IPL Auction 2022 ಬ್ಯಾಲೆನ್ಸ್ ತಂಡ ಕಟ್ಟಿದ್ದ ಸಿಎಸ್‌ಕೆ, ಹೀಗಿದೆ ಹರಾಜಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಟೀಮ್!

By Suvarna News  |  First Published Feb 13, 2022, 10:05 PM IST
  • ಹರಾಜಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೇಗಿದೆ?
  • ಖರೀದಿಯಲ್ಲಿ ದೀಪಕ್ ಚಹಾರ್ ದುಬಾರಿ ಖರೀದಿ
  • ಕನ್ನಡಿದ ರಾಬಿನ್ ಉತ್ತಪ್ಪ ಮತ್ತೆ ಚೆನ್ನೈ ತಂಡದ ಪಾಲು

ಬೆಂಗಳೂರು(ಫೆ.13):  15ನೇ ಆವೃತ್ತಿ ಐಪಿಎಲ್(IPL) ಟೂರ್ನಿಗೆ ಎಲ್ಲಾ ತಂಡಗಳು ಬಲಿಷ್ಠ ತಂಡ ಕಟ್ಟಿದೆ. ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಅತ್ಯುತ್ತಮ ಆಟಗಾರರನ್ನು ಖರೀದಿಸಿ ಸಮತೋಲನ ತಂಡ ಕಟ್ಟಿದೆ. ಚೆನ್ನೈ(CSK) ತಂಡದ ಮತ್ತೊಂದು ವಿಶೇಷ ಅಂದರೆ ಕೋರ್ ತಂಡವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಕೆಲ ವರ್ಷಗಳಿಂದ ಚೆನ್ನೈ ಪರ ಆಡಿದ್ದ ಹಲವರು ಮತ್ತೆ ಸಿಎಸ್‌ಕೆ ಸೇರಿಕಕೊಂಡಿದ್ದಾರೆ.

ಚೆನ್ನೈ ಖರೀದಿಸಿದ ಆಟಗಾರರ ಪೈಕಿ ದೀಪಕ್ ಚಹಾರ್(Deepak Chahar) ದುಬಾರಿ ಖರೀದಿಯಾಗಿದೆ. ದೀಪಕ್ ಚಹಾರ್‌ಗೆ 14 ಕೋಟಿ ರೂಪಾಯಿ ನೀಡಿದೆ. ಮಹೇಶ ತೀಕ್ಸಾನಾಗೆ ಚೆನ್ನೈ ಸೂಪರ್ ಕಿಂಗ್ಸ್ 7 ಕೋಟಿ ರೂಪಾಯಿ ನೀಡಿದೆ. ಇದು ಎರಡನೇ ದುಬಾರಿ ಖರೀದಿಯಾಗಿದೆ. ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್  ತಂಡದ ಪರ ಆಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಮತ್ತೆ ಸಿಎಸ್‌ಕೆ ಸೇರಿಕೊಂಡಿದ್ದಾರೆ. ಉತ್ತಪ್ಪಾಗೆ 2 ಕೋಟಿ ರೂಪಾಯಿ ನೀಡಿ ಸಿಎಸ್‌ಕೆ ಖರೀದಿಸಿದೆ.

Latest Videos

undefined

IPL Auction 2022 ಹರಾಜಿನ ಬಳಿಕ ಹೀಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ!

ರಾಬಿನ್ ಉತ್ತಪ್ಪ: 2 ಕೋಟಿ ರೂಪಾಯಿ
ಡ್ವೇನ್ ಬ್ರಾವೋ : 4.4 ಕೋಟಿ ರೂಪಾಯಿ
ಅಂಬಾಟಿ ರಾಯುಡು : 6.75 ಕೋಟಿ ರೂಪಾಯಿ
ದೀಪಕ್ ಚಹಾರ್ : 14 ಕೋಟಿ ರೂಪಾಯಿ
ಶಿವಂ ದುಬೆ : 4 ಕೋಟಿ ರೂಪಾಯಿ
ತುಷಾರ್ ದೇಶಪಾಂಡೆ : 20 ಲಕ್ಷ ರೂಪಾಯಿ
ಕ್ರಿಸ್ ಜೋರ್ಡಾನ್ : 3.6 ಕೋಟಿ ರೂಪಾಯಿ
ಮಹೇಶ ತೀಕ್ಸಾನ : 7 ಕೋಟಿ ರೂಪಾಯಿ
ರಾಜವರ್ಧನ್ ಹಂಗಾರ್ಗೇಕರ್ : 1.5 ಕೋಟಿ ರೂಪಾಯಿ
ಸಿಮ್ರಜಿತ್ ಸಿಂಗ್ : 20  ಲಕ್ಷ ರೂಪಾಯಿ
ಡೇವೋನ್ ಕಾನ್ವೇ : 1 ಕೋಟಿ ರೂಪಾಯಿ
ಡ್ವೇನ್ ಪ್ರೆಟೋರಿಯಸ್ : 50 ಲಕ್ಷ ರೂಪಾಯಿ
ಮಿಚೆಲ್ ಸ್ಯಾಂಟ್ನರ್ : 1.9 ಕೋಟಿ ರೂಪಾಯಿ
ಆ್ಯಡಮ್ ಮಿಲ್ನೆ : 1.9 ಕೋಟಿ ರೂಪಾಯಿ
ಶುಭಾಂಶು ಸೇನಾಪತಿ : 20 ಲಕ್ಷ ರೂಪಾಯಿ
ಮುಕೇಶ್ ಚೌಧರಿ : 20 ಲಕ್ಷ ರೂಪಾಯಿ
ಪ್ರಶಾಂತ್ ಸೋಲಂಕಿ : 1.2 ಕೋಟಿ ರೂಪಾಯಿ
ಭಗತ್ ವರ್ಮಾ: 20 ಲಕ್ಷ ರೂಪಾಯಿ
ಹರಿ ನಿಶಾಂತ್ : 20 ಲಕ್ಷ ರೂಪಾಯಿ
ಎನ್ ಜಗದೀಶನ್ : 20 ಲಕ್ಷ ರೂಪಾಯಿ
ಕೆಎಂ ಆಸಿಫ್ : 20 ಲಕ್ಷ ರೂಪಾಯಿ

IPL Auction 2022 ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗಿ ದಾಖಲೆ ಬರೆದ ಕ್ರಿಕೆಟಿಗರ ಲಿಸ್ಟ್!

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಟ್ಟು 25 ಆಟಗಾರರನ್ನು ಹೊಂದಿದೆ. ಇದರಲ್ಲಿ 17 ಭಾರತೀಯರು ಹಾಗೂ 8 ವಿದೇಶಿ ಆಟಗಾರರನ್ನು ಹೊಂದಿದೆ.  

ಸಿಎಸ್‌ಕೆ ತಂಡದಲ್ಲಿ ಉಳಿಸಿಕೊಂಡ ಆಟಗಾರರು:
ಎಂ.ಎಸ್.ಧೋನಿ
ರವೀಂದ್ರ ಜಡೇಜಾ
ಮೊಯಿನ್ ಆಲಿ
ರುತುರಾಜ್ ಗಾಯಕ್ವಾಡ್

ಹರಾಜಿನಲ್ಲಿ ಚೆನ್ನೈ ಖರೀದಿಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ. ಆದರೆ ಚೆನ್ನೈ ಸೇರಿದಂತೆ ಭಾರತದ ಕ್ರಿಕೆಟ್ ಪ್ರೇಮಿಗಳು ಸುರೇಶ್ ರೈನಾ(Suresh Raina) ವಿಚಾರದಲ್ಲಿ ಬೇಸರಗೊಂಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಸುರೇಶ್ ರೈನಾ ಖರೀದಿಗೆ ಚೆನ್ನೈ ನಿರಾಸಕ್ತಿ ತೋರಿದರೆ, ಇತರ ಫ್ರಾಂಚೈಸಿಗಳು ಮುಂದೆ ಬರಲಿಲ್ಲ. ಪರಿಣಾಮ ಇದೇ ಮೊದಲ ಬಾರಿಗೆ ಸುರೇಶ್ ರೈನಾ ಅನ್‌ಸೋಲ್ಡ್ ಆಗಿ ಉಳಿದಿಕೊಂಡರು.

IPL Auction 2022 ಕೊನೆಗೂ ಕನ್ನಡಿಗನ ಖರೀದಿಸಿದ ಆರ್‌ಸಿಬಿ, ತಂಡದಲ್ಲಿರುವ ಏಕೈಕ ಕರ್ನಾಟಕ ಪ್ಲೇಯರ್!

ಚೆನ್ನೈ ಸೂಪರ್ ಕಿಂಗ್ಸ್:
ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ಯಶಸ್ವಿ ತಂಡವಾಗಿದೆ. ಗರಿಷ್ಠ ಟ್ರೋಫಿ ಗೆದ್ದ ತಂಡದಲ್ಲಿ ಎರಡನೇ ಸ್ಥಾನದಲ್ಲಿದೆ. ಚೆನ್ನೈ 2010, 2011, 2018 ಹಾಗೂ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಎಂ.ಎಸ್.ಧೋನಿ(MS Dhoni) ನಾಯಕತ್ವದ ಸಿಎಸ್‌ಕೆ ಐದು ಬಾರಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಐಪಿಎಲ್ ಟ್ರೋಫಿ
2008:  ರಾಜಸ್ಥಾನ ರಾಯಲ್ಸ್ 
2009:    ಡೆಕ್ಕನ್ ಚಾರ್ಜಸ್ 
2010: ಚೆನ್ನೈ ಸೂಪರ್ ಕಿಂಗ್ಸ್ 
 2011:   ಚೆನ್ನೈ ಸೂಪರ್ ಕಿಂಗ್ಸ್
2012:   ಕೋಲ್ಕತಾ ನೈಟ್ ರೈಡರ್ಸ್ 
2013:    ಮುಂಬೈ ಇಂಡಿಯನ್ಸ್
2014:   ಕೋಲ್ಕತಾ ನೈಟ್ ರೈಡರ್ಸ್
2015:   ಮುಂಬೈ ಇಂಡಿಯನ್ಸ್ 
2016:   ಸನ್‌ರೈಸರ್ಸ್ ಹದರಾಬಾದ್
2017:   ಮುಂಬೈ ಇಂಡಿಯನ್ಸ್
2018:   ಚೆನ್ನೈ ಸೂಪರ್ ಕಿಂಗ್ಸ್
2019:ಮುಂಬೈ ಇಂಡಿಯನ್ಸ್  
2020:   ಮುಂಬೈ ಇಂಡಿಯನ್ಸ್ 
2021:  ಚೆನ್ನೈ ಸೂಪರ್ ಕಿಂಗ್ಸ್

click me!