ಕಾನ್ಪುರ ಟೆಸ್ಟ್‌: ಮಳೆ ಇಲ್ಲದಿದ್ರೂ ಭಾರತ-ಬಾಂಗ್ಲಾದೇಶ 3ನೇ ದಿನದಾಟ ರದ್ದು

By Kannadaprabha NewsFirst Published Sep 30, 2024, 9:49 AM IST
Highlights

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟವು ಒಂದು ಎಸೆತ ಕಾಣದೇ ರದ್ದಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಕಾನ್ಪುರ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್‌ನ 3ನೇ ದಿನದಾಟವೂ ರದ್ದಾಯಿತು. ಭಾನುವಾರ ಮಳೆ ಬೀಳಲಿಲ್ಲ. ಮಧ್ಯಾಹ್ನ 2 ಗಂಟೆ ವೇಳೆಗೆ ಸುಡು ಬಿಸಿಲಿತ್ತು. ಆದರೂ ಶನಿವಾರ ಮಳೆ ಸುರಿದಿದ್ದರಿಂದ ಮೈದಾನ ಸಂಪೂರ್ಣ ಒದ್ದೆಯಾಗಿತ್ತು. ಭಾನುವಾರವೂ ಮೈದಾನದ ಕೆಲವೆಡೆ ನೀರು ನಿಂತಿದ್ದ ಕಾರಣ, ದಿನದಾಟವನ್ನು ಆರಂಭಿಸದೆ ಇರಲು ಅಂಪೈರ್‌ಗಳು ನಿರ್ಧರಿಸಿದರು.  ಮೊದಲ ದಿನ ಬಾಂಗ್ಲಾ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿ 35 ಓವರಲ್ಲಿ 3 ವಿಕೆಟ್‌ಗೆ 107 ರನ್ ಗಳಿಸಿತ್ತು. 

ಅಭಿಮಾನಿಗಳಿಗೆ ನಿರಾಸೆ: ಭಾನುವಾರ ಪಂದ್ಯ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ ದಿನದಾಟ ರದ್ದಾಗಿದ್ದರಿಂದ ಎಲ್ಲರೂ ನಿರಾಸೆಯೊಂದಿಗೆ ಹೊರನಡೆದರು. ಇಲ್ಲಿನ ಗ್ರೀನ್ ಪಾರ್ಕ್‌ ಕ್ರೀಡಾಂಗಣ, ಉತ್ತರಪ್ರದೇಶ ಕ್ರಿಕೆಟ್‌ ಸಂಸ್ಥೆ (ಯುಪಿಸಿಎ) ಅಡಿಯಲ್ಲಿಲ್ಲ. ಅದು ಸ್ಥಳೀಯ ಮುನ್ಸಿಪಾಲಿಟಿಯ ನಿಯಂತ್ರಣದಲ್ಲಿದ್ದು, ಇಲ್ಲಿನ ವ್ಯವಸ್ಥೆ ತೀರಾ ಕಳಪೆಯಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಿಲ್ಲ. ಕ್ರೀಡಾಂಗಣದ ಒಂದು ಭಾಗದಲ್ಲಿರುವ ಪ್ರೇಕ್ಷಕರ ಗ್ಯಾಲರಿ ಕುಸಿಯುವ ಭೀತಿ ಸಹ ಇದೆ.

Latest Videos

ಬೆಂಗ್ಳೂರಲ್ಲಿ ಬಿಸಿಸಿಐ ಉತ್ಕೃಷ್ಟತಾ ಕೇಂದ್ರ ಅನಾವರಣ; 80ಕ್ಕೂ ಹೆಚ್ಚು ಪಿಚ್ ಬಳಕೆಗೆ ರೆಡಿ

ಭಾರತಕ್ಕೆ ನಷ್ಟ?

ಮೊದಲ ಪಂದ್ಯವನ್ನು 280 ರನ್ ಗಳಿಂದ ಗೆದ್ದಿದ್ದ ಭಾರತ, 2ನೇ ಪಂದ್ಯ ದಲ್ಲೂ ಬಾಂಗ್ಲಾವನ್ನು ಹೊಸಕಿಹಾಕಿ 12 ಅಂಕ ಸಂಪಾದಿಸುವ ವಿಶ್ವಾಸದಲ್ಲಿತ್ತು. ಆದರೆ ಈಗಾಗಲೇ 3 ದಿನ ವ್ಯರ್ಥವಾ ಗಿದ್ದು, ಇನ್ನೆರಡೇ ದಿನ ಬಾಕಿ ಇದೆ. ಪಂದ್ಯ ಬಹುತೇಕ ಡ್ರಾಗೊಳ್ಳಲಿದೆ. ಎನ್ನುವ ರೀತಿ ಕಂಡು ಬರುತ್ತಿದ್ದು, ಭಾರತಕ್ಕೆ ಕೇವಲ4 ಸಿಗುವ ಸಾಧ್ಯತೆಯೇ ಹೆಚ್ಚು. ಹೀಗಾದರೆ, ವಿಶ್ವಟೆಸ್ಟ್ ಚಾಂಪಿ ಯನ್‌ಶಿಪ್‌ ಅಂಕಪಟ್ಟಿಯಲ್ಲಿ ಭಾರತಕ್ಕೆ ಹಿನ್ನಡೆಯಾಗಬಹುದು.

ಭಾರತದಲ್ಲಿ ಇನ್ನು ಆಯ್ದ ಕ್ರೀಡಾಂಗಣಗಳಷ್ಟೇ ಟೆಸ್ಟ್‌?

ನವದೆಹಲಿ: ಇಡೀ ದಿನ ಮಳೆ ಬೀಳದಿದ್ದರೂ ಕಾನ್ಪುರದಲ್ಲಿ ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್‌ನ 3ನೇ ದಿನದಾಟ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಭಾರತದಲ್ಲಿ ಇನ್ನು ಉತ್ಕೃಷ್ಟ ಗುಣಮಟ್ಟದ ಒಳಚರಂಡಿ ವ್ಯವಸ್ಥೆ ಇರುವ ಕ್ರೀಡಾಂಗಣಗಳಲ್ಲಿ ಮಾತ್ರ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸುವಂತೆ ಅನೇಕರು ಬಿಸಿಸಿಐ ಅನ್ನು ಒತ್ತಾಯಿಸಲು ಶುರು ಮಾಡಿದ್ದಾರೆ.

ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾದಲ್ಲಿ ಕೆಲ ಆಯ್ದ ಕ್ರೀಡಾಂಗಣಗಳಲ್ಲಿ ಮಾತ್ರ ಟೆಸ್ಟ್‌ ಪಂದ್ಯಗಳನ್ನು ನಡೆಸಲಾಗುತ್ತದೆ. ಅದೇ ವ್ಯವಸ್ಥೆಯನ್ನು ಭಾರತದಲ್ಲೂ ಜಾರಿ ಮಾಡಲು ಇದು ಸರಿಯಾದ ಸಮಯ ಎನ್ನುವ ಅಭಿಪ್ರಾಯಗಳು ಅನೇಕರಿಂದ ವ್ಯಕ್ತವಾಗುತ್ತಿದೆ.

ಭಾರತ-ಬಾಂಗ್ಲಾದೇಶ ನಡುವಿನ ಕಾನ್ಪುರ ಟೆಸ್ಟ್‌ ಡ್ರಾನಲ್ಲಿ ಅಂತ್ಯವಾಗುತ್ತಾ?

2019ರಲ್ಲೇ ಕೊಹ್ಲಿ ಸಲಹೆ: ಟೆಸ್ಟ್‌ ಪಂದ್ಯಗಳ ವೀಕ್ಷಣೆಗೆ ಕೆಲವೇ ಕೆಲವು ನಗರಗಳಲ್ಲಿ ಮಾತ್ರ ದೊಡ್ಡ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಬೆಂಗಳೂರು, ಮುಂಬೈ, ಚೆನ್ನೈ ನಗರಗಳಲ್ಲಿ ಟೆಸ್ಟ್‌ ಕ್ರಿಕೆಟ್‌ ಅಭಿಮಾನಿಗಳು ಹೆಚ್ಚಿದ್ದಾರೆ. ಇಂಥ ಕಡೆಗಳಲ್ಲಿ ಮಾತ್ರ ಟೆಸ್ಟ್‌ ಕ್ರಿಕೆಟ್‌ ನಡೆಸುವಂತೆ 2019ರಲ್ಲೇ ವಿರಾಟ್‌ ಕೊಹ್ಲಿ ಸಲಹೆ ನೀಡಿದ್ದರು. ಇನ್ನು ಈ ಕ್ರೀಡಾಂಗಣಗಳಲ್ಲಿ ಅತ್ಯುತ್ತಮ ಒಳಚರಂಡಿ ವ್ಯವಸ್ಥೆ ಇದ್ದು, ವೃತ್ತಿಪರ ಮೈದಾನ ಸಿಬ್ಬಂದಿ ಸಹ ಇದ್ದಾರೆ.

click me!