IPL 2025 ಸಂಪೂರ್ಣ ವೇಳಾಪಟ್ಟಿ ಪ್ರಕಟ: ಬೆಂಗಳೂರಿನಲ್ಲಿ ಮೊದಲ ಪಂದ್ಯ ಯಾವಾಗ?

Published : Feb 16, 2025, 07:10 PM ISTUpdated : Feb 16, 2025, 07:12 PM IST
IPL 2025 ಸಂಪೂರ್ಣ ವೇಳಾಪಟ್ಟಿ ಪ್ರಕಟ: ಬೆಂಗಳೂರಿನಲ್ಲಿ ಮೊದಲ ಪಂದ್ಯ ಯಾವಾಗ?

ಸಾರಾಂಶ

ಐಪಿಎಲ್ ೧೮ನೇ ಆವೃತ್ತಿ ಮಾರ್ಚ್ ೨೨ರಿಂದ ಮೇ ೨೫ರವರೆಗೆ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ಮತ್ತು ಆರ್‌ಸಿಬಿ ಈಡನ್‌ ಗಾರ್ಡನ್ಸ್‌ನಲ್ಲಿ ಮುಖಾಮುಖಿಯಾಗಲಿವೆ. ೧೦ ತಂಡಗಳು ೧೩ ನಗರಗಳಲ್ಲಿ ೭೪ ಪಂದ್ಯಗಳನ್ನಾಡಲಿವೆ. ಫೈನಲ್‌ ಕೂಡ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ ೨ ರಂದು ಗುಜರಾತ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ.

ಬೆಂಗಳೂರು: ಬಹುನಿರೀಕ್ಷಿತ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್ 22ರಂದು ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಕಣಕ್ಕಿಳಿಯುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಐತಿಹಾಸಿಕ ಈಡೆನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಲಿದೆ. ಇನ್ನು ಐಪಿಎಲ್ ಫೈನಲ್ ಪಂದ್ಯವು ಮೇ 25ರಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿಯೇ ನಡೆಯಲಿದೆ.

ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎಂದು ಕರೆಸಿಕೊಳ್ಳುವ ಈ ಐಪಿಎಲ್ ಟೂರ್ನಿಯಲ್ಲಿ ದೇಶದ ವಿವಿಧ 13 ನಗರಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಕಳೆದ ಬಾರಿಯಂತೆ ಈ ಬಾರಿ ಕೂಡಾ 10 ಬಲಾಢ್ಯ ತಂಡಗಳು ಐಪಿಎಲ್ ಟ್ರೋಫಿಗಾಗಿ ಕಾದಾಡಲಿವೆ. ಇನ್ನು ತಲಾ ಐದು ಬಾರಿಯ ಐಪಿಎಲ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಟೂರ್ನಿಯ ಎರಡನೇ ದಿನ ಮುಖಾಮುಖಿಯಾಗಲಿವೆ. ಇನ್ನು ಕಳೆದ ಆವೃತ್ತಿಯ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮಾರ್ಚ್ 23ರಂದು ರಾಜಸ್ಥಾನ ರಾಯಲ್ಸ್ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಮುಂಬೈ ಇಂಡಿಯನ್ಸ್ ಕೂಡಿಕೊಂಡ ಆಫ್ಘಾನ್ ಮಾರಕ ಸ್ಪಿನ್ನರ್! ಹಾರ್ದಿಕ್ ಪಾಂಡ್ಯ ಪಡೆ ಮತ್ತಷ್ಟು ಬಲಿಷ್ಠ!

10 ಐಪಿಎಲ್ ತಂಡಗಳು ತಮ್ಮ ತವರಿನ ಮೈದಾನದಲ್ಲಿ ಕ್ರಿಕೆಟ್ ಆಡುವುದು ಮಾತ್ರವಲ್ಲದೇ ತಮ್ಮ ತವರಿನಾಚೆ ಅಂದರೆ ವಿಶಾಖಪಟ್ಟಣಂ, ಗುವಾಹಟಿ ಹಾಗೂ ಧರ್ಮಶಾಲಾ ಮೈದಾನದಲ್ಲಿಯೂ ಕೆಲವು ಐಪಿಎಲ್ ಪಂದ್ಯಗಳನ್ನು ಆಡಲಿವೆ. ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ತಮ್ಮ ಪಾಲಿನ ಕೆಲವು ಪಂದ್ಯಗಳನ್ನು ಈ ಮೂರು ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲಿವೆ.

ಐಪಿಎಲ್ 2025: ಆರ್‌ಸಿಬಿ ಫ್ರಾಂಚೈಸಿ ವಿರಾಟ್ ಕೊಹ್ಲಿ ಕೈಬಿಟ್ಟು ರಜತ್‌ ಪಾಟೀದಾರ್‌ಗೆ ನಾಯಕ ಪಟ್ಟಕಟ್ಟಿದ್ದೇಕೆ?

ಲೀಗ್ ಹಂತದ ಪಂದ್ಯಗಳು ಮೇ 18ಕ್ಕೆ ಮುಕ್ತಾಯವಾಗಲಿವೆ. ಇನ್ನು ಪ್ಲೇ ಆಫ್ ಪಂದ್ಯಗಳಿಗೆ ಹೈದರಾಬಾದ್ ಹಾಗೂ ಕೋಲ್ಕತಾ ಆತಿಥ್ಯ ವಹಿಸಲಿದೆ. ಮೊದಲ ಕ್ವಾಲಿ ಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳು ಹೈದರಾಬಾದ್‌ನಲ್ಲಿ ನಡೆದರೆ, ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಲಿದೆ.

ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಪಂದ್ಯ ಯಾವಾಗ? 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರಿನ ಮೈದಾನವಾದ ಎಂ ಚಿನ್ನಸ್ವಾಮಿ ಸ್ಟೇಡಿಯಂಬನಲ್ಲಿ ಏಪ್ರಿಲ್ 02ರಂದು ಮೊದಲ ಪಂದ್ಯವನ್ನಾಡಲಿದೆ. ಆರ್‌ಸಿಬಿ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

ಬೆಂಗಳೂರಿನಲ್ಲಿ ನಡೆಯಲಿರುವ ಆರ್‌ಸಿಬಿ ತಂಡದ ಪಂದ್ಯಗಳು ಯಾವಾಗ?

1. ಏಪ್ರಿಲ್ 02- ಆರ್‌ಸಿಬಿ vs ಗುಜರಾತ್ ಟೈಟಾನ್ಸ್  ಸಂಜೆ: 7.30ಕ್ಕೆ

2. ಏಪ್ರಿಲ್ 10- ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್  ಸಂಜೆ: 7.30ಕ್ಕೆ 

3. ಏಪ್ರಿಲ್ 18- ಆರ್‌ಸಿಬಿ vs ಪಂಜಾಬ್ ಕಿಂಗ್ಸ್  ಸಂಜೆ: 7.30ಕ್ಕೆ

4. ಏಪ್ರಿಲ್ 24- ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್  ಸಂಜೆ: 7.30ಕ್ಕೆ

5. ಮೇ 03 - ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್  ಸಂಜೆ: 7.30ಕ್ಕೆ

6. ಮೇ 13 - ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್  ಸಂಜೆ: 7.30ಕ್ಕೆ

7. ಮೇ 17 - ಆರ್‌ಸಿಬಿ vs ಕೋಲ್ಕತಾ ನೈಟ್ ರೈಡರ್ಸ್  ಸಂಜೆ: 7.30ಕ್ಕೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಆಫ್ರಿಕಾ ಫೈನಲ್ ಫೈಟ್: ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?