ಬೆಂಗಳೂರು(ಫೆ.13): ಐಪಿಎಲ್ 2022 ಟೂರ್ನಿಗೆ ತಂಡ ಸಜ್ಜಾಗಿದೆ. ಶೀಘ್ರದಲ್ಲೇ ಅಭ್ಯಾಸಗಳು ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ನಡೆದ ಎರಡು ದಿನದ ಹರಾಜಿನಲ್ಲಿ(IPL Auction 2022) 8 ಹಳೆ ತಂಡ ಹಾಗೂ ಎರಡು ಹೊಸ ತಂಡ ಸೇರಿದಂತೆ 10 ತಂಡಗಳು ಭಾರಿ ಲೆಕ್ಕಾಚಾರದೊಂದಿಗೆ ಆಟಗಾರರ ಖರೀದಿಸಿದೆ. ಖರೀದಿ ವೇಳೆ ತೀವ್ರ ಪೈಪೋಟಿ ಏರ್ಪಟ್ಟ ಕಾರಣ ಪ್ರತಿಭಾನ್ವಿತ ಕ್ರಿಕೆಟಿಗರು ದಾಖಲೆ ಮೊತ್ತಕ್ಕೆ(Most Expensive Player 2022) ಸೇಲಾಗಿದ್ದಾರೆ. ಈ ಬಾರಿ ದಾಖಲೆ ಮೊತ್ತಕ್ಕೆ ಹರಾಜಾದ ಪೈಕಿ ಇಶಾನ್ ಕಿಶನ್ ಮೊದಲ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಇಶಾನ್ ಕಿಶನ್‌ಗೆ 15.12 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.
ಈ ಬಾರಿಯ ಹರಾಜಿನಲ್ಲಿ ಭಾರತೀಯ ಯುವ ಕ್ರಿಕೆಟಿಗರಿಗೆ ಎಲ್ಲಿದ ಬೇಡಿಕೆ ವ್ಯಕ್ತವಾಗಿದೆ. ಇಶಾನ್ ಕಿಶನ್(Ishan Kishan) 2022ರ ಹರಾಜಿನ ದುಬಾರಿ ಆಟಗಾರ ಎನಿಸಿಕೊಂಡರೆ, ಎರಡನೇ ದುಬಾರಿ ಆಟಗಾರ ಸ್ಥಾನ ವೇಗಿ ದೀಪಕ್ ಚಹಾರ್‌ಗೆ(Deepak Chahar) ಸಲ್ಲಲಿದೆ. ದೀಪಕ್ ಚಹಾರ್‌ಗೆ ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ.
IPL Auction 2022 : ಮಿ. ಐಪಿಎಲ್ ಸುರೇಶ್ ರೈನಾ, ಐಪಿಎಲ್ ಟೂರ್ನಿಗೇ ಇಲ್ಲ!
2022ರ ಹರಾಜಿನ ದುಬಾರಿ ಆಟಗಾರರ ಪಟ್ಟಿ
ಇಶಾನ್ ಕಿಶನ್ (ಮುಂಬೈ ಇಂಡಿಯನ್ಸ್) 15.25 ಕೋಟಿ ರೂಪಾಯಿ
ದೀಪಕ್ ಚಹಾರ್ (ಚೆನ್ನೈ ಸೂಪರ್ ಕಿಂಗ್ಸ್) 14 ಕೋಟಿ ರೂಪಾಯಿ
ಶ್ರೇಯಸ್ ಅಯ್ಯರ್ (ಕೋಲ್ಕತಾ ನೈಟ್ ರೈಡರ್ಸ್)12.25 ಕೋಟಿ ರೂಪಾಯಿ
ಲಿಯಾಮ್ ಲಿವಿಂಗ್‌ಸ್ಟೋನ್ (ಪಂಜಾಬ್ ಕಿಂಗ್ಸ್)11.50 ಕೋಟಿ ರೂಪಾಯಿ
ಶಾರ್ದೂಲ್ ಠಾಕೂರ್ (ಡೆಲ್ಲಿ ಕ್ಯಾಪಿಟಲ್ಸ್) 10.75 ಕೋಟಿ ರೂಪಾಯಿ
ವಾನಿಂದು ಹಸರಂಗ (ರಾಯಲ್ ಚಾಲೆಂಜರ್ಸ್ ಬೆಂಗಳೂರು) 10.75 ಕೋಟಿ ರೂಪಾಯಿ
ಹರ್ಷಲ್ ಪಟೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) 10.75 ಕೋಟಿ ರೂಪಾಯಿ
ನಿಕೋಲಸ್ ಪೂರನ್ (ಸನ್‌ರೈಸರ್ಸ್ ಹೈದರಾಬಾದ್) 10.75 ಕೋಟಿ ರೂಪಾಯಿ
ಲ್ಯೂಕಿ ಫರ್ಗ್ಯೂಸನ್ (ಗುಜರಾತ್ ಟೈಟಾನ್ಸ್) 10 ಕೋಟಿ ರೂಪಾಯಿ
ಅವೇಶ್ ಖಾನ್ (ಲಕ್ನೋ ಸೂಪರ್‌ಜೈಂಟ್ಸ್) 10 ಕೋಟಿ ರೂಪಾಯಿ
ಅವೇಶ್ ಖಾನ್(Avesh Khan) ಗರಿಷ್ಠ ಮೊತ್ತಕ್ಕೆ ಮಾರಾಟದ ಅನ್‌ಕ್ಯಾಪ್ಡ್ ಪ್ಲೇಯರ್ಸ್ ಅನ್ನೋ ದಾಖಲೆಯನ್ನು ಬರೆದಿದ್ದಾರೆ. ಯುವ ವೇಗಿ ಈ ಬಾರಿ ಲಕ್ನೋ ಸೂಪರ್‌ಜೈಂಟ್ಸ್ ತಂಡ ಸೇರಿಕೊಂಡಿದ್ದಾರೆ. ಇನ್ನು ಐಪಿಎಲ್ ಇತಿಹಾಸದಲ್ಲಿ ನಡೆದಿರುವ ದುಬಾರಿ ಖರೀದಿಯಲ್ಲಿ ಸೌತ್ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮೊರಿಸ್(Chris Morris) ಸೇರಿದ್ದಾರೆ. 2021ರ ಮಿನಿ ಹರಾಜಿನಲ್ಲಿ 75 ಲಕ್ಷ ಮೂಲ ಬೆಲೆಯ ಕ್ರಿಸ್ ಮೊರಿಸ್ ಬರೋಬ್ಬರಿ 16.25 ಕೋಟಿ ರೂಪಾಯಿಗೆ ಮಾರಾಟವಾಗಿದ್ದರು. ಇದು ಇದುವರೆಗೆ ಅತ್ಯಂತ ಗರಿಷ್ಠ ಹಾಗೂ ದಾಖಲೆಯ ಖರೀದಿಯಾಗಿದೆ.
ಯುವರಾಜ್ ಸಿಂಗ್(Yuvraj Singh) ಕ್ರಿಕೆಟ್‌ನಲ್ಲಿ ಸಕ್ರೀಯರಾಗಿದ್ದ ವೇಳೆ ಅತ್ಯಂತ ಬೇಡಿಕೆಯ ಆಟಗಾರರಾಗಿದ್ದರು. 2015ರಲ್ಲಿ ಯುವರಾಜ್ ಸಿಂಗ್ ಖರೀದಿಗೆ ಡೆಲ್ಲಿ ಡೇರ್‌ಡೆವಿಲ್ಸ್ 16 ಕೋಟಿ ರೂಪಾಯಿ ನೀಡಿತ್ತು. ಈ ದಾಖಲೆಯನ್ನು 2021ರಲ್ಲಿ ಕ್ರಿಸ್ ಮೊರಿಸ್ ಮುರಿದಿದ್ದರು. ಯುವಿ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 15 ಕೋಟಿ ರೂಪಾಯಿ ನೀಡಿತ್ತು. ಪ್ರತಿ ಭಾರಿ ಯುವರಾಜ್ ಹರಾಜಿನ ಕಣದಲ್ಲಿದ್ದಾಗ ಫ್ರಾಂಚೈಸಿಗಳು ಪೈಪೋಟಿಗೆ ಬಿದ್ದು ಖರೀದಿ ಮಾಡಿದೆ.
IPL Auction 2022 : ಹರಾಜಿನಲ್ಲಿ ಮುಗಿಯೋಲ್ಲ ಬ್ಲಂಡರ್ಸ್, RCB ಆಯ್ಕೆ ಬಗ್ಗೆ ವೆಂಕಿ ಗರಂ
ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಖರೀದಿ ಪಟ್ಟಿ:
ಕ್ರಿಸ್ ಮೊರಿಸ್ (ರಾಜಸ್ಥಾನ ರಾಯಲ್ಸ್) 16.25 ಕೋಟಿ ರೂಪಾಯಿ
ಯುವರಾಜ್ ಸಿಂಗ್ (ಡೆಲ್ಲಿ ಕ್ಯಾಪಿಟಲ್ಸ್) 16 ಕೋಟಿ ರೂಪಾಯಿ
ಪ್ಯಾಟ್ ಕಮಿನ್ಸ್ (ಕೋಲ್ಕತಾ ನೈಟ್ ರೈಡರ್ಸ್) 15.5 ಕೋಟಿ ರೂಪಾಯಿ
ಇಶಾನ್ ಕಿಶನ್ (ಮುಂಬೈ ಇಂಡಿಯನ್ಸ್) 15.25 ಕೋಟಿ ರೂಪಾಯಿ
ಕೈಲ್ ಜ್ಯಾಮಿನ್ಸನ್( ರಾಯಲ್ ಚಾಲೆಂಜರ್ಸ್ ಬೆಂಗಳೂರು) 15 ಕೋಟಿ ರೂಪಾಯಿ
ಬೆನ್ ಸ್ಟೋಕ್ಸ್(ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್) 14.5 ಕೋಟಿ ರೂಪಾಯಿ
ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಧೋನಿ ದುಬಾರಿ ಆಟಗಾರ:
2008ರಲ್ಲಿ ಐಪಿಎಲ್ ಟೂರ್ನಿ ಆರಂಭಗೊಂಡಿತು. 2007ರಲ್ಲಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟ ಎಂ.ಎಸ್.ಧೋನಿ ಅತ್ಯಂತ ಬೇಡಿಕೆ ಕ್ರಿಕೆಟಿಗನಾಗಿದ್ದರು. ಧೋನಿ ಖರೀದಿಗೆ ಎಲ್ಲಾ ತಂಡಗಳು ಮುಗಿಬಿದ್ದಿತ್ತು. ಅಂತಿಮವಾಗಿ ಪಟ್ಟು ಬಿಡದ ಚೆನ್ನೈ ಸೂಪರ್ ಕಿಂಗ್ಸ್ 9.5 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು.