ಬೆಂಗಳೂರು(ಫೆ.13): ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅತ್ಯುತ್ತಮ ಖರೀದಿ ಮಾಡಿದೆ. ಈ ವರ್ಷದ ಹರಾಜಿನಲ್ಲಿ ಡೇವಿಡ್ ವಾರ್ನರ್ ಖರೀದಿ ಟಾಪ್ ರೇಟೆಡ್ ಪರ್ಚೇಸ್ ಆಗಿದೆ. ಯುವಕರು, ಅನುಭವಿಗಳು, ಸ್ಟಾರ್ ಆಟಗಾರರು ಸೇರಿದಂತೆ ಎಲ್ಲಾ ಮಿಶ್ರಣ ಡೆಲ್ಲಿ ತಂಡದಲ್ಲಿದೆ. ಉತ್ತಮ ತಂಡ ಕಟ್ಟಿರುವ ಡೆಲ್ಲಿ ಈ ಬಾರಿಯ ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಳ್ಳುವು ಸಾಧ್ಯತೆ ಹೆಚ್ಚು.
ಈ ಬಾರಿಯ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ದುಬಾರಿ ಆಟಗಾರ ಶಾರ್ದೂಲ್ ಠಾಕೂರ್. ಠಾಕೂರ್‌ಗೆ 10.75 ಕೋಟಿ ರೂಪಾಯಿ ನೀಡಿ ಖರೀದಿಸಿತು. ಡೆಲ್ಲಿ ತಂಡ ಒಟ್ಟು 24 ಆಟಗಾರರನ್ನು ಹೊಂದಿದೆ. ಇದರಲ್ಲಿ 17 ಭಾರತೀಯ ಆಟಗಾರರು ಹಾಗೂ 7 ವಿದೇಶಿ ಆಟಗಾರರಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಒಟ್ಟು 89.90 ಕೋಟಿ ರೂಪಾಯಿ ಖರ್ಚು ಮಾಡಿದೆ. ಹೀಗಾಗಿ ಡೆಲ್ಲಿ ಬಳಿ ಉಳಿದಿರುವುದು ಕೇವಲ 10 ಲಕ್ಷ ರೂಪಾಯಿೇ ಮಾತ್ರ.
IPL Auction 2022 ಹರಾಜಿನ ಬಳಿಕ ಹೀಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ!
ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ಆಟಗಾರರ ಲಿಸ್ಟ್:
ಡೇವಿಡ್ ವಾರ್ನರ್ : 6.25 ಕೋಟಿ ರೂಪಾಯಿ
ಮಿಚೆಲ್ ಮಾರ್ಶ್ : 6.50 ಕೋಟಿ ರೂಪಾಯಿ
ಮುಸ್ತಾಫಿಜುರ್ ರೆಹಮಾನ್ : 2 ಕೋಟಿ ರೂಪಾಯಿ
ಶಾರ್ದೂಲ್ ಠಾಕೂರ್ : 10.75 ಕೋಟಿ ರೂಪಾಯಿ
ಕುಲ್ದೀಪ್ ಯಾದವ್ : 2 ಕೋಟಿ ರೂಪಾಯಿ
ಅಶ್ವಿನ್ ಹೆಬ್ಬಾರ್ : 20 ಲಕ್ಷ ರೂಪಾಯಿ
ಸರ್ಫರಾಜ್ ಖಾನ್ : 20 ಲಕ್ಷ ರೂಪಾಯಿ
ಕಮಲೇಶ್ ನಾಗರಕೋಟಿ : 1.10 ಕೋಟಿ ರೂಪಾಯಿ
ಕೆಎಸ್ ಭರತ್ : 2 ಕೋಟಿ ರೂಪಾಯಿ
ಸೈಯದ್ ಖಲೀಲ್ ಅಹಮ್ಮದ್ : 5.25 ಕೋಟಿ ರೂಪಾಯಿ
ಮನ್ದೀಪ್ ಸಿಂಗ್ : 1.10 ಕೋಟಿ ರೂಪಾಯಿ
ಲುಂಗಿಸನಿ ಎನ್‌ಗಿಡಿ : 50 ಲಕ್ಷ ರೂಪಾಯಿ
ಚೇತನ್ ಸಕಾರಿಯಾ : 4.20 ಕೋಟಿ ರೂಪಾಯಿ
ಯಶ್ ಧುಲ್ : 50 ಲಕ್ಷ ರೂಪಾಯಿ
ವಿಕ್ಕಿ ಒಸ್ಟ್‌ವಾಲ್ : 20 ಲಕ್ಷ ರೂಪಾಯಿ
ರಿಪಲ್ ಪಟೇಲ್ : 20 ಲಕ್ಷ ರೂಪಾಯಿ
ಲಲಿತ್ ಯಾದವ್ : 65 ಲಕ್ಷ ರೂಪಾಯಿ
ರೋವ್ಮನ್ ಪೊವೆಲ್ : 2.80 ಕೋಟಿ ರೂಪಾಯಿ
ಟಿಮ್ ಸೈಫರ್ಟ್ : 50 ಲಕ್ಷ ರೂಪಾಯಿ
ಪ್ರವೀನ್ ದುಬೆ : 50 ಲಕ್ಷ ರೂಪಾಯಿ
IPL Auction 2022 ಬ್ಯಾಲೆನ್ಸ್ ತಂಡ ಕಟ್ಟಿದ್ದ ಸಿಎಸ್‌ಕೆ, ಹೀಗಿದೆ ಹರಾಜಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಟೀಮ್!
ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡ ಆಟಗಾರರು:
ರಿಷಪ್ ಪಂತ
ಅಕ್ಸರ್ ಪಟೇಲ್
ಪೃಥ್ವಿ ಶಾ
ಅನ್ರಿಚ್ ನೂರ್ಜೆ
ಡೆಲ್ಲಿ ಕ್ಯಾಪಿಟಲ್ಸ್ ಪ್ರತಿ ಭಾರಿ ಅತ್ಯುತ್ತಮ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ಕಣಕ್ಕಿಳಿಸಿದೆ. ಆದರೆ ಇದುವರೆಗೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಇತ್ತೀಚೆಗಿನ ಕೆಲ ಆವೃತ್ತಿಗಳಲ್ಲಿ ಡೆಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸೋ ಮೂಲಕ ಪ್ರಶಸ್ತಿ ಸುತ್ತಿನಲ್ಲಿ ಕಾಣಿಸಿಕೊಳ್ಳುತ್ತಿದೆ. 2020ರಲ್ಲಿ ಫೈನಲ್ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. 2019ರಿಂದ ಸತತ 3 ಬಾರಿ ಪ್ಲೇ ಆಫ್ ಪ್ರವೇಶಿಸಿದೆ. ಈ ಮೂಲಕ ಡೆಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ.
2021ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್‌ಗೆ ನಾಯಕತ್ವ ನೀಡಲಾಗಿದೆ. ಡೆಲ್ಲಿ ನಾಯಕನಾಗಿದ್ದ ಶ್ರೇಯಸ್ ಅಯ್ಯರ್ ಇಂಜುರಿ ಕಾರಣ ಟೂರ್ನಿಯಿಂದ ಹೊರಗುಳಿದ ಕಾರಣ ಪಂತ್ ನಾಯಕ ಜವಾಬ್ದಾರಿ ವಹಿಸಿಕೊಂಡರು. ಈ ಬಾರಿಯೂ ಪಂತ್ ನಾಯಕನಾಗಿ ಡೆಲ್ಲಿ ತಂಡ ಮುನ್ನಡೆಸಲಿದ್ದಾರೆ. 2022ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಆರಂಭಿಕರ ಸ್ಥಾನ ಗಟ್ಟಿಯಾಗಿದೆ. ಪೃಥ್ವಿ ಶಾ ಜೊತೆ ಡೇವಿಡ್ ವಾರ್ನರ್ ಕೂಡ ಸೇರಿಕೊಳ್ಳಲಿದ್ದಾರೆ. ಹೀಗಾಗಿ ಡೆಲ್ಲಿ ಮತ್ತಷ್ಟು ಸ್ಫೋಟಕ ಆರಂಭ ಪಡೆದುಕೊಳ್ಳಲಿದೆ.