IPL Auction 2022 ಕನ್ನಡಿಗ ಅಭಿನವ್‌ಗೆ ಜಾಕ್‌ಪಾಟ್, 2.6 ಕೋಟಿಗೆ ಗುಜರಾತ್ ಪಾಲು!

By Suvarna News  |  First Published Feb 12, 2022, 7:28 PM IST
  • ಕನ್ನಡಿಗ ಅಭಿವನ್ ಖರೀದಿಗೆ ಮುಗಿಬಿದ್ದ ಫ್ರಾಂಚೈಸಿ
  • 20 ಲಕ್ಷ ಮೂಲ ಬೆಲೆಯ ಅಭಿನವ್ 2.6 ಕೋಟಿಗೆ ಸೇಲ್
  • ಗುಜರಾತ್ ತಂಡದ ಪಾಲಾದ ಕನ್ನಡಿಗ ಅಭಿನವ್

ಬೆಂಗಳೂರು(ಫೆ.12): ಐಪಿಎಲ್ ಹರಾಜು 2022ರಲ್ಲಿ ಅನ್‌ಕ್ಯಾಪ್ ಪ್ಲೇಯರ್ಸ್‌ ಖರೀದಿಗೆ ಫ್ರಾಂಚೈಸಿಗಳು ಆಸಕ್ತಿ ತೋರಿತು. ಪರಿಣಾಮ ಯುವ ಕ್ರಿಕೆಟಿಗರು ದಾಖಲೆ ಮೊತ್ತಕ್ಕೆ ಹರಾಜಾಗಿದ್ದಾರೆ. ವಿಶೇಷವಾಗಿ ಕನ್ನಡಿಗ ಅಭಿನವ್ ಮನೋಹರ್ 2.6 ಕೋಟಿ ರೂಪಾಯಿ ಮೊತ್ತಕ್ಕೆ ಗುಜರಾತ್ ಟೈಟನ್ಸ್ ಪಾಲಾಗಿದ್ದಾರೆ.

20 ಲಕ್ಷ ಮೂಲ ಬೆಲೆಯ ಅನ್‌ಕ್ಯಾಪ್ ಪ್ಲೇಯರ್ ಅಭಿನವ್ ಮನೋಹರ್ ಸದರಂಗಿನಿ ಖರೀದಿಗೆ ಕೋಲ್ಕತಾ ಸೇರಿದಂತೆ ಹಲವು ಫ್ರಾಂಚೈಸಿ ಮುಗಿಬಿತ್ತು. ಕೊನೆಯವರೆಗೂ ಬಿಟ್ಟುಕೊಡದ ಗುಜರಾತ್ ಟೈಟನ್ಸ್ 2.6 ಕೋಟಿ ರೂಪಾಯಿ ನೀಡಿ ಯುವ ಕ್ರಿಕೆಟಿಗನ ಖರೀದಿಸಿತು. 

Tap to resize

Latest Videos

IPL Auction 2022 ಯಜುವೇಂದ್ರ ಚಹಾಲ್ 8 ವರ್ಷದ ಆರ್‌ಸಿಬಿ ಪಯಣ ಅಂತ್ಯ, 6.5 ಕೋಟಿಗೆ ರಾಜಸ್ಥಾನ ಪಾಲು!

2021ರಲ್ಲಿ  ಕರ್ನಾಟಕ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದ ಅಭಿನವ್ ಮನೋಹರ್, 2022ರ ಹರಾಜಿನಲ್ಲಿ 2.6 ಕೋಟಿಗೆ ಹರಾಜಾಗಿದ್ದಾರೆ. 2022-22ರ ಸಾಲಿನ ಸೈಯದ್ ಮುಷ್ತಾಕ್ ಆಲಿ ಟೂರ್ನಿ ಫೈನಲ್ ಪಂದ್ಯದಲ್ಲಿ ಅಭಿನವ್ ಮನೋಹರ್ ಅಜೇಯ 70 ರನ್ ಸಿಡಿಸಿ ಎಲ್ಲರ ಗಮನ ಸಳೆದಿದ್ದರು. 

ಡಿಸೆಂಬರ್ 2021ರಲ್ಲಿ ಕರ್ನಾಟಕ ಲಿಸ್ಟ್ ಎ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.  ಕೆಲವೇ ತಿಂಗಳಲ್ಲಿ ತನ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಅಭಿನವ್ ಇದೀಗ 2.6 ಕೋಟಿಗೆ ಬಿಕರಿಯಾಗುವ ಮೂಲಕ ಅರ್ಹ ಬೆಲೆ ಪಡೆದಿದ್ದಾರೆ. 

IPL Auction 2022 ಜೋಶ್ ಹೇಜಲ್‌ವುಡ್‌ ಖರೀದಿಸಿದ ಆರ್‌ಸಿಬಿ, 7.75 ಕೋಟಿ ರೂಗೆ ಸೋಲ್ಡ್!

ಆಂಧ್ರ ಪ್ರದೇಶ ಕ್ರಿಕೆಟಿಗ ಅಶ್ವಿನ್ ಹೆಬ್ಬಾರ್ ಮೂಲ ಬೆಲೆ 20 ಲಕ್ಷ ರೂಪಾಯಿ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿ ಮಾಡಿದೆ. ಅನ್‌ಕ್ಯಾಪ್ ಆಟಗಾರರ ಪೈಕಿ ಕರ್ನಾಟಕದ ಆಟಗಾರರ ಖರೀದಿಸಲು ಹೆಚ್ಚಿನ ಫ್ರಾಂಚೈಸಿಗಳು ಆಸಕ್ತಿ ತೋರಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳುವ ಮನಸ್ಸೆ ಮಾಡಲಿಲ್ಲ.

ಇನ್ನು ಅನ್‌ಕ್ಯಾಪ್ ಪ್ಲೇಯರ್ ಪ್ರಿಯಂ ಗರ್ಗ್ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಮಿಂಚಿರುವ ರಾಹಲ್ ತ್ರಿಪಾಠಿ ಖರೀದಿಗೆ ತೀವ್ರ ಪೈಪೋಟಿ ಎರ್ಪಟ್ಟಿತ್ತು. ರಾಹುಲ್ ತ್ರಿಪಾಠಿಗೆ 8 ಕೋಟಿ ರುಪಾಯಿ ನೀಡಿ ಸನ್‌ರೈಸರ್ಸ್ ಹೈದರಾಬಾದ್ ಖರೀದಿ ಮಾಡಿತು. 30 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿರುವ ರಿಯಾನ್ ಪರಾಗ್ 3.80 ಕೋಟಿ ರುಪಾಯಿಗೆ ಮತ್ತೊಮ್ಮೆ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದಾರೆ.

ಗುಜರಾತ್ ಟೈಟಾನ್ಸ್:
ಗುಜರಾತ್ ಟೈಟಾನ್ಸ್ ತಂಡ ಈ ಬಾರಿಯಿಂದ ಐಪಿಎಲ್ ಅಖಾಡಕ್ಕೆ ಇಳಿಯುತ್ತಿದೆ. 2021ರ ಆಗಸ್ಟ್‌ನಲ್ಲಿ ಬಿಸಿಸಿಐ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡ ಸಿವಿಸಿ ಕ್ಯಾಪಿಟಲ್ 5,625 ಕೋಟಿ ರೂಪಾಯಿಗೆ ತಂಡ ಖರೀದಿಸಿದೆ. ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯರನ್ನು ಗುಜರಾತ್ ಟೈಟಾನ್ಸ್ ಖರೀದಿಸಿದೆ. ಇಷ್ಟು ವರ್ಷ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಪ್ಲೇಯರ್ ಆಗಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿಯಿಂದ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.

ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ. ಈ ಬಾರಿಯ ಹರಾಜಿನಲ್ಲಿ ಇದುವರೆಗೆ ಗುಜರಾತ್ ಟೈಟಾನ್ಸ್ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ 6.25 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಇನ್ನು ಜೇಸನ್ ರಾಯ್ 2 ಕೋಟಿ, ಲ್ಯೂಕ ಫರ್ಗ್ಯೂಸನ್ 10 ಕೋಟಿ, ಅಭಿನವ್ ಮನೋಹರ್ 2.6 ಕೋಟಿ, ರಾಹುಲ್ ಟಿವಾಟಿಯಾ 9 ಕೋಟಿ, ಆಪ್ಘಾನಿಸ್ತಾನದ ಕಿರಿಯ ಕ್ರಿಕೆಟಿಗ ನೂರ್ ಅಹಮ್ಮದ್ 30 ಲಶ್ರ ಹಾಗೂ ಸಾಯಿ ಕಿಶೋರ್‌ಗೆ 3 ಕೋಟಿ ರೂಪಾಯಿ ನೀಡಿ ಖರೀದಿಸಿದೆ. 
 

click me!