RCB ಸೇರಿದ ಬೆನ್ನಲ್ಲೇ ಶಪಥ ಮಾಡಿದ ಗ್ಲೆನ್ ಮ್ಯಾಕ್ಸ್‌ವೆಲ್!

By Suvarna News  |  First Published Feb 18, 2021, 6:13 PM IST

ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗ್ಲೆನ್ ಮ್ಯಾಕ್ಸ್‌ವೆಲ್ ಖರೀದಿಸಿದೆ. ಸಿಹಿ ಸುದ್ದಿ ಕಿವಿಗೆ ಬೀಳುತ್ತಲೇ ಗ್ಲೆನ್ ಮ್ಯಾಕ್ಸ್‌ವೆಲ್ ಶಪಥವೊಂದು ಮಾಡಿದ್ದಾರೆ. 


ಚೆನ್ನೈ(ಫೆ.18): ಈ ಬಾರಿಯ ಹರಾಜಿನಲ್ಲಿ ಆಸ್ಟ್ರೇಲಿಯಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಬರೋಬ್ಬರಿ 14.25 ಕೋಟಿ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿದೆ. ಆಲ್ರೌಂಡರ್ ಹುಡುಕಾಟದಲ್ಲಿದ್ದ ಆರ್‌ಸಿಬಿ ತಂಡ ಜಿದ್ದಿಗೆ ಬಿದ್ದು, ಮ್ಯಾಕ್ಸ್‌ವೆಲ್ ಖರೀದಿಸಿತು. ಇದೀಗ ಮ್ಯಾಕ್ಸ್‌ವೆಲ್ ಟ್ವೀಟ್ ಮಾಡಿದ್ದಾರೆ.

IPL Auction: ದಾಖಲೆ ಮೊತ್ತ ನೀಡಿದ ಮ್ಯಾಕ್ಸ್‌ವೆಲ್ ಖರೀದಿಸಿದ RCB!

Tap to resize

Latest Videos

undefined

ಆರ್‌ಸಿಬಿ ತಂಡ ಸೇರಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ಎಲ್ಲಾ ಪ್ರಯತ್ನದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲುವಿಗೆ ಸಹಕರಿಸುತ್ತೇನೆ ಎಂದು ಮ್ಯಾಕ್ಸ್‌ವೆಲ್ ಟ್ವೀಟ್ ಮಾಡಿದ್ದಾರೆ.

 

Looking forward to joining for this years
Can’t wait to put everything I have in to helping us lift the trophy!

— Glenn Maxwell (@Gmaxi_32)

ಕಳೆದ ಐಪಿಎಲ್ ಆೃತ್ತಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಿದ್ದರು. ಆಧರೆ ಕಳಪೆ ಪ್ರದರ್ಶನ ನೀಡಿದ್ದ ಮ್ಯಾಕ್ಸ್‌ವೆಲ್, ಇದೀಗ ಆರ್‌ಸಿಬಿಯಲ್ಲಿ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.

click me!