PBKS vs KKR: ಬಲಿಷ್ಠ ಕೆಕೆಆರ್ ಸವಾಲು ಗೆಲ್ಲುತ್ತಾ ಪಂಜಾಬ್ ಕಿಂಗ್ಸ್‌?

ಪಂಜಾಬ್ ಕಿಂಗ್ಸ್ ಇಂದು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಕೆಕೆಆರ್ ತಂಡವನ್ನು ಕಟ್ಟಿಹಾಕಲು ಪಂಜಾಬ್ ಬೌಲರ್ ಗಳು ತಂತ್ರ ರೂಪಿಸಲಿದ್ದಾರೆ.

IPL 2025 Punjab Kings take on KKR Challenge kvn

ಮುಲ್ಲಾನ್‌ಪುರ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 245 ರನ್ ಕಲೆಹಾಕಿದ್ದರೂ ಸೋಲನುಭವಿಸಿರುವ ಪಂಜಾಬ್ ಕಿಂಗ್ ಮಂಗಳವಾರ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈ ಡರ್ಸ್ ವಿರುದ್ಧ ಸೆಣಸಾಡಲಿದೆ. ಕೆಕೆಆರ್ ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದ್ದರೆ, ಪಂಜಾಬ್ 5 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿದೆ.

ಪಂಜಾಬ್ ಈ ಬಾರಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದರೂ, ಬೌಲರ್‌ಗಳು ಮಂಕಾಗಿದ್ದಾರೆ. ಅರ್ಶ್‌ದೀಪ್ ಸಿಂಗ್ ಮೊನಚು ದಾಳಿ ಸಂಘ ಟಿಸುತ್ತಿದ್ದರೂ, ತಾರಾ ಸ್ಪಿನ್ನರ್ ಚಹಲ್ ದುಬಾರಿ ಯಾಗುತ್ತಿದ್ದಾರೆ. ಚಹಲ್ 5 ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಕಿತ್ತಿದ್ದು, ಪ್ರತಿ ಓವರ್‌ಗೆ 11. 13 ರಂತೆ ರನ್ ಬಿಟ್ಟುಕೊಟ್ಟಿದ್ದಾರೆ. ಸ್ಫೋಟಕ ಬ್ಯಾಟರ್‌ಗಳನ್ನು ಹೊಂದಿರುವ ಕೆಕೆಆರ್ ವಿರುದ್ಧವೂ ಚಹಲ್ ಕಠಿಣ ಸವಾಲು ಎದುರಿಸಲಿದ್ದಾರೆ. ಬ್ಯಾಟಿಂಗ್‌ನಲ್ಲಿ ಶ್ರೇಯಸ್ ಅಯ್ಯರ್(250 ರನ್) ಜೊತೆ ಪ್ರಿಯಾನ್ ಆರ್ಯ, ನೇಹಲ್‌ ವಧೇರಾ, ಪ್ರಬ್‌ಸಿಮ್ರನ್, ಶಶಾಂಕ್ ಸಿಂಗ್ ಮಿಂಚುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

Latest Videos

ಸತತ 5 ಸೋಲಿನ ಬಳಿಕ ಕೊನೆಗೂ ಗೆದ್ದ ಸಿಎಸ್‌ಕೆ! ಪಂದ್ಯ ಗೆಲ್ಲಿಸಿದ ಧೋನಿ

ಮತ್ತೊಂದೆಡೆ ಕೆಕೆಆರ್ ಕಳೆದ ಪಂದ್ಯದಲ್ಲಿ ಚೆನ್ನೈಯನ್ನು ಹೀನಾಯವಾಗಿ ಸೋಲಿಸಿ, ಗೆಲುವಿನ ಹಳಿಗೆ ಮರಳಿತ್ತು. ತಂಡ ಸ್ಪಿನ್ನರ್ ಗಳಾದ ಕರುಣ್ ನಾಯರ್‌, ವರುಣ್ ಚಕ್ರವರ್ತಿ, ಮೊಯೀನ್ ಅಲಿ ಮೇಲೆ ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿದೆ. ಆದರೆ ಬ್ಯಾಟಿಂಗ್ ಸ್ನೇಹಿ ಮುಲ್ಲಾನ್‌ಪುರ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದ್ದಾರೆ ಕಾದುನೋಡಬೇಕಿದೆ.

ಸಂಭಾವ್ಯ ಆಟಗಾರರ ಪಟ್ಟಿ;
ಪಂಜಾಬ್ ಕಿಂಗ್ಸ್: ಪ್ರಿಯಾನ್ಶ್ ಆರ್ಯ, ಪ್ರಭ್‌ಸಿಮ್ರನ್ ಸಿಂಗ್, ಶ್ರೇಯಸ್ ಅಯ್ಯರ್(ನಾಯಕ), ಮಾರ್ಕಸ್ ಸ್ಟೋಯ್ನಿಸ್, ನೇಹಾಲ್ ವದೇರಾ, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಮಾರ್ಕೊ ಯಾನ್ಸೆನ್, ಅರ್ಶದೀಪ್ ಸಿಂಗ್, ಯುಜುವೇಂದ್ರ ಚಹಲ್, ಯಶ್ ಠಾಕೂರ್, ವೈಶಾಕ್ ವಿಜಯ್‌ಕುಮಾರ್.

ಕೋಲ್ಕತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್, ಸುನಿಲ್ ನರೈನ್, ಅಜಿಂಕ್ಯ ರಹಾನೆ(ನಾಯಕ), ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಮೋಯಿನ್ ಅಲಿ, ಆಂಡ್ರೆ ರಸೆಲ್, ರಮಣ್‌ದೀಪ್ ಸಿಂಗ್, ಹರ್ಷಿತ್ ರಾಣಾ, ವೈಭವ್ ಅರೋರ, ವರುಣ್ ಚಕ್ರವರ್ತಿ. 

ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್

ಪಿಚ್ ರಿಪೋರ್ಟ್
ಮುಲ್ಲಾನ್‌ಪುರ ಕ್ರೀಡಾಂಗಣ ದೊಡ್ಡ ಮೊತ್ತದ ಪಂದ್ಯಗಳಿಗೆ ಹೆಸರುವಾಸಿ. ಇಲ್ಲಿ ಈ ಬಾರಿ ನಡೆದ 2 ಪಂದ್ಯಗಳ ಮೊದಲ ಇನ್ನಿಂಗ್ಸ್‌ನಲ್ಲೂ 200+ ರನ್ ದಾಖಲಾಗಿವೆ. ಎರಡೂ ಪಂದ್ಯಗಳಲ್ಲಿ ಚೇಸಿಂಗ್ ತಂಡ ಸೋತಿದೆ. ಹೀಗಾಗಿ ಟಾಸ್ ನಿರ್ಣಾಯಕ.

IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ! ಮತ್ತೊಂದು ರೆಕಾರ್ಡ್ ಮೇಲೆ ಕಣ್ಣು

ಗಾಯ: ವೇಗಿ ಫರ್ಗ್ಯೂಸನ್‌ ಐಪಿಎಲ್‌ನಿಂದ ಹೊರಕ್ಕೆ?

ನವದೆಹಲಿ: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಪಂಜಾಬ್ ಕಿಂಗ್ಸ್‌ ವೇಗಿ ಲಾಕಿ ಫರ್ಗ್ಯೂಸನ್‌ ಐಪಿಎಲ್‌ನಿಂದಲೇ ಹೊರಬೀಳುವ ಸಾಧ್ಯತೆಯಿದೆ. ಸನ್‌ರೈಸರ್ಸ್ ವಿರುದ್ಧ ಲಾಕಿ ಕೇವಲ 2 ಎಸೆತ ಎಸೆದಿದ್ದರು. ಬಳಿಕ ಗಾಯಗೊಂಡಿದ್ದರು. ಹೀಗಾಗಿ ಅವರು ಬಹುತೇಕ ಪಂದ್ಯಗಳಿಗೆ ಗೈರಾಗಲಿದ್ದಾರೆ.

vuukle one pixel image
click me!