
ಗುವಾಹಟಿ: ಎಂ.ಎಸ್.ಧೋನಿ ಐಪಿಎಲ್ ನಲ್ಲಿ ಮುಂದುವರಿಯುವ ಬದಲು ನಿವೃತ್ತಿಯಾಗಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ ನ ಪ್ರಧಾನ ಕೋಚ್ ಸ್ಟೀಫನ್ ಫೆಮಿಂಗ್‌ರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೋತ ಬಳಿಕ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಫ್ಲೆಮಿಂಗ್, ನಿವೃತ್ತಿಯ ಸಮಯ ಹತ್ತಿರ ಬಂದಿದೆ ಎಂಬುದು ಧೋನಿಗೂ ಗೊತ್ತಿದೆ. ಮೊದಲಿನಂತೆ ಅವರು ಮೈದಾನದಲ್ಲಿ ಓಡಾಡಲು ಆಗುತ್ತಿಲ್ಲ. ನಿರಂತರವಾಗಿ ಓಡುತ್ತ, 10 ಓವರ್ ಬ್ಯಾಟ್ ಮಾಡಲು ಅವರಿಗೆ ಸಾಧ್ಯವಿಲ್ಲ. ಯಾವ ದಿನದಂದು ತಂಡಕ್ಕೆ ಎಷ್ಟು ಕೊಡುಗೆ ನೀಡಬಹುದು ಎನ್ನುವುದನ್ನು ಧೋನಿಯೇ ನಿರ್ಧರಿಸುತ್ತಾರೆ' ಎಂದರು.
ಮುಂಬೈ ಇಂಡಿಯನ್ಸ್ ಸೋಲಿನ ಬೆನ್ನಲ್ಲೇ ನಾಯಕ ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್!
ಪ್ಲೆಮಿಂಗ್‌ರ ಈ ಹೇಳಿಕೆ ಬಗ್ಗೆ ಸಾಮಾಜಿಕ ತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಧೋನಿ ಕೂಡಲೇ ನಿವೃತ್ತಿ ಘೋಷಿಸಬೇಕು ಎಂದು ಕೆಲವರು ಅಭಿಪ್ರಾಯಪಟ್ಟರೆ, ಅವರು ವಿಕೆಟ್ ಕೀಪಿಂಗ್, ತಂಡ ನಿರ್ವಹಣೆಯಲ್ಲಿ ನೀಡುತ್ತಿದ್ದು, ಇನ್ನಷ್ಟು ದಿನ ಕೊಡುಗೆ ಮುಂದುವರಿಯಲು ಸಮಸ್ಯೆ ಇಲ್ಲ ಎಂದು ಮತ್ತೆ ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ.
2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಎಂ ಎಸ್ ಧೋನಿ, ಇದೀಗ ಐಪಿಎಲ್‌ನಲ್ಲಿ ಮಾತ್ರ ಕ್ರಿಕೆಟ್ ಆಡಲು ಕಣಕ್ಕಿಳಿಯುತ್ತಿದ್ದಾರೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಅನ್‌ಕ್ಯಾಪ್ಡ್ ರೂಲ್ಸ್ ಪ್ರಕಾರ ಎಂ ಎಸ್ ಧೋನಿಯನ್ನು 4 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ. ನಾಯಕನಾಗಿ 5 ಟ್ರೋಫಿ ಗೆದ್ದಿರುವ ಧೋನಿ, ಆಟಗಾರನಾಗಿ ಇನ್ನೊಂದು ಟ್ರೋಫಿ ಗೆಲ್ಲಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.
ಇದನ್ನೂ ಓದಿ: ಆಟದ ನಡುವೆ ಕ್ರೀಡಾಪಟುಗಳು ಬಾಳೆಹಣ್ಣು ತಿನ್ನಲು ಕಾರಣವೇನು?
ಸಿಎಸ್‌ಕೆ, ಹೈದರಾಬಾದ್‌ಗೆ ಸತತ 2ನೇ ಸೋಲಿನ ಆಘಾತ
ವಿಶಾಖಪಟ್ಟಣಂ/ಗುವಾಹಟಿ: ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಸತತ 2ನೇ ಸೋಲುಂಡಿವೆ. ಭಾನುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ 7 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆ ಶರಣಾದರೆ, ರಾಜಸ್ಥಾನ ರಾಯಲ್ಸ್ ವಿರುದ್ದ ಚೆನ್ನೈ 6 ರನ್ ಸೋಲು ಕಂಡಿತು. ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ನೀಡಿದ 164 ರನ್ ಗುರಿಯನ್ನು ಡೆಲ್ಲಿ ಇನ್ನೂ 4 ಓವರ್ ಬಾಕಿ ಇರುವಂತೆ ಬೆನ್ನತ್ತಿ ಸತತ 2ನೇ ಜಯ ದಾಖಲಿಸಿತು.
ಇದನ್ನೂ ಓದಿ: ಶೇನ್ ವಾರ್ನ್ ಸಾವಿನ ಹಿಂದಿದೆ ಕಾಣದ ಕೈ; ಕೊನೆಗೂ ಬಯಲಾಯ್ತು ಬೆಚ್ಚಿಬೀಳಿಸೋ ಸುದ್ದಿ!
ಇನ್ನು, ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ 9 ವಿಕೆಟ್ ಗೆ 182 ರನ್ ಗಳಿಸಿದರೆ, ಚೆನ್ನೈ 6 ವಿಕೆಟ್‌ಗೆ 176 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರಾಯಲ್ಸ್ ಮೊದಲ ಜಯ ದಾಖಲಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.