IPL Auction 2022 ಹರ್ಷಲ್ ಪಟೇಲ್‌ ಮತ್ತೆ ಆರ್‌ಸಿಬಿ ಪಾಲು, 10.75 ಕೋಟಿ ರೂಗೆ ಖರೀದಿ!

By Suvarna NewsFirst Published Feb 12, 2022, 2:20 PM IST
Highlights
  • ಕಳೆದ ಆವೃತ್ತಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ
  • ಆರ್‌ಸಿಬಿ ತಂಡದ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಮಿಂಚಿದ್ದ ಪಟೇಲ್
  • 10.75 ಕೋಟಿ ರೂಪಾಯಿ ನೀಡಿ ಆರ್‌ಸಿಬಿ ಖರೀದಿ

ಬೆಂಗಳೂರು(ಫೆ.12):  ಐಪಿಎಲ್ ಹರಾಜು(IPL Auction 2022) ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಳೆದು ತೂಗಿ ಆಟಗಾರರನ್ನು ಖರೀದಿಸುತ್ತಿದೆ. ದುಬಾರಿ ಬೆಲೆ ನೀಡಿ ಸೌತ್ ಆಫ್ರಿಕಾ ಬ್ಯಾಟ್ಸ್‌ಮನ್ ಫಾಫ್ ಡುಪ್ಲೆಸಿಸ್ ಖರೀದಿಸಿದ್ದ ಆರ್‌ಸಿಬಿ ಇದೀಗ ವೇಗಿ ಹರ್ಷಲ್ ಪಟೇಲ್‌ಗೆ 10.75 ಕೋಟಿ ರೂಪಾಯಿ ನೀಡಿದೆ. ಈ ಮೂಲಕ ಹರ್ಷಲ್ ಪಟೇಲ್ ಮತ್ತೆ  ಆರ್‌ಸಿಬಿ ತಂಡಕ್ಕೆ ವಾಪಸ್ ಆಗಿದ್ದಾರೆ.

ಹರ್ಷಲ್ ಪಟೇಲ್(Harshal Patel) ಖರೀದಿಸಲು ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ತೀವ್ರ ಪೈಪೋಟಿ ನಡೆಸಿತ್ತು. ಆದರೆ ಪಟ್ಟು ಬಿಡದ ಆರ್‌ಸಿಬಿ 10.75 ಕೋಟಿ ರೂಪಾಯಿ ನೀಡಿದ ಡೆತ್ ಓವರ್ ಸ್ಪೆಷಲಿಸ್ಟ್ ವೇಗಿಯನ್ನು ಖರೀದಿಸಿದೆ. 

IPL Auction 2022 : ಶ್ರೇಯಸ್ ಅಯ್ಯರ್ ಜಾಕ್ ಪಾಟ್, 7 ಕೋಟಿಗೆ RCB ಸೇರಿದ ಡು ಪ್ಲೆಸಿಸ್

2021ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಪರ ಮಿಂಚಿನ ಪ್ರದರ್ಶನ ನೀಡಿದ್ದ ಹರ್ಷಲ್ ಪಟೇಲ್ 15 ಪಂದ್ಯದಿಂದ 32 ವಿಕೆಟ್ ಕಬಳಿಸಿದ್ದರು. ಈ ಮೂಲಕ ಪರ್ಪಲ್ ಕ್ಯಾಪ್ ಕಿರೀಟ ಪಡೆದುಕೊಂಡಿದ್ದರು. ಈ ಕಾರಣದಿಂದ ಹರ್ಷಲ್ ಪಟೇಲ್ ಖರೀದಿಗೆ ಹಲವು ಫ್ರಾಂಚೈಸಿಗಳು ಮುಗಿಬಿದ್ದಿತ್ತು. 

IPL Auction 2022 : ಪಂಜಾಬ್ ತಂಡಕ್ಕೆ ಧವನ್, ರಾಜಸ್ಥಾನ ಪಾಲಾದ ಅಶ್ವಿನ್

ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೇರಲು ಹರ್ಷಲ್ ಪಟೇಲ್ ಬೌಲಿಂಗ್ ಪ್ರದರ್ಶನ ಕೂಡ ಪ್ರಮುಖ ಕಾರಣವಾಗಿತ್ತು. 

ಇದು ವರೆಗೆ ಐಪಿಎಲ್ ಟೂರ್ನಿಯಲ್ಲಿ  ಹರ್ಷಲ್ ಪಟೇಲ್ 63 ಪಂದ್ಯಗಳನ್ನು ಆಡಿದ್ದಾರೆ. ಓಟ್ಟು 78 ವಿಕೆಟ್ ಕಬಳಿಸಿದ್ದಾರೆ. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿ:
ಫಾಫ್ ಡುಪ್ಲೆಸಿಸ್: 7 ಕೋಟಿ ರೂಪಾಯಿ
ಹರ್ಷಲ್ ಪಟೇಲ್ : 10.75 ಕೋಟಿ ರೂಪಾಯಿ
ವಾನಿಂದು ಹಸರಂಗ : 10.75 ಕೋಟಿ ರೂಪಾಯಿ
ದಿನೇಶ್ ಕಾರ್ತಿಕ್ :  5.50 ಕೋಟಿ ರೂಪಾಯಿ
ಜೋಶ್ ಹೆಜಲ್‌ವುಡ್ : 7.75 ಕೋಟಿ ರೂಪಾಯಿ
ಶೆಹಬಾಜ್ ಅಹಮ್ಮದ್ : 2.40 ಕೋಟಿ ರುಪಾಯಿ
ಆಕಾಶ್ ದೀಪ್  : 20 ಲಕ್ಷ ರೂಪಾಯಿ
ಅನೂಜ್ ರಾವತ್  :3.40 ಕೋಟಿ ರುಪಾಯಿ

ಐಪಿಎಲ್ ಟ್ರೋಫಿ
2008:  ರಾಜಸ್ಥಾನ ರಾಯಲ್ಸ್ 
2009:    ಡೆಕ್ಕನ್ ಚಾರ್ಜಸ್ 
2010: ಚೆನ್ನೈ ಸೂಪರ್ ಕಿಂಗ್ಸ್ 
 2011:   ಚೆನ್ನೈ ಸೂಪರ್ ಕಿಂಗ್ಸ್
2012:   ಕೋಲ್ಕತಾ ನೈಟ್ ರೈಡರ್ಸ್ 
2013:    ಮುಂಬೈ ಇಂಡಿಯನ್ಸ್
2014:   ಕೋಲ್ಕತಾ ನೈಟ್ ರೈಡರ್ಸ್
2015:   ಮುಂಬೈ ಇಂಡಿಯನ್ಸ್ 
2016:   ಸನ್‌ರೈಸರ್ಸ್ ಹದರಾಬಾದ್
2017:   ಮುಂಬೈ ಇಂಡಿಯನ್ಸ್
2018:   ಚೆನ್ನೈ ಸೂಪರ್ ಕಿಂಗ್ಸ್
2019:ಮುಂಬೈ ಇಂಡಿಯನ್ಸ್  
2020:   ಮುಂಬೈ ಇಂಡಿಯನ್ಸ್ 
2021:  ಚೆನ್ನೈ ಸೂಪರ್ ಕಿಂಗ್ಸ್  

ಐಪಿಎಲ್ ರನ್ನರ್ ಅಪ್
2008: ಚೆನ್ನೈ ಸೂಪರ್ ಕಿಂಗ್ಸ್
2009:   ರಾಯಲ್ ಚಾಲೆಂಜರ್ಸ್ ಬೆಂಗಳೂರು
2010: ಮುಂಬೈ ಇಂಡಿಯನ್ಸ್
 2011:  ರಾಯಲ್ ಚಾಲೆಂಜರ್ಸ್ ಬೆಂಗಳೂರು
2012:   ಚೆನ್ನೈ ಸೂಪರ್ ಕಿಂಗ್ಸ್
2013:    ಚೆನ್ನೈ ಸೂಪರ್ ಕಿಂಗ್ಸ್
2014:   ಕಿಂಗ್ಸ್ ಇಲೆವೆನ್ ಪಂಜಾಬ್
2015:   ಚೆನ್ನೈ ಸೂಪರ್ ಕಿಂಗ್ಸ್ 
2016:   ರಾಯಲ್ ಚಾಲೆಂಜರ್ಸ್ ಬೆಂಗಳೂರು
2017:   ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್
2018:   ಸನ್ ರೈಸರ್ಸ್ ಹೈದರಾಬಾದ್
2019: ಚೆನ್ನೈ ಸೂಪರ್ ಕಿಂಗ್ಸ್  
2020:   ಡೆಲ್ಲಿ ಕ್ಯಾಪಿಟಲ್ಸ್
2021:  ಕೋಲ್ಕತಾ ನೈಟ್ ರೈಡರ್ಸ್

click me!