
ಚೆನ್ನೈ (ಮೇ.6): ಐಪಿಎಲ್ 2026ರ ಸೀಸನ್ ಆರಂಭದಲ್ಲಿ ಮಂಕಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK), ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆಲ್ಲುವ ಮೂಲಕ ಮತ್ತೆ ಪ್ಲೇಆಫ್ ರೇಸ್‌ಗೆ ಮರಳಿದೆ. ರುತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್‌ಕೆಗೆ ಇನ್ನು 4 ಪಂದ್ಯಗಳು ಬಾಕಿ ಇವೆ. ಉಳಿದ ಎಂಟೂ ಅಂಕಗಳನ್ನು ಬಾಚಿಕೊಂಡು ಸುಲಭವಾಗಿ ಮುಂದಿನ ಹಂತಕ್ಕೆ ಏರಬೇಕೆನ್ನುವುದು ತಂಡದ ಲೆಕ್ಕಾಚಾರ. ಆದರೆ, ಸನ್‌ರೈಸರ್ಸ್ ಹೈದರಾಬಾದ್ (SRH), ಗುಜರಾತ್ ಟೈಟಾನ್ಸ್ (GT), ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವೆ 3 ಮತ್ತು 4ನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಲೆಕ್ಕಾಚಾರದ ಪ್ರಕಾರ ಹತ್ತು ತಂಡಗಳೂ ಇನ್ನೂ ರೇಸ್‌ನಲ್ಲಿವೆ.
ಸದ್ಯ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ (PBKS: 13 ಅಂಕ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB: 12 ಅಂಕ) ಮೊದಲ ಎರಡು ಸ್ಥಾನಗಳಲ್ಲಿವೆ. ಹೈದರಾಬಾದ್, ರಾಜಸ್ಥಾನ್ ಮತ್ತು ಗುಜರಾತ್ ತಂಡಗಳ ಬಳಿಯೂ ತಲಾ 12 ಅಂಕಗಳಿದ್ದರೂ, ಪಂಜಾಬ್ ಮತ್ತು ಬೆಂಗಳೂರು ತಂಡಗಳು ಇವರಿಗಿಂತ ಒಂದು ಪಂದ್ಯ ಕಡಿಮೆ ಆಡಿರುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಪಂಜಾಬ್ ಕಿಂಗ್ಸ್ (PBKS): ಇನ್ನುಳಿದ 5 ಪಂದ್ಯಗಳಲ್ಲಿ ಕೇವಲ 2 ಗೆಲುವು ಸಾಧಿಸಿದರೆ 17 ಅಂಕಗಳೊಂದಿಗೆ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಅವರ ನೆಟ್ ರನ್‌ರೇಟ್ (NRR +0.855) ಉತ್ತಮವಾಗಿದ್ದು, ಕೇವಲ 1 ಗೆಲುವು ಕೂಡ ಅವರನ್ನು ಹಂತಕ್ಕೇರಿಸಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): 16 ರಿಂದ 18 ಅಂಕ ತಲುಪಲು ಇವರಿಗೆ 2-3 ಗೆಲುವುಗಳ ಅವಶ್ಯಕತೆಯಿದೆ. ತಂಡದ ಬೃಹತ್ ನೆಟ್ ರನ್‌ರೇಟ್ (+1.420) ಇವರಿಗೆ ವರದಾನವಾಗಿದ್ದು, ಇತರ ಫಲಿತಾಂಶಗಳು ಪೂರಕವಾಗಿದ್ದರೆ 14 ಅಂಕಗಳಲ್ಲೂ ಅರ್ಹತೆ ಪಡೆಯುವ ಸಾಧ್ಯತೆಯಿದೆ.
ಸನ್‌ರೈಸರ್ಸ್ ಹೈದರಾಬಾದ್ (SRH): ಸುರಕ್ಷಿತವಾಗಿ 16 ಅಂಕ ತಲುಪಲು ಇನ್ನುಳಿದ 4 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲಲೇಬೇಕು. ಅವರ ಪ್ರಬಲ ಬ್ಯಾಟಿಂಗ್ ಲೈನಪ್ ಎನ್‌ಆರ್‌ಆರ್ (+0.644) ಕಾಯ್ದುಕೊಳ್ಳಲು ನೆರವಾಗುತ್ತಿದೆ.
ರಾಜಸ್ಥಾನ್ ರಾಯಲ್ಸ್ (RR): ಹೈದರಾಬಾದ್‌ನಂತೆಯೇ ಇವರಿಗೂ 16 ಅಂಕ ತಲುಪಲು 2 ಗೆಲುವು ಬೇಕಿದೆ. ಆದರೆ ಪ್ರಸ್ತುತ ಅವರ ಫಾರ್ಮ್ ಏರುಪೇರಾಗಿದ್ದು, ನೆಟ್ ರನ್‌ರೇಟ್ (+0.510) ಕಾಪಾಡಿಕೊಳ್ಳುವುದು ಅನಿವಾರ್ಯ.
ಗುಜರಾತ್ ಟೈಟಾನ್ಸ್ (GT): ಇವರ ಬಳಿ 12 ಅಂಕಗಳಿದ್ದರೂ ನೆಗೆಟಿವ್ ನೆಟ್ ರನ್‌ರೇಟ್ (-0.147) ಇವರಿಗೆ ಅಡ್ಡಿಯಾಗಿದೆ. ರಾಜಸ್ಥಾನ್ ಅಥವಾ ಹೈದರಾಬಾದ್ ಅನ್ನು ಹಿಂದಿಕ್ಕಲು ಇನ್ನುಳಿದ 4 ಪಂದ್ಯಗಳಲ್ಲಿ 2 ಅನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK): 16 ಅಂಕ ತಲುಪಲು ಉಳಿದ 4 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಲೇಬೇಕು. ಅವರ ನೆಟ್ ರನ್‌ರೇಟ್ (+0.151) ಸಕಾರಾತ್ಮಕವಾಗಿದ್ದು, ಅಂಕಗಳು ಸಮನಾದಾಗ ಇದು ನೆರವಿಗೆ ಬರಲಿದೆ.
ಡೆಲ್ಲಿ ಕ್ಯಾಪಿಟಲ್ಸ್ (DC): ಈಗ ಇವರಿಗೆ ತಪ್ಪು ಮಾಡಲು ಅವಕಾಶವೇ ಇಲ್ಲ. ಪ್ಲೇಆಫ್ ಆಸೆ ಜೀವಂತವಾಗಿಡಲು ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು. ಜೊತೆಗೆ ಅತಿ ಕಡಿಮೆ ಇರುವ ಎನ್‌ಆರ್‌ಆರ್ (-0.949) ಕೂಡ ಇವರಿಗೆ ದೊಡ್ಡ ತಲೆನೋವಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ (KKR): 17 ಅಂಕ ತಲುಪಲು ಉಳಿದ 5 ಪಂದ್ಯಗಳನ್ನೂ ಗೆಲ್ಲಲೇಬೇಕು. ಒಂದು ವೇಳೆ 4 ಗೆದ್ದರೂ (-0.539) ಎನ್‌ಆರ್‌ಆರ್ ಕಾರಣದಿಂದ ಇವರು ಹೊರಬೀಳುವ ಸಾಧ್ಯತೆ ಹೆಚ್ಚಿದೆ.
ಮುಂಬೈ ಇಂಡಿಯನ್ಸ್ (MI): ಮುಂಬೈ ಗರಿಷ್ಠ 14 ಅಂಕಗಳನ್ನಷ್ಟೇ ಗಳಿಸಲು ಸಾಧ್ಯ. ಇನ್ನುಳಿದ ಎಲ್ಲಾ ಪಂದ್ಯ ಗೆದ್ದು, 12 ಅಂಕವಿರುವ ಇತರ ತಂಡಗಳು ಎಲ್ಲಾ ಪಂದ್ಯ ಸೋಲಲಿ ಎಂದು ಪ್ರಾರ್ಥಿಸಬೇಕಿದೆ. ಇವರ ಎನ್‌ಆರ್‌ಆರ್ (-0.649) ಕೂಡ ಕಳಪೆಯಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ (LSG): ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ. ಉಳಿದ 5 ಪಂದ್ಯಗಳನ್ನು ಗೆದ್ದರೂ 14 ಅಂಕಗಳಷ್ಟೇ ಸಿಗಲಿವೆ. ಅತಿ ಕೆಟ್ಟ ಎನ್‌ಆರ್‌ಆರ್ (-1.076) ಕಾರಣದಿಂದ ಇವರ ಹಾದಿ ಸಂಪೂರ್ಣ ಬಂದ್ ಆಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.