IPL Auction 2022 ಕರ್ನಾಟಕದ ಪ್ರವೀಣ್ ಡೆಲ್ಲಿ ಪಾಲು, ಸುಯಾಶ್‌ ಹಾಗೂ ಮಿಲಿಂದ್ ಖರೀದಿಸಿದ ಆರ್‌ಸಿಬಿ!

By Suvarna News  |  First Published Feb 13, 2022, 5:19 PM IST
  • ಅರೆ ಮನಸ್ಸಿನಿಂದ ದುಬೆ ಖರೀದಿಗೆ ಬಿಡ್ ಮಾಡಿದ ಆರ್‌ಸಿಬಿ
  • ಡೆಲ್ಲಿ 50 ಲಕ್ಷ ರೂಪಾಯಿ ನೀಡಿ ಪ್ರವೀಣ್ ದುಬೆ ಖರೀದಿ
  • ಸುಶಾಯ್  ಪ್ರಭುದೇಸಾಯಿ ಖರೀದಿಸಿದ ಆರ್‌ಸಿಬಿ

ಬೆಂಗಳೂರು(ಫೆ.13):  ಐಪಿಎಲ್ ಹರಾಜು(IPL Auction) 2022ರ ಲಿಸ್ಟ್‌ನಲ್ಲಿದ್ದ ಬಹುತೇಕ ಕರ್ನಾಟಕ(Karntaka) ಆಟಗಾರರು ವಿವಿಧ ತಂಡಗಳಿಗೆ ಮಾರಾಟವಾಗಿದ್ದಾರೆ. ಕರುಣ್ ನಾಯರ್ ಹೊರತು ಪಡಿಸಿ ಇನ್ನುಳಿದ ಎಲ್ಲಾ ಕರ್ನಾಟಕ ಕ್ರಿಕೆಟಿಗರು ದಾಖಲೆ ಮೊತ್ತಕ್ಕೆ ಸೇಲಾಗಿದ್ದಾರೆ. ಇದೀಗ ಮತ್ತೊರ್ವ ಕರ್ನಾಟಕ ಆಲ್ರೌಂಡರ್ ಪ್ರವೀಣ್ ದುಬೆ, ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.  50 ಲಕ್ಷ ರೂಪಾಯಿ ಬೆಲೆಗೆ ಡೆಲ್ಲಿ ತಂಡ ದುಬೆ ಖರೀದಿಸಿದೆ.

20 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಪ್ರವೀಣ್ ದುಬೆ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭದಲ್ಲಿ ಆಸಕ್ತಿ ತೋರಿತ್ತು. ಆದರೆ 35 ಲಕ್ಷ ದಾಟುತ್ತಿದ್ದಂತೆ ಆರ್‌ಸಿಬಿ ಹಿಂದೇಟು ಹಾಕಿತು. ಇತ್ತ ಡೆಲ್ಲಿ 50 ಲಕ್ಷ ರೂಪಾಯಿ ನೀಡಿದ ದುಬೆ ಖರೀದಿಸಿತು. 

Tap to resize

Latest Videos

IPL Auction 2022 : ಹರಾಜಿನಲ್ಲಿ ಮುಗಿಯೋಲ್ಲ ಬ್ಲಂಡರ್ಸ್, RCB ಆಯ್ಕೆ ಬಗ್ಗೆ ವೆಂಕಿ ಗರಂ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಳಿಕ ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದ ಪ್ರವೀಣ್ ದುಬೆ ಇದೀಗ ಮತ್ತೆ ಡೆಲ್ಲಿ ಪಾಲಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಹೆಚ್ಚಿನ ಅವಕಾಶ ಸಿಗದೆ ದುಬೆ ಈ ಬಾರಿ ಹೊಸ ಅಧ್ಯಾಯ ಬರೆಯುವ ಉತ್ಸಾಹದಲ್ಲಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಇದುವರೆಗೆ 3 ಪಂದ್ಯಗಳನ್ನು ಆಡಿದ್ದಾರೆ.

ಪ್ರವೀಣ್ ದುಬೆ ಖರೀದಿಗೆ ಮನಸ್ಸು ಮಾಡದ ಆರ್‌ಸಿಬಿ, ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ತಂಡದಲ್ಲಿದ್ದ ಸುಯಾಶ್‌ ಪ್ರಭುದೇಸಾಯಿ ಖರೀದಿ ಮಾಡಿದೆ. 20 ಲಕ್ಷ ರೂಪಾಯಿ ಮೂಲ ಬೆಲೆಯ ಸುಯಾಶ್‌ ಪ್ರಭುದೇಸಾಯಿಗೆ 30 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿದೆ. ಗೋವಾ ಕ್ರಿಕೆಟಿಗ ಸುಯಾಶ್‌ ಪ್ರಭುದೇಸಾಯಿ 2021ರಲ್ಲಿ ಆರ್‌ಸಿಬಿ ತಂಡ ಸೇರಿಕೊಂಡಿದ್ದರು. ಆದರೆ ಪ್ಲೇಯಿಂಗ್ ಇಲೆವೆನ್‌ನನಲ್ಲಿ ಸುಯಾಶ್‌ ಪ್ರಭುದೇಸಾಯಿಗೆ ಅವಕಾಶ ಸಿಕ್ಕಿಲ್ಲ. 

IPL Auction 2022 : ಒಂದೇ ವರ್ಷದಲ್ಲಿ 8.35 ಕೋಟಿ ಮೌಲ್ಯ ಕಳೆದುಕೊಂಡ ಕೆ.ಗೌತಮ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿ:
ಫಾಫ್ ಡುಪ್ಲೆಸಿಸ್: 7 ಕೋಟಿ ರೂಪಾಯಿ
ಹರ್ಷಲ್ ಪಟೇಲ್ : 10.75 ಕೋಟಿ ರೂಪಾಯಿ
ವಾನಿಂದು ಹಸರಂಗ : 10.75 ಕೋಟಿ ರೂಪಾಯಿ
ದಿನೇಶ್ ಕಾರ್ತಿಕ್ :  5.50 ಕೋಟಿ ರೂಪಾಯಿ
ಜೋಶ್ ಹೆಜಲ್‌ವುಡ್ : 7.75 ಕೋಟಿ ರೂಪಾಯಿ
ಶೆಹಬಾಜ್ ಅಹಮ್ಮದ್ : 2.40 ಕೋಟಿ ರುಪಾಯಿ
ಆಕಾಶ್ ದೀಪ್  : 20 ಲಕ್ಷ ರೂಪಾಯಿ
ಅನೂಜ್ ರಾವತ್  :3.40 ಕೋಟಿ ರುಪಾಯಿ
ಮಹೀಪಾಲ್ ಲೊಮ್ರೊರ್: 95 ಲಕ್ಷ ರೂಪಾಯಿ
ಫಿನ್ ಅಲೆನ್: 80 ಲಕ್ಷ ರೂಪಾಯಿ
ಶೆರ್ಫಾನೆ ರುದರ್‌ಫೋರ್ಡ್‌ : 1 ಕೋಟಿ ರೂಪಾಯಿ
ಜೇಸನ್‌ ಬೆಹ್ರನ್‌ಡ್ರಾಫ್‌ : 75 ಲಕ್ಷ ರುಪಾಯಿ
ಸುಯಾಶ್‌ ಪ್ರಭುದೇಸಾಯಿ : 30 ಲಕ್ಷ ರೂಪಾಯಿ
ಚಾಮಾ ಮಿಲಿಂದ್: 25 ಲಕ್ಷ ರೂಪಾಯಿ

ಐಪಿಎಲ್ ಟೂರ್ನಿಯಲ್ಲಿ ಮೂರು ಬಾರಿ ರನ್ನರ್ ಅಪ್ ಪ್ರಶಸ್ತಿ ಗೆದ್ದಿರುವ ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆಲುವಿಗೆ ಹವಣಿಸುತ್ತಿದೆ. ಈ ಬಾರಿ ಹೊಸ ರೀತಿಯಲ್ಲಿ ತಂಡವನ್ನು ಆಯ್ಕೆ ಮಾಡಿದೆ. 2009ರಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ ಟ್ರೋಫಿ ಗೆಲುವಿನಿಂಚ ವಂಚಿತವಾಗಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಇನ್ನು 2011ರಲ್ಲಿ ಮತ್ತೆ ಎರಡನೇ ಬಾರಿ ರನ್ನರ್ ಅಪ್ ಪ್ರಶಸ್ತಿ ಪಡೆದ ಆರ್‌ಸಿಬಿ 2016ರಲ್ಲಿ 3ನೇ ಬಾರಿಗೆ ಫೈನಲ್ ಪ್ರವೇಶಿಸಿ ನಿರಾಸೆ ಅನುಭವಿಸಿದೆ. 

ಐಪಿಎಲ್ ಟ್ರೋಫಿ
2008:  ರಾಜಸ್ಥಾನ ರಾಯಲ್ಸ್ 
2009:    ಡೆಕ್ಕನ್ ಚಾರ್ಜಸ್ 
2010: ಚೆನ್ನೈ ಸೂಪರ್ ಕಿಂಗ್ಸ್ 
 2011:   ಚೆನ್ನೈ ಸೂಪರ್ ಕಿಂಗ್ಸ್
2012:   ಕೋಲ್ಕತಾ ನೈಟ್ ರೈಡರ್ಸ್ 
2013:    ಮುಂಬೈ ಇಂಡಿಯನ್ಸ್
2014:   ಕೋಲ್ಕತಾ ನೈಟ್ ರೈಡರ್ಸ್
2015:   ಮುಂಬೈ ಇಂಡಿಯನ್ಸ್ 
2016:   ಸನ್‌ರೈಸರ್ಸ್ ಹದರಾಬಾದ್
2017:   ಮುಂಬೈ ಇಂಡಿಯನ್ಸ್
2018:   ಚೆನ್ನೈ ಸೂಪರ್ ಕಿಂಗ್ಸ್
2019:ಮುಂಬೈ ಇಂಡಿಯನ್ಸ್  
2020:   ಮುಂಬೈ ಇಂಡಿಯನ್ಸ್ 
2021:  ಚೆನ್ನೈ ಸೂಪರ್ ಕಿಂಗ್ಸ್  

click me!