ಹೇಗಿದೆ ಐಪಿಎಲ್‌ ತಂಡಗಳ ಬಲಾಬಲ? ಇಲ್ಲಿದೆ ನೋಡಿ ಬೆಸ್ಟ್‌ ಪ್ಲೇಯಿಂಗ್‌ 11

By Naveen Kodase  |  First Published Nov 27, 2024, 11:10 AM IST

2025ರ ಐಪಿಎಲ್‌ ಆಟಗಾರರ ಹರಾಜಿನ ಬಳಿಕ ಯಾವ ತಂಡ ಹೇಗಿದೆ? ಆಡುವ ಹನ್ನೊಂದರ ಬಳಗ ಹೇಗಿದೆ ನೋಡೋಣ ಬನ್ನಿ


ಬೆಂಗಳೂರು: 2 ದಿನಗಳ ಕಾಲ ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ 2025ರ ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ 10 ತಂಡಗಳು ಸೇರಿ 182 ಆಟಗಾರರನ್ನು ಖರೀದಿಸಿದವು. ಹರಾಜಿಗೂ ಮುನ್ನ ಎಲ್ಲಾ ತಂಡಗಳು ಕೆಲ ಆಟಗಾರರನ್ನು ಉಳಿಸಿಕೊಂಡಿದ್ದವು. ಇದೀಗ ಎಲ್ಲಾ ತಂಡಗಳ ಲೈನ್‌ಅಪ್‌ ಪೂರ್ಣಗೊಂಡಿದ್ದು, ತಂಡಗಳ ಬಲಾಬಲದ ಸಂಕ್ಷಿಪ್ತ ವಿವರ ಇಲ್ಲಿದೆ.

ಆರ್‌ಸಿಬಿ

Latest Videos

undefined

ಹರಾಜಿಗೂ ಮುನ್ನ ಕೊಹ್ಲಿ, ಯಶ್‌ ದಯಾಳ್‌, ಪಾಟೀದಾರ್‌ರನ್ನು ಉಳಿಸಿಕೊಂಡಿದ್ದ ಆರ್‌ಸಿಬಿ, ಹರಾಜಿನಲ್ಲಿ ಬೌಲರ್‌ಗಳ ಖರೀದಿಗೆ ಹೆಚ್ಚು ಮಹತ್ವ ನೀಡಿತು. ಭುವನೇಶ್ವರ್‌, ಹೇಜಲ್‌ವುಡ್‌ ಸೇರ್ಪಡೆ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬಲಿದೆ. ಇದೇ ಮೊದಲ ಬಾರಿಗೆ ಆರ್‌ಸಿಬಿ ಕೆಲವೇ ಕೆಲವರ ಮೇಲೆ ಅತಿಯಾಗಿ ಅವಲಂಬಿತಗೊಳ್ಳದೆ ಇರಬಹುದು ಎನಿಸುತ್ತಿದೆ.

ಬೆಸ್ಟ್‌ ಪ್ಲೇಯಿಂಗ್‌ 12 (ಇಂಪ್ಯಾಕ್ಟ್‌ ಆಟಗಾರ ಸೇರಿ):

ಕೊಹ್ಲಿ, ಸಾಲ್ಟ್‌, ಲಿವಿಂಗ್‌ಸ್ಟೋನ್‌, ಪಾಟೀದಾರ್‌, ಕೃನಾಲ್‌, ಜಿತೇಶ್‌ (ಕೀಪರ್‌), ಡೇವಿಡ್‌/ಬೆತ್‌ಹೆಲ್‌, ರಸಿಖ್‌, ಭುವಿ, ಹೇಜಲ್‌ವುಡ್‌, ದಯಾಳ್‌, ಸುಯಶ್‌/ಸ್ವಪ್ನಿಲ್‌.

ಪಂಜಾಬ್ ಕಿಂಗ್ಸ್

ಕೇವಲ ಇಬ್ಬರು ಅನ್‌ಕ್ಯಾಪ್ಟ್ ಆಟಗಾರರನ್ನು ಉಳಿಸಿಕೊಂಡಿದ್ದ ಪಂಜಾಬ್, ಹರಾಜಿನಲ್ಲಿ ಭರ್ಜರಿ ಖರೀದಿ ನಡೆಸಿತು. ಶ್ರೇಯಸ್‌ ಅಯ್ಯರ್‌ರನ್ನು ₹26.75 ಕೋಟಿಗೆ ಖರೀದಿಸಿತು. ಪಾಂಟಿಂಗ್ ಕೋಚ್ ಆಗಿರುವ ಕಾರಣ 8ರ ಪೈಕಿ 5 ವಿದೇಶಿಗರು ಆಸ್ಟ್ರೇಲಿಯಾದವರು. ತಂಡದಲ್ಲಿ ಕೆಲ ಸ್ಫೋಟಕ ಆಟಗಾರರಿದ್ದು, ಮುಂದಿನ ವರ್ಷ ಸುಧಾರಿತ ಪ್ರದರ್ಶನ ನಿರೀಕ್ಷೆ ಮಾಡಬಹುದು. 

2025ರ ಐಪಿಎಲ್‌ಗೆ ದೇಸಿ ‘ಸಿಕ್ಸರ್‌ ಮಷಿನ್‌’ಗಳ ಆಯ್ಕೆ! ಈ ಇಬ್ಬರು ಆಟಗಾರರ ಮೇಲೆ ಕಣ್ಣಿಡಿ!

• ಬೆಸ್ಟ್ ಪ್ಲೇಯಿಂಗ್ 12

ಜೋಶ್ ಇಂಗ್ಲಿಸ್ (ಕೀಪರ್), ಪ್ರಬ್‌ಸಿಮ್ರನ್, ಸ್ಟೋಯಿಸ್, ಶ್ರೇಯಸ್ ಅಯ್ಯರ್, ಮ್ಯಾಕ್ಸ್‌ವೆಲ್, ನೇಹಲ್‌ ವಧೇರಾ, ಶಶಾಂಕ್ ಸಿಂಗ್, ಯಾನ್ಸನ್, ಹರ್ಪ್‌ರೀತ್, ಯಶ್/ ಕುಲೀಪ್ ಸೇನ್/ವೈಶಾಖ್, ಅರ್ಶ್‌ದೀಪ್, ಚಹಲ್,

ಮುಂಬೈ ಇಂಡಿಯನ್ಸ್

ಹರಾಜಿಗೂ ಮುನ್ನ 75 ಕೋಟಿ ರು. ವೆಚ್ಚ ಮಾಡಿ 5 ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದ ಮುಂಬೈ, ಹರಾಜಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಖರೀದಿ ಮಾಡಲಿಲ್ಲ. ಬೌಲ್ಡ್‌ ಹಾಗೂ ಸ್ಯಾಂಟ್ನ‌ ಹೊರತುಪಡಿಸಿ ಅನುಭವಿ ವಿದೇಶಿ ಆಟಗಾರರು ತಂಡದಲ್ಲಿಲ್ಲ. ಹಲವು ಯುವ ಪ್ರತಿಭೆಗಳ ಮೇಲೆ ವಿಶ್ವಾಸವಿಟ್ಟು ಫ್ರಾಂಚೈಸಿಯು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

• ಬೆಸ್ಟ್ ಪ್ಲೇಯಿಂಗ್ 12

ರೋಹಿತ್‌ ಶರ್ಮಾ, ಲ್ಯಾನ್ ರಿಕೆಲ್ಟನ್ (ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್, ವಿಲ್ ಜ್ಯಾಕ್ಸ್, ಹಾರ್ದಿಕ್, ನಮನ್ ಧೀರ್ / ರಾಬಿನ್ ಮಿಲ್ಫ್, ದೀಪಕ್ ಚಹರ್, ಘಜನ್ಸರ್/ಸ್ಯಾಂಟರ್, ಕರ್ಣ್, ಬುಮ್ರಾ, ಟ್ರೆಂಟ್ ಬೌಲ್ಡ್.

ಆರ್‌ಸಿಬಿ ಫ್ಯಾನ್ಸ್‌ ಭಾವನೆಗಳ ಜೊತೆ ಆಟವಾಡಿದ ಬೆಂಗಳೂರು ಫ್ರಾಂಚೈಸಿ!

* ಲಖನೌ ಸೂಪರ್‌ಜೈಂಟ್ಸ್

ರಿಷಭ್ ಪಂತ್‌ರನ್ನು 227 ಕೋಟಿಗೆ ಖರೀದಿಸಿದ ಲಖನೌ ಅವರನ್ನೇ ನಾಯಕನನ್ನಾಗಿ ನೇಮಿಸಲಿದೆ. ತಂಡದ ಅಗ್ರ-6 ಆಟಗಾರರು ಟಿ20ಯಲ್ಲಿ ಸ್ಫೋಟಕ ಬ್ಯಾಟರ್ಸ್‌ ಎಂದೇ ಹೆಸರುವಾಸಿ. ಆದರೆ ಭಾರತೀಯ ಆರಂಭಿಕ ಬ್ಯಾಟ‌ ಕೊರತೆ ಇದೆ. ಬೌಲಿಂಗ್‌ನಲ್ಲೂ ತಂಡಕ್ಕೆ ಉತ್ತಮ ಆಯ್ಕೆಗಳಿದ್ದು, ಮುಂದಿನ ಐಪಿಎಲ್‌ನಲ್ಲಿ ಲಖನ್ ಸೂಪರ್ ಜೈಂಟ್ಸ್ ಮೇಲೆ ಎಲ್ಲರ ಕಣ್ಣಿರಲಿದೆ.

• ಬೆಸ್ಟ್ ಪ್ಲೇಯಿಂಗ್ 12

ಮಿಚೆಲ್ ಮಾರ್ಷ್, ಏಡನ್ ಮಾರ್ಕ್ರಮ್‌, ರಿಷಭ್ ಪಂತ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಮಿಲ್ಲರ್, ಶಾಬಾಜ್, ಅಬ್ದುಲ್ ಸಮದ್, ಬಿಷ್ಟೋಯಿ, ಆವೇಶ್, ಮೊಯ್ದಿನ್ ಖಾನ್, ಮಯಾಂಕ್ ಯಾದವ್.

* ಚೆನ್ನೈ ಸೂಪರ್ ಕಿಂಗ್ಸ್

ಹರಾಜಿನಲ್ಲಿ ಚೆನ್ನೈ ತನ್ನ ಹಳೆಯ ಆಟಗಾರರನ್ನು ಖರೀದಿಸುವತ್ತ ಹೆಚ್ಚು ಗಮನ ಹರಿಸಿತು. 10 ವರ್ಷ ಬಳಿಕ ಆರ್.ಅಶ್ವಿನ್ ತಂಡಕ್ಕೆ ಮರಳಿದರು. ಕಾನ್‌ವೇ, ರಚಿನ್, ಕರ್ರನ್ ಬಹಳ ಕಡಿಮೆ ಮೊತ್ತಕ್ಕೆ ಸಿಕ್ಕರು. ತಂಡದಲ್ಲಿರುವ ತ್ರಿಪಾಠಿ, ವಿಜಯ್ ಶಂಕರ್, ನಾಗರಕೋಟಿ, ಹೂಡಾ, ಶ್ರೇಯಸ್ ಗೋಪಾಲ್ ಐಪಿಎಲ್‌ನಲ್ಲಿ 'ಮರುಜನ್ಮ'ಕ್ಕಾಗಿ ಎದುರು ನೋಡುತ್ತಿದ್ದಾರೆ.

ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ-ಮುಂಬೈ ಮಾಲೀಕರ ಒಳ ಒಪ್ಪಂದ? ಫ್ರಾಂಚೈಸಿ ಮೇಲೆ ಬೆಂಗಳೂರು ಫ್ಯಾನ್ಸ್ ಆಕ್ರೋಶ

• ಬೆಸ್ಟ್ ಪ್ಲೇಯಿಂಗ್ 12
ಋತುರಾಜ್, ಕಾನ್‌ವೇ/ರಚಿನ್, ತ್ರಿಪಾಠಿ, ಶಿವಂ ದುಬೆ, ಸ್ಯಾಮ್ ಕರನ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಎಂ.ಎಸ್.ಧೋನಿ (ಕೀಪರ್), ಆರ್.ಅಶ್ವಿನ್, ನೂರ್ ಅಹ್ಮದ್/ಎಲ್ಲೀಸ್, ಖಲೀಲ್/ಗುರ್ಜತ್, ಪತಿರನ.

* ಡೆಲ್ಲಿ ಕ್ಯಾಪಿಟಲ್ಸ್

ತಮ್ಮ ಸ್ಟಾರ್ ಆಟಗಾರ ಪಂತ್‌ರನ್ನು ಕೈಬಿಟ್ಟು ಅವರಿಗೆ ಸಿಕ್ಕಿದ್ದಕ್ಕಿಂತ ಅರ್ಧದಷ್ಟು ಬೆಲೆಗೆ (೮14 ಕೋಟಿ) ಕೆ.ಎಲ್. ರಾಹುಲ್‌ರನ್ನು ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಬ್ಯಾಟಿಂಗ್ ಜೊತೆ ಬೌಲಿಂಗ್ ಪಡೆಯನ್ನೂ ಬಲಿಷ್ಠಗೊಳಿ ಸಿಕೊಂಡಿದೆ. ಮೇಲ್ನೋಟಕ್ಕೆ ತಂಡ ಸಮತೋಲನದಿಂದ ಕೂಡಿರುವಂತೆ ಕಂಡು ಬರುತ್ತಿದೆ. ಕನ್ನಡಿಗ ರಾಹುಲ್ ನಾಯಕನಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. • 

ಬೆಸ್ಟ್ ಪ್ಲೇಯಿಂಗ್ 12

ಜೇಕ್ ಪ್ರೇಸರ್ ಮೆಕ್‌ರ್ಕ್, ಕೆ.ಎಲ್. ರಾಹುಲ್, ಅಭಿಷೇಕ್ ಪೊರೆಲ್ (ಕೀಪರ್), ಹ್ಯಾರಿ ಬ್ರೂಕ್, ಟ್ರಸ್ಟನ್ ಸ್ಟಬ್‌, ಅಕ್ಷ‌, ಅಶುತೋಷ್, ಸಮೀರ್ ರಿಜ್ಜಿ, ಕುಲೀಪ್ ಯಾದವ್, ಸ್ಟಾರ್ಕ್, ನಟರಾಜನ್, ಮುಕೇಶ್ ಕುಮಾರ್.

* ಸನ್‌ರೈಸರ್ಸ್‌ ಹೈದ್ರಾಬಾದ್

ಕಳೆದ ಐಪಿಎಲ್‌ನಲ್ಲಿ 'ಬೆಂಕಿ' ಆಟವಾಡಿದ್ದ ಸನ್‌ರೈಸರ್ಸ್, ಮುಂದಿನ ವರ್ಷ ಮತ್ತಷ್ಟು ಪ್ರಚಂಡ ಪ್ರದರ್ಶನ ತೋರುವ ನಿರೀಕ್ಷೆ ಮೂಡಿಸಿದೆ. ಅಗ್ರ-5 ಕ್ರಮಾಂಕದಲ್ಲಿ ಆಡುವ ಆಟಗಾರರು ಹಾಗೂ ಬೌಲರ್‌ಗಳು ಬಲಿಷ್ಠವಾಗಿದ್ದಾರೆ. ಆದರೆ ಕೆಳ ಮಧ್ಯಮ ಕ್ರಮಾಂಕದಲ್ಲಿ ಅನುಭವ ಕಡಿಮೆ ಇದ್ದಂತೆ ಕಾಣುತ್ತಿದೆ. ಆದರೂ ಮೇಲ್ನೋಟಕ್ಕೆ ತಂಡ ಅಪಾಯಕಾರಿಯಾಗಿ ತೋರುತ್ತಿದೆ.

• ಬೆಸ್ಟ್‌ ಪ್ಲೇಯಿಂಗ್ 12
ಟ್ರಾವಿಸ್ ಹೆಡ್, ಅಭಿಷೇಕ್, ಇಶಾನ್ ಕಿಶನ್ (ಕೀಪರ್), ನಿತೀಶ್ ರೆಡ್ಡಿ, ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್, ಹರ್ಷಲ್ ಪಟೇಲ್, ರಾಹುಲ್ ಚಹರ್, ಮೊಹಮದ್ ಶಮಿ, ಆಡಂ ಜಂಪಾ.

ರಾಜಸ್ಥಾನ ರಾಯಲ್ಸ್

ರಾಜಸ್ತಾನ ರಾಯಲ್ ಹರಾಜಿಗೂ ಮುನ್ನ 5 ಬ್ಯಾಟರ್ಸ್‌ ಹಾಗೂ ಕೇವಲ ಲ ಒಬ್ಬ ಬೌಲರ್ (ಸಂದೀಪ್ ಶರ್ಮಾ)ರನ್ನು ಉಳಿಸಿಕೊಂಡಿದ್ದ ರಾಜಸ್ಥಾನ, ಹರಾಜಿನಲ್ಲಿ ಬೌಲರ್‌ಗಳ ಖರೀದಿಗೆ ಪ್ರಾಮುಖ್ಯತೆ ನೀಡಿತು. ಅಶ್ವಿನ್, ಚಹಲ್‌ರನ್ನು ಕೈಬಿಟ್ಟು ಪದೇ ಪದೇ ಗಾಯಗೊಳ್ಳುವ ಆರ್ಚರ್, ಹಸರಂಗರನ್ನು ಖರೀದಿಸಿದ್ದರ ಬಗ್ಗೆ, ಬಟ್ಲರ್‌ರನ್ನು ಉಳಿಸಿಕೊಳ್ಳದ್ದಕ್ಕೆ ಕೆಲವರಿಂದ ಟೀಕೆ ವ್ಯಕ್ತವಾಗಿದೆ.

• ಬೆಸ್ಟ್ ಪ್ಲೇಯಿಂಗ್ 12

ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮನ್ (ಕೀಪರ್), ನಿತೀಶ್ ರಾಣಾ, ರಿಯಾನ್ ಪರಾಗ್, ಧೃವ್ ಜುರೆಲ್, ಹೆಟೇಯರ್, ಹಸರಂಗ, ಶುಭಂ ದುಬೆ/ಆಕಾಶ್ ಮದ್ವಾಲ್, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ಸಂದೀಪ್, ತುಷಾರ್.

ಕೋಲ್ಕತಾ ನೈಟ್ ರೈಡರ್ಸ್

2024ರಲ್ಲಿ ಟ್ರೋಫಿ ಗೆದ್ದ ತಂಡದಲ್ಲಿದ್ದ 6 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದ ಕೆಕೆಆರ್, ಇನ್ನೂ 6 ಆಟಗಾರರನ್ನು ಹರಾಜಿನಲ್ಲಿ ಖರೀದಿಸಿತು. ವೆಂಕಿ ಅಯ್ಯರ್‌ಗೆ 223.75 ಕೋಟಿ ನೀಡಿದ್ದು ಅಚ್ಚರಿ ಮೂಡಿಸಿತು. ಅವರೇ ನಾಯಕರಾಗಬಹುದು. ಸಾಲ್ಟ್, ಸ್ಟಾರ್ಕ್ ಬದಲು ಡಿ ಕಾಕ್, ನೋಕಿಯ/ಸ್ಪೆನ್ಸರ್‌ರನ್ನು ಖರೀದಿಸಿದ್ದು ಅಷ್ಟೇನೂ ಉತ್ತಮ ಎನಿಸಲಿಲ್ಲ.

• ಬೆಸ್ಟ್ ಪ್ಲೇಯಿಂಗ್ 12
ಸುನಿಲ್ ನರೈನ್, ಡಿ ಕಾಕ್ ಗುರ್ಬಾಜ್ (ಕೀಪರ್), ರಘುವಂಶಿ/ರಹಾನೆ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ರಸೆಲ್, ರಮಣ್‌ ದೀಪ್, ಹರ್ಷಿತ್, ವರುಣ್ ಚಕ್ರವರ್ತಿ, ವೈಭವ್, ನೋಕಿಯ/ಸ್ಪೆನ್ಸರ್, ಮನೀಶ್ ಪಾಂಡೆ.

ಗುಜರಾತ್ ಟೈಟಾನ್ಸ್

ಕೆಲ ಘಟಾನುಘಟಿ ಆಟಗಾರರನ್ನು ಖರೀದಿಸಿದ ಗುಜರಾತ್, ಹೆಚ್ಚಿನ ಸಂಖ್ಯೆಯಲ್ಲಿ ಗುಣಮಟ್ಟದ ಭಾರತೀಯ ಬೌಲರ್‌ಗಳನ್ನು ಖರೀದಿಸಲು ವಿಫಲವಾಯಿತು. ಮಧ್ಯಮ ಕ್ರಮಾಂಕದಲ್ಲಿ ವಿಸ್ಫೋಟಕ ಆಟವಾಡಬಲ್ಲ ಆಟಗಾರನ ಕೊರತೆ ಎದ್ದು ಕಾಣುತ್ತಿದ್ದು, ತೆವಾಟಿಯಾ, ಶಾರುಖ್ ಮೇಲೆ ಹೆಚ್ಚು ಒತ್ತಡ ಬೀಳಬಹುದು. ಒಟ್ಟಾರೆ ತಂಡ ಬಲಿಷ್ಠವಾಗಿ ಕಾಣುತ್ತಿದೆ. 

• ಬೆಸ್ಟ್ ಪ್ಲೇಯಿಂಗ್ 12

ಬಟ್ಲರ್ (ಕೀಪರ್), ಶುಭಮನ್ ಗಿಲ್, ಸಾಯಿ ಸುದರ್ಶನ್, ವಾಷಿಂಗ್ಟನ್, ರುಥರ್‌ಫೋರ್ಡ್/ಫಿಲಿಪ್ಸ್, ತೆವಾಟಿಯಾ, ಶಾರುಖ್, ರಶೀದ್, ಅರ್ಶದ್ ಖಾನ್ / ಸಾಯಿಕಿಶೋರ್/ಲೊಮೊರ್, ರಬಾಡ, ಸಿರಾಜ್, ಪ್ರಸಿದ್ಧ.

click me!