RCB ಟಿ-20 ಮ್ಯಾಚ್ ನೋಡೋಕೆ ಸಮಯ ವಿಸ್ತರಿಸಿದ ನಮ್ಮ ಮೆಟ್ರೋ; ಆದ್ರೆ ಚೆನ್ನೈ ಮೆಟ್ರೋ ಫ್ರೀ ಟಿಕೆಟ್ ನೀಡಿತ್ತು!

Published : Apr 01, 2025, 01:29 PM ISTUpdated : Apr 01, 2025, 01:32 PM IST
RCB ಟಿ-20 ಮ್ಯಾಚ್ ನೋಡೋಕೆ ಸಮಯ ವಿಸ್ತರಿಸಿದ ನಮ್ಮ ಮೆಟ್ರೋ; ಆದ್ರೆ ಚೆನ್ನೈ ಮೆಟ್ರೋ ಫ್ರೀ ಟಿಕೆಟ್ ನೀಡಿತ್ತು!

ಸಾರಾಂಶ

ಬೆಂಗಳೂರಿನಲ್ಲಿ ಐಪಿಎಲ್ 2025ರ ಆರ್‌ಸಿಬಿ ಪಂದ್ಯಗಳ ದಿನಗಳಲ್ಲಿ ನಮ್ಮ ಮೆಟ್ರೋ ಸೇವೆಯನ್ನು ರಾತ್ರಿ 12.30ರವರೆಗೆ ವಿಸ್ತರಿಸಲಾಗಿದೆ. ಏಪ್ರಿಲ್ 2, 10, 18, 24 ಮತ್ತು ಮೇ 3, 13, 17 ರಂದು ಈ ಸೇವೆ ಲಭ್ಯವಿರುತ್ತದೆ. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಮಧ್ಯರಾತ್ರಿ 1.15ಕ್ಕೆ ಹೊರಡಲಿದೆ. ಆದರೆ, ಚೆನ್ನೈ ಮೆಟ್ರೋ ಆರ್‌ಸಿಬಿ-ಸಿಎಸ್‌ಕೆ ಪಂದ್ಯ ವೀಕ್ಷಕರಿಗೆ ಉಚಿತ ಸಂಚಾರ ನೀಡಿತ್ತು.

ಬೆಂಗಳೂರು (ಏ.01): ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2025 ಆರ್‌ಸಿಬಿ ಪಂದ್ಯಗಳು ನಡೆಯುವ 7 ದಿನಗಳ ಕಾಲ ನಮ್ಮ ಮೆಟ್ರೋ ಸೇವೆಯ ಅವಧಿಯನ್ನು ಮಧ್ಯರಾತ್ರಿ 12.30ರವರೆಗೆ ವಿಸ್ತರಣೆ ಮಾಡಿ ಬಿಎಂಆರ್‌ಸಿಎಲ್ ಆದೇಶ ಹೊರಡಿಸಿದೆ. ಆದರೆ, ಚೆನ್ನೈನಲ್ಲಿ ನಡೆದ ಆರ್‌ಸಿಬಿ-ಸಿಎಸ್‌ಕೆ ಪಂದ್ಯವನ್ನು ವೀಕ್ಷಣೆ ಮಾಡಲು ಬರುವ ಎಲ್ಲ ಕ್ರಿಕೆಟ್ ಅಭಿಮಾನಿಗಳಿಗೆ ಚೆನ್ನೈ ಮೆಟ್ರೋ ಟಿಕೆಟ್ ಫ್ರೀ ಸಂಚಾರ ಸೇವೆಯನ್ನು ನೀಡಿತ್ತು.

ಹೌದು, ಮಾ.28ರ ಶುಕ್ರವಾರ ತಮಿಳುನಾಡಿನ ರಾಜಧಾನಿ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಚೆನ್ನೈ ಸೂಪರ್ ಕಿಂಗ್ಸ್ (RCB-CSK) ಪಂದ್ಯ ವೀಕ್ಷಣೆಗೆ ಹೋಗುವ ಎಲ್ಲ ಕ್ರಿಕೆಟ್ ಅಭಿಮಾಣಿಗಳಿಗೆ ಚೆನ್ನೈ ಮೆಟ್ರೋದಿಂದ ಉಚಿತ ಸೇವೆಯನ್ನು ನೀಡಲಾಗಿತ್ತು. ಸಿಎಸ್‌ಕೆ ಪಂದ್ಯ ವೀಕ್ಷಿಸಲು ಹೋಗುವ ಟಿಕೆಟ್ ಇದ್ದರೆ ಸಾಕು ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ನಮ್ಮ ಮೆಟ್ರೋದಿಂದ ಜನರಿಗೆ ಬೆಲೆ ಏರಿಕೆ ಬರೆ ಎಳೆಯುವುದು ಬಿಟ್ಟರೆ ಬೇರೆ ಕೊಡುಗೆ ನೀಡುವ ಯಾವುದೇ ಚಿಂತನೆ ಇದ್ದಂತಿಲ್ಲ.

ಇದನ್ನೂ ಓದಿ: ಚೆನ್ನೈ: ಆರ್‌ಸಿಬಿ Vs ಸಿಎಸ್‌ಕೆ ಮ್ಯಾಚಿಗೆ ಫ್ರೀ ಮೆಟ್ರೋ ಟಿಕೆಟ್! ನಮ್ಮ ಮೆಟ್ರೋ ನಡೆ ಏನಾಗಬಹುದು?

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, ಬೆಂಗಳೂರಿನಲ್ಲಿ ನಡೆಯಲಿರುವ TATA IPL T-20 ಕ್ರಿಕೆಟ್ ಪಂದ್ಯಗಳ ವೀಕ್ಷಣೆಗಾಗಿ, ನಮ್ಮ ಮೆಟ್ರೋ ದಿನಾಂಕ 02, 10, 18, ಹಾಗೂ 24ನೇ ಏಪ್ರಿಲ್ ಮತ್ತು 03, 13 ಹಾಗೂ 17ನೇ ಮೇ, 2025 ರಂದು ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ ವೈಟ್‌ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಸೇವೆಯನ್ನು ರಾತ್ರಿ 12.30ರ ವರೆಗೆ ವಿಸ್ತರಿಸಿದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 01.15 ಕ್ಕೆ ಹೊರಡಲಿದೆ. ಕ್ರಿಕೆಟ್ ಪ್ರೇಮಿಗಳು ನಮ್ಮ ಮೆಟ್ರೋದ ಸೇವೆಯನ್ನು ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?