IPL Auction 2022 : ಲಿವಿಂಗ್‌ಸ್ಟೋನ್ ದುಬಾರಿ ವಿದೇಶಿ ಆಟಗಾರ, ಒಡೆನ್ ಸ್ಮಿತ್ ಗೆ ಐಪಿಎಲ್ ಜಾಕ್ ಪಾಟ್

Suvarna News   | Asianet News
Published : Feb 13, 2022, 01:14 PM ISTUpdated : Feb 13, 2022, 01:25 PM IST
IPL Auction 2022 : ಲಿವಿಂಗ್‌ಸ್ಟೋನ್ ದುಬಾರಿ ವಿದೇಶಿ ಆಟಗಾರ, ಒಡೆನ್ ಸ್ಮಿತ್ ಗೆ ಐಪಿಎಲ್ ಜಾಕ್ ಪಾಟ್

ಸಾರಾಂಶ

ಲಿಯಾಮ್ ಲಿವಿಂಗ್‌ಸ್ಟೋನ್ 2022 ಐಪಿಎಲ್ ಹರಾಜಿನ 4ನೇ ದುಬಾರಿ ಆಟಗಾರ 11.50 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಂಡ ಸೇರಿದ ಲಿಯಾಮ್ ಲಿವಿಂಗ್ ಸ್ಟೋನ್  ಒಡೆನ್ ಸ್ಮಿತ್ ರನ್ನು 6 ಕೋಟಿ ಕೊಟ್ಟು ಖರೀದಿ ಮಾಡಿದ ಪಂಜಾಬ್ ಕಿಂಗ್ಸ್

ಬೆಂಗಳೂರು (ಫೆ.13): ಮೊದಲ ದಿನದ ಹರಾಜಿನ ಬಳಿಕ ಗರಿಷ್ಠ ಹಣವನ್ನು ಹೊಂದಿದ್ದ ತಂಡ ಎನಿಸಿಕೊಂಡಿದ್ದ ಪಂಜಾಬ್ ಕಿಂಗ್ಸ್, 2ನೇ ದಿನದ ಹರಾಜು ಪ್ರಕ್ರಿಯೆ ಆರಂಭವಾದ ಬೆನ್ನಲ್ಲಿಯೇ ದೊಡ್ಡ ಮೊತ್ತದ ಖರೀದಿಗಳನ್ನು ಮಾಡಿದೆ. ಇಂಗ್ಲೆಂಡ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಲಿಯಾಮ್ ಲಿವಿಂಗ್ ಸ್ಟೋನ್ (Liam Livingstone) 2022 ಐಪಿಎಲ್ ಹರಾಜಿನ (IPL Auction 2022) ಈವರೆಗಿನ 4ನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ತಮ್ಮ ಆಲ್ರೌಂಡ್ ಸಾಮರ್ಥ್ಯಗಳಿಂದ ಮಿಂಚಿದ್ದ ಒಡೆನ್ ಸ್ಮಿತ್ ಗೆ (Odean Smith) ಜಾಕ್ ಪಾಟ್ ಹೊಡೆದಿದ್ದು, 6 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಅದಲ್ಲದೆ, ಲಿಯಾಮ್ ಲಿವಿಂಗ್ ಸ್ಟೋನ್ 2022 ಐಪಿಎf ಹರಾಜಿನ ಅತ್ಯಂತ ದುಬಾರಿ ವಿದೇಶಿ ಆಟಗಾರ ಎನಿಸಿದ್ದಾರೆ.

ಮೂಲಬೆಲೆ 1 ಕೋಟಿ ರೂಪಾಯಿಯೊಂದಿಗೆ ಹರಾಜಿಗೆ ಬಂದಿದ್ದ ಲಿವಿಂಗ್ ಸ್ಟೋನ್ ಅವರನ್ನು ಖರೀದಿ ಮಾಡಲು ಕೆಕೆಆರ್, ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಆಸಕ್ತಿ ತೋರಿದ್ದವು. ಸಾಕಷ್ಟು ದೊಡ್ಡ ಮಟ್ಟದ ಬಿಡ್ಡಿಂಗ್ ವಾರ್ ಬಳಿಕ 11.50 ಕೋಟಿ ರೂಪಾಯಿಗೆ ಲಿಯಾಮ್ ಲಿವಿಂಗ್ ಸ್ಟೋನ್ ಅವರನ್ನು ಖರೀದಿ ಮಾಡಲು ಪಂಜಾಬ್ ಕಿಂಗ್ಸ್ ಯಶಸ್ವಿಯಾಯಿತು. ಲಿವಿಂಗ್ ಸ್ಟೋನ್ ಹಾಲಿ ಐಪಿಎಲ್ ಹರಾಜಿನ ಅತ್ಯಂತ ದುಬಾರಿ ಆಟಗಾರ ಎನಿಸಿದ್ದಾರೆ. ಇದಕ್ಕೂ ಮುನ್ನ ಆರ್ ಸಿಬಿಯ ವಾನಿಂದು ಹಸರಂಗ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ನಿಕೋಲಸ್ ಪೂರನ್ (ತಲಾ 10.75 ಕೋಟಿ ರೂಪಾಯಿ) ಈ ದಾಖಲೆಯನ್ನು ಹೊಂದಿದ್ದರು.

ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಗಮನಸೆಳೆದಿದ್ದ ವೆಸ್ಟ್ ಇಂಡೀಸ್ ನ ಆಲ್ರೌಂಡರ್ ಒಡೆನ್ ಸ್ಮಿತ್ ನಿರೀಕ್ಷೆಯಂತೆ ಐಪಿಎಲ್ ಜಾಕ್ ಪಾಟ್ ಗಳಿಸಿದ್ದಾರೆ. 1 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದ ಒಡೆನ್ ಸ್ಮಿತ್ ಅವರನ್ನು ಖರೀದಿ ಮಾಡಲು ಸನ್ ರೈಸರ್ಸ್ ಹಾಗೂ ಲಖನೌ ತಂಡಗಳು ಭಾರೀ ಪೈಪೋಟಿ ನಡೆಸಿದ್ದವು. ಕೊನೇ ಹಂತದಲ್ಲಿ ಬಿಡ್ ಫೀಲ್ಡ್ ಗೆ ಇಳಿದ ಪಂಜಾಬ್ ಕಿಂಗ್ಸ್ ತಂಡ 6 ಕೋಟಿ ರೂಪಾಯಿಗೆ ಒಡೆನ್ ಸ್ಮಿತ್ ಅವರನ್ನು ತಂಡಕ್ಕೆ ಸೆಳೆದುಕೊಂಡಿತು.

 IPL Auction 2022 Live: ಮೆಗಾ ಹರಾಜಿನ 2ನೇ ದಿನ, ಯಾರಿಗೆ ಸಿಹಿ, ಯಾರಿಗೆ ಕಹಿ?
ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ 9 ಪಂದ್ಯವಾಡಿದ್ದ ಲಿವಿಂಗ್ ಸ್ಟೋನ್ 112 ರನ್ ಬಾರಿಸಿದ್ದರು. ಇನ್ನು ಟಿ20 ಕ್ರಿಕೆಟ್ ನಲ್ಲಿ ಈಗಾಗಲೇ ತಮ್ಮ ಬ್ಯಾಟಿಂಗ್ ಮೂಲಕ ದೊಡ್ಡ ಹೆಸರು ಮಾಡಿರುವ ಲಿವಿಂಗ್ ಸ್ಟೋನ್, 2021ರಲ್ಲಿ ಟಿ20 ಮಾದರಿಯಲ್ಲಿ ವರ್ಷವೊಂದರಲ್ಲೇ ಗರಿಷ್ಠ ಸಿಕ್ಸರ್ ಬಾರಿಸಿದ ಬ್ಯಾಟ್ಸ್ ಮನ್ ಎನಿಸಿದ್ದರು. ಆದರೆ, ಐಪಿಎಲ್ ನಲ್ಲಿ ಮಾತ್ರ ಈವರೆಗೂ ಅವರ ಸಾಮರ್ಥ್ಯಕ್ಕೆ ತಕ್ಕಂತ ಆಟ ಹೊರಹೊಮ್ಮಿಲ್ಲ.

IPL Auction 2022 : ಐಸಿಸಿ ವಿಶ್ವಕಪ್ ಗೆದ್ದ ನಾಯಕರು ಅನ್ ಸೋಲ್ಡ್!
ಲಿಯಾಮ್ ಲಿವಿಂಗ್‌ಸ್ಟನ್ ಅವರ ಅಂತರಾಷ್ಟ್ರೀಯ ಕ್ರಿಕೆಟ್‌ನ ಅಂಕಿಅಂಶಗಳನ್ನು ನೋಡಿದಾಗ, ಅವರ ಸ್ಟ್ರೈಕ್ ರೇಟ್ 158 ಕ್ಕಿಂತ ಹೆಚ್ಚಿದೆ. ಅವರು 17 ಪಂದ್ಯಗಳಲ್ಲಿ 285 ರನ್ ಗಳಿಸಿದ್ದಾರೆ ಮತ್ತು ಇದರಲ್ಲಿ ಶತಕವೂ ಸೇರಿದೆ. ಅಲ್ಲದೆ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅದೇ ಟಿ20 ಕ್ರಿಕೆಟ್ ನಲ್ಲಿ 164 ಪಂದ್ಯಗಳನ್ನಾಡಿದ್ದು 4095 ರನ್ ಗಳಿಸಿದ್ದಾರೆ. ಇಲ್ಲಿ ಅವರು ಎರಡು ಶತಕ ಮತ್ತು 23 ಅರ್ಧ ಶತಕಗಳನ್ನು ಹೊಂದಿದ್ದಾರೆ. ಅಲ್ಲದೆ 67 ವಿಕೆಟ್‌ಗಳನ್ನು ಪಡೆದಿದ್ದಾರೆ. ಲಿವಿಂಗ್ ಸ್ಟೋನ್ ಅವರ ದಾಖಲೆಯ ಮೊತ್ತದೊಂದಿಗೆ ಐಪಿಎಲ್ ಇತಿಹಾದಲ್ಲಿ ಇಂಗ್ಲೆಂಡ್ ನ ದುಬಾರಿ ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ಬೆನ್ ಸ್ಟೋಕ್ಸ್ ಅವರನ್ನು 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ 14.50 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರೆ, ಬಳಿಕ 2018ರಲ್ಲಿ ರಾಜಸ್ಥಾನ ರಾಯಲ್ಸ್ 12.50 ಕೋಟಿ ರೂಪಾಯಿಗೆ ಖರೀದಿಸಿತ್ತು. 2017ರಲ್ಲಿ ಆರ್ ಸಿಬಿ 12 ಕೋಟಿ ನೀಡಿ ಟೈಮಲ್ ಮಿಲ್ಸ್ ಅವರನ್ನು ಸೆಳೆದುಕೊಂಡಿತ್ತು. ಒಟ್ಟಾರೆ, ಇಂಗ್ಲೆಂಡ್ ನ 4ನೇ ಅತ್ಯಂತ ದುಬಾರಿ ಐಪಿಎಲ್ ಆಟಗಾರ ಇವರಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?