ಬೆಂಗಳೂರು(ಫೆ.13): ಐಪಿಎಲ್ ಹರಾಜು 2022(IPL Auction 2022) ಅಂತ್ಯಗೊಂಡಿದೆ. ಎಲ್ಲಾ ತಂಡಗಳು ಪೈಪೋಟಿಗೆ ಬಿದ್ದು ಆಟಗಾರರನ್ನು ಖರೀದಿ ಮಾಡಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(royal challengers bangalore) ತಂಡ ಹರಾಜಿನಲ್ಲಿ ಕೆಲ ದುಬಾರಿ ಖರೀದಿ, ಯುವ ಆಟಗಾರ ಖರೀದಿ ಸೇರಿದಂತೆ ಬ್ಯಾಲೆನ್ಸ್ ಟೀಮ್ ಖರೀದಿಸಿದೆ. ಆನ್ ಪೇಪರ್ ಹೆಚ್ಚು ಸದ್ದು ಮಾಡದಿದ್ದರೂ ಮೈದಾನದಲ್ಲಿ ಅಬ್ಬರಿಸುವ ಸಾಮರ್ಥ್ಯ ಈ ತಂಡಕ್ಕಿದೆ ಅನ್ನೋದು ಗಮನಿಸಬೇಕು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅನುಭವಿ, ಯುವ ಪ್ರತಿಭಾನ್ವಿತ ಆಟಗಾರರನ್ನೊಳಗೊಂಡ ತಂಡ ಕಟ್ಟಿದೆ. ಹರಾಜಿನಲ್ಲಿ 19 ಆಟಗಾರನ್ನು ಆರ್‌ಸಿಬಿ(RCB) ಖರೀದಿಸಿದೆ. ಇನ್ನು ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಒಟ್ಟು 22 ಆಟಗಾರರು ಬೆಂಗಳೂರು ತಂಡದಲ್ಲಿದ್ದಾರೆ. ಈ ಬಾರಿ ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ಹಾಗೂ ಶ್ರೀಲಂಕಾ ಸ್ಪಿನ್ನರ್ ವಾನಿಂದು ಹಸರಂಗಾಗೆ 10.75 ಕೋಟಿ ರೂಪಾಯಿ ನೀಡಿದೆ. ಇದು ಎರಡು ಗರಿಷ್ಠ ಖರೀದಿಯಾಗಿದೆ. ಇನ್ನು ಆರ್‌ಸಿಬಿ ತಂಡದಲ್ಲಿ ಟೀಂ ಇಂಡಿಯಾ ಅಂಡರ್ 19 ತಂಡದ ಸದಸ್ಯ ಅನೀಶ್ವರ್ ಗೌತಮ್ ಸೇರಿಕೊಂಡಿದ್ದಾರೆ. ವಿಶೇಷ ಅಂದರೆ ಅನೀಶ್ವರ್ ಗೌತಮ್ ತಂಡದಲ್ಲಿರುವ ಏಕೈಕ ಕನ್ನಡಿಗನಾಗಿದ್ದಾರೆ.
IPL Auction 2022 ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗಿ ದಾಖಲೆ ಬರೆದ ಕ್ರಿಕೆಟಿಗರ ಲಿಸ್ಟ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿ:
ಫಾಫ್ ಡುಪ್ಲೆಸಿಸ್: 7 ಕೋಟಿ ರೂಪಾಯಿ
ಹರ್ಷಲ್ ಪಟೇಲ್ : 10.75 ಕೋಟಿ ರೂಪಾಯಿ
ವಾನಿಂದು ಹಸರಂಗ : 10.75 ಕೋಟಿ ರೂಪಾಯಿ
ದಿನೇಶ್ ಕಾರ್ತಿಕ್ : 5.50 ಕೋಟಿ ರೂಪಾಯಿ
ಜೋಶ್ ಹೆಜಲ್‌ವುಡ್ : 7.75 ಕೋಟಿ ರೂಪಾಯಿ
ಶೆಹಬಾಜ್ ಅಹಮ್ಮದ್ : 2.40 ಕೋಟಿ ರುಪಾಯಿ
ಆಕಾಶ್ ದೀಪ್ : 20 ಲಕ್ಷ ರೂಪಾಯಿ
ಅನೂಜ್ ರಾವತ್ :3.40 ಕೋಟಿ ರುಪಾಯಿ
ಮಹೀಪಾಲ್ ಲೊಮ್ರೊರ್: 95 ಲಕ್ಷ ರೂಪಾಯಿ
ಫಿನ್ ಅಲೆನ್: 80 ಲಕ್ಷ ರೂಪಾಯಿ
ಶೆರ್ಫಾನೆ ರುದರ್‌ಫೋರ್ಡ್ : 1 ಕೋಟಿ ರೂಪಾಯಿ
ಜೇಸನ್ ಬೆಹ್ರನ್‌ಡ್ರಾಫ್ : 75 ಲಕ್ಷ ರುಪಾಯಿ
ಸುಯಾಶ್ ಪ್ರಭುದೇಸಾಯಿ : 30 ಲಕ್ಷ ರೂಪಾಯಿ
ಚಾಮಾ ಮಿಲಿಂದ್: 25 ಲಕ್ಷ ರೂಪಾಯಿ
ಅನೀಶ್ವರ್ ಗೌತಮ್: 20 ಲಕ್ಷ ರೂಪಾಯಿ
ಜೇಸನ್ ಬೆಹ್ರೆನಡೊರ್ಫ್: 75 ಲಕ್ಷ ರೂಪಾಯಿ
ಕರ್ಣ್ ಶರ್ಮಾ: 50 ಲಕ್ಷ ರೂಪಾಯಿ
ಡೇವಿಡ್ ವಿಲೆ: 2 ಕೋಟಿ ರೂಪಾಯಿ
IPL Auction 2022 ಕೊನೆಗೂ ಕನ್ನಡಿಗನ ಖರೀದಿಸಿದ ಆರ್‌ಸಿಬಿ, ತಂಡದಲ್ಲಿರುವ ಏಕೈಕ ಕರ್ನಾಟಕ ಪ್ಲೇಯರ್!
ಆರ್‌ಸಿಬಿ ಉಳಿಸಿಕೊಂಡ ಆಟಗಾರರು
ವಿರಾಟ್ ಕೊಹ್ಲಿ
ಗ್ಲೆನ್ ಮ್ಯಾಕ್ಸ್‌ವೆಲ್
ಮೊಹಮ್ಮದ್ ಸಿರಾಜ್
ಆರ್‌ಸಿಬಿ ನಾಯಕ ಯಾರು?
ವಿರಾಟ್ ಕೊಹ್ಲಿ ಆರ್‌ಸಿಬಿ ನಾಯತ್ವಕ್ಕೆ ಗುಡ್ ಬೈ ಹೇಳಿದ್ದಾರೆ. 2021ರ ಐಪಿಎಲ್ ಕೊಹ್ಲಿ ನಾಯಕನಾಗಿ ಕೊನೆಯ ಐಪಿಎಲ್ ಸರಣಿಯಾಗಿತ್ತು. 2022ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಹೊಸ ನಾಯಕನ ಅಡಿಯಲ್ಲಿ ಕಣಕ್ಕಿಳಿಯಲಿದೆ. ಸದ್ಯ ತಂಡದಲ್ಲಿರುವ ಆಟಗಾರರ ಪೈಕಿ ಮೂವರು ಕ್ರಿಕೆಟಿಗರು ನಾಯಕತ್ವ ವಹಿಸಿಕೊಳ್ಳಲು ಪೈಪೋಟಿ ನಡೆಸುತ್ತಿದ್ದಾರೆ. ಇದರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ನಾಯಕತ್ವ ನೀಡಲು ಆರ್‌ಸಿಬಿ ಹೆಚ್ಚು ಒಲವು ತೋರಿದೆ. ಆದರೆ ಈ ಕುರಿತು ಯಾವುದು ಅಂತಿಮವಾಗಿಲ್ಲ ಎಂದು ಆರ್‌ಸಿಬಿ ನಿರ್ದೇಶಕ ಮೈಕ್ ಹೆಸನ್ ಹೇಳಿದ್ದಾರೆ.
IPL Auction 2022 ಕನ್ನಡಿಗ ಪ್ರಸಿದ್ಧ್ ಕೃಷ್ಣ ಖರೀದಿಗೆ ಮುಗಿಬಿದ್ದ ಫ್ರಾಂಚೈಸಿ, ದಾಖಲೆ ಮೊತ್ತಕ್ಕೆ ರಾಜಸ್ಥಾನ ಪಾಲು!
ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ನಡುವೆ ಸ್ಪರ್ಧೆ ಇದೆ. ಮ್ಯಾಕ್ಸ್‌ವೆಲ್ ಪಕ್ಕಾ ಟಿ20 ಆಟಗಾರ ಹೀಗಾಗಿ ಮ್ಯಾಕ್ಸ್‍ವೆಲ್‌ನತ್ತ ಒಲವು ಹೆಚ್ಚಿದೆ. ಆದರೆ ಫಾಫ್ ಡುಪ್ಲೆಸಿಸ್ ಸೌತ್ ಆಫ್ರಿಕಾ ತಂಡದ ನಾಯಕನಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಇತ್ತ ಕಳೆದ ಆವೃತ್ತಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಆಟಗಾರನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಏಕಾಏಕಿ ನಾಯಕತ್ವ ನೀಡಿ ಪ್ರದರ್ಶನದ ಮೇಲೆ ಪರಿಣಾಮ ಬೀರಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಫಾಫ್ ಡುಪ್ಲೆಸಿಸ್ ಕೂಡ ನಾಯಕತ್ವ ರೇಸ್‌ನಲ್ಲಿದ್ದಾರೆ. ಇದರ ಜೊತೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕತ್ವ ವಹಿಸಿಕೊಂಡ ದಿನೇಶ್ ಕಾರ್ತಿಕ್ ಕೂಡ ಆರ್‌ಸಿಬಿ ತಂಡದಲ್ಲಿದ್ದಾರೆ. ಆದರೆ ಕಾರ್ತಿಕ್ ಕೆಕೆಆರ್ ತಂಡದಲ್ಲಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದರು. ಹೀಗಾಗಿ ದಿನೇಶ್ ಕಾರ್ತಿಕ್ ಆಯ್ಕೆ ಆರ್‌ಸಿಬಿ ಮುಂದಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಾಪ್ 3 ದುಬಾರಿ ಖರೀದಿ
ಹರ್ಷಲ್ ಪಟೇಲ್ : 10.75 ಕೋಟಿ ರೂಪಾಯಿ
ವಾನಿಂದು ಹಸರಂಗ : 10.75 ಕೋಟಿ ರೂಪಾಯಿ
ಜೋಶ್ ಹೆಜಲ್‌ವುಡ್ : 7.75 ಕೋಟಿ ರೂಪಾಯಿ