IPL 2026 Final: ಬೆಂಗಳೂರು ಕೈತಪ್ಪಿದ ಐಪಿಎಲ್‌ ಫೈನಲ್‌! ಮೇ 31ರ ಫೈನಲ್‌ ಮ್ಯಾಚ್ ಎಲ್ಲಿ?

Kannadaprabha News   | Kannada Prabha
Published : May 07, 2026, 05:52 AM IST
IPL 2026 Final Bengaluru loses hosting rights to Ahmedabad KSCA clarified

ಸಾರಾಂಶ

2026ರ ಐಪಿಎಲ್‌ ಫೈನಲ್‌ ಪಂದ್ಯದ ಆತಿಥ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಕೈತಪ್ಪಿ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿದೆ. ಕೆಎಸ್‌ಸಿಎಯ ಬೇಡಿಕೆಗಳು ಮತ್ತು ಕ್ರೀಡಾಂಗಣದ ಕಡಿಮೆ ಆಸನ ಸಾಮರ್ಥ್ಯ ಈ ನಿರ್ಧಾರಕ್ಕೆ ಕಾರಣವೆಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ನವದೆಹಲಿ (ಮೇ.7): ಬೆಂಗಳೂರಿನಲ್ಲಿ ನಡೆವ ಪ್ರತಿ ಐಪಿಎಲ್‌ ಪಂದ್ಯಗಳಿಗೂ ಕರ್ನಾಟಕದ ಎಲ್ಲಾ ಶಾಸಕರಿಗೂ ಉಚಿತ ಟಿಕೆಟ್‌ ನೀಡುವ ವಿಷಯ ಭಾರೀ ವಿವಾದಕ್ಕೆ ಕಾರಣವಾಗಿದ್ದ ನಡುವೆಯೇ 2026ರ ಐಪಿಎಲ್‌ ಫೈನಲ್‌ ಪಂದ್ಯದ ಆತಿಥ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಕೈತಪ್ಪಿದೆ. ಮೇ 31ರಂದು ಫೈನಲ್‌ ಪಂದ್ಯ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬುಧವಾರ ಬಿಸಿಸಿಐ ಘೋಷಿಸಿದೆ.

ಹಾಲಿ ಚಾಂಪಿಯನ್‌ ತಂಡದ ತವರು ಕ್ರೀಡಾಂಗಣದಲ್ಲಿ ಪ್ಲೇ-ಆಫ್‌ ಹಾಗೂ ಫೈನಲ್‌ ಪಂದ್ಯ ನಡೆಸಬೇಕೆಂಬುದು ಬಿಸಿಸಿಐ ನಿಯಮ. ಇದರ ಪ್ರಕಾರ, 2025ರಲ್ಲಿ ಚಾಂಪಿಯನ್‌ ಆಗಿದ್ದ ಆರ್‌ಸಿಬಿ ತಂಡದ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಫೈನಲ್‌ ನಡೆಯಬೇಕಿತ್ತು. ಅಲ್ಲದೆ, ಕ್ವಾಲಿಫೈಯರ್‌ ಅಥವಾ ಎಲಿಮಿನೇಟರ್‌ ಪಂದ್ಯಕ್ಕೂ ಬೆಂಗಳೂರು ಆತಿಥ್ಯ ವಹಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಬೆಂಗಳೂರಿನಲ್ಲಿ ಪಂದ್ಯ ನಡೆಸದಿರುವ ಬಿಸಿಸಿಐ ನಿರ್ಧರಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ‘ಫೈನಲ್ ಪಂದ್ಯವನ್ನು ಆಯೋಜಿಸಲು ಬೆಂಗಳೂರನ್ನು ಆಯ್ಕೆ ಮಾಡಬೇಕಿತ್ತು. ಆದರೆ ಕೆಎಸ್‌ಸಿಎ ಹಾಗೂ ಅಧಿಕಾರಿಗಳ ಕೆಲ ಬೇಡಿಕೆ ಪೂರೈಸುವುದು ಬಿಸಿಸಿಐನ ಮಾರ್ಗಸೂಚಿ ಹಾಗೂ ಶಿಷ್ಟಾಚಾರದ ವ್ಯಾಪ್ತಿಯನ್ನು ಮೀರುವುದರಿಂದಾಗಿ ಫೈನಲ್‌ ಪಂದ್ಯವನ್ನು ಬೆಂಗಳೂರಿನಿಂದ ಸ್ಥಳಾಂತರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದೆ.

ಮೇ 24ರಂದು ಲೀಗ್‌ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದ್ದು, ಮೇ 26ರಂದು ಧರ್ಮಶಾಲಾ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್‌-1 ಪಂದ್ಯ ನಡೆಯಲಿದೆ. ಬಳಿಕ ನವ ಚಂಡೀಗಢದ ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ಮೇ 27ರಂದು ಎಲಿಮಿನೇಟರ್‌, ಮೇ 29ಕ್ಕೆ ಕ್ವಾಲಿಫೈಯರ್‌-2 ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ಆಸನ ಸಾಮರ್ಥ್ಯ ಹೆಚ್ಚು:

ಬಿಸಿಸಿಐ ಮೂಲಗಳ ಪ್ರಕಾರ, ಕ್ರೀಡಾಂಗಣದ ಆಸನ ಸಾಮರ್ಥ್ಯದ ಕಾರಣಕ್ಕೆ ಬೆಂಗಳೂರು ಬದಲು ಅಹಮದಾಬಾದ್ ಕ್ರೀಡಾಂಗಣಕ್ಕೆ ಫೈನಲ್‌ ಪಂದ್ಯ ಸ್ಥಳಾಂತರಿಸಲಾಗಿದೆ. ಚಿನ್ನಸ್ವಾಮಿಯಲ್ಲಿ 35000 ಆಸನ ಸಾಮರ್ಥ್ಯವಿದೆ. ಆದರೆ ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ಎನಿಸಿಕೊಂಡಿರುವ ಅಹಮದಾಬಾದ್‌ 132000 ಆಸನ ಸಾಮರ್ಥ್ಯ ಹೊಂದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಲ್ಲಿದೆ ಐಪಿಎಲ್‌ ಪ್ಲೇಆಫ್‌ ಲೆಕ್ಕಾಚಾರ: ಆರ್‌ಸಿಬಿಗೆ ಹೇಗಿದೆ ಚಾನ್ಸ್‌? ಉಳಿದ ತಂಡಗಳ ಅವಕಾಶ ಎಷ್ಟಿದೆ?
'ಶಾಸಕರ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರು ಬಲಿ', IPL ಫೈನಲ್ ಅಹಮದಾಬಾದ್‌ಗೆ ಶಿಫ್ಟ್: ನಿಖಿಲ್ ಕುಮಾರಸ್ವಾಮಿ ಕಿಡಿ