ಚೆನ್ನೈ ಸೂಪರ್ ಕಿಂಗ್ಸ್ ಲಖನೌ ವಿರುದ್ಧ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಧೋನಿ ಮತ್ತು ಶಿವಂ ದುಬೆ ಅವರ ಅದ್ಭುತ ಆಟ ತಂಡಕ್ಕೆ ಜಯ ತಂದುಕೊಟ್ಟಿತು.
ಲಖನೌ: ಸತತ 5 ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ 5 ಬಾರಿ ಚಾಂಪಿಯನ್ ಚೆನ್ನೈ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಚೇಸಿಂಗ್‌ನಲ್ಲಿ ಪದೇ ಪದೇ ವಿಫಲರಾಗುತ್ತಿದ್ದ ತಂಡವನ್ನು ಈ ಬಾರಿ ಶಿವಂ ದುಬೆ- ನಾಯಕ ಧೋನಿ ಗೆಲುವಿನ ದಡ ಸೇರಿಸಿದ್ದಾರೆ. ಮಂಗಳವಾರ ಲಖನೌ ವಿರುದ್ದ ಚೆನ್ನೈ 5 ವಿಕೆಟ್ ಜಯಗಳಿಸಿ, ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಇದು ಚೆನ್ನೈಗೆ 7 ಪಂದ್ಯಗಳಲ್ಲಿ ಸಿಕ್ಕ 2ನೇ ಗೆಲುವು. ಅತ್ತ ಲಖನ್ ತಾನಾಡಿದ 7 ಪಂದ್ಯಗಳಲ್ಲಿ 3ನೇ ಸೋಲು ಕಂಡಿತು.
ಮೊದಲು ಬ್ಯಾಟ್ ಮಾಡಿದ ಲಖನೌ, ರಿಷಭ್ ಪಂತ್ ಅರ್ಧಶತಕದ ನೆರವಿನಿಂದ 6 ವಿಕೆಟ್‌ಗೆ 177 ರನ್ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ 19.3 ಓವರಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಹೊಸ ಆರಂಭಿಕ ಜೋಡಿಯನ್ನು ಆಡಿಸಿದ ಚೆನ್ನೈ, ಯಶಸ್ಸು ಪಡೆದುಕೊಂಡಿತು. ಶೇಖ್ ರಶೀದ್ ಹಾಗೂ ರಚಿನ್ ರವೀಂದ್ರ 4.5 ಓವರ್‌ಗಳಲ್ಲಿ 52 ರನ್ ಜೊತೆಯಾಟವಾಡಿದರು. ರಶೀದ್ 19 ಎಸೆತಗಳಲ್ಲಿ 27ಕ್ಕೆ ಔಟಾದರೆ, ರಚಿನ್ 22 ಎಸೆತಗಳಲ್ಲಿ 37 ರನ್ ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ತಂಡಕ್ಕೆ ನೆರವಾಗಿದ್ದು ಶಿವಂ ದುಬೆ ಹಾಗೂ ಧೋನಿ, ದುಬೆ 37 ಎಸೆತಗಳಲ್ಲಿ 43 ರನ್ ಗಳಿಸಿದರೆ, 16ನೇ ಓವರ್ ನಲ್ಲಿ ಕ್ರೀಸ್‌ಗೆ ಬಂದ ಧೋನಿ 11 ಎಸೆತಕ್ಕೆ 26 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು.
ಇದನ್ನೂ ಓದಿ: ಸನ್‌ರೈಸರ್ಸ್ ಹೈದರಾಬಾದ್ ಆಟಗಾರರು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಬೆಂಕಿ ಅವಘಡ, ಆಟಗಾರರಿಗೆ ಏನಾಯ್ತು?
ರಿಷಭ್ ಅಬ್ಬರ: ಆರಂಭಿಕ 6 ಪಂದ್ಯಗಳಲ್ಲಿ ವಿಫಲರಾಗಿದ್ದ ರಿಷಭ್ ಪಂತ್ ಈ ಪಂದ್ಯದಲ್ಲಿ ಲಖನೌ ಪಾಲಿನ ಆಪತ್ಬಾಂಧವರಾದರು. ಮಾರ್ಕ್‌ರಮ್ (6), ನಿಕೋಲಸ್ ಪೂರನ್ (8) ಮಿಂಚಲಿಲ್ಲ. ಮಿಚೆಲ್ ಮಾರ್ಷ್ ಇನ್ನಿಂಗ್ಸ್ 30ಕ್ಕೆ ಕೊನೆಗೊಂಡಿತು. ಈ ಹಂತದಲ್ಲಿ ತಂಡವನ್ನು ಕಾಪಾಡಿದ್ದು ರಿಷಭ್, ಅವರು 49 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 63 ರನ್ ಸಿಡಿಸಿ, ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಬದೋನಿ 22, ಸಮದ್ 20 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಸ್ಕೋರ್:
ಲಖನೌ 20 ಓವರಲ್ಲಿ 166/7 (ರಿಷಭ್ 63, ಮಾರ್ಷ್ 30, ಜಡೇಜಾ 2-24),
ಚೆನ್ನೈ 19.3 ಓವರಲ್ಲಿ 168/5 (ದುಬೆ 43*, ರಚಿನ್ 37, ಧೋನಿ 26 *, ಬಿಷ್ಟೋಮ್ 2-18)
ಪಂದ್ಯಶ್ರೇಷ್ಠ: ಎಂ.ಎಸ್.ಧೋನಿ
ಲಖನೌ ವೇಗಿ ಮಯಾಂಕ್ ಗುಣಮುಖ: ಶೀಘ್ರ ತಂಡಕ್ಕೆ
ಲಖನೌ: ಲಖನೌ ಸೂಪರ್ ಜೈಂಟ್ಸ್ ತಂಡದ ಪ್ರಮುಖ ವೇಗಿ ಮಯಾಂಕ್ ಯಾದವ್ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಬೆನ್ನು ಹಾಗೂ ಪಾದ ಗಾಯದಿಂದ ಬಳಲುತ್ತಿದ್ದ ಮಯಾಂಕ್ ಆರಂಭಿಕ 5 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಸದ್ಯ ಅವರಿಗೆ ಬಿಸಿಸಿಐ ವೈದ್ಯಕೀಯ ತಂಡ ಆಡಲು ಅನುಮತಿ ನೀಡಿದೆ. ಮಂಗಳವಾರ ತಂಡ ಸೇರಿಕೊಳ್ಳಲಿರುವ ಅವರು, ಏ.19ರಂದು ನಡೆಯಲಿರುವ ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ.
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ! ಮತ್ತೊಂದು ರೆಕಾರ್ಡ್ ಮೇಲೆ ಕಣ್ಣು
ಐಪಿಎಲ್: ಮೈದಾನದಲ್ಲೇ ಆಟಗಾರರ ಬ್ಯಾಟ್ ಪರೀಕ್ಷೆ ಆರಂಭಿಸಿದ ಅಂಪೈರ್‌ಗಳು!
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಬಾರದು ಎನ್ನುವ ಕಾರಣಕ್ಕೆ ಅಂಪೈರ್‌ಗಳು ಮೈದಾನದಲ್ಲೇ ಆಟಗಾರರ ಬ್ಯಾಟ್ ಪರೀಕ್ಷೆ ಆರಂಭಿಸಿದ್ದಾರೆ.
ಭಾನುವಾರ ನಡೆದ 2 ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್‌ನ ಶಿಮ್ರೋನ್ ಹೆಟ್ಮೇಯರ್, ನಿತೀಶ್ ರಾಣಾ, ಆರ್‌ಸಿಬಿಯ ಫಿಲ್ ಸಾಲ್ಟ್, ಮುಂಬೈನ ಹಾರ್ದಿಕ್ ಪಾಂಡ್ಯ ಬ್ಯಾಟ್‌ಗಳನ್ನು ಪರಿಶೀಲಿಸಿದ್ದಾರೆ.
ಈ ಮೊದಲು ಬ್ಯಾಟ್ ಪರೀಕ್ಷೆ ಡ್ರೆಸ್ಸಿಂಗ್ ರೂಂನಲ್ಲಿ ನಡೆಯುತ್ತಿತ್ತು. ಆದರೆ ಬಿಸಿಸಿಐ ಪಂದ್ಯದ ವೇಳೆ ಅಗತ್ಯ ಎನಿಸಿದರೆ ಬ್ಯಾಟ್ ಪರೀಕ್ಷೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಅಂಪೈರ್‌ಗಳು ಬ್ಯಾಟ್ ಪರೀಕ್ಷೆ ಆರಂಭಿಸಿದ್ದಾರೆ. ನಿಯಮಗಳ ಪ್ರಕಾರ ಬ್ಯಾಟ್ ಉದ್ದ ಗರಿಷ್ಠ 96.4 ಸೆಂ.ಮೀ., ಅಗಲ 10.79 ಸೆಂ.ಮೀ. ಮೀರಬಾರದು.