IPL Auction 2022 ಕನ್ನಡಿಗ ಪ್ರಸಿದ್ಧ್ ಕೃಷ್ಣ ಖರೀದಿಗೆ ಮುಗಿಬಿದ್ದ ಫ್ರಾಂಚೈಸಿ, ದಾಖಲೆ ಮೊತ್ತಕ್ಕೆ ರಾಜಸ್ಥಾನ ಪಾಲು!

By Suvarna News  |  First Published Feb 12, 2022, 5:48 PM IST
  • ದುಬಾರಿ ಮೊತ್ತಕ್ಕೆ ತಂಡಕ್ಕೆ ಸೇಲಾದ ಕನ್ನಡಿಗ ಪ್ರಸಿದ್ಧ್ ಕೃಷ್ಣ
  • 10 ಕೋಟಿ ರೂಪಾಯಿ ನೀಡಿ ರಾಜಸ್ಥಾನ ಖರೀದಿ
  • ಇಬ್ಬರು ಕನ್ನಡಿಗರ ಖರೀದಿಸಿದ ರಾಜಸ್ಥಾನ ರಾಯಲ್ಸ್
     

ಬೆಂಗಳೂರು(ಫೆ.12):  ಐಪಿಎಲ್ ಹರಾಜು ಪ್ರಕ್ರಿಯೆಲ್ಲಿ ಯುವ ಬೌಲರ್‌ಗಳು ದಾಖಲೆ ಮೊತ್ತಕ್ಕೆ ಹರಾಜಾಗುತ್ತಿದ್ದಾರೆ. ದೀಪಕ್ ಚಹಾರ್ 14 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದ ಬೆನ್ನಲ್ಲೇ , ಇದೀಗ  ಯುವ ವೇಗಿ, ಕನ್ನಡಿಗ ಪ್ರಸಿದ್ಧ್ ಕೃಷ್ಣ 10 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದಾರೆ.

1 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಖರೀದಿಗೆ ರಾಜಸ್ಥಾನ ರಾಯಲ್ಸ್ ಜೊತೆಗೆ ಗುಜರಾತ್ ಟೈಟಾನ್ಸ್, ಲಕ್ನೋ ಸೇರಿದಂತೆ ಕೆಲ ಫ್ರಾಂಚೈಸಿಗಳು ಮುಗಿಬಿದ್ದಿತ್ತು. ಜಿದ್ದಾಜಿದ್ದಿನ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ 10 ಕೋಟಿ ರೂಪಾಯಿಗೆ ಬಿಡ್ಡಿಂಗ್ ಮಾಡಿತು.

Tap to resize

Latest Videos

IPL Auction 2022 ಹರ್ಷಲ್ ಪಟೇಲ್‌ ಮತ್ತೆ ಆರ್‌ಸಿಬಿ ಪಾಲು, 10.75 ಕೋಟಿ ರೂಗೆ ಖರೀದಿ!

ಯುವ ವೇಗಿ ಪ್ರಸಿದ್ಧ್ ಕೃಷ್ಣ ಖರೀದಿಗೆ ಫ್ರಾಂಚೈಸಿ ಮುಗಿ ಬೀಳಲು ಕಾರಣವಿದೆ. ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಪ್ರಸಿದ್ಧ್ ಕೃಷ್ಣ ಗರಿಷ್ಠ ವಿಕೆಟ್ ಕಬಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪ್ರಸಿದ್ಧ್ ಕೃಷ್ಣ 9 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ವಿಂಡೀಸ್ ಕ್ರಿಕೆಟಿಗ ಅಲ್ಜಾರಿ ಜೋಸೆಫ್ 6 ವಿಕೆಟ್ ಕಬಳಿಸಿದ್ದಾರೆ. ವಿಂಡೀಸ್ ವಿರುದ್ದಧ 3ನೇ ಏಕದಿನ ಪಂದ್ಯದಲ್ಲಿ ಪ್ರಸಿದ್ಧ್ 3 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಕ ಪಾತ್ರ ನಿರ್ವಹಿಸಿದ್ದರು.  

IPL Auction 2022 ಆರ್‌ಸಿಬಿ ತಂಡಕ್ಕೆ ದಿನೇಶ್ ಕಾರ್ತಿಕ್, 5.50 ಕೋಟಿ ರೂಗೆ ಸೇಲ್!

ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ಪರ ಆಡಿದ್ದ ಪ್ರಸಿದ್ಧ ಕೃಷ್ಣ 10 ಪಂದ್ಯಗಳಿಂದ 12 ವಿಕೆಟ್ ಕಬಳಿಸಿದ್ದಾರೆ. ಇನ್ನು 2018ರಲ್ಲಿ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ ಪ್ರಸಿದ್ಧ್ 30 ವಿಕೆಟ್ ಕಬಳಿಸಿದ್ದಾರೆ. 

2015ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪ್ರಸಿದ್ಧ್ ಕೃಷ್ಣ ಮೊದಲ ಎಸತದಲ್ಲೇ ವಿಕೆಟ್ ಕಬಳಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿದರೂ ಅವಕಾಶ ಸಿಗದ ಪ್ರಸಿದ್ಧ್ ಕೃಷ್ಣ 2017-18ರ ಸಾಲಿನ ವಿಜಯ್ ಹಜಾರೆ ಟೂರ್ನಿಯಲ್ಲಿ ಪ್ರಸಿದ್ಧ್ 8 ಪಂದ್ಯಗಳಿಂದ 17 ವಿಕೆಟ್ ಕಬಳಿಸಿ ಮಿಂಚಿದ್ದರು. ಇಷ್ಟೇ ಅಲ್ಲ ಎರಡನೇ ಗರಿಷ್ಠ ವಿಕೆಟ್ ಟೇಕರ್ ಅನ್ನೋ ಹೆಗ್ಗಳಿಕೂ ಪಾತ್ರರಾಗಿದ್ದರು. ಸೌರಾಷ್ಟ್ರ ವಿರುದ್ದದ ಫೈನಲ್ ಪಂದ್ಯದಲ್ಲಿ ಪ್ರಸಿದ್ಧ್ 37 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಈ ಮೂಲಕ ಕರ್ನಾಟಕ ತಂಡಕ್ಕೆ 2017-18ರ ಸಾಲಿನ ವಿಜಯ್ ಹಜಾರೆ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಟ್ ಬೌಲರ್ ಆಗಿ ಉತ್ತ ನಿರ್ವಹಣೆ ತೋರಿದ ಪ್ರಸಿದ್ಧ್ ಕೃಷ್ಣ ಇದೀಗ 10 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡ ಕನ್ನಡಿಗರ ಖರೀದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಇದರಿಂದ ತಂಡಕ್ಕೆ ಹೆಚ್ಚಿನ ಲಾಭವಾಗಿದೆ. ಆರ್‌ಸಿಬಿ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ 7.75 ಕೋಟಿ ರೂಪಾಯಿಗೆ ರಾಜಸ್ಥಾನ ತಂಡ ಖರೀದಿಸಿದೆ. ಇನ್ನು ಯುವ ವೇಗಿ, ಮಾರಕ ದಾಳಿ ಸಂಘಟಿಸಿ ಈಗಾಗಲೇ ಭರವಸೆ ಮೂಡಿಸಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ 10 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡಿದ್ದಾರೆ. ಮತ್ತೊರ್ವ ಮಿಸ್ಟ್ರಿ ಸ್ಪಿನ್ನರ್, ಕನ್ನಡಿಗ ಕೆಸಿ ಕಾರ್ಯಪ್ಪ 30 ಲಕ್ಷ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡಿದ್ದಾರೆ.

click me!