ಐಪಿಎಲ್ ಹರಾಜಿನಲ್ಲಿ ವಿದೇಶಿ ಆಟಗಾರರ ಆರ್ಭಟದ ನಡುವೆ ಕರ್ನಾಟಕದ ಆಟಗಾರರಿಗೆ ಬಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಕೆಸಿ ಕಾರ್ಯಪ್ಪ ಹಾಗೂ ಜೆ ಸುಚಿತ್ ಈ ಬಾರಿಯ ಹರಾಜಿನಲ್ಲಿ ಸೇಲ್ ಆಗಿದ್ದಾರೆ. ತಂಡ ಹಾಗೂ ಬೆಲೆ ವಿವರ ಇಲ್ಲಿದೆ.
ಚೆನ್ನೈ(ಫೆ.18): ಐಪಿಎಲ್ ಹರಾಜಿನಲ್ಲಿ ವಿದೇಶಿ ಆಟಗಾರರು ದುಬಾರಿ ಮೊತ್ತಕ್ಕೆ ಸೇಲಾಗುತ್ತಿದ್ದಾರೆ. ಇದರ ನಡುವೆ ಕರ್ನಾಟಕ ಆಟಗಾರರು ಎಂದಿನಂತೆ ತಮ್ಮ ಬೇಡಿಕೆ ಉಳಿಸಿಕೊಂಡಿದ್ದಾರೆ. ಇದೀಗ ಮತ್ತಿಬ್ಬರು ಕರ್ನಾಟಕ ಆಟಗಾರರು ಸೇಲಾಗಿದ್ದಾರೆ. ಸ್ಪಿನ್ನರ್ ಕೆಸಿ ಕಾರ್ಯಪ್ಪ ಹಾಗೂ ಜೆ ಸುಚಿತ್ ಬಿಕರಿಯಾಗಿದ್ದಾರೆ.
undefined
IPL Auction 2021: ದಾಖಲೆ ಮೊತ್ತಕ್ಕೆ ಕನ್ನಡಿಗ ಕೆ ಗೌತಮ್ ಸೇಲ್!
ಕರ್ನಾಟಕದ ಪ್ರತಿಭಾನ್ವಿತ ಸ್ಪಿನ್ನರ್ ಜೆ ಸುಚಿತ್ 30 ಲಕ್ಷ ರುಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ. ಇನ್ನು ಕೆಕೆಆರ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಮಿಂಚಿದ ಕೆಸಿ ಕಾರ್ಯಪ್ಪ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇಲಾಗಿದ್ದಾರೆ. ಕಾರ್ಯಪ್ಪ ಅವರಿಗೆ 20 ಲಕ್ಷ ರೂಪಾಯಿ ನೀಡಿ ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿದೆ.
IPL Auction: ದಾಖಲೆ ಮೊತ್ತ ನೀಡಿದ ಮ್ಯಾಕ್ಸ್‌ವೆಲ್ ಖರೀದಿಸಿದ RCB!
ಕೆಸಿ ಕಾರ್ಯಪ್ಪ ಮಿಸ್ಟ್ರಿ ಸ್ಪಿನ್ನರ್ ಎಂದೇ ಖ್ಯಾತಿ ಪಡೆದಿದ್ದಾರೆ. ಈ ಮೂಲಕ ಕರ್ನಾಟಕ ಆಟಗಾರರಿಗೆ ಐಎಪಿಎಲ್ ಫ್ರಾಂಚೈಸಿಗಳು ಹೆಚ್ಚಿನ ಮಣೆ ಹಾಕುತ್ತಿದ್ದಾರೆ.