಿಬಿ ಮನಸ್ಸೇ ಮಾಡಲಿಲ್ಲ ಅನ್ನೋದು ಅಭಿಮಾನಿಗಳ ಅಚ್ಚರಿಕೆ ಕಾರಣವಾಗಿದೆ. ಆದರೆ ರಾಜ್ಥಾನ ರಾಯಲ್ಸ್ 6.50 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ.
2014ರಲ್ಲಿ ಆರ್‌ಸಿಬಿ ತಂಡಕ್ಕೆ ಆಗಮಿಸಿದ ಬಳಿಕ ಬೆಂಗಳೂರು(Bengaluru) ಫ್ರಾಂಚೈಸಿ ಪ್ರತಿ ಭಾರಿ ಚಹಾಲ್‌ರನ್ನು ರಿಟೈನ್ ಮಾಡಿಕೊಳ್ಳತ್ತಲೇ ಬಂದಿತ್ತು. ಇದೇ ಮೊದಲ ಬಾರಿಗೆ ಆರ್‌ಸಿಬಿ ಚಹಾಲ್ ಕೈಬಿಟ್ಟಿತು. ಇನ್ನು ಹರಾಜಿನಲ್ಲಿ ಚಹಾಲ್ ಖರೀದಿಸುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿತ್ತು. ಆದರೆ ಆರ್‌ಸಿಬಿ ಬಿಡ್ಡಿಂಗ್ ಮಾಡಲೇ ಇಲ್ಲ. ಇತ್ತ ರಾಜಸ್ಥಾನ ರಾಯಲ್ಸ್(Rajasthan Royals) 6.50 ಕೋಟಿ ರೂಪಾಯಿ ನೀಡಿದೆ.
IPL Auction 2022 ಜೋಶ್ ಹೇಜಲ್‌ವುಡ್ ಖರೀದಿಸಿದ ಆರ್‌ಸಿಬಿ, 7.75 ಕೋಟಿ ರೂಗೆ ಸೋಲ್ಡ್!
2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಲೆಗ್ ಸ್ಪಿನ್ನರ್ ಚಹಲ್ ಖರೀದಿಸಲು ರಾಜಸ್ಥಾನ ರಾಯಲ್ಸ್ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪೈಪೋಟಿ ನಡೆಸಿತು. ಕೊನೆಗೆ ರಾಜಸ್ಥಾನ ರಾಯಲ್ಸ್ ಬಡ್ಡಿಂಗ್ ಗೆದ್ದುಕೊಂಡ ಸ್ಪಿನ್ ಅಸ್ತ್ರ ಬಲಪಡಿಸಿಕೊಂಡಿತು.
2013ರಲ್ಲಿ ಯಜುವೇಂದ್ರ ಚಹಾಲ್ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದರು. ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದ ಚಹಾಲ್‌ಗೆ ನಿರೀಕ್ಷಿತ ಅವಕಾಶ ಸಿಗಲಿಲ್ಲ, ಸಿಕ್ಕ ಅವಕಾಶದಲ್ಲಿ ಮಿಂಚಲಿಲ್ಲ ಆದರೆ 2014ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಹಾಲ್ ಖರೀದಿಸಿತು. ಇದು ಚಹಾಲ್ ಕ್ರಿಕೆಟ್ ಕರಿಯರ್‌ನಲ್ಲಿ ಬಹುದೊಡ್ಡ ಬದಲಾವಣೆ ತಂದಿತು.
IPL Auction 2022 ಕನ್ನಡಿಗ ಪ್ರಸಿದ್ಧ್ ಕೃಷ್ಣ ಖರೀದಿಗೆ ಮುಗಿಬಿದ್ದ ಫಾಂಚೈಸಿ, ದಾಖಲೆ ಮೊತ್ತಕ್ಕೆ ರಾಜಸ್ಥಾನ ಪಾಲು!
2014ರಿಂದ 2021ರ ವರೆಗೆ ಯಜುವೇಂದ್ರ ಚಹಾಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಆರ್‌ಸಿಬಿ ಪರ 113 ಪಂದ್ಯ ಆಡಿದ್ದರೆ, ಮುಂಬೈ ಇಂಡಿಯನ್ಸ್ ಪರ ಕೇವಲ ಒಂದು ಪಂದ್ಯ ಆಡಿದ್ದಾರೆ. ಆರ್‌ಸಿಬಿಯಲ್ಲಿ ಸಿಕ್ಕ ಅವಕಾಶ ಬಳಸಿಕೊಂಡ ಚಹಾಲ್, ಟೀಂ ಇಂಡಿಯಗೂ ಪದಾರ್ಪಣೆ ಮಾಡಿದರು.
114 ಐಪಿಎಲ್ ಪಂದ್ಯ ಆಡಿರುವ ಯಜುವೇಂದ್ರ ಚಹಾಲ್ 139 ವಿಕೆಟ್ ಕಬಳಿಸಿದ್ದಾರೆ. 25 ರನ್ ನೀಡಿ 4 ವಿಕೆಟ್ ಕಬಳಿಸಿರುವು ಚಹಾಲ್ ಬೆಸ್ಟ್ ಬೌಲಿಂಗ್.
ಯಜುವೇಂದ್ರ ಚಹಾಲ್‌ಗೆ ಆರ್‌ಸಿಬಿ ಬಿಡ್ಡಿಂಗ್ ಮಾಡದೇ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಚಹಾಲ್ 6.5 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶ್ರೀಲಂಕಾ ಸ್ಪಿನ್ನರ್ ವಾನಿಂದು ಹಸರಂಗಾಗೆ 10.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಇದು ದುಬಾರಿ ಖರೀದಿಯಾಗಿದೆ. ಇದಕ್ಕಿಂತ ಚಹಾಲ್ 7 ಕೋಟಿ ರೂಪಾಯಿಯಲ್ಲಿ ಆರ್‌ಸಿಬಿ ಪಾಳಯದಲ್ಲೇ ಉಳಿಯುತ್ತಿದ್ದರು. ಆದರೆ ಆರ್‌ಸಿಬಿ ದೇಸಿ ಹಾಗೂ ಬೆಂಗಳೂರು ತಂಡದ ಭಾಗವಾಗಿದ್ದ ಪ್ರತಿಭೆಯನ್ನು ಕಡೆಗಣಿಸಿದೆ ಅನ್ನೋ ಟೀಕೆಗಳು ಕೇಳಿಬಂದಿದೆ.
ರಾಜಸ್ಥಾನ ರಾಯಲ್ಸ್
ರಾಜಸ್ಥಾನ ರಾಯಲ್ಸ್ ತಂಡ ಸಂಜು ಸಾಮ್ಸನ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಈ ಬಾರಿಯ ಹರಾಜಿನಲ್ಲಿ ಅತ್ಯುತ್ತಮ ಖರೀದಿ ಮಾಡುವ ಮೂಲಕ ಕೋರ್ ತಂಡವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಮತ್ತೊಂದು ವಿಶೇಷ ಅಂದರೆ ಮೂವರು ಕನ್ನಡಿಗರು ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡಿದ್ದಾರೆ. ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ ಹಾಗೂ ಕೆಸಿ ಕಾರ್ಯಪ್ಪ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದಾರೆ. ತಂಡದಲ್ಲಿ ಆರ್ ಅಶ್ವಿನ್, ಜೋಸ್ ಬಟ್ಲರ್, ಟ್ರೆಂಟ್ ಬೋಲ್ಟ್, ಶಿಮ್ರೊನ್ ಹೆಟ್ಮೆಯರ್, ರಿಯಾನ್ ಪರಾಗ್, ಯಜುವೇಂದ್ರ ಚಹಾಲ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಘಟಾನುಗಟಿಗಳೇ ತಂಡದಲ್ಲಿದ್ದಾರೆ