ಬೆಂಗಳೂರು(ಫೆ.13): ಐಪಿಎಲ್ ಹರಾಜಿನಲ್ಲಿ(IPL Auction 2022) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(RCB) ಕೊನೆಗೂ ಕನ್ನಡಿಗನಿಗೆ ಮಣೆ ಹಾಕಿದೆ. ಹೌದು ಹರಾಜಿನಲ್ಲಿ ಕರ್ನಾಟಕ(Karnataka) ಪ್ಲೇಯರ್ ಅನೀಶ್ವರ್ ಗೌತಮ್(aneeshwar gautam) ಖರೀದಿಸಿದೆ. ಈ ಮೂಲಕ ಈ ಬಾರಿ ಆರ್‌ಸಿಬಿ ತಂಡ ಸೇರಿಕೊಂಡ ಮೊದಲ ಹಾಗೂ ಏಕೈಕ ಕನ್ನಡಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐಪಿಎಲ್ ಹರಾಜಿನಲ್ಲಿ ವಿದೇಶಿ ಆಟಾಗರತ್ತೆ ಹೆಚ್ಚು ಆಕರ್ಷಿತರಾಗಿದ್ದ ಆರ್‌ಸಿಬಿ ವಿರುದ್ಧ ಅಭಿಮಾನಿಗಳು(RCB Fans) ಗರಂ ಆಗಿದ್ದರು. ದುಬಾರಿ ಬೆಲೆಗೆ ಆಟಗಾರರ ಖರೀದಿ, ಕರ್ನಾಟಕ ಆಟಗಾರರ ನಿರ್ಲಕ್ಷ್ಯಕ್ಕೆ ಟೀಕೆಗಳು ವ್ಯಕ್ತವಾಗಿತ್ತು. ಅಭಿಮಾನಿಗಳ ಬೇಸರ ಒರೆಸಲು ಇದೀಗ ಕನ್ನಡಿಗ ಅನೀಶ್ವರ್ ಗೌತಮ್ ಖರೀದಿ ಮಾಡಿದೆ. 20 ಲಕ್ಷ ರೂಪಾಯಿ ಮೂಲ ಬೆಲೆಗೆ ಆರ್‌ಸಿಬಿ ಅನೀಶ್ವರ್ ಗೌಮತ್ ಖರೀದಿ ಮಾಡಿದೆ.
IPL Auction 2022 ಈ ವರ್ಷ ಐಪಿಎಲ್ ಆಡೋದೆ ಅನುಮಾನ, ಆದರೂ 8 ಕೋಟಿ ನೀಡಿ ಜೋಫ್ರಾ ಖರೀದಿಸಿದ ಮುಂಬೈ!
ಅನೀಶ್ವರ್ ಗೌತಮ್ ಅಂಡರ್ 19 ತಂಡದ ಸದಸ್ಯ. ಕರ್ನಾಟಕದ ಬ್ಯಾಟ್ಸ್‌ಮನ್ ಇದೀಗ ಆರ್‌ಸಿಬಿ ತಂಡ ಸೇರಿಕೊಂಡಿರುವುದು ಕನ್ನಡಿಗರಿಗೆ ಕೊಂಚ ಸಮಾಧಾನ ತಂದಿದೆ. 19ರ ಹರೆಯದ ಅನೀಶ್ವರ್ ಗೌತಮ್ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುದೇ ಇರಬಹುದು. ಆದರೆ ಪ್ರತಿಭಾನ್ವಿತ ಆಟಗಾರನಿಗೆ ವೇದಿಕೆಯಂತು ಸಿಕ್ಕಿದೆ. ಟೀಂ ಇಂಡಿಯಾ ಅಂಡರ್ 19 ತಂಡದ ಪ್ರಮುಖ ಸದಸ್ಯ ಅನೀಶ್ವರ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭಿಕ ಆವೃತ್ತಿಗಳಲ್ಲಿ ನಾಯಕ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ವಿನಯ್ ಕುಮಾರ್ ಸೇರಿದಂತೆ ಕರ್ನಾಟಕ ಆಟಗಾರರಿಗೆ ಹೆಚ್ಚಿನ ಮಣೆ ಹಾಕಿತ್ತು. ಬಳಿಕ ಕರ್ನಾಟಕದ ಆಟಗಾರರನ್ನು ಕಡೆಗಣಿಸುತ್ತಾ ಬಂದಿದೆ. ಕಳೆದ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಹಾಗೂ ಪವನ್ ದೇಶಪಾಂಡೆ ಸ್ಥಾನ ಪಡೆದಿದ್ದರು. ಇದರಲ್ಲಿ ಪವನ್ ದೇಶಪಾಂಡೆಗೆ ಆಡೋ ಅವಕಾಶ ಸಿಗಲಿಲ್ಲ. ಆದರೆ ದೇವದತ್ ಪಡಿಕ್ಕಲ್ ಆರ್‌ಸಿಬಿ ತಂಡ ಪ್ರಮುಖ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದರು.
IPL Auction 2022 ಕರ್ನಾಟಕದ ಪ್ರವೀಣ್ ಡೆಲ್ಲಿ ಪಾಲು, ಸುಯಾಶ್ ಹಾಗೂ ಮಿಲಿಂದ್ ಖರೀದಿಸಿದ ಆರ್‌ಸಿಬಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿ:
ಫಾಫ್ ಡುಪ್ಲೆಸಿಸ್: 7 ಕೋಟಿ ರೂಪಾಯಿ
ಹರ್ಷಲ್ ಪಟೇಲ್ : 10.75 ಕೋಟಿ ರೂಪಾಯಿ
ವಾನಿಂದು ಹಸರಂಗ : 10.75 ಕೋಟಿ ರೂಪಾಯಿ
ದಿನೇಶ್ ಕಾರ್ತಿಕ್ : 5.50 ಕೋಟಿ ರೂಪಾಯಿ
ಜೋಶ್ ಹೆಜಲ್‌ವುಡ್ : 7.75 ಕೋಟಿ ರೂಪಾಯಿ
ಶೆಹಬಾಜ್ ಅಹಮ್ಮದ್ : 2.40 ಕೋಟಿ ರುಪಾಯಿ
ಆಕಾಶ್ ದೀಪ್ : 20 ಲಕ್ಷ ರೂಪಾಯಿ
ಅನೂಜ್ ರಾವತ್ :3.40 ಕೋಟಿ ರುಪಾಯಿ
ಮಹೀಪಾಲ್ ಲೊಮ್ರೊರ್: 95 ಲಕ್ಷ ರೂಪಾಯಿ
ಫಿನ್ ಅಲೆನ್: 80 ಲಕ್ಷ ರೂಪಾಯಿ
ಶೆರ್ಫಾನೆ ರುದರ್‌ಫೋರ್ಡ್ : 1 ಕೋಟಿ ರೂಪಾಯಿ
ಜೇಸನ್ ಬೆಹ್ರನ್‌ಡ್ರಾಫ್ : 75 ಲಕ್ಷ ರುಪಾಯಿ
ಸುಯಾಶ್ ಪ್ರಭುದೇಸಾಯಿ : 30 ಲಕ್ಷ ರೂಪಾಯಿ
ಚಾಮಾ ಮಿಲಿಂದ್: 25 ಲಕ್ಷ ರೂಪಾಯಿ
ಅನೀಶ್ವರ್ ಗೌತಮ್: 20 ಲಕ್ಷ ರೂಪಾಯಿ
ಜೇಸನ್ ಬೆಹ್ರೆನಡೊರ್ಫ್: 75 ಲಕ್ಷ ರೂಪಾಯಿ
ಐಪಿಎಲ್ ಟ್ರೋಫಿ
2008: ರಾಜಸ್ಥಾನ ರಾಯಲ್ಸ್
2009: ಡೆಕ್ಕನ್ ಚಾರ್ಜಸ್
2010: ಚೆನ್ನೈ ಸೂಪರ್ ಕಿಂಗ್ಸ್
2011: ಚೆನ್ನೈ ಸೂಪರ್ ಕಿಂಗ್ಸ್
2012: ಕೋಲ್ಕತಾ ನೈಟ್ ರೈಡರ್ಸ್
2013: ಮುಂಬೈ ಇಂಡಿಯನ್ಸ್
2014: ಕೋಲ್ಕತಾ ನೈಟ್ ರೈಡರ್ಸ್
2015: ಮುಂಬೈ ಇಂಡಿಯನ್ಸ್
2016: ಸನ್‌ರೈಸರ್ಸ್ ಹದರಾಬಾದ್
2017: ಮುಂಬೈ ಇಂಡಿಯನ್ಸ್
2018: ಚೆನ್ನೈ ಸೂಪರ್ ಕಿಂಗ್ಸ್
2019:ಮುಂಬೈ ಇಂಡಿಯನ್ಸ್
2020: ಮುಂಬೈ ಇಂಡಿಯನ್ಸ್
2021: ಚೆನ್ನೈ ಸೂಪರ್ ಕಿಂಗ್ಸ್