IPL Auction 2022 : ಪಂಜಾಬ್ ತಂಡಕ್ಕೆ ಧವನ್, ರಾಜಸ್ಥಾನ ಪಾಲಾದ ಅಶ್ವಿನ್

By Suvarna News  |  First Published Feb 12, 2022, 12:29 PM IST

ಐಪಿಎಲ್ 2022 ಹರಾಜಿನಲ್ಲಿ ಖರೀದಿಯಾದ ಮೊದಲ ಪ್ಲೇಯರ್
ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ ನಡುವೆ ಧವನ್ ಖರೀದಿಗೆ ಪೈಪೋಟಿ
8.25 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಿದ ಧವನ್


ಬೆಂಗಳೂರು (ಫೆ. 12): ಐಪಿಎಲ್ ಮೆಗಾ ಹರಾಜು ಭರ್ಜರಿಯಾಗಿ ಆರಂಭಗೊಂಡಿದೆ. ಟೀಂ ಇಂಡಿಯಾದ ಡ್ಯಾಶಿಂಗ್ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ (Shikhar Dhawan) ಅವರ ಹೆಸರಿನೊಂದಿಗೆ ಈ ಬಾರಿಯ ಹರಾಜು ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಸಾಕಷ್ಟು ದೊಡ್ಡ ಮೊತ್ತದ ಪೈಪೋಟಿಯೊಂದಿಗೆ ಶಿಖರ್ ಧವನ್ 8.25 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾದರೆ, 2ನೇ ಆಟಗಾರನಾಗಿ ಹರಾಜಿಗೆ ಒಳಪಟ್ಟ ಆರ್.ಅಶ್ವಿನ್ ಅವರನ್ನು ಐದು ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ (Rajathan) ತಂಡ ಖರೀದಿಸಿದೆ.

ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ನಡುವೆ ಬಿಗಿ ಪೈಪೋಟಿ ನಡೆಯಿತು. ಎಡಗೈ ಬ್ಯಾಟರ್ ಧವನ್ ಖರೀದಿಸಲು ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿಯಿಂದಾಗಿ ಕೆಲ ಸಮಯದಲ್ಲಿಯೇ ಅವರ ಬೆಲೆ 5 ಕೋಟಿ ದಾಟಿತ್ತು. ಕೊನೆಗೆ  8.25 ಕೋಟಿಗೆ ಶಿಖರ್ ಧವನ್ ಅವರನ್ನು ಖರೀದಿಸಲು ಪಂಜಾಬ್ ಕಿಂಗ್ಸ್ ಯಶ ಕಂಡಿತು. ಕಳೆದ ಆವೃತ್ತಿಯಲ್ಲಿ ಶಿಖರ್ ಧವನ್‌ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರತಿನಿಧಿಸಿದ್ದರು ಎಂಬುವುದು ಉಲ್ಲೇಖನೀಯ. ಇನ್ನೊಂದೆಡೆ ಆರ್.ಅಶ್ವಿನ್ ಅವರ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಪೈಪೋಟಿ ನಡೆದು, ಕೊನೆಗೆ 5 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ಸೇರ್ಪಡೆಯಾದರು. ಕಳೆದ ಆವೃತ್ತಿಯಲ್ಲಿ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಾಗಿದ್ದರು.

IPL Auction 2022 Live : ಐಪಿಎಲ್ ಮೆಗಾ ಹರಾಜು ಆರಂಭ, ಇಂದು ಅಗ್ರ 161 ಆಟಗಾರರ ಅದೃಷ್ಟ ಪರೀಕ್ಷೆ
ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಕೆಕೆಆರ್ ಹಾಗೂ ಗುಜರಾತ್ ಪೈಪೋಟಿ ನಡೆಸಿದವು. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ವೇಗಿ ಪ್ಯಾಟ್ ಕಮಿನ್ಸ್‌ ಅವರಿಗೆ 7.25 ಕೋಟಿ ರುಪಾಯಿ ನೀಡಿ ಕೆಕೆಆರ್ ತನ್ನ ತೆಕ್ಕೆಗೆ ಸೆಳೆದುಕೊಂಡಿತು. 
 

Congratulations to pic.twitter.com/8LepZC7F2R

— IndianPremierLeague (@IPL)


ಐಪಿಎಲ್‌ ಮೆಗಾ ಹರಾಜಿನಲ್ಲಿ ಒಟ್ಟು 600 ಆಟಗಾರರು ಪಾಲ್ಗೊಳ್ಳುತ್ತಿದ್ದು, ಈ ಪೈಕಿ 48 ಆಟಗಾರರು ತಮ್ಮ ಮೂಲಬೆಲೆಯನ್ನು 2 ಕೋಟಿ ರುಪಾಯಿಗೆ ನಿಗದಿ ಮಾಡಿಕೊಂಡಿದ್ದರೆ, 20 ಆಟಗಾರರು 1.5 ಕೋಟಿ ರುಪಾಯಿ ಮೂಲಬೆಲೆ ಹೊಂದಿದ್ದಾರೆ. ಇನ್ನು 34 ಆಟಗಾರರ ಮೂಲ ಬೆಲೆ 1 ಕೋಟಿ ರುಪಾಯಿ ಇದೆ.  ಐಪಿಎಲ್ 2022 ರ ಮೆಗಾ ಹರಾಜಿನ ಒಂದು ದಿನ ಮುನ್ನ ಬಿಸಿಸಿಐ ಹರಾಜು ರಿಜಿಸ್ಟರ್‌ಗೆ ಮತ್ತೆ 10 ಹೆಸರುಗಳನ್ನು ಸೇರಿಸಿದೆ, ಇದರೊಂದಿಗೆ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಸಂಖ್ಯೆ 600ಕ್ಕೆ ಏರಿದೆ. ಆರನ್ ಹಾರ್ಡಿ, ಲ್ಯಾನ್ಸ್ ಮೋರಿಸ್, ನಿವೇತನ್ ರಾಧಾಕೃಷ್ಣನ್, ಅಗ್ನಿವೇಶ್ ಅಯಾಚಿ, ಹಾರ್ದಿಕ್ ತಮೋರ್, ನಿತೀಶ್ ಕುಮಾರ್ ರೆಡ್ಡಿ, ಮಿಹಿರ್ ಹಿರ್ವಾನಿ, ಮೋನು ಕುಮಾರ್, ರೋಹನ್ ರಾಣಾ, ಸಾಯಿರಾಜ್ ಪಾಟೀಲ್ ಸೇರ್ಪಡೆಗೊಂಡ ಆಟಗಾರರು. ಹಾರ್ಡಿ, ಮೋರಿಸ್ ಮತ್ತು ರಾಧಾಕೃಷ್ಣನ್ ಆಸ್ಟ್ರೇಲಿಯಾದವರಾಗಿದ್ದರೆ, ಉಳಿದವರೆಲ್ಲರೂ ಭಾರತದ ಆಟಗಾರರಾಗಿದ್ದಾರೆ.

IPL Auction 2022 : ಏನಿದು RTM ಕಾರ್ಡ್? ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಇರುತ್ತಾ?
ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಪ್ರಮುಖ ಸದಸ್ಯರು ಹರಾಜಿಗಿಲ್ಲ
ಬಿಸಿಸಿಐ (BCCI) ನಿಯಮದ ಕಾರಣ ಇತ್ತೀಚೆಗೆ ವೆಸ್ಟ್ ಇಂಡೀಸ್ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಜಯಿಸಿದ ಭಾರತ ತಂಡದ ಪ್ರಮುಖ ಆಟಗಾರರು ಈ ಬಾರಿ ಹರಾಜಿನಲ್ಲಿ ಇರುವುದಿಲ್ಲ. ಭಾರತದ ಅಂಡರ್ 19 ತಂಡದ ಉಪನಾಯಕ ಶೇಕ್ ರಶೀದ್ (Shaik Rasheed), ವಿಕೆಟ್‌ಕೀಪರ್ ದಿನೇಶ್ ಬಾನಾ (Dinesh Bana), ರವಿಕುಮಾರ್ (Ravi Kumar), ನಿಶಾಂತ್ ಸಿಂಧು (Nishant Sindhu), ಆಂಗ್‌ಕ್ರಿಶ್ ರಘುವಂಶಿ (Angkrish Raghuvanshi), ಮಾನವ್ ಪರಾಖ್ (Manav Parakh), ಗರ್ವ್ ಸಾಂಗ್ವಾನ್ (Garv Sangwan), ಸಿದ್ಧಾರ್ಥ್ ಯಾದವ್ (Siddharth Yadav), ಆರಾಧ್ಯ ಯಾದವ್ (Aaradhya Yadav) ಹೆಸರು ಹರಾಜು ಪಟ್ಟಿಯಲ್ಲಿ ಇರುವುದಿಲ್ಲ. ಅಂಡರ್ 19 ಪ್ಲೇಯರ್ ಗಳು ಹರಾಜಿನಲ್ಲಿ ಭಾಗಿಯಾಗಲು,  ಕನಿಷ್ಠ ಒಂದು ಪ್ರಥಮ ದರ್ಜೆ ಪಂದ್ಯ ಅಥವಾ ಲಿಸ್ಟ್ ಎ ಪಂದ್ಯವನ್ನು ಆಡಿರಬೇಕು ಎಂದು ಬಿಸಿಸಿಐ ಹೇಳಿದೆ. ದೇಶೀಯ ಕ್ರಿಕೆಟ್ ನಲ್ಲಿ ಆಡಿದ ಅನುಭವ ಇಲ್ಲದೇ ಇದ್ದಲ್ಲಿ ಆಯಾ ಆಟಗಾರ ಹರಾಜು ನಡೆಯುವ ಮುನ್ನ 19 ವರ್ಷ ವಯಸ್ಸಿನವರಾಗಿರಬೇಕು ಎಂದು ಬಿಸಿಸಿಐ ಹೇಳಿದೆ.

ಈ ಬಾರಿಯಿಂದ ಟಾಟಾ ಐಪಿಎಲ್: ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಈ ಬಾರಿ ಬದಲಾಗಿದೆ. ಇಲ್ಲಿವರೆಗೂ ವಿವೋ ಐಪಿಎಲ್ ಹೆಸರಿನಿಂದ ಗುರುತಿಸಿಕೊಂಡಿದ್ದ ಟೂರ್ನಿ ಈ ಬಾರಿಯಿಂದ ಟಾಟಾ ಐಪಿಎಲ್ ಎನ್ನುವ ಹೆಸರಿನಲ್ಲಿ ಗುರುತಿಸಿಕೊಳ್ಳಲಿದೆ. 2022ರ ಆವೃತ್ತಿಗೂ ಮುನ್ನ ಐಪಿಎಲ್ ನ ಟೈಟಲ್ ಸ್ಪಾನ್ಸರ್ ಆಗಿದ್ದ ವಿವೋ ತನ್ನ ಪ್ರಾಯೋಜಕತ್ವ ಒಪ್ಪಂದವನ್ನು ಟಾಟಾಗೆ ನೀಡಿದ್ದು, ಐಪಿಎಲ್ ಆಡಳಿತ ಮಂಡಳಿ ಕೂಡ ಇದಕ್ಕೆ ಅನುಮೋದನೆ ನೀಡಿದೆ.

ಐಪಿಎಲ್ ಆಟಗಾರರ ಹರಾಜು ಎರಡು ದಿನಗಳ ಕಾಲ ನಡೆಯಲಿದ್ದು, ಮಿಲಿಯನ್ ಡಾಲರ್ ಕ್ರಿಕೆಟ್‌ ಟೂರ್ನಿಯ ಮೆಗಾ ಹರಾಜಿಗೆ ಬೆಂಗಳೂರಿನ ಖಾಸಗಿ ಹೋಟೆಲ್‌ ಆತಿಥ್ಯ ವಹಿಸಿದೆ. ಹರಾಜಿನಲ್ಲಿ ಒಟ್ಟು 600 ಆಟಗಾರರು ಪಾಲ್ಗೊಳ್ಳಲಿದ್ದು, ಇದರಲ್ಲಿ 380 ಭಾರತೀಯ ಹಾಗೂ 220 ವಿದೇಶಿ ಆಟಗಾರರಾಗಿದ್ದಾರೆ. 228 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದಾರೆ. 355 ಆಟಗಾರರು ಈ ವರೆಗೂ ಅಂ.ರಾ.ಕ್ರಿಕೆಟ್‌ನಲ್ಲಿ ಆಡಿಲ್ಲ. ಐಸಿಸಿ ಅಸೋಸಿಯೇಟ್‌ ರಾಷ್ಟ್ರಗಳ ಒಟ್ಟು 7 ಆಟಗಾರರು ಹರಾಜಿನಲ್ಲಿದ್ದಾರೆ.

Tap to resize

Latest Videos

 

click me!