ಆಸ್ಟ್ರೇಲಿಯಾ ಸರಣಿಗೆ 27 ಬ್ಯಾಗ್‌ ಕೊಂಡೊಯ್ದಿದ್ದ ಭಾರತದ ಸ್ಟಾರ್ ಬ್ಯಾಟರ್‌? ಬಿಸಿಸಿಐನಿಂದ ಕಠಿಣ ತೀರ್ಮಾನ

Published : Feb 16, 2025, 08:19 AM ISTUpdated : Feb 16, 2025, 08:31 AM IST
ಆಸ್ಟ್ರೇಲಿಯಾ ಸರಣಿಗೆ 27 ಬ್ಯಾಗ್‌ ಕೊಂಡೊಯ್ದಿದ್ದ ಭಾರತದ ಸ್ಟಾರ್ ಬ್ಯಾಟರ್‌? ಬಿಸಿಸಿಐನಿಂದ ಕಠಿಣ ತೀರ್ಮಾನ

ಸಾರಾಂಶ

ಆಸ್ಟ್ರೇಲಿಯಾ ಸರಣಿಯಲ್ಲಿ ಆಟಗಾರರೊಬ್ಬರು ೨೭ ಭಾರಿ ಬ್ಯಾಗೇಜ್‌ ತಂದಿದ್ದರಿಂದ ಬಿಸಿಸಿಐ ಹೊಸ ನಿಯಮ ಜಾರಿಗೊಳಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಕುಟುಂಬಸ್ಥರ ಪ್ರಯಾಣಕ್ಕೆ ಅವಕಾಶವಿಲ್ಲ. 150 ಕೆಜಿಗಿಂತ ಹೆಚ್ಚಿನ ಲಗೇಜ್‌ಗೆ ಆಟಗಾರರೇ ಹಣ ಪಾವತಿಸಬೇಕು. ರೋಹಿತ್ ಟೆಸ್ಟ್ ತಂಡದಿಂದ ಹೊರಬೀಳುವ ಸಾಧ್ಯತೆ ಇದ್ದು, ಬುಮ್ರಾ ನಾಯಕರಾಗಬಹುದು.

ನವದೆಹಲಿ: ಆಸ್ಟ್ರೇಲಿಯಾ ಸರಣಿ ಬೆನ್ನಲ್ಲೇ ಭಾರತೀಯ ಆಟಗಾರರಿಗೆ ಹಲವು ಕಠಿಣ ನಿಯಮಗಳನ್ನು ಬಿಸಿಸಿಐ ಜಾರಿಗೊಳಿಸಿತ್ತು. ವಿದೇಶಿ ಸರಣಿ ವೇಳೆ ಪತ್ನಿ, ಕುಟುಂಬಸ್ಥರಿಗೆ ನಿರ್ಬಂಧ ಜೊತೆಗೆ ಆಟಗಾರರ ಲಗೇಜ್‌ಗೂ ಮಿತಿ ಹೇರಿತ್ತು. ಇದಕ್ಕೆ ಕಾರಣ ಏನು ಎಂಬುದು ಈಗ ಬಹಿರಂಗಗೊಂಡಿದೆ.

ಕೆಲ ಮಾಧ್ಯಮಗಳ ವರದಿ ಪ್ರಕಾರ, ಭಾರತದ ತಾರಾ ಆಟಗಾರರೊಬ್ಬರು ಆಸೀಸ್‌ ಸರಣಿಗೆ ಬರೋಬ್ಬರಿ 27 ಬ್ಯಾಗ್‌ ಕೊಂಡೊಯ್ದಿದ್ದರು. ಎಲ್ಲವೂ ಅವರ ಬ್ಯಾಗ್‌ ಅಲ್ಲ. ಪತ್ನಿ, ಸಹಾಯಕ ಸಿಬ್ಬಂದಿಗೆ ಸೇರಿದ ಬ್ಯಾಗ್‌ಗಳಿದ್ದವು. ಅದರಲ್ಲಿ 17 ಬ್ಯಾಟ್‌ಗಳಿತ್ತು. ಒಟ್ಟಾರೆ ಬ್ಯಾಗ್‌ 250ಕ್ಕಿಂತ ಹೆಚ್ಚು ತೂಕವಿತ್ತು. ಹೀಗಾಗಿ ಬಿಸಿಸಿಐ ಲಕ್ಷಾಂತರ ರು. ಮೊತ್ತ ಪಾವತಿಸಬೇಕಾಯಿತು ಎಂದು ತಿಳಿದುಬಂದಿದೆ. 

ಇನ್ನೂ ಕೆಲ ಆಟಗಾರರು ಭಾರಿ ಪ್ರಮಾಣದ ಬ್ಯಾಗ್‌ ಕೊಂಡೊಯ್ಯುತ್ತಿದ್ದ ಕಾರಣದಿಂದ, ಬ್ಯಾಗ್‌ 150ಕ್ಕಿಂತ ಹೆಚ್ಚು ತೂಕವಿದ್ದರೆ ಅದಕ್ಕೆ ಆಟಗಾರರೇ ಹಣ ಪಾವತಿಸಬೇಕು ಎಂದು ಬಿಸಿಸಿಐ ನಿಯಮ ರೂಪಿಸಿದೆ.

ಚಾಂಪಿಯನ್ಸ್‌ ಟ್ರೋಫಿ ಹಿಂದೆ ರೋಚಕ ಇತಿಹಾಸ! ಐಸಿಸಿ ಹಣ ಸಂಗ್ರಹಕ್ಕಾಗಿ ಆರಂಭಗೊಂಡಿದ್ದ ಟೂರ್ನಿ!

ಚಾಂಪಿಯನ್ಸ್‌ ಟ್ರೋಫಿ: ಭಾರತ ಆಟಗಾರರ ಜತೆ ಕುಟುಂಬಸ್ಥರ ಪ್ರಯಾಣ ಇಲ್ಲ

ನವದೆಹಲಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ವೇಳೆ ಭಾರತೀಯ ಆಟಗಾರರ ಜೊತೆ ಅವರ ಕುಟುಂಬ ಸದಸ್ಯರು ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಚಾಂಪಿಯನ್ಸ್‌ ಟ್ರೋಫಿಯಿಂದಲೇ ಪರಿಷ್ಕೃತ ನಿಯಮಗಳು ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಸೋತ ಬಳಿಕ ಬಿಸಿಸಿಐ ತನ್ನ ನಿಯಮಗಳಲ್ಲಿ ಕೆಲ ಬದಲಾವಣೆ ಮಾಡಿತ್ತು. 

45 ದಿನಗಳಿಗಿಂತ ಹೆಚ್ಚಿನ ಪ್ರವಾಸವಾದರೆ ಮಾತ್ರ ಕುಟುಂಬಸ್ಥರು ಆಟಗಾರರ ಜೊತೆ ಇರಬಹುದು ಎನ್ನುವ ನಿಯಮವನ್ನು ಮತ್ತೆ ಪರಿಚಯಿಸಲಾಗಿತ್ತು. ಚಾಂಪಿಯನ್ಸ್‌ ಟ್ರೋಫಿ 3 ವಾರಗಳಲ್ಲೇ ಮುಕ್ತಾಯಗೊಳ್ಳಲಿರುವ ಕಾರಣ, ಆಟಗಾರರು ತಮ್ಮ ಕುಟುಂಬಸ್ಥರೊಂದಿಗೆ ಪ್ರಯಾಣಿಸಲು ಅವಕಾಶವಿಲ್ಲ. ಇದಲ್ಲದೇ ಆಟಗಾರರು ಪ್ರತ್ಯೇಕ ಮ್ಯಾನೇಜರ್‌ಗಳು, ಬಾಣಸಿಗರು, ಭದ್ರತಾ ಸಿಬ್ಬಂದಿಯನ್ನೂ ಕರೆತರುವಂತಿಲ್ಲ. ಇನ್ನು, ಲಗೇಜ್‌ನ ತೂಕ 150 ಕೆ.ಜಿ. ಮೀರಿದರೆ ಅದಕ್ಕೆ ಆಟಗಾರರೇ ಶುಲ್ಕ ಪಾವತಿಸಬೇಕಿದೆ.

ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ತಂಡಕ್ಕೆ ಬಂಪರ್ ನಗದು ಬಹುಮಾನ ಘೋಷಿಸಿದ ಐಸಿಸಿ! 53% ಕ್ಯಾಷ್‌ ಪ್ರೈಸ್ ಹೈಕ್

ಇನ್ನು ಟೆಸ್ಟ್‌ಗೆ ರೋಹಿತ್‌ ಇಲ್ಲ, ಬುಮ್ರಾಗೆ ನಾಯಕತ್ವ: ವರದಿ

ನವದೆಹಲಿ: ಭಾರತದ ನಾಯಕ ರೋಹಿತ್‌ ಶರ್ಮಾ ಇನ್ನು ಮುಂದೆ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದ್ದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೆ, ವೇಗಿ ಜಸ್‌ಪ್ರೀತ್‌ ಬೂಮ್ರಾಗೆ ಕಾಯಂ ಟೆಸ್ಟ್‌ ನಾಯಕತ್ವ ವಹಿಸಲು ಬಿಸಿಸಿಐ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ರೋಹಿತ್‌ ಟೆಸ್ಟ್‌ನಲ್ಲಿ ತೀರಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಸರಣಿಯ ಕೊನೆ ಪಂದ್ಯದಿಂದ ಅವರು ಹೊರಗುಳಿಯುವಂತಾಗಿತ್ತು. ಈ ನಡುವೆ, ತಮ್ಮ ಟೆಸ್ಟ್‌ ನಿವೃತ್ತಿ ವದಂತಿ ತಳ್ಳಿ ಹಾಕಿದ್ದ ರೋಹಿತ್‌, ಇನ್ನುಷ್ಟು ಸಮಯ ಮುಂದುವರಿಯುವಾಗಿ ತಿಳಿಸಿದ್ದರು. ಆದರೆ ರೋಹಿತ್‌ರನ್ನು ಟೆಸ್ಟ್‌ ತಂಡದಿಂದಲೇ ಕೈಬಿಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಜೂನ್‌ನಲ್ಲಿ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧ ಸರಣಿ ಮೂಲಕ ಬೂಮ್ರಾಗೆ ಟೆಸ್ಟ್‌ನ ಕಾಯಂ ನಾಯಕತ್ವ ವಹಿಸಲಿದೆ ಎಂದು ವರದಿಯಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?