IPL Auction 2022 : ಶ್ರೇಯಸ್ ಅಯ್ಯರ್ ಜಾಕ್ ಪಾಟ್, 7 ಕೋಟಿಗೆ RCB ಸೇರಿದ ಡು ಪ್ಲೆಸಿಸ್
ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ ಗೆ ಜಾಕ್ ಪಾಟ್
12.25 ಕೋಟಿ ರೂಪಾಯಿಗೆ ಕೋಲ್ಕತ ನೈಟ್ ರೈಡರ್ಸ್ ಸೇರಿದ ಶ್ರೇಯಸ್
ಆರ್ ಸಿಬಿ ತಂಡದಲ್ಲಿ ಎಬಿಡಿಯಿಂದ ತೆರವಾದ ಸ್ಥಾನಕ್ಕೆ ಬಂದ ಪ್ಲೆಸಿಸ್
ಬೆಂಗಳೂರು (ಫೆ.12): ಟೀಂ ಇಂಡಿಯಾದ (Team India)ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ (Shreyas Iyer) ಐಪಿಎಲ್ ಹರಾಜಿನಲ್ಲಿ (IPL Auction 2022 )ಜಾಕ್ ಪಾಟ್ ಹೊಡೆದಿದ್ದಾರೆ. ನಾಯಕ ಸ್ಥಾನಕ್ಕಾಗಿ ಆರ್ ಸಿಬಿ (RCB), ಕೆಕೆಆರ್ (KKR) ತಂಡದ ರಾಡಾರ್ ನಲ್ಲಿದ್ದ ಸ್ಟಾರ್ ಬ್ಯಾಟ್ಸ್ ಮನ್ ಗೆ ದೊಡ್ಡ ಬಿಡ್ ಮಾಡಿದ ಮಾಜಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ತಂಡ 12.25 ಕೋಟಿ ರೂಪಾಯಿಗೆ ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ದಕ್ಷಿಣ ಆಫ್ರಿಕಾದ ಸ್ಟಾರ್ ವೇಗಿ ಕಗಿಸೋ ರಬಾಡ (Kagiso Rabada) ಪಂಜಾಬ್ ಕಿಂಗ್ಸ್ (Punjab Kings) ತಂಡದ ಪಾಲಾದರೆ, ರಾಜಸ್ಥಾನ ರಾಯಲ್ಸ್ ತಂಡ ನ್ಯೂಜಿಲೆಂಡ್ ನ ಸೂಪರ್ ಸ್ಟಾರ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ (Trent Boult) ಅವರನ್ನು ಖರೀದಿ ಮಾಡಿತು. ಶ್ರೇಯಸ್ ಅಯ್ಯರ್ ಖರೀದಿಗೆ ವಿಫಲ ಬಿಡ್ ಸಲ್ಲಿಸಿದ ಆರ್ ಸಿಬಿ, 7 ಕೋಟಿ ರೂಪಾಯಿಗೆ ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್ ಮನ್ ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿಸಲು ಯಶ ಕಂಡಿದೆ.
ಈವರೆಗಿನ ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಬಿಡ್ ಆದ ಆಟಗಾರ ಶ್ರೇಯಸ್ ಅಯ್ಯರ್ ಎನಿಸಿದ್ದಾರೆ. ಡೆಲ್ಲಿ ಹಾಗೂ ಗುಜರಾತ್ ತಂಡಗಳ ನಡುವಿನ ಬಿಡ್ಡಿಂಗ್ ವಾರ್ ನಲ್ಲಿ ಕೆಲವೇ ಕ್ಷಣದಲ್ಲಿ ಶ್ರೇಯಸ್ ಅಯ್ಯರ್ ಅವರ ಬೆಲೆ 10 ಕೋಟಿ ದಾಟಿತ್ತು. ಕೊನೆಗೆ 12.25 ಕೋಟಿ ರೂಪಾಯಿಗೆ ಕೆಕೆಆರ್ ತಂಡ ಶ್ರೇಯಸ್ ಅಯ್ಯರ್ ಅವರನ್ನು ಖರೀದಿ ಮಾಡುವ ಮೂಲಕ ನಾಯಕತ್ವ ಗೊಂದಲವನ್ನು ನಿವಾರಿಸಿಕೊಂಡಿದೆ.
ನ್ಯೂಜಿಲೆಂಡ್ ತಂಡದ ಅಗ್ರ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು 8 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿದೆ. ಬೌಲ್ಟ್ ಅವರ ಮೊತ್ತ 5 ಕೋಟಿ ದಾಟಿದ ಬಳಿಕ ಆರ್ ಸಿಬಿ ಬಿಡ್ ನಿಂದ ಹಿಂದೆ ಸರಿದರೆ, ಮುಂಬೈ ಜೊತೆ ಹೋರಾಟ ನಡೆಸಿ ರಾಜಸ್ಥಾನ ರಾಯಲ್ಸ್ ಬೌಲ್ಟ್ ಅವರನ್ನು ಖರೀದಿ ಮಾಡಿತು. ದಕ್ಷಿಣ ಆಫ್ರಿಕಾದ ವೇಗಿ ಕಗೀಸೋ ರಬಾಡ ಕೂಡ ದೊಡ್ಡ ಮಟ್ಟದ ಬಿಡ್ ಅನ್ನು ಪಡೆದುಕೊಂಡರು. ಅವರಿಗೆ ಡೆಲ್ಲಿ ಹಾಗೂ ಗುಜರಾತ್ ಹೆಚ್ಚಿನ ಬಿಡ್ ಸಲ್ಲಿಸಿದರೆ, ಕೊನೆಗೆ ಪಂಜಾಬ್ ಕಿಂಗ್ಸ್ ತಂಡ ಇವರನ್ನು ಖರೀದಿಸಿತು.
ಇನ್ನು ಆರ್ ಸಿಬಿ ತಂಡದಲ್ಲಿ ದಕ್ಷಿಣ ಆಫ್ರಿಕಾ ಮೂಲದ ಆಟಗಾರರ ಸಂಪ್ರದಾಯ ಮುಂದುವರಿದಿದೆ. ಎಬಿಡಿ ನಿವೃತ್ತಿ ಬಳಿಕ ಅವರ ಸ್ಥಾನಕ್ಕೆ ಅವರ ಶಾಲಾ ಸಹಪಾಠಿ ಫಾಫ್ ಡು ಪ್ಲೆಸಿಸ್ (Faf du Plessis) ಬಂದಿದ್ದಾರೆ. 7 ಕೋಟಿ ರೂಪಾಯಿಗೆ ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿ ಮಾಡಲು ತಂಡ ಯಶಸ್ವಿಯಾಯಿತು. ಸಿಎಸ್ ಕೆ ತಂಡ ಕೂಡ ಇವರ ಖರೀದಿಗೆ ಪ್ರಯತ್ನ ಮಾಡಿತಾದರೂ 3 ಕೋಟಿಯವರೆಗೆ ಮಾತ್ರವೇ ಬಿಡ್ ಮಾಡುವಲ್ಲಿ ಯಶ ಕಂಡಿತು.
IPL Auction 2022 Live: 12.25 ಕೋಟಿ ಮೊತ್ತಕ್ಕೆ ಶ್ರೇಯಸ್ ಅಯ್ಯರ್ ಹರಾಜು, ಕೆಕೆಆರ್ ಸಾರಥ್ಯ?...
ಐಪಿಎಲ್ ಮೆಗಾ ಹರಾಜಿನಲ್ಲಿ ಒಟ್ಟು 600 ಆಟಗಾರರು ಪಾಲ್ಗೊಳ್ಳುತ್ತಿದ್ದು, ಈ ಪೈಕಿ 48 ಆಟಗಾರರು ತಮ್ಮ ಮೂಲಬೆಲೆಯನ್ನು 2 ಕೋಟಿ ರುಪಾಯಿಗೆ ನಿಗದಿ ಮಾಡಿಕೊಂಡಿದ್ದರೆ, 20 ಆಟಗಾರರು 1.5 ಕೋಟಿ ರುಪಾಯಿ ಮೂಲಬೆಲೆ ಹೊಂದಿದ್ದಾರೆ. ಇನ್ನು 34 ಆಟಗಾರರ ಮೂಲ ಬೆಲೆ 1 ಕೋಟಿ ರುಪಾಯಿ ಇದೆ. ಐಪಿಎಲ್ 2022 ರ ಮೆಗಾ ಹರಾಜಿನ ಒಂದು ದಿನ ಮುನ್ನ ಬಿಸಿಸಿಐ ಹರಾಜು ರಿಜಿಸ್ಟರ್‌ಗೆ ಮತ್ತೆ 10 ಹೆಸರುಗಳನ್ನು ಸೇರಿಸಿದೆ, ಇದರೊಂದಿಗೆ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಸಂಖ್ಯೆ 600ಕ್ಕೆ ಏರಿದೆ.
IPL Auction 2022 : ಪಂಜಾಬ್ ತಂಡಕ್ಕೆ ಧವನ್, ರಾಜಸ್ಥಾನ ಪಾಲಾದ ಅಶ್ವಿನ್
ಆರನ್ ಹಾರ್ಡಿ, ಲ್ಯಾನ್ಸ್ ಮೋರಿಸ್, ನಿವೇತನ್ ರಾಧಾಕೃಷ್ಣನ್, ಅಗ್ನಿವೇಶ್ ಅಯಾಚಿ, ಹಾರ್ದಿಕ್ ತಮೋರ್, ನಿತೀಶ್ ಕುಮಾರ್ ರೆಡ್ಡಿ, ಮಿಹಿರ್ ಹಿರ್ವಾನಿ, ಮೋನು ಕುಮಾರ್, ರೋಹನ್ ರಾಣಾ, ಸಾಯಿರಾಜ್ ಪಾಟೀಲ್ ಸೇರ್ಪಡೆಗೊಂಡ ಆಟಗಾರರು. ಹಾರ್ಡಿ, ಮೋರಿಸ್ ಮತ್ತು ರಾಧಾಕೃಷ್ಣನ್ ಆಸ್ಟ್ರೇಲಿಯಾದವರಾಗಿದ್ದರೆ, ಉಳಿದವರೆಲ್ಲರೂ ಭಾರತದ ಆಟಗಾರರಾಗಿದ್ದಾರೆ.
ಈವರೆಗೆ ಹರಾಜಾದ ಆಟಗಾರರ ಕಂಪ್ಲೀಟ್ ಡೀಟೈಲ್ಸ್
ಶಿಖರ್ ಧವನ್ - 8.25 Cr for ಪಂಜಾಬ್ ಕಿಂಗ್ಸ್
ರವಿಚಂದ್ರನ್ ಅಶ್ವಿನ್ - 5 Cr for ರಾಜಸ್ಥಾನ ರಾಯಲ್ಸ್
ಪ್ಯಾಟ್ ಕಮಿನ್ಸ್ - 7.25 Cr for ಕೋಲ್ಕತಾ ನೈಟ್ ರೈಡರ್ಸ್
ಕಗಿಸೋ ರಬಾಡ - 9.25 Cr for ಪಂಜಾಬ್ ಕಿಂಗ್ಸ್
ಟ್ರೆಂಟ್ ಬೌಲ್ಟ್- 8 Cr for ರಾಜಸ್ಥಾನ ರಾಯಲ್ಸ್
ಶ್ರೇಯಸ್ ಅಯ್ಯರ್ - 12.25 Cr for ಕೋಲ್ಕತಾ ನೈಟ್ ರೈಡರ್ಸ್
ಮೊಹಮ್ಮದ್ ಶಮಿ - 6.25 Cr for ಗುಜರಾತ್ ಟೈಟಾನ್ಸ್
ಫಾಫ್ ಡು ಪ್ಲೆಸಿಸ್ - 7 Cr for ರಾಯಲ್ ಚಾಲೆಂಜರ್ಸ್ ಬೆಂಗಳೂರು
ಕ್ವಿಂಟನ್ ಡಿ ಕಾಕ್ - 6.75 Cr for ಲಖನೌ ಸೂಪರ್ ಜೈಂಟ್ಸ್
ಡೇವಿಡ್ ವಾರ್ನರ್ - 6.25 Cr for ಡೆಲ್ಲಿ ಕ್ಯಾಪಿಟಲ್ಸ್