ಇಂದು ಲಖನೌ ಸೂಪರ್‌ಜೈಂಟ್ಸ್ vs ಮುಂಬೈ ಇಂಡಿಯನ್ಸ್ ಬಿಗ್ ಫೈಟ್!

Published : Apr 04, 2025, 10:11 AM ISTUpdated : Apr 04, 2025, 10:18 AM IST
ಇಂದು ಲಖನೌ ಸೂಪರ್‌ಜೈಂಟ್ಸ್ vs ಮುಂಬೈ ಇಂಡಿಯನ್ಸ್ ಬಿಗ್ ಫೈಟ್!

ಸಾರಾಂಶ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈ ಕೊಲ್ಕತ್ತಾ ವಿರುದ್ಧ ಗೆದ್ದರೆ, ಲಖನೌ ಹೈದರಾಬಾದ್ ವಿರುದ್ಧ ಜಯ ಸಾಧಿಸಿದೆ. ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಲಯಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಲಖನೌ ನಿಕೋಲಸ್ ಪೂರನ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಲಖನೌ ಪಿಚ್ ಸ್ಪಿನ್ನರ್ ಗಳಿಗೆ ನೆರವಾಗುವ ಸಾಧ್ಯತೆಯಿದೆ. 

ಲಖನೌ: ಈ ಬಾರಿ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ಮುಂಬೈ ಇಂಡಿಯನ್ಸ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್ ತಂಡಗಳು ಶುಕ್ರವಾರ ಪರಸ್ಪರ ಮುಖಾಮುಖಿಯಾಗಲಿವೆ.

5 ಬಾರಿ ಚಾಂಪಿಯನ್‌ ಮುಂಬೈ ತಂಡ ಆರಂಭಿಕ 2 ಪಂದ್ಯಗಳಲ್ಲಿ ಕ್ರಮವಾಗಿ ಚೆನ್ನೈ, ಗುಜರಾತ್‌ ವಿರುದ್ಧ ಸೋತಿತ್ತು. ಆದರೆ ಕಳೆದ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಗೆಲ್ಲುವ ಮೂಲಕ ಜಯದ ಹಳಿಗೆ ಮರಳಿದೆ. ಮತ್ತೊಂದೆಡೆ ಲಖನೌ ತಂಡ ಡೆಲ್ಲಿ, ಪಂಜಾಬ್‌ ವಿರುದ್ಧ ಸೋತು ಹೈದರಾಬಾದ್‌ ವಿರುದ್ಧ ಗೆದ್ದಿದೆ. ಈ ಪಂದ್ಯ 2 ತಂಡಗಳ ಜೊತೆ ಕೆಲ ಸ್ಟಾರ್‌ ಆಟಗಾರರಿಗೂ ಅತಿ ಮಹತ್ವದ್ದು ಎನಿಸಿಕೊಂಡಿದೆ. ಮುಂಬೈಗೆ 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿರುವ ಹಿರಿಯ ಆಟಗಾರ ರೋಹಿತ್‌ ಶರ್ಮಾ ಹಾಗೂ ಐಪಿಎಲ್‌ನ ಅತಿ ದುಬಾರಿ ಆಟಗಾರ, ಲಖನೌ ನಾಯಕ ರಿಷಭ್‌ ಪಂತ್‌ ಈ ಪಂದ್ಯದಲ್ಲಿ ಮಿಂಚಲೇಬೇಕಿದೆ. ಇಬ್ಬರೂ ರನ್‌ ಗಳಿಸಲು ಪರದಾಡುತ್ತಿದ್ದು, ಲಯಕ್ಕೆ ಮರಳಲು ಕಾಯುತ್ತಿದ್ದಾರೆ. ರಿಷಭ್‌ 3 ಪಂದ್ಯಗಳಲ್ಲಿ ಕ್ರಮವಾಗಿ 0, 15 ಹಾಗೂ 12 ರನ್‌ ಸಿಡಿಸಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಔಟ್ ಮಾಡಿದ ಅರ್ಶದ್ ಖಾನ್ ಬದಲು ನಟ ಅರ್ಶದ್ ವಾರ್ಸಿ ಟಾರ್ಗೆಟ್ ಮಾಡಿದ ಫ್ಯಾನ್ಸ್

ಮುಂಬೈ ತಂಡ ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿಯಲ್ಲಿ ಸೊರಗಿದಂತೆ ಕಾಣುತ್ತಿದ್ದರೂ ವಿಘ್ನೇಶ್‌ ಪುತೂರ್‌, ಅಶ್ವನಿ ಕುಮಾರ್‌ ಅವರಂತಹ ಯುವ ಪ್ರತಿಭೆಗಳು ಮಿಂಚುತ್ತಿದ್ದಾರೆ. ಲಖನೌ ತಂಡ ಸ್ಫೋಟಕ ಆಟಗಾರ ನಿಕೋಲಸ್‌ ಪೂರನ್‌ರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. 3 ಪಂದ್ಯಗಳಲ್ಲಿ 189 ರನ್‌ ಸಿಡಿಸಿರುವ ಅವರಿಂದ ತಂಡ ಮತ್ತೊಂದು ದೊಡ್ಡ ಇನ್ನಿಂಗ್ಸ್‌ ನಿರೀಕ್ಷಿಸುತ್ತಿದೆ.

ಮುಖಾಮುಖಿ: 06

ಮುಂಬೈ: 01

ಲಖನೌ: 05

ಇದನ್ನೂ ಓದಿ: ಬೆಂಗಳೂರು: RCB ಅಭಿಮಾನಿಗಳ 7 ಮೊಬೈಲ್ ಕದ್ದ ಇಬ್ಬರು ಕಳ್ಳರನ್ನು ಹಿಡಿದ ಭದ್ರತಾ ಸಿಬ್ಬಂದಿ!

ಸಂಭಾವ್ಯ ಆಟಗಾರರು

ಮುಂಬೈ: ರೋಹಿತ್‌ ಶರ್ಮಾ, ರಿಕೆಲ್ಟನ್‌, ಸೂರ್ಯಕುಮಾರ್‌ ಯಾದವ್, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ(ನಾಯಕ), ನಮನ್‌ ಧೀರ್‌, ಮಿಚೆಲ್ ಸ್ಯಾಂಟ್ನರ್‌, ದೀಪಕ್‌ ಚಹರ್, ಟ್ರೆಂಟ್ ಬೌಲ್ಟ್‌, ಅಶ್ವಿನಿ, ವಿಘ್ನೇಶ್‌ ಪುತೂರ್, ಮುಜೀಬ್‌ ಉರ್ ರೆಹಮಾನ್.

ಲಖನೌ: ಏಯ್ಡನ್ ಮಾರ್ಕ್‌ರಮ್‌, ಮಿಚೆಲ್ ಮಾರ್ಷ್‌, ನಿಕೋಲಸ್ ಪೂರನ್‌, ರಿಷಭ್‌ ಪಂತ್(ನಾಯಕ), ಆಯುಷ್ ಬದೋನಿ, ಮಿಲ್ಲರ್‌, ಸಮದ್‌, ಶಾರ್ದೂಲ್‌, ದಿಗ್ವೇಶ್‌, ಆಕಾಶ್‌ದೀಪ್‌, ರವಿ ಬಿಷ್ಣೋಯ್‌, ಸಿದ್ದಾರ್ಥ್‌.

ಪಂದ್ಯ: ಸಂಜೆ 7.30ಕ್ಕೆ

ಪಿಚ್‌ ರಿಪೋರ್ಟ್‌

ಲಖನೌ-ಮುಂಬೈ ಪಂದ್ಯ ಏಕನಾ ಕ್ರೀಡಾಂಗಣದ ಕಪ್ಪು ಮಣ್ಣಿನ ಪಿಚ್‌ನಲ್ಲಿ ನಡೆಯಲಿದೆ. ಹೀಗಾಗಿ ಸ್ಪಿನ್ನರ್‌ಗಳು ಹೆಚ್ಚಿನ ನೆರವು ಪಡೆಯುವ ಸಾಧ್ಯತೆಯಿದೆ. ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!